ಇನ್‌ಸ್ಟಾಗ್ರಾಮ್‌ನಲ್ಲಿ ಕಳುಹಿಸಿದ ಮೆಸೆಜ್ ಅನ್ನು ಎಡಿಟ್ ಮಾಡಬಹುದು!..ಅದು ಹೇಗೆ ಗೊತ್ತಾ?
ಜನಪ್ರಿಯ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್ ಸದ್ಯ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಇದೀಗ ಸಂಸ್ಥೆಯು ತನ್ನ ಬಹು ನಿರೀಕ್ಷಿತ ಎಡಿಟ್ ಮೆಸೆಜ್ ಫೀಚರ್ಸ್ ಅನ್ನು ಸೇರ್ಪಡೆ ಮಾಡಿದ್ದು, ಬಳಕೆದಾರರ ಖುಷಿ ಇಮ್ಮಡಿ ಮಾಡಿದೆ.
ಹೌದು, ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್ ತಾಣವು ಈಗ ಎಡಿಟ್ ಮೆಸೆಜ್ ಆಯ್ಕೆ ಪರಿಚಯಿಸಿದೆ. ಈ ಆಯ್ಕೆ ಮೂಲಕ ಬಳಕೆದಾರರು ಕಳುಹಿಸಿದ ಮೆಸೆಜ್ ಅನ್ನು ಎಡಿಟ್ ಮಾಡಲು ಅವಾಕಶ ಇದೆ. ಇನ್ನು ಇನ್‌ಸ್ಟಾಗ್ರಾಮ್ ಬಳಕೆದಾರರು ಇಂತಹದೊಂದು ಉಪಯುಕ್ತ ಆಯ್ಕೆಗಾಗಿ ಕಾಯುತ್ತಿದ್ದರು. ಅಂದಹಾಗೆ ಇನ್‌ಸ್ಟಾಗ್ರಾಮ್‌ನಲ್ಲಿ ಎಡಿಟ್ ಮೆಸೆಜ್ ಆಯ್ಕೆ ಮಾಡಲು ಕಾಲಮಿತಿ ಇದೆ. ಅಂದರೆ, ಮೆಸೆಜ್ ಕಳುಹಿಸಿದ 15 ನಿಮಿಷಗಳವರೆಗೆ ಎಡಿಟ್ ಮಾಡಲು ಅವಕಾಶ ಇರಲಿದೆ.

ಎಡಿಟ್ ಮೆಸೆಜ್ ಆಯ್ಕೆಯು ಈಗಾಗಲೇ ಮೆಟಾ ತನ್ನ ವಾಟ್ಸಾಪ್ ಆಪ್‌ನಲ್ಲಿ ಪರಿಚಯಿಸಿದೆ. ಅದೇ ರೀತಿ ಈಗ ಇನ್‌ಸ್ಟಾಗ್ರಾಮ್ ಆಪ್‌ನಲ್ಲಿಯೂ ನೀಡಿದ್ದು, ಬಳಕೆದಾರರಿಗೆ ಉಪಯುಕ್ತ ಎನಿಸಿದೆ. ಬಳಕೆದಾರರು ಆಕಸ್ಮಿಕವಾಗಿ ತಪ್ಪಾಗಿ ಮೆಸೆಜ್ ಕಳುಹಿಸಿದ್ದರೆ, ಅಥವಾ ಇನ್ನಷ್ಟು ಮಾಹಿತಿ ಸೇರಿಸುವುದನ್ನು ಮರೆತಿದ್ದರೆ, ಸರಿ ಮಾಡಲು ಈ ಆಯ್ಕೆ ನೆರವಾಗಲಿದೆ. ಹಾಗಾದರೇ ಇನ್‌ಸ್ಟಾಗ್ರಾಮ್‌ನಲ್ಲಿ ಕಳುಹಿಸಿದ ಮೆಸೆಜ್ ಎಡಿಟ್ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಮೆಸೆಜ್ ಎಡಿಟ್ ಮಾಡಲು ಈ ಕ್ರಮ ಫಾಲೋ ಮಾಡಿರಿ
* ನಿಮ್ಮ ಚಾಟ್‌ನಲ್ಲಿ, ನೀವು ಕಳುಹಿಸಿದ ಮೆಸೆಜ್ ಅನ್ನು ಟ್ಯಾಪ್ ಮಾಡಿ ಮತ್ತು ಒತ್ತಿ ಹಿಡಿಯಿರಿ.
* ನಂತರ ಅಲ್ಲಿ ಕಾಣಿಸುವ ಎಡಿಟ್ ಆಯ್ಕೆ ಅನ್ನು ಟ್ಯಾಪ್ ಮಾಡಿ. (ಗಮನಿಸಿ - ನಿಗದಿತ 15 ನಿಮಿಷದ ಸಮಯ ಮುಗಿದಿದ್ದರೆ, ಈ ಆಯ್ಕೆ ಕಾಣಿಸಲ್ಲ).
* ಆ ಬಳಿಕ ಮೆಸೆಜ್ ಟೆಕ್ಸ್ಟ್ ಅನ್ನು ಅಪ್‌ಡೇಟ್ ಮಾಡಿ.
* ತದ ನಂತರ ಮೆಸೆಜ್ ಎಡಿಟ್ ಮಾಡಿದ ನಂತರ ಸೆಂಡ್/ಕಳುಹಿಸು ಆಯ್ಕೆ ಟ್ಯಾಪ್ ಮಾಡಿ.
* ಮೆಸೆಜ್ ಎಡಿಟ್ ಮಾಡಿದ ನಂತರ, ಎಡಿಟ್ ಮಾಡಿರುವ ಮೆಸೆಜ್ ಚಾಟ್‌ನಲ್ಲಿ ಕಾಣಿಸುತ್ತದೆ.
ಒಂದೇ ಆಪ್‌ನಲ್ಲಿ ಎರಡು ಇನ್‌ಸ್ಟಾಗ್ರಾಮ್ ಖಾತೆ ತೆರೆಯಲು ಹೀಗೆ ಮಾಡಿ
- ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್ ಆಪ್ ಅನ್ನು ತೆರೆಯಿರಿ
- ಬಳಿಕ ಈಗ ಕೆಳಗಿನ ಬಲ ಮೂಲೆಯಲ್ಲಿರುವ DP ಅನ್ನು ಕ್ಲಿಕ್ ಮಾಡುವ ಮೂಲಕ ಪ್ರೊಫೈಲ್‌ಗೆ ಹೋಗಿರಿ.
- ನಂತರ ಗೇರ್ ಆಯ್ಕೆ ಮಾಡಿ ಅಥವಾ ಸ್ಕ್ರೀನ್ ಮೇಲಿನ ಬಲ ಭಾಗದ ಮೂಲೆಯಲ್ಲಿರುವ ಮೂರು ಡಾಟ್ ಅನ್ನು ಆಯ್ಕೆ ಮಾಡಿ.
- ತದ ನಂತರ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಖಾತೆಯನ್ನು ಸೇರಿಸಿ ಆಯ್ಕೆ ಮಾಡಿರಿ.
- ನಂತರದಲ್ಲಿ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಅಥವಾ ಫೇಸ್‌ಬುಕ್ ಖಾತೆಯೊಂದಿಗೆ ಲಾಗ್ ಇನ್ ಸಹ ಮಾಡಬಹುದು.
ಇನ್ನು ಒಂದೇ ಆಪ್‌ನಲ್ಲಿ ಎರಡು ಇನ್‌ಸ್ಟಾಗ್ರಾಮ್ ಆಪ್ ಲಿಂಕ್ ಮಾಡಿದ ಬಳಿಕ ಒಂದು ಇನ್‌ಸ್ಟಾಗ್ರಾಮ್ ಖಾತೆಯಿಂದ ಮತ್ತೊಂದು ಇನ್‌ಸ್ಟಾಗ್ರಾಮ್ ಖಾತೆಗೆ ಬದಲಾಯಿಸಲು ಈ ಮುಂದಿನ ಕ್ರಮ ಅನುಸರಿಸಿ.
- ಆಪ್ ಅನ್ನು ಓಪೆನ್ ಮಾಡಿ ನಂತರ, ಪ್ರೊಫೈಲ್ ಪೇಜ್‌ಗೆ ಹೋಗಿ.
- ನಂತರ ನಿಮ್ಮ ಬಳಕೆದಾರ ಹೆಸರನ್ನು ಟ್ಯಾಪ್ ಮಾಡಿ, ಅದನ್ನು ಮೇಲಿನ ಎಡ ಮೂಲೆಯಲ್ಲಿ ಕಾಣಬಹುದು.
- ನಂತರ ನೀವು ತೆರೆಯ ಬಯಸುವ ಖಾತೆಯನ್ನು ಆಯ್ಕೆ ಮಾಡಿ ಮತ್ತು ನಿರ್ವಹಿಸಿ.


Click it and Unblock the Notifications








