Home
ಟೆಕ್ ನೌಕರಿ

ಫೇಸ್‌ಬುಕ್‌ ವಿಡಿಯೋ ಡೌನ್‌ಲೋಡ್‌ ಮಾಡಲು ಹೀಗೆ ಮಾಡಿರಿ!

ಮೆಟಾ ಮಾಲೀಕತ್ವದ ಫೇಸ್‌ಬುಕ್‌ ಸೊಶೀಯಲ್‌ ಮೀಡಿಯಾ ದೈತ್ಯ ಸಂಸ್ಥೆಯಾಗಿ ಕಾಣಿಸಿಕೊಂಡಿದ್ದು, ಆಕರ್ಷಕ ಫೀಚರ್ಸ್‌ಗಳ ಮೂಲಕವೇ ಬಳಕೆದಾರರಿಗೆ ಇಷ್ಟವೇನಿಸಿದೆ. ಇನ್ನು ಫೇಸ್‌ಬುಕ್‌ನಲ್ಲಿ ಬಳಕೆದಾರರು ಫೋಟೋ, ಟೆಕ್ಸ್ಟ್‌, ವಿಡಿಯೋ ಸೇರಿದಂತೆ ಎಲ್ಲ ಮಾದರಿಯಲ್ಲಿ ಫೋಸ್ಟ್‌ ಮಾಡಬಹುದಾಗಿದೆ. ಇನ್ನು ಫೇಸ್‌ಬುಕ್‌ ವಿಡಿಯೋಗಳನ್ನು ಡೌನ್‌ಲೋಡ್‌ ಸಹ ಮಾಡಬಹುದಾಗಿದೆ.

ಹೌದು, ಜನಪ್ರಿಯ ಫೇಸ್‌ಬುಕ್‌ ತಾಣದಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡಲು ನೇರ ಅವಕಾಶ ಇಲ್ಲ. ಅದಾಗ್ಯೂ, ಬಳಕೆದಾರರು ಫೇಸ್‌ಬುಕ್‌ನಲ್ಲಿ ವೀಡಿಯೋ ವೀಕ್ಷಿಸಿದ ವಿಡಿಯೋ ಡೌನ್‌ಲೋಡ್‌ ಮಾಡಲು ಇಚ್ಛಿಸಿದರೆ, ಇದಕ್ಕಾಗಿ ಕೆಲವು ಕ್ರಮಗಳನ್ನು ಅನುಸರಿಸಬೇಕಿದೆ. ಹಾಗಾದರೇ, ಫೇಸ್‌ಬುಕ್‌ನಲ್ಲಿ ವೀಡಿಯೊ ಡೌನ್‌ಲೋಡ್‌ ಮಾಡುವುದು ಹೇಗೆ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಫೇಸ್‌ಬುಕ್‌ ವಿಡಿಯೋ ಡೌನ್‌ಲೋಡ್‌ ಮಾಡಲು ಹೀಗೆ ಮಾಡಿರಿ!

ಡೆಸ್ಕ್‌ಟಾಪ್‌ನಲ್ಲಿ ಫೇಸ್‌ಬುಕ್ ವೀಡಿಯೊ ಡೌನ್‌ಲೋಡ್ ಮಾಡಲು ಹೀಗೆ ಮಾಡಿ:

ಹಂತ 1 : ಮೊದಲಿಗೆ ಡೆಸ್ಕ್‌ಟಾಪ್‌ನಲ್ಲಿ ಫೇಸ್‌ಬುಕ್ ಖಾತೆ ತೆರೆಯಿರಿ ಮತ್ತು ಲಾಗ್ ಇನ್ ಮಾಡಿರಿ.

ಹಂತ 2 : ಬಳಿಕ ಪ್ರೊಫೈಲ್‌ಗೆ ಹೋಗಿ ಮತ್ತು ನ್ಯಾವಿಗೇಶನ್‌ನಲ್ಲಿನ 'ವೀಡಿಯೊಗಳು' ಆಯ್ಕೆಗೆ ಕ್ಲಿಕ್ ಮಾಡಿ ಮುಂದುವರಿಯಿರಿ.

ಹಂತ 3 : ಆ ನಂತರ ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊವನ್ನು ಸೆಲೆಕ್ಟ್‌ ಮಾಡಿ.

ಹಂತ 4 : ತದ ನಂತರ ಬಲ ಮೂಲೆಯಲ್ಲಿ ಕಾಣುವ 'ಮೂರು-ಚುಕ್ಕೆಗಳ ಮೆನು' ಮೇಲೆ ಟ್ಯಾಪ್ ಮಾಡಿ ಮತ್ತು 'ವಿಡಿಯೋ ಡೌನ್‌ಲೋಡ್ ಮಾಡಿ' ಆಯ್ಕೆ ಅನ್ನು ಸೆಲೆಕ್ಟ್‌ ಮಾಡಿರಿ.

ಹಂತ 5 : ಬಳಿಕ ವೀಡಿಯೊದಲ್ಲಿ 'ಪೆನ್ಸಿಲ್' ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಎಸ್‌ಡಿ ಅಥವಾ ಹೆಚ್‌ಡಿ ಮಾದರಿಯಲ್ಲಿ ವೀಡಿಯೊ ಡೌನ್‌ಲೋಡ್ ಮಾಡಬಹುದಾಗಿದೆ.


ಆಂಡ್ರಾಯ್ಡ್‌ನಲ್ಲಿ ಫೇಸ್‌ಬುಕ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಈ ಕ್ರಮ ಫಾಲೋ ಮಾಡಿ

ಹಂತ 1 : ಮೊದಲಿಗೆ ಡೌನ್‌ಲೋಡ್ ಮಾಡಲು ಬಯಸುವ ಫೇಸ್‌ಬುಕ್ ವೀಡಿಯೊವನ್ನು ತೆರೆಯಿರಿ

ಹಂತ 2 : ಬಳಿಕ ಶೇರ್‌ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಂತರ ಕಾಪಿ ಲಿಂಕ್ ಟ್ಯಾಪ್ ಮಾಡಿ.

ಹಂತ 3 : ತದ ನಂತರ, fbdown.net ಅನ್ನು ತೆರೆಯಿರಿ ಮತ್ತು ಅಗತ್ಯವಿರುವ ವಿಭಾಗದಲ್ಲಿ ಲಿಂಕ್ ಅನ್ನು ಪೇಸ್ಟ್‌ ಮತ್ತು ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 4 : ಫೇಸ್‌ಬುಕ್ ವೀಡಿಯೊವನ್ನು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊ ಗುಣಮಟ್ಟವನ್ನು ಆರಿಸಿ.

ಹಂತ 5 : ಬಳಿಕ ಕ್ರೋಮ್‌ನಲ್ಲಿ ಡೌನ್‌ಲೋಡ್ ಲಿಂಕ್ ಆಯ್ಕೆ ಮಾಡಿರಿ

ಹಂತ 6 : ಫೇಸ್‌ಬುಕ್ ವೀಡಿಯೊವನ್ನು ಡೌನ್‌ಲೋಡ್‌ಗಳ ಫೋಲ್ಡರ್‌ನಲ್ಲಿ ಆಟೋಮ್ಯಾಟಿಕ್‌ ಆಗಿ ಸೇವ್‌ ಆಗಲಿದೆ.

ಥರ್ಡ್‌ಪಾರ್ಟಿ ಆಪ್ಸ್‌ ಮೂಲಕ ಈ ಡೌನ್‌ಲೋಡ್‌ ಮಾಡಲು ಈ ಕ್ರಮ ಫಾಲೋ ಮಾಡಿ:

* ಮೊದಲಿಗೆ ಡೌನ್‌ಲೋಡ್ ಮಾಡಲು ಬಯಸುವ ಯಾವುದೇ ಫೇಸ್‌ಬುಕ್ ವೀಡಿಯೊಗೆ ಹೋಗಿ.

* ನಂತರ ಮೂರು-ಚುಕ್ಕೆಗಳ ಮೆನು ಮೇಲೆ ಟ್ಯಾಪ್ ಮಾಡಿ ಮತ್ತು ಪಾಪ್-ಅಪ್ ಮೆನುವಿನಿಂದ 'ಲಿಂಕ್ ಕಾಪಿ ಮಾಡಿ' ಆಯ್ಕೆ ಅನ್ನು ಕ್ಲಿಕ್‌ ಮಾಡಿ.

* ಬಳಿಕ ನಿಮ್ಮ ಡೆಸ್ಕ್‌ಟಾಪ್ ಅಥವಾ ಮೊಬೈಲ್‌ನಲ್ಲಿ FDown ಭೇಟಿ ನೀಡಿರಿ.

* ಕಾಪಿ ಲಿಂಕ್ ಅನ್ನು ಪೇಸ್ಟ್‌ ಮಾಡಿ ಮತ್ತು 'ಡೌನ್‌ಲೋಡ್' ಆಯ್ಕೆ ಕ್ಲಿಕ್ ಮಾಡಿರಿ.

* ಬಳಿಕ ವೆಬ್‌ಸೈಟ್ ಒಮ್ಮೆ ವೀಡಿಯೊವನ್ನು ಪಡೆದುಕೊಂಡರೆ, ನಂತರ ಅದು ಸಾಮಾನ್ಯ ಅಥವಾ ಹೆಚ್‌ಡಿ ಗುಣಮಟ್ಟದಲ್ಲಿ ಡೌನ್‌ಲೋಡ್‌ಗಳನ್ನು ಕೇಳುವ ಡೌನ್‌ಲೋಡ್ ಪೇಜ್‌ ತೆರೆಯುತ್ತದೆ.

* ತದ ನಂತರ, ವೀಡಿಯೊ ಡೌನ್‌ಲೋಡ್ ಮಾಡಲು ಪ್ರಾರಂಭಿಸಬೇಕು.

Best Mobiles in India

English summary
How To Download Facebook Videos for free. step by step guide here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+