Home
ಟೆಕ್ ನೌಕರಿ

ವಾಟ್ಸಾಪ್‌ ಗ್ರೂಪ್‌ನಿಂದ ಕಿರಿಕಿರಿ ಆಗುತ್ತಿದ್ದರೆ, ಕೂಡಲೇ ಹೀಗೆ ಮಾಡಿ!

ಮೆಟಾ ಮಾಲೀಕತ್ವದ ವಾಟ್ಸಾಪ್‌ ಸಾಕಷ್ಟು ನೂತನ ಫೀಚರ್ಸ್‌ಗಳೊಂದಿಗೆ ಬಳಕೆದಾರರಿಗೆ ಉಪಯುಕ್ತ ಮೆಸೆಜಿಂಗ್ ಆಪ್ ಎನಿಸಿದೆ. ವಾಟ್ಸಾಪ್ ಕೆಲವೊಂದು ಸುರಕ್ಷತಾ ಫೀಚರ್ಸ್‌ಗಳ ಆಯ್ಕೆ ಸಹ ಪಡೆದಿದದೆ. ಬಳಕೆದಾರರಿಗೆ ಗ್ರೂಪ್‌ ಸೇರುವ ಆಯ್ಕೆ ಜೊತೆಗೆ ಗ್ರೂಪ್‌ನಿಂದ ಬೇಕಾದಾಗ ಹೊರಬರಲು ಸಹ ಅವಕಾಶ ನೀಡಿದೆ. ಯಾರಿಗೂ ತಿಳಿಯದಂತೆ ಹೊರಬರಬಹುದು.

ಹೌದು, ವಾಟ್ಸಾಪ್‌ ಗ್ರೂಪ್‌ ಬಳಕೆದಾರರಿಗೆ ಉಪಯುಕ್ತವೇ ಸರಿ. ಆದರೆ ಕೆಲವೊಮ್ಮೆ ಕೆಲವು ವಾಟ್ಸಾಪ್‌ ಗ್ರೂಪ್‌ಗಳಿಂದ ಬಳಕೆದಾರರಿಗೆ ಕಿರಿ ಕಿರಿ ಎನಿಸಬಹುದು. ಅಂತಹ ಸಂದರ್ಭಗಳಲ್ಲಿ ಬಳಕೆದಾರರು ಸರಳವಾಗಿ ಯಾರಿಗೂ ಸೂಚಿಸದೆ ವಾಟ್ಸಾಪ್ ಗ್ರೂಪ್‌ನಿಂದ ಹೊರಬರಲು ಆಯ್ಕೆಗಳು ಇವೆ. ಸೈಲೆಂಟ್‌ ಆಗಿ ವಾಟ್ಸಾಪ್‌ ಗ್ರೂಪ್‌ನಿಂದ ಹೊರಬರಲು ಮುಂದಾಗಬಹುದು.

ವಾಟ್ಸಾಪ್‌ ಗ್ರೂಪ್‌ನಿಂದ ಕಿರಿಕಿರಿ ಆಗುತ್ತಿದ್ದರೆ, ಕೂಡಲೇ ಹೀಗೆ ಮಾಡಿ!

ಆಪಲ್‌ ಐಫೋನ್‌ ಹಾಗೂ ಆಂಡ್ರಾಯ್ಡ್‌ ಓಎಸ್‌ ಎರಡು ಪ್ಲಾಟ್‌ಫಾರ್ಮ್ ಗಳಲ್ಲಿಯೂ ವಾಟ್ಸಾಪ್‌ ಜನಪ್ರಿಯ ಆಪ್‌ ಎನಿಸಿಕೊಂಡಿದೆ. ಹಾಗೆಯೇ ಆಂಡ್ರಾಯ್ಡ್‌ ಆಪ್‌ ಮತ್ತು ಐಫೋನ್‌ ಐಓಎಸ್‌ ಫೋನ್‌ಗಳ ಬಳಕೆದಾರರು ಗ್ರೂಪ್‌ನಿಂದ ಹೊರಬರುವ ಆಯ್ಕೆ ಹೊಂದಿದ್ದಾರೆ. ಹಾಗಾದರೆ ಐಫೋನ್‌ ಬಳಕೆದಾರರು ವಾಟ್ಸಾಪ್‌ ಗ್ರೂಪ್‌ನಿಂದ ಹೊರಬರುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ ಗ್ರೂಪ್‌ನಿಂದ ಕಿರಿಕಿರಿ ಆಗುತ್ತಿದ್ದರೆ, ಕೂಡಲೇ ಹೀಗೆ ಮಾಡಿ!

ವಾಟ್ಸಾಪ್‌ ಗ್ರೂಪ್‌ನಿಂದ ಎಕ್ಸಿಟ್‌ ಆಗಲು ಐಫೋನ್‌ನಲ್ಲಿ ಈ ಕ್ರಮ ಅನುಸರಿಸಿ:

* ಮೊದಲು ಐಫೋನ್‌ನಲ್ಲಿ ವಾಟ್ಸಾಪ್‌ ಆಪ್‌ ತೆರೆಯಿರಿ
* ನಂತರ ಈಗ ಗುಂಪಿನಲ್ಲಿ ಎಡಕ್ಕೆ ಸ್ವೈಪ್ ಮಾಡಿರಿ
* ಬಳಿಕ ನೀವು ಎರಡು ಆಯ್ಕೆಗಳನ್ನು ಕಾಣುವಿರಿ.
* ಅವುಗಳು ಮೋರ್ ಮತ್ತು ಆರ್ಕೈವ್, ಇವುಗಳಲ್ಲಿ ನೀವು 'ಮೋರ್' ಕ್ಲಿಕ್ ಮಾಡರಿ
* ನಂತರ 'Exit Group' ಅನ್ನು ಟ್ಯಾಪ್ ಮಾಡಿ ಮತ್ತು ದೃಢೀಕರಿಸಿ.

ವಾಟ್ಸಾಪ್‌ ಗ್ರೂಪ್‌ನಿಂದ ಕಿರಿಕಿರಿ ಆಗುತ್ತಿದ್ದರೆ, ಕೂಡಲೇ ಹೀಗೆ ಮಾಡಿ!

ವಾಟ್ಸಾಪ್‌ ಗ್ರೂಪ್‌ನಿಂದ ಹೊರಬರಲು ಐಫೋನ್‌ ಬಳಕೆದಾರರು ಹೀಗೂ ಮಾಡಬಹುದು

* ಮೊದಲು ಐಫೋನ್‌ನಲ್ಲಿ ವಾಟ್ಸಾಪ್‌ ಆಪ್‌ ತೆರೆಯಿರಿ
* ಬಳಿಕ, ಗ್ರೂಪ್‌ ಚಾಟ್ ಅನ್ನು ದೀರ್ಘವಾಗಿ ಒತ್ತಿರಿ ಅಥವಾ ಹಿಡಿದುಕೊಳ್ಳಿ, ಅಲ್ಲಿ ನೀವು ಅನೇಕ ಆಯ್ಕೆಗಳನ್ನು ಕಾಣುವಿರಿ
* ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ ಕೊನೆಯ ಆಯ್ಕೆಯಾದ 'Exit Group' ಅನ್ನು ಟ್ಯಾಪ್ ಮಾಡಿ
* ಗ್ರೂಪ್‌ನಿಂದ ನಿರ್ಗಮಿಸಲು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ವಾಟ್ಸಾಪ್‌ ಗ್ರೂಪ್‌ನಿಂದ ಕಿರಿಕಿರಿ ಆಗುತ್ತಿದ್ದರೆ, ಕೂಡಲೇ ಹೀಗೆ ಮಾಡಿ!

ಮೆಸೆಜ್‌ ಯೂವರ್‌ಸೆಲ್ಫ್ ಆಯ್ಕೆ

ಮೆಸೆಜ್‌ ಯೂವರ್‌ಸೆಲ್ಫ್ ಈ ಆಯ್ಕೆಯ ವಾಟ್ಸಾಪ್ 'ನಿಮಗೇ ಮೆಸೆಜ್‌ ಕಳುಹಿಸಲು' (Message Yourself) ಆಯ್ಕೆ ಪರಿಚಯಿಸಿದೆ. ಬಳಕೆದಾರರು ಸ್ವಂತ ಅವರ ಮೊಬೈಲ್ ನಂಬರ್‌ಗೆ ಅವರೇ ಮೆಸೆಜ್‌ ಕಳುಹಿಸುವುದು ಸಾಧ್ಯ, ಆದರೆ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಯಾವುದೇ ಮೀಸಲಾದ ಚಾಟ್ ವಿಂಡೋ ಲಭ್ಯವಿರಲಿಲ್ಲ. ಆದರೆ ಹೊಸ ಅಪ್‌ಡೇಟ್‌ನೊಂದಿಗೆ, ಬಳಕೆದಾರರು ಸ್ವಂತ ನಂಬರ್‌ನ ವಾಟ್ಸಾಪ್ ಚಾಟ್ ಅನ್ನು ತೆರೆದಾಗ, ಚಾಟ್ ಹೆಡ್‌ಲೈನ್‌ನಲ್ಲಿ ಮೆಸೆಜ್ ಯೂವರ್‌ಸೆಲ್ಫ್ ಎಂದು ಕಾಣಿಸಲಿದೆ.

ಆನ್‌ಲೈನ್ ಸ್ಟೇಟಸ್‌ ಹೈಡ್‌ ಮಾಡುವ ಆಯ್ಕೆ

ಬಳಕೆದಾರರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಫೀಚರ್‌ ಇದಾಗಿದ್ದು, ಬಹು ಉಪಯುಕ್ತ ಎನಿಸಿದೆ. ಅದುವೇ ಆನ್‌ಲೈನ್ ಸ್ಟೇಟಸ್‌ ಹೈಡ್‌ ಮಾಡುವ ಆಯ್ಕೆ ಆಗಿದೆ. ಇದರ ಹೆಸರೇ ಸೂಚಿಸುವಂತೆ ಬಳಕೆದಾರರು ತಮ್ಮ ಆನ್‌ಲೈನ್‌ ಸ್ಟೇಟಸ್‌ ಅನ್ನು ಇತರಿಗೆ ಕಾಣಿಸದಂತೆ ಮರೆ ಮಾಡಬಹುದಾಗಿದೆ. ಅನೇಕರು ಆನ್‌ಲೈನ್ ಗ್ರೀನ್‌ ಸ್ಟೇಟಸ್‌ ಕಾಣಿಸಿದರೂ, ನಮಗೆ ಪ್ರತಿಕ್ರಿಯಿಸುತ್ತಿಲ್ಲ ಎನ್ನುವ ಲೆಕ್ಕಾಚಾರ ಮಾಡುತ್ತಾರೆ. ಈ ಆಯ್ಕೆಯಿಂದ ಸ್ಟೇಟಸ್‌ ಹೈಡ್‌ ಮಾಡಬಹುದು.

ವಾಟ್ಸಾಪ್‌ ಗ್ರೂಪ್‌ನಿಂದ ಕಿರಿಕಿರಿ ಆಗುತ್ತಿದ್ದರೆ, ಕೂಡಲೇ ಹೀಗೆ ಮಾಡಿ!

ಮೆಸೆಜ್‌ ರಿಯಾಕ್ಷನ್‌ ಆಯ್ಕೆ

ವಾಟ್ಸಾಪ್‌ ಮೆಸೇಜಿಂಗ್‌ ಆಪ್‌ ಈ ವರ್ಷ ಮೆಸೆಜ್‌ ರಿಯಾಕ್ಷನ್‌ ಆಯ್ಕೆ ಪರಿಚಯಿಸಿದೆ. ಈ ಆಯ್ಕೆಯಲ್ಲಿ ಮೆಸೆಜ್‌ ರಿಯಾಕ್ಷನ್‌ಗೆ ಎಮೋಜಿಗಳನ್ನು ಬಳಕೆ ಮಾಡಲು ಅನುವು ಮಾಡಿಕೊಡಲಾಗಿದೆ. ಈ ಮೂಲಕ ನೀವು ಯಾವುದೇ ಟೆಕ್ಸ್ಟ್‌ ಮಾಡದೆ ಎಮೋಜಿ ಮೂಲಕವೇ ನಿಮ್ಮ ಸ್ನೇಹಿತರು ಹಾಗೂ ಬಂಧುಗಳಿಗೆ ಪ್ರತಿಕ್ರಿಯೆ ನೀಡಬಹುದು.

Best Mobiles in India

English summary
How to exit WhatsApp group: WhatsApp group without showing the message 'left' to iPhone users. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+