Home
ಟೆಕ್ ನೌಕರಿ

ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಈ ಟಿಪ್ಸ್‌ ಮರೆಯಬೇಡಿ!

ಪ್ರಸ್ತುತ ಹತ್ತು ಹಲವು ಕೆಲಸಗಳನ್ನು ನಿರ್ವಹಿಸುವು ಸ್ಮಾರ್ಟ್‌ಫೋನ್‌ ಸದ್ಯ ಎಲ್ಲರ ಅಗತ್ಯದ ಡಿವೈಸ್‌ ಎನಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಬಾಳಿಕೆ ಅತ್ಯುತ್ತಮವಾಗಿರಲೆಂದು ಮೊಬೈಲ್ ಕಂಪನಿಗಳು ಇತ್ತೀಚಿನ ಸ್ಮಾರ್ಟ್‌ಫೋನಗಳಲ್ಲಿ ಹೆಚ್ಚಿನ ಬ್ಯಾಟರಿ ಶಕ್ತಿಯನ್ನು ನೀಡುತ್ತಿದ್ದು, ಅದರೊಂದಿಗೆ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡುತ್ತಿವೆ. ಆದರೂ ಬ್ಯಾಟರಿ ಬಾಳಿಕೆ ಬರುತ್ತಿಲ್ಲ ಎನ್ನುವುದು ಬಹುತೇಕ ಸ್ಮಾರ್ಟ್‌ಫೋನ್‌ ಬಳಕೆದಾರರ ಸಾಮಾನ್ಯ ಸಮಸ್ಯೆ ಆಗಿದೆ.

ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಈ ಟಿಪ್ಸ್‌ ಮರೆಯಬೇಡಿ!

ಹೌದು, ಇತ್ತೀಚಿನ ಸ್ಮಾರ್ಟ್‌ಫೋನಗಳಲ್ಲಿ ಹೆಚ್ಚಿನ ಬ್ಯಾಟರಿಯಲ್ಲಿ ಶಕ್ತಿ ನೀಡಿದರು (mAh) ಅವುಗಳ ಬಾಳಿಕೆ ಒಂದು ದಿನ ಬಂದರೇ ಹೆಚ್ಚು ಎನ್ನುವಂತಾಗಿದೆ. ಏಕೆಂದರೇ ನಾನಾ ಕಾರಣಗಳಿಂದಾಗಿ ಸ್ಮಾರ್ಟ್‌ಫೋನ್‌ನ ಬಳಕೆ ಹೆಚ್ಚಾಗಿದ್ದು, ಜೊತೆಗೆ ಬ್ಯಾಟರಿ ಕಬಳಿಸುವ ಆಪ್ಸ್‌ಗಳು ಸ್ಮಾರ್ಟ್‌ಫೋನ್‌ ಸೇರಿರುತ್ತವೆ. ಆದರೆ ಕೇಲವು ಅಗತ್ಯ ಕ್ರಮಗಳನ್ನು ಅನುಸರಿಸುವ ಮೂಲಕ ಬ್ಯಾಟರಿ ಶಕ್ತಿ ವೃದ್ಧಿಸಬಹುದು. ಹಾಗಾದರೇ ಯಾವೆಲ್ಲಾ ಕ್ರಮಗಳ ಮೂಲಕ ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ವೃದ್ಧಿಸಬಹುದು ಎನ್ನುವುದನ್ನು ನೋಡೋಣ ಬನ್ನಿರಿ.

ಬ್ಯಾಕ್‌ಗ್ರೌಂಡ್‌ ಆಪ್ಸ್‌ ಸ್ಟಾಪ್‌ ಮಾಡಿ

ಬ್ಯಾಕ್‌ಗ್ರೌಂಡ್‌ ಆಪ್ಸ್‌ ಸ್ಟಾಪ್‌ ಮಾಡಿ

ನಾನಾ ಕಾರಣಗಳಿಂದ ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳನ್ನು ತೆರೆಯುತ್ತಿರಿ. ಆದರೆ ಬಹುತೇಕ ಬಳಕೆದಾರರು ಆಪ್‌ಗಳಲ್ಲಿ ಕೆಲಸ ಮಾಡಿ ಮುಗಿಸಿದಾಗ ಆ ಆಪ್ ಅನ್ನು ಕ್ಲೋಸ್‌ ಮಾಡುವುದೇ ಇಲ್ಲ. ಹಾಗಾಗಿ ಬ್ಯಾಕ್‌ಗ್ರೌಂಡ್‌ನಲ್ಲಿ ಆ ಆಪ್ಸ್‌ಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಜೊತೆಗೆ ಬ್ಯಾಟರಿಯನ್ನು ಕಬಳಿಸುತ್ತ ಬ್ಯಾಟರಿ ಖಾಲಿಮಾಡುತ್ತವೆ. ಅದಕ್ಕಾಗಿ ಬ್ಯಾಕ್‌ಗ್ರೌಂಡ್‌ ಆಪ್ಸ್‌ ಕ್ಲಿಯರ್‌ ಮಾಡಿಬಿಡಿ.

ಸ್ಕ್ರೀನ್‌ ಬ್ರೈಟ್ನೆಸ್‌ ಕಡಿಮೆ ಮಾಡಿ

ಸ್ಕ್ರೀನ್‌ ಬ್ರೈಟ್ನೆಸ್‌ ಕಡಿಮೆ ಮಾಡಿ

ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರು ಸ್ಕ್ರೀನ್‌ ಬ್ರೈಟ್ನೆಸ್‌ ಅನ್ನು ಪೂರ್ಣ ಇಟ್ಟುಕೊಳ್ಳುತ್ತಾರೆ ಅದರಿಂದ ಸ್ಕ್ರೀನ್ ಹೆಚ್ಚು ಪ್ರಖರವಾಗಿ ಕಾಣುತ್ತದೆ ನಿಜ. ಆದರೆ ಅದರಿಂದ ಬ್ಯಾಟರಿ ಖಾಲಿಯಾಗುತ್ತದೆ ಎನ್ನುವುದನ್ನು ಮರೆಯಬೇಡಿ. ಹಾಗಾಗಿ ಸ್ಕ್ರೀನ್‌ ಬ್ರೈಟ್ನೆಸ್‌ ಲೆವಲ್‌ ಅನ್ನು ಆಟೋಮ್ಯಾಟಿಕ್ ಮೋಡ್‌ನಲ್ಲಿ ಇರಿಸಿಕೊಳ್ಳಿ ಇದರಿಂದ ಬ್ಯಾಟರಿ ಉಳಿಕೆ ಆಗುತ್ತದೆ.

ಸ್ಕ್ರೀನ್‌ ಆಫ್‌ ಟೈಮ್‌ ಇಳಿಸಿ

ಸ್ಕ್ರೀನ್‌ ಆಫ್‌ ಟೈಮ್‌ ಇಳಿಸಿ

ಸ್ಮಾರ್ಟ್‌ಫೋನ್‌ನ ಬಳಕೆ ಮುಗಿಸ ಬಳಿಕ ಸ್ಕ್ರೀನ್‌ ಸ್ಲಿಪ್ ಮೋಡ್‌ಗೆ ಹೋಗುತ್ತದೆ ಅಂದರೇ ಸ್ಕ್ರೀನ್ ಲೈಟ್‌ ಆಫ್‌ ಆಗುತ್ತದೆ. ಈ ಸ್ಲಿಪ್‌ ಮೋಡ್‌ ಆಪ್‌ ಆಗಲು 1ನಿಮಿಷ, 30ಸೆಕೆಂಡ್ ಮತ್ತು 15 ಸೆಕೆಂಡ್ ಎಂಬ ಆಯ್ಕೆಗಳು ಸ್ಮಾರ್ಟ್‌ಫೋನ್‌ನಲ್ಲಿ ಇರುತ್ತವೆ. ಸ್ಲಿಪ್‌ ಟೈಮ್‌ ಅನ್ನು ಆದಷ್ಟು ಕಡಿಮೆ ಮಾಡಿರಿ ಇದು ಫೋನ್‌ ಬ್ಯಾಟರಿ ಉಳಿಸಲು ನೆರವಾಗಲಿದೆ.

ವೈಬ್ರೈಟ್ ಮೋಡ್‌ ಬೇಡ

ವೈಬ್ರೈಟ್ ಮೋಡ್‌ ಬೇಡ

ಸ್ಮಾರ್ಟ್‌ಫೋನ್‌ಗಳ ಬಳಕೆದಾರರು ರಿಂಗ್‌ ಜೊತೆಗೆ ವೈಬ್ರೈಟ್‌ ಆಯ್ಕೆಯನ್ನು ಸೆಟ್‌ ಮಾಡಿಕೊಂಡಿರುತ್ತಾರೆ. ಇನ್ನೂ ಕೇಲವರು ಹೆಚ್ಚಾಗಿ ವೈಬ್ರೈಟ್‌ ಮೋಡ್‌ ಅನ್ನು ಬಳೆಸುತ್ತಾರೆ. ವೈಬ್ರೈಟ್‌ನಿಂದ ಫೋನ್‌ ಬ್ಯಾಟರಿ ಬೇಗ ಖಾಲಿಯಾಗುತ್ತದೆ ಆದಕ್ಕಾಗಿ ಫೋನ್‌ ರಿಂಗಿಂಗ್‌ ಆಯ್ಕೆಯಲ್ಲಿ ಸಾಧ್ಯವಾದಷ್ಟು ವೈಬ್ರೈಟ್‌ ಮೋಡ್‌ ಆಯ್ಕೆ ಬಳಸುವುದನ್ನು ನಿಲ್ಲಿಸಿರಿ.

ವೈಫೈ- ಬ್ಲೂಟೂತ್ ಆಫ್‌ ಮಾಡಿರಿ

ವೈಫೈ- ಬ್ಲೂಟೂತ್ ಆಫ್‌ ಮಾಡಿರಿ

ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನೆಟ್‌ ಬಳಸಲು ಬಹುತೇಕರು ವೈಫೈ ಆಯ್ಕೆಯನ್ನು ಬಳಸುತ್ತಾರೆ ಆದರೆ ಬಳಕೆ ಮುಗಿದ ತಕ್ಷಣ ಅದನ್ನು ಆಫ್‌ ಮಾಡುವುದೇ ಇಲ್ಲ ಹಾಗೇ ಬ್ಲೂಟೂತ್ ಅನ್ನು ಸದಾ ಆಪ್‌ ಆಗುಯೇ ಇಟ್ಟಿರುತ್ತಾರೆ. ಇದು ಸಹ ಬ್ಯಾಟರಿ ಕಬಳಿಸುತ್ತದೆ ಎನ್ನುವುದು ನೆನಪಿರಲಿ. ಹಾಗಾಗಿ ಅಗತ್ಯತೆ ಮುಗಿದ ಬಳಿಕ ವೈಫೈ ಮತ್ತು ಬ್ಲೂಟೂತ್‌ ಆಫ್‌ ಮಾಡಿರಿ.

Best Mobiles in India

English summary
Smartphones are about as fast as anyone really needs these days, so now it's all about other aspects such as battery life. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+