Home
ಟೆಕ್ ನೌಕರಿ

'ಟಿಕ್‌ಟಾಕ್'‌ ಆಪ್‌ ಮೂಲಕ ಹಣ ಗಳಿಸಬಹುದು!..ಹೇಗೆ ಗೊತ್ತಾ?

ಪ್ರಸ್ತುತ ಅನೇಕ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳ ಮೂಲಕವೇ ಹಣಗಳಿಸುವ ಮಂದಿಗೆನು ಕಡಿಮೆ ಇಲ್ಲ. ಆಫ್‌ಲೈನ್‌ಗಿಂತಲೂ, ಆನ್‌ಲೈನ್‌ ಮೂಲಕವೇ ಬಹುಬೇಗನೆ ಹೆಚ್ಚಿನ ಜನರನ್ನು ತಲುಪಬಹುದಾಗ ಅವಕಾಶಗಳು ಸಾಕಷ್ಟಿವೆ. ಪ್ರತಿಭೆ ಜೊತೆಗೆ ಸ್ವಲ್ಪ ಕಮರ್ಷಿಯಲ್ ಮೈಂಡ್ ನಿಮ್ಮದಾಗಿದ್ದರೇ ಸುಲಭವಾಗಿ ಹಣ ಗಳಿಸಬಹುದು. ಇತ್ತೀಚಿಗೆ ಭಾರಿ ಜನಪ್ರಿಯವಾಗಿರುವ 'ಟಿಕ್‌ಟಾಕ್' ಆಪ್‌‌ನಲ್ಲಿಯೂ ಸಹ ಹಣಗಳಿಸಲು ಸಾಧ್ಯ ಎನ್ನುವುದು ನಿಮಗೆ ಗೊತ್ತಾ?.

'ಟಿಕ್‌ಟಾಕ್'‌ ಆಪ್‌ ಮೂಲಕ ಹಣ ಗಳಿಸಬಹುದು!..ಹೇಗೆ ಗೊತ್ತಾ?

ಹೌದು, ಚೀನಾ ಮೂಲದ ಟಿಕ್‌ಟಾಕ್ ವಿಡಿಯೊ ಮೇಕಿಂಗ್ ಆಪ್‌ ಇದೀಗ ಎಲ್ಲ ವಯೋಮಾನದವರಲ್ಲಿಯೂ ಕ್ರೇಜ್‌ ಹುಟ್ಟಿಸಿದ್ದು, ಸ್ವಲ್ಪ ಟೈಮ್‌ ಸಿಕ್ರೆ ಸಾಕು ಕೈಬೆರಳು ಸ್ಮಾರ್ಟ್‌ಫೋನ್‌ನಲ್ಲಿ ಟಿಕ್‌ಟಾಕ್‌ ಆಪ್‌ ಒತ್ತದೆ ಇರಲಾರದು. ಕೇವಲ 15 ಸೆಕೆಂಡ್‌ ವಿಡಿಯೊ ಆಪ್‌ನಲ್ಲಿ ಹಣಗಳಿಸಲು ಸಾಧ್ಯನಾ? ಎನ್ನುವ ಪ್ರಶ್ನೇ ನಿಮ್ಮಲ್ಲಿ ಮೂಡಿರಬಹುದು. ಆದ್ರೆ ಖಂಡಿತಾ ಇದೊಂದು ಲೆಟೆಸ್ಟ್‌ ಮನಿ ಅರ್ನಿಂಗ್ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಆಗಿದೆ.

'ಟಿಕ್‌ಟಾಕ್'‌ ಆಪ್‌ ಮೂಲಕ ಹಣ ಗಳಿಸಬಹುದು!..ಹೇಗೆ ಗೊತ್ತಾ?

ಸದ್ಯ ಟಿಕ್‌ಟಾಕ್‌ ಆಪ್‌ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದ್ದು, 15ಸೆಕೆಂಡ್‌ ವಿಡಿಯೊನಿಂದ ಸರಳವಾಗಿ ಹೆಚ್ಚಿನ ಜನರನ್ನು ತಲುಪಬಹುದಾಗಿದೆ. ನಿರಂತರ ವಿಡಿಯೊಗಳ ಮೂಲಕ ಫಾಲೊವರ್ಸ್‌ ಸಂಖ್ಯೆಯನ್ನು ಅಧಿಕಗೊಳಿಸುವುದು ನಿಮ್ಮ ನೆರವಿಗೆ ಬರಲಿದೆ. ಹಾಗಾದರೇ ಜನಪ್ರಿಯ ಟಿಕ್‌ಟಾಕ್‌ ಆಪ್‌ ಮೂಲಕ ಹೇಗೆ ಹಣಗಳಿಸುವುದು ಎನ್ನುವ ಕುರಿತು ತಿಳಿಯಲು ಮುಂದೆ ಓದಿರಿ.

ಏನಿದು ಟಿಕ್‌ಟಾಕ್‌ ಆಪ್‌

ಏನಿದು ಟಿಕ್‌ಟಾಕ್‌ ಆಪ್‌

ಚೀನಾ ಮೂಲದ ಬೈಟ್‌ಡ್ಯಾನ್ಸ್‌ ಸಂಸ್ಥೆಯ ಈ ಆಪ್‌ನ ಮೊದಲು ಹೆಸರು ಮ್ಯೂಸಿಕಲಿ(musical.ly) ಆನಂತರ ಟಿಕ್‌ಟಾಕ್‌ ಹೆಸರಿನಿಂದ ಜನಪ್ರಿಯತೆ ಪಡೆದಿದೆ. ಇದೊಂದು ಶಾರ್ಟ್‌ ವಿಡಿಯೊ ಮೇಕಿಂಗ್ ಆಪ್‌ ಆಗಿದ್ದು, ಯಾರು ಬೇಕಾದರೂ 15ಸೆಕೆಂಡ್‌ನ ವಿಡಿಯೊ ಮಾಡಬಹುದಾಗಿದೆ. ಸ್ವಂತ ವಿಡಿಯೊ ಕ್ರಿಯೆಟ್ ಮಾಡಬಹುದು ಅಥವಾ ಈಗಾಗಲೇ ಆಪ್‌ನಲ್ಲಿ ಲಭ್ಯವಿರುವ ವಿಡಿಯೊಗಳನ್ನು ಆಯ್ದುಕೊಳ್ಳಬಹುದು. ಟಿಕ್‌ಟಾಕ್‌ ಆಪ್‌ನಲ್ಲಿ ವಿಡಿಯೊ ಶೇರ್‌ ಮಾಡುವ ಆಯ್ಕೆ ಸಹ ಇದೆ.

ಪ್ರತಿಭೆಗೆ ವೇದಿಕೆ

ಪ್ರತಿಭೆಗೆ ವೇದಿಕೆ

15 ಸೆಕೆಂಡ್‌ಗಳ ವಿಡಿಯೊ ಆಪ್ ಟಿಕ್‌ಟಾಕ್‌ ಪ್ರತಿಭೆಗೆ ಒಂದು ಉತ್ತಮ ವೇದಿಕೆ ಎನಿಸಿಕೊಂಡಿದ್ದು, ಅತ್ಯುತ್ತಮವಾಗಿ ಅಭಿನಯಿಸುವವರಾಗಿದ್ದರೇ ಸಿನಿಮಾ, ಧಾರಾವಾಹಿ, ಕಿರುಚಿತ್ರ ಹೀಗೆ ಒಂದಿಲ್ಲೊಂದು ಅವಕಾಶದ ಬಾಗಿಲು ತೆರೆಯುವ ಸಾಧ್ಯತೆಗಳಿವೆ. ಹೀಗೆ ಟಿಕ್‌ಟಾಕ್‌ನಿಂದ ಅವಕಾಶ ಪಡೆದವರ ಬಗ್ಗೆ ನೀವು ತಿಳಿದಿರುತ್ತಿರಿ. ಜೊತೆಗೆ ಟಿಕ್‌ಟಾಕ್‌ನ ಫ್ಯಾನ್ಸ್‌ ಫಾಲೊವರ್ಸ್‌ ಸಂಖ್ಯೆ ಸಹ ಹೆಚ್ಚುತ್ತದೆ.

ಬ್ಯುಸಿನೆಸ್‌ ವಿಸ್ತಾರ

ಬ್ಯುಸಿನೆಸ್‌ ವಿಸ್ತಾರ

ಜಿಮ್ ಟ್ರೈನರ್, ಬ್ಯೂಟಿಶಿಯನ್, ಡ್ಯಾನ್ಸ್ ಮಾಸ್ಟರ್, ಡ್ರಾಯಿಂಗ್ ಮಾಸ್ಟರ್, ಕರಾಟೆ ಕೋಚ್, ಸ್ವಿಮ್ಮಿಂಗ್ ಕೋಚ್ ಅಥವಾ ಫೋಟೊಗ್ರಾಫರ್‌, ಹೀಗೆ ನೀವು ಯಾವ ಕ್ಷೇತ್ರದಲ್ಲಿ ಗೊತ್ತಿದೆಯೊ ಆ ಕುರಿತು ವಿಡಿಯೊಗಳನ್ನು ಟಿಕ್‌ಟಾಕ್‌ನಲ್ಲಿ ಅಪ್‌ಲೋಡ್‌ ಮಾಡಿ. ಟ್ರೈನಿಂಗ್ ಪಡೆಯಲು ಇಚ್ಚಿಸುವ ಜನರು ನಿಮ್ಮನ್ನು ಸಂಪರ್ಕಿಸುತ್ತಾರೆ. ನಿಮ್ಮ ಆದಾಯದ ದಾರಿ ಮತ್ತಷ್ಟು ವಿಸ್ತಾರವಾಗಲಿದೆ.

ಲೈವ್‌ ಸ್ಟ್ರಿಮಿಂಗ್

ಲೈವ್‌ ಸ್ಟ್ರಿಮಿಂಗ್

ಜನಪ್ರಿಯ ಬಿಂಗೊ ಲೈವ್‌, ಫೇಸ್‌ಕಾಸ್ಟ್‌, ಆಪ್ಸ್‌ಗಳಂತೆ ಟಿಕ್‌ಟಾಕ್‌ನಲ್ಲಿಯೂ ಲೈವ್‌ ಸ್ಟ್ರಿಮಿಂಗ್ ಸೌಲಭ್ಯವಿದ್ದು, ನಿಮ್ಮಲ್ಲಿರುವ ಟ್ಯಾಲೆಂಟ್‌ ಮತ್ತು ಕ್ರಿಯೆಟಿವಿಯನ್ನು ಲೈವ್‌ ಸ್ಟ್ರಿಮಿಂಗ್(ವಿಡಿಯೊ) ಮಾಡಬಹುದಾಗಿದೆ. ಏಕಕಾಲಕ್ಕೆ ಹೆಚ್ಚಿನ ಜನರನ್ನು ತಲುಪಲು ಈ ಆಯ್ಕೆ ಅನುಕೂಲಕರವಾಗಿದ್ದು, ನಿಮ್ಮ ಪ್ರತಿಭೆಗೆ ಒಂದು ಅತ್ಯುತ್ತಮ ವೇದಿಕೆಯಾಗಲಿದೆ. ನಿಮ್ಮ ಟ್ಯಾಲೆಂಟ್‌ ಅನ್ನು ಯಾರಾದರೂ ಗುರುತಿಸಿ ಸೂಕ್ತ ಅವಕಾಶ ನೀಡಬಹುದು.

ಪ್ರಾಡಕ್ಟ್‌ ಪ್ರಮೋಟಿಂಗ್

ಪ್ರಾಡಕ್ಟ್‌ ಪ್ರಮೋಟಿಂಗ್

ಟಿಕ್‌ಟಾಕ್‌ನಲ್ಲಿ ಸಕ್ರಿಯ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚಿನ ಸಮಯ ಟಿಕ್‌ಟಾಕ್‌ನಲ್ಲಿ ಕಳೆಯುತ್ತಾರೆ. ಹೀಗಾಗಿ ಟಿಕ್‌ಟಾಕ್‌ನಲ್ಲಿ ನಿಮ್ಮ ಪ್ರಾಡಕ್ಟ್‌ಗಳನ್ನು ಅಥವಾ ನಿಮ್ಮ ಬ್ಯುಸಿನೆಸ್‌ಗೆ ಸಂಬಂಧಿಸದ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುವುದುದರಿಂದ ಬ್ಯುಸಿನೆಸ್‌ ಪ್ರಮೋಟಿಂಗ್ ಆಗುತ್ತದೆ. ಇದರಿಂದ ಹೊಸ ಆರ್ಡರ್‌ಗಳು ಬರುವ ಸಾಧ್ಯತೆಗಳಿರುತ್ತವೆ. ಹೊಸ ಆರ್ಡರ್‌ ಬಂದರೇ ಹಣ ಲಭಿಸಿದಂತೆಯೇ ಅಲ್ಲವೇ.

ಅಡ್ವರ್ಟೈಸ್‌ಮೆಂಟ್

ಅಡ್ವರ್ಟೈಸ್‌ಮೆಂಟ್

ಟಿಕ್‌ಟಾಕ್‌ಗೆ ಗೂಗಲ್‌ ಆಡ್‌ಸೆನ್ಸ್‌ ಮತ್ತು ಫೇಸ್‌ಬುಕ್‌ ತರಹ ಜಾಹಿರಾತುಗಳ ಬೆಂಬಲ ಇಲ್ಲ. ಆದರೆ ಟಿಕ್‌ಟಾಕ್‌ನಲ್ಲಿ ನೀವು ಅತೀ ಹೆಚ್ಚಿನ ಪಾಲೊವರ್ಸ್‌ ಹೊಂದಿದ್ದು, ನಿಮ್ಮ ವಿಡಿಯೊಗಳನ್ನು ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುತ್ತಿದ್ದರೇ ಕೇಲವು ಜಾಹಿರಾತು ಕಂಪನಿಗಳು ನಿಮ್ಮನ್ನು ಸಂಪರ್ಕಿಸುವ ಸಾಧ್ಯತೆಗಳು ಇರುತ್ತವೆ. ಟಿಕ್‌ಟಾಕ್‌ ನಿಂದ ಆಚೆಗೂ ನಿಮಗೆ ಅವಕಾಶಗಳು ಲಭಿಸಬಹುದು.

ಚಾಲೆಂಜ್ ಆಕ್ಟಿವಿಟಿಗಳು

ಚಾಲೆಂಜ್ ಆಕ್ಟಿವಿಟಿಗಳು

ಟಿಕ್‌ಟಾಕ್‌ ಆಪ್‌ ಚಾಲೆಂಜ್ ಆಕ್ಟಿವಿಟಿಗಳನ್ನು ನಡೆಯುತ್ತಿರುತ್ತವೆ. ಅವುಗಳಲ್ಲಿ ನೀವು ಭಾಗವಹಿಸಬಹುದು ಅಥವಾ ಬಿಡಬಹುದು. ಆದರೆ ಈ ಆಕ್ಟಿವಿಟಿಗಳಲ್ಲಿ ಭಾಗಿಯಾಗುವುದರಿಂದ ನಿಮ್ಮನ್ನು ಗುರುತಿಸಿಕೊಳ್ಳಬಹುದು ಮತ್ತು ಹಣ ಜಯಸುವ ಸಾಧ್ಯತೆಗಳು ಸಹ ಇರುತ್ತವೆ. ಹಾಗೆಯೇ ವಿಡಿಯೊಗಳನ್ನು ಇತರೆ ಸೋಷಿಯಲ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಶೇರ್‌ ಮಾಡಿ ಅವಕಾಶಗಳು ಹೆಚ್ಚುತ್ತವೆ.

ಕೊನೆ ಮಾತು

ಕೊನೆ ಮಾತು

ಟಿಕ್‌ಟಾಕ್‌ ಹಣಗಳಿಸಲು ಇರುವ ಅಪ್ಲಿಕೇಶನ್ ಅಲ್ಲ ಇದೊಂದು ಮನರಂಜನೆಯ ಆಪ್‌ ಆಗಿದೆ. ಆದರೆ ಸದ್ಯ ಆನ್‌ಲೈನ್‌ ತಾಣಗಳು ಕಮರ್ಷಿಯಲ್ ದೃಷ್ಠಿಕೋನದಲ್ಲಿಯೂ ನೋಡುತ್ತಿದ್ದಾರೆ. ಹೀಗಾಗಿ ಮನರಂಜನೆಯ ಜೊತೆಗೆ ಪ್ರತಿಭೆಗೆ ವೇದಿಕೆ ಆಗಿರುವ ಟಿಕ್‌ಟಾಕ್‌ ಅನೇಕರಿಗೆ ಅವಕಾಶಗಳ ಹೆಬ್ಬಾಗಿಲು ಸಹ ಆಗಿದೆ. ಫಾಲೊವರ್ಸ್‌ ಗಳ ಸಂಖ್ಯೆ ಹೆಚ್ಚದಾಗ ಅವಕಾಶಗಳು ಬರುವ ಸಾಧ್ಯತೆಗಳು ಹೆಚ್ಚು.

Best Mobiles in India

English summary
if you want to earn money from Tik-Tok you must have a huge fan following because huge fan base can be made by making an awesome Tik-Tok video. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+