Home
ಟೆಕ್ ನೌಕರಿ

WhatsAppನಲ್ಲಿ ಫೋಟೊ ಶೇರ್ ಮಾಡುವಾಗ ಈ ಹೊಸ ಆಯ್ಕೆ ತುಂಬಾ ಉಪಯುಕ್ತ!

ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದರೊಂದಿಗೆ ವೆಬ್‌ಗಾಗಿ ಆವೃತ್ತಿಗಾಗಿ ವಾಟ್ಸಾಪ್‌ ಮೂರು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅವುಗಳು ಕ್ರಮವಾಗಿ ಡೆಸ್ಕ್ ಟಾಪ್‌ ಎಡಿಟರ್ (desktop editor), ಸ್ಟಿಕ್ಕರ್ ಸಜೆಶನ್ (sticker suggestion) ಮತ್ತು ಲಿಂಕ್ ಪ್ರಿವ್ಯೂವ್‌(link preview) ಆಗಿವೆ.

ಬಳಕೆದಾರರು

ಈ ಹೊಸ ಫೀಚರ್ಸ್‌ಗಳೊಂದಿಗೆ, ಬಳಕೆದಾರರು ಡೆಸ್ಕ್‌ಟಾಪ್‌ಆವೃತ್ತಿಯ ಫೋಟೊಗಳನ್ನು ಎಡಿಟ್‌ ಮಾಡಲು ಸಾಧ್ಯವಾಗುತ್ತದೆ. ವಾಟ್ಸಾಪ್‌ ಪ್ಲಾಟ್‌ಫಾರ್ಮ್‌ನಲ್ಲಿ ಲಿಂಕ್ ಪ್ರಿವ್ಯೂವ್‌ಗಳನ್ನು ನೋಡಿ ಮತ್ತು ಸಂಭಾಷಣೆಯ ಸಮಯದಲ್ಲಿ ಅಪ್ಲಿಕೇಶನ್ ಸ್ಟಿಕ್ಕರ್ ಸಲಹೆಗಳನ್ನು ಸೂಚಿಸುತ್ತದೆ. ಉತ್ತಮ ಅನುಭವವನ್ನು ಒದಗಿಸಲು ಈ ಫೀಚರ್ಸ್‌ಗಳನ್ನು ವಾಟ್ಸಾಪ್ ವೆಬ್‌ಗೆ ಸಂಸ್ಥೆಯು ಸೇರಿಸಿದೆ. ಹೀಗಾಗಿ ಬಳಕೆದಾರರು ವೆಬ್‌ ಆವೃತ್ತಿಯಲ್ಲಿ ಫೋಟೊ ಶೇರ್ ಮಾಡುವಾಗ ಡೆಸ್ಕ್ ಟಾಪ್‌ ಎಡಿಟರ್ ಆಯ್ಕೆ ಮೂಲಕ ಎಡಿಟ್ ಸಹ ಮಾಡಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಡೆಸ್ಕ್ ಟಾಪ್‌ ಫೋಟೋ ಎಡಿಟರ್

ಡೆಸ್ಕ್ ಟಾಪ್‌ ಫೋಟೋ ಎಡಿಟರ್

ವಾಟ್ಸಾಪ್‌ ವೇದಿಕೆಯ ವೆಬ್ ಆವೃತ್ತಿಗೆ ಮೀಡಿಯಾ ಎಡಿಟರ್ ಫೀಚರ್ಸ್‌ ಅನ್ನು ಸೇರಿಸಿದೆ. ಈ ವರೆಗೂ, ಫೋಟೊಗಳನ್ನು ಎಡಿಟ್ ಮಾಡಲು ಬಯಸಿದರೆ ಮೊಬೈಲ್ ಅಪ್ಲಿಕೇಶನ್‌ನ ಆವೃತ್ತಿಯಲ್ಲಿ ಮಾತ್ರ ಸಾಧ್ಯವಿತ್ತು. ಆದರೆ ಈ ಹೊಸ ಆಯ್ಕೆ ಇಂದಾಗಿ, ಈಗ ಯಾರಾದರೂ ತಮ್ಮ ಕಂಪ್ಯೂಟರ್ ಅಥವಾ ವೈಯಕ್ತಿಕ ಲ್ಯಾಪ್‌ಟಾಪ್‌ನಲ್ಲಿ ಸಹ ಫೋಟೊ ಎಡಿಟ್ ಮಾಡಲು ಸಾಧ್ಯವಾಗುತ್ತದೆ.

ಮಾಡಬೇಕಾಗಿತ್ತು

ಈ ವೈಶಿಷ್ಟ್ಯವು ಬಳಕೆದಾರರಿಗೆ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನ ಸಹಾಯದಿಂದ ಫೋಟೋಗಳನ್ನು ಕಳುಹಿಸುವ ಮೊದಲು ಅವುಗಳನ್ನು ಸಂಪಾದಿಸುವ ಆಯ್ಕೆಯನ್ನು ನೀಡುತ್ತದೆ. ಮೊದಲು, ಈ ಕೆಲಸವನ್ನು ಪೇಂಟ್ ಅಥವಾ ಇನ್ನಾವುದೇ ಎಡಿಟಿಂಗ್ ಸಾಫ್ಟ್‌ವೇರ್ ಬಳಸಿ ಮಾಡಬೇಕಾಗಿತ್ತು. ಈ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಸ್ಟಿಕ್ಕರ್‌ಗಳನ್ನು ಸಹ ಸೇರಿಸಬಹುದು. ಇಲ್ಲಿಯವರೆಗೆ, ಈ ವೈಶಿಷ್ಟ್ಯವು ಫೋನ್‌ನಲ್ಲಿ ಮಾತ್ರ ಲಭ್ಯವಿತ್ತು.

ಈ ಆಯ್ಕೆ ಬಳಕೆ ಮಾಡುವುದು ಹೇಗೆ

ಈ ಆಯ್ಕೆ ಬಳಕೆ ಮಾಡುವುದು ಹೇಗೆ

* ಟೆಕ್ಸ್ಟ್ ಕ್ಷೇತ್ರದಲ್ಲಿ ಕ್ಯಾಮೆರಾದ ಮೇಲೆ ಕ್ಲಿಕ್ ಮಾಡಿ
* ಹೊಸ ಫೋಟೋ ಅಥವಾ ವೀಡಿಯೊ ಆಯ್ಕೆ ಮಾಡಿ
* ನೀವು ಅಸ್ತಿತ್ವದಲ್ಲಿರುವ ಫೋಟೋ ಮತ್ತು ವೀಡಿಯೊವನ್ನು ಸಹ ಆಯ್ಕೆ ಮಾಡಬಹುದು
* ಫೋಟೋ ಮತ್ತು ವೀಡಿಯೊಗೆ ನೀವು ಏನನ್ನು ಸೇರಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ

ಎಡಿಟ್ ಮಾಡುವುದು ಹೇಗೆ

ಎಡಿಟ್ ಮಾಡುವುದು ಹೇಗೆ

* ಸ್ಕ್ರೀನ್‌ ಮೇಲ್ಭಾಗದಲ್ಲಿರುವ ಡ್ರಾ (Draw) ಮೇಲೆ ಕ್ಲಿಕ್ ಮಾಡಿ
* ಫ್ರೀ ಹ್ಯಾಂಡ್ ಡ್ರಾಯಿಂಗ್‌ಗಳನ್ನು ರಚಿಸಲು ನೀವು ಈಗ ನಿಮ್ಮ ಬೆರಳನ್ನು ಬಳಸಬಹುದು
* ಬಣ್ಣವನ್ನು ಆಯ್ಕೆ ಮಾಡಲು ನಿಮ್ಮ ಬೆರಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಸ್ಲೈಡ್ ಮಾಡಿ
* ನೀವು ಸೆಳೆಯುವ ಯಾವುದೇ ಬಣ್ಣವನ್ನು ನೀವು ಈಗ ಆಯ್ಕೆ ಮಾಡಬಹುದು.

ಸ್ಟಿಕ್ಕರ್‌ಗಳು ಅಥವಾ ಎಮೋಜಿಯನ್ನು ಸೇರಿಸಲು ಹೀಗೆ ಮಾಡಿ:

ಸ್ಟಿಕ್ಕರ್‌ಗಳು ಅಥವಾ ಎಮೋಜಿಯನ್ನು ಸೇರಿಸಲು ಹೀಗೆ ಮಾಡಿ:

* ಸ್ಟಿಕ್ಕರ್ ಅಥವಾ ಎಮೋಜಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ನೀವು ಬಳಸಲು ಅಥವಾ ಕಳುಹಿಸಲು ಬಯಸುವ ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡಿ
* ಅದನ್ನು ಸರಿಸಲು ಮತ್ತು ಎಳೆಯಲು ಐಟಂ ಅನ್ನು ಹಿಡಿದುಕೊಳ್ಳಿ ಮತ್ತು ಟ್ಯಾಪ್ ಮಾಡಿ
* ಅದನ್ನು ಚಿಕ್ಕದಾಗಿಸಲು ಅಥವಾ ದೊಡ್ಡದಾಗಿಸಲು ನೀವು ಒಳಗೆ ಅಥವಾ ಹೊರಗೆ ಪಿಂಚ್ ಮಾಡಬಹುದು

ನಡೆಸುವಾಗ

ಸ್ಟಿಕರ್‌ ಸಜೇಷನ್‌ ಫೀಚರ್ಸ್ ಸೇರಿಸಿದೆ. ಇದು ಬಳಕೆದಾರರಿಗೆ ಸಂಭಾಷಣೆಗಳಿಗೆ ಸರಿಯಾದ ಸ್ಟಿಕ್ಕರ್ ಅನ್ನು ಸರ್ಚ್‌ ಮಾಡುವುದಕ್ಕೆ ಅನುಮತಿಸಲಿದೆ. ಸ್ನೇಹಿತರ ಜೊತೆ ಚಾಟ್‌ ಸಂಭಾಷಣೆ ನಡೆಸುವಾಗ ಸ್ಟಿಕ್ಕರ್ ಅನ್ನು ಬಳಸುವವರು ಸಾಮಾನ್ಯವಾಗಿ ಸರಿಯಾದ ಸ್ಟಿಕ್ಕರ್ ಅನ್ನು ಹುಡುಕಲು ಅನೇಕ ಟ್ಯಾಬ್‌ಗಳ ಮೂಲಕ ಸರ್ಚ್‌ ಮಾಡಬೇಕಾಗುತ್ತದೆ.

ಲಿಂಕ್ಸ್‌

ಇನ್ನು ವಾಟ್ಸಾಪ್‌ ಪ್ರಿವ್ಯೂ ಲಿಂಕ್ಸ್‌ ಫೀಚರ್ಸ್‌ ಅನ್ನು ಕೂಡ ವೆಬ್‌ ಆವೃತ್ತಿಯಲ್ಲಿ ಪರಿಚಯಿಸಿದೆ. ಇದರಿಂದಾಗಿ ವೆಬ್‌ ಆವೃತ್ತಿ ಬಳಸುವ ಬಳಕೆದಾರರು ಯಾವುದೇ ಲಿಂಕ್‌ಗಳು ಬಂದರೂ ಅವುಗಳ ಫುಲ್‌ ಪ್ರಿವ್ಯೂ ನೋಡುವುದಕ್ಕೆ ಅವಕಾಶ ಸಿಗಲಿದೆ. ಲಿಂಕ್ ಅನ್ನು ಸ್ವೀಕರಿಸುವ ಜನರು ಸಂದೇಶ ಕಳುಹಿಸುವ ಅಪ್ಲಿಕೇಶನ್‌ನ ವೆಬ್ ಆವೃತ್ತಿಯಲ್ಲಿ ಏನು ಕಳುಹಿಸಿದ್ದಾರೆ ಎಂದು ತಿಳಿಯುವುದಕ್ಕೆ ಇದು ಅನುಮತಿ ನೀಡಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ನಲ್ಲಿ ವಾಯ್ಸ್‌ ನೋಟ್‌ ಅನ್ನು ಟೆಕ್ಸ್ಟ್‌ ರೂಪಕ್ಕೆ ಬದಲಾಯಿಸುವ ಅವಕಾಶ ಕೂಡ ಲಭ್ಯವಿದೆ. ವಾಟ್ಸಾಪ್‌ನಲ್ಲಿ ಪಠ್ಯವನ್ನು ಟೈಪ್‌ ಮಾಡಿ ಸಂದೇಶ ಕಳುಹಿಸುವುದಕ್ಕಿಂತ ವಾಯ್ಸ್‌ ನೋಟ್‌ ಸಂದೇಶ ತುಂಬಾನೆ ಸುಲಭ. ಆದರೆ ಕೆಲವು ಸಂದರ್ಭದಲ್ಲಿ ನಿಮ್ಮ ಸ್ನೇಹಿತರು ನಿಮಗೆ ಕಳುಹಿಸಿರುವ ವಾಯ್ಸ್‌ ನೋಟ್‌ ಅನ್ನು ಕೇಳಲು ಆಗದಿರಬಹುದು. ಸಾರ್ವಜನಿಕ ಸ್ಥಳದಲ್ಲಿರುವಾ ಹೆಡ್‌ಫೋನ್‌ ಇಲ್ಲದೆ ವಾಯ್ಸ್‌ ನೋಟ್‌ ಕೇಳಲು ಅಸಾಧ್ಯವಾಗಬಹುದು. ಇಂತಹ ಸನ್ನಿವೇಶದಲ್ಲಿ ನೀವು ನಿಮ್ಮ ಸ್ನೇಹಿತನ ವಾಯ್ಸ್‌ ನೋಟ್‌ ಸಂದೇಶದಲ್ಲಿ ಏನಿದೆ ಅನ್ನೊದನ್ನ ತಿಳಿಯಬಹುದು. ಇದಕ್ಕಾಗಿ ನೀವು ನಿಮಗೆ ಬಂದಿರುವ ವಾಯ್ಸ್‌ ನೋಟ್‌ ಅನ್ನು ಟ್ರಾನ್ಸ್ಕ್ರಿಬ್ ಮೂಲಕ ಅದರಲ್ಲಿ ಏನಿದೆ ಎಂಬ ಸಾರಾಂಶವನ್ನು ತಿಳಿದುಕೊಳ್ಳಬಹುದಾಗಿದೆ.

ವಾಟ್ಸಾಪ್‌ ವಾಯ್ಸ್‌ನೋಟ್‌ ಅನ್ನು ಟ್ರಾನ್ಸ್‌ಸ್ಕ್ರಿಬ್‌ ಮಾಡುವುದು ಹೇಗೆ?

ವಾಟ್ಸಾಪ್‌ ವಾಯ್ಸ್‌ನೋಟ್‌ ಅನ್ನು ಟ್ರಾನ್ಸ್‌ಸ್ಕ್ರಿಬ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ 'ವಾಟ್ಸಾಪ್‌ ಗಾಗಿ ಟ್ರಾನ್ಸ್‌ಕ್ರೈಬರ್' ಇನ್‌ಸ್ಟಾಲ್‌ ಮಾಡಿ.
ಹಂತ:2 ನಂತರ ವಾಟ್ಸಾಪ್‌ ವಾಯ್ಸ್‌ ನೋಟ್‌ ಅನ್ನು ಅಪ್ಲಿಕೇಶನ್‌ಗೆ ಶೇರ್‌ಮಾಡಿ
ಹಂತ:3 ಇದೀಗ ನಿಮ್ಮ ವಾಯ್ಸ್‌ ನೋಟ್‌ ಅನ್ನು ಲಿಪ್ಯಂತರ ಮಾಡಲು 'WhatsApp ಗಾಗಿ ಟ್ರಾನ್ಸ್‌ಕ್ರೈಬರ್' ಆಯ್ಕೆಮಾಡಿ
ಹಂತ:4 WhatsApp ಅಪ್ಲಿಕೇಶನ್ ಐಕಾನ್‌ಗಾಗಿ ಟ್ರಾನ್ಸ್‌ಕ್ರೈಬರ್ ನಲ್ಲಿ ಸರ್ಚ್‌ ಮಾಡಿ. ಇದರಲ್ಲಿ ಅಪ್ಲಿಕೇಶನ್ ಇಂಟರ್ಫೇಸ್ ತೆರೆಯಲು ಅದರ ಮೇಲೆ ಕ್ಲಿಕ್ ಮಾಡಿ.
ಹಂತ:5 ಇದರಲ್ಲಿ ನಿಮಗೆ 'ಲಿಪ್ಯಂತರ' ಆಯ್ಕೆಮಾಡಿ ಎಂಬ ಆಯ್ಕೆಕಾಣಲಿದೆ ಅದನ್ನು ಟ್ಯಾಪ್‌ ಮಾಡಿ
ಹಂತ:6 ಈಗ ನಿಮ್ಮ ವಾಯ್ಸ್‌ ನೋಟ್‌ ಟ್ರಾನ್‌ಸ್ಕ್ರಿಬ್‌ ಆಗುಲ ಕೆಲವು ಸೆಕೆಂಡುಗಳ ಕಾಲ ಕಾಯಿರಿ. ಇದೆಲ್ಲವೂ ಮುಗಿದ ನಂತರ ನಿಮ್ಮ ವಾಯ್ಸ್‌ ನೋಟ್‌ ಲಿಪ್ಯಂತರವಾಗಲಿದೆ. ಇದರಲ್ಲಿ ಟ್ರಾನ್‌ಸ್ಕ್ರಿಬ್‌ ಟೆಕ್ಸ್ಟ್‌ ಅನ್ನು ಕಾಪಿ ಮಾಡಬಹುದು. ಈ ಮೂಲಕ ನಿಮ್ಮ ಗೆಳೆಯ ಅಥವಾ ಕುಟುಂಬಸ್ಥರು ನಿಮಗೆ ಕಳುಹಿಸಿರುವ ವಾಯ್ಸ್‌ನೋಟ್‌ನಲ್ಲಿ ಏನಿದೆ ಅನ್ನೊದನ್ನ ಟೆಕ್ಸ್ಟ್‌ ರೂಪದಲ್ಲಿ ತಿಳಿದುಕೊಳ್ಳಬಹುದಾಗಿದೆ.

Best Mobiles in India

English summary
How To Edit Photos On WhatsApp Web Through New Photo Editor Tool.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+