Home
ಟೆಕ್ ನೌಕರಿ

Karnataka Budget 2023: ಬಜೆಟ್‌ ಪ್ರತಿಯನ್ನು ಫೋನ್‌ನಲ್ಲಿ ಡೌನ್‌ಲೋಡ್‌ ಮಾಡುವುದು ಹೇಗೆ?

ಕರ್ನಾಟಕ ರಾಜ್ಯದ ಜನತೆ ಕುತೂಹಲದಿಂದ ಕಾಯುತ್ತಿದ್ದ ಬಜೆಟ್‌ (Karnataka Budget 2023) ಕೊನೆಗೂ ಮಂಡನೆ ಆಗಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಅನ್ನು ಮಂಡಿಸಿದ್ದು, ಇದರಲ್ಲಿ ಕಾಂಗ್ರೆಸ್‌ನ 5 ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಹೌದು, 2023-24 ರ ಹಣಕಾಸು ವರ್ಷದ ಎರಡನೇ ಬಜೆಟ್ ಇದಾಗಿದ್ದು, ಶಿಕ್ಷಣ,ಆರೋಗ್ಯ,ಸಾಮಾಜಿಕ ಭದ್ರತೆ,ಮೂಲ ಸೌಕರ್ಯ,ಕೃಷಿ ಹಾಗೂ ತಂತ್ರಜ್ಞಾನ ಸೇರಿದಂತೆ ಹಲವಾರು ವಲಯಗಳಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡಲಾಗಿದೆ. ಇನ್ನು ಸುಮಾರು ಮೂರು ಗಂಟೆಗಳ ಕಾಲ ಓದಿದ ಈ ಬಜೆಟ್‌ ಪೂರ್ಣವಾಗಿ ನೆನಪಿನಲ್ಲಿ ಇರಿಸಿಕೊಳ್ಳಲು ಆಗುವುದಿಲ್ಲ. ಈ ಕಾರಣಕ್ಕೆ ಈ ಬಜೆಟ್‌ ಪ್ರತಿಯನ್ನು ನಿಮ್ಮ ಫೋನ್‌ನಲ್ಲಿ ಹೇಗೆ ಡೌನ್‌ಲೋಡ್‌ ಮಾಡಿಕೊಂಡು ಓದುವುದು ಎಂಬುದನ್ನು ತಿಳಿಸಿಕೊಟ್ಟಿದ್ದೇವೆ ಈ ಲೇಖನ ಓದಿರಿ.

ಬಜೆಟ್‌ ಪ್ರತಿಯನ್ನು ಫೋನ್‌ನಲ್ಲಿ ಡೌನ್‌ಲೋಡ್‌ ಮಾಡುವುದು ಹೇಗೆ?

ಈ ಬಾರಿಯ ಬಜೆಟ್‌ ಗಾತ್ರ 3,27,747 ಲಕ್ಷ ಕೋಟಿ ರೂಪಾಯಿ ಆಗಿದ್ದು, ಸರ್ವ ಜನಾಂಗದ ಶಾಂತಿಯ ತೋಟ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ಸಿದ್ದರಾಮಯ್ಯ ಇದನ್ನು ಮಂಡಿಸಿದ್ದಾರೆ. ಹಾಗೆಯೇ ಇದನ್ನು ಇಲಾಖೆವಾರು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಶಿಕ್ಷಣಕ್ಕೆ 37,587 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,166 ಕೋಟಿ, ನೀರಾವರಿಗೆ 19,044 ಕೋಟಿ, ಇಂಧನಕ್ಕೆ 22,773 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆಗೆ 18,038 ಕೋಟಿ ನೀಡಲಾಗಿದೆ.

ಇದರೊಂದಿಗೆ ಒಳಾಡಳಿತ ಮತ್ತು ಸಾರಿಗೆಗೆ 16,638 ಕೋಟಿ, ಕಂದಾಯ ಇಲಾಖೆಗೆ 16,167ಕೋಟಿ, ಆರೋಗ್ಯ ಇಲಾಖೆಗೆ 14,950ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 11,173ಕೋಟಿ, ಆಹಾರ ಮತ್ತು ನಾಗರಿಕ ಪೂರೈಕೆಗೆ 10,460 ಕೋಟಿ,ಲೋಕೋಪಯೋಗಿ ಇಲಾಖೆಗೆ 10,143 ಕೋಟಿ, ಕೃಷಿಗೆ 5,860 ಕೋಟಿ, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ 3,024 ಕೋಟಿ ಹಾಗೂ ಇತರೆ ಕ್ಷೇತ್ರಕ್ಕೆ ಒಟ್ಟಾರೆ 1,09,639ಕೋಟಿ ಅನುದಾನ ಹಂಚಲಾಗಿದೆ.ಹಾಗಿದ್ರೆ, ಬನ್ನಿ ಸಂಪೂರ್ಣ ಮಾಹಿತಿ ಇರುವ ಬಜೆಟ್‌ ಪ್ರತಿಯನ್ನು ಡೌನ್‌ಲೋಡ್ ಮಾಡುವುದು ಹೇಗೆಂದು ತಿಳಿಯೋಣ.

ಹಂತ 1 : ಮೊದಲು ನಿಮ್ಮ ಫೋನ್‌ನಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ಸೈಟ್‌ಗೆ ಭೇಟಿ ನೀಡಿ. ಇದಕ್ಕಾಗಿ ನೀವು https://www.karnataka.gov.in/ ನ ಈ ಲಿಂಕ್‌ ಬಳಕೆ ಮಾಡಿಕೊಳ್ಳಬಹುದು. ಇದಾದ ನಂತರದಲ್ಲಿ ಅಲ್ಲಿ 'ಇಲಾಖೆಗಳು' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ. ಬಳಿಕ' ಹಣಕಾಸು ಇಲಾಖೆ' ಎನ್ನುವುದರ ಮೇಲೆ ಟ್ಯಾಪ್ ಮಾಡಿ.

ಹಂತ 2: ಇದಾದ ನಂತರದಲ್ಲಿ ನಿಮಗೆ ಹಣಕಾಸು ವಿಭಾಗದಲ್ಲಿ ಮತ್ತೆ ಕೆಲವಾರು ಇಲಾಖೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಮತ್ತೆ 'ಹಣಕಾಸು ಇಲಾಖೆ (ಸಚಿವಾಲಯ) 'ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿ. ಈ ವೇಳೆ ನಿಮಗೆ ಹೊಸ ಪುಟ ತೆರೆದುಕೊಳ್ಳುತ್ತದೆ. ಈ ಮೇಲೆ ತಿಳಿಸಿದ ಮಾರ್ಗ ಕಷ್ಟ ಎಂದಾದರೆ https://finance.karnataka.gov.in/ ಲಿಂಕ್‌ ಬಳಕೆ ಮಾಡಿಕೊಂಡು ನೇರವಾಗಿ ಭೇಟಿ ನೀಡಿ.

ಬಜೆಟ್‌ ಪ್ರತಿಯನ್ನು ಫೋನ್‌ನಲ್ಲಿ ಡೌನ್‌ಲೋಡ್‌ ಮಾಡುವುದು ಹೇಗೆ?

ಹಂತ 3: ನಂತರದಲ್ಲಿ 'ಅಯವ್ಯಯ ದಾಖಲೆಗಳು' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಗಮನಿಸಿ. ಅಲ್ಲಿ '2023-24 ಜುಲೈ' ಎಂಬ ಮತ್ತೊಂದು ಆಯ್ಕೆ ಕಾಣಿಸಲಿದ್ದು, ಅದನ್ನು ಟ್ಯಾಪ್ ಮಾಡಿದರೆ 'ಆಯವ್ಯಯದ ಸಂಪುಟಗಳು 2023-24 ಜುಲೈ' ಎಂಬ ಮತ್ತೊಂದು ಆಯ್ಕೆ ತೆರೆದುಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ. ಅಲ್ಲಿ 'ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯ ಇವರ ಆಯವ್ಯಯ ಭಾಷಣ, 7ನೇ ಜುಲೈ 2023' ಎಂಬ ಆಯ್ಕೆ ಮುಂದೆ ಕಾಣಿಸುವ ಕಣ್ಣಿನ ಐಕಾನ್‌ ಮೇಲೆ ಟ್ಯಾಪ್‌ ಮಾಡಿದ್ರೆ ಸಾಕು ನಿಮ್ಮ ಫೋನ್‌ ನಲ್ಲೇ ಬಜೆಟ್‌ ಓದಬಹುದು.

Best Mobiles in India

English summary
This is the second budget of Karnataka government for the financial year 2023-24, know how to download budget file on your mobile.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+