ಮೈಕ್ರೋ ಎಸ್‌ಡಿ ಬಳಸದೆ ಫೋನ್ ಸಂಗ್ರಹಣೆ ಹೆಚ್ಚಿಸುವುದು ಹೇಗೆ?

By Shwetha
|

ನಾವು ಡಿವೈಸ್‌ಗಳಲ್ಲಿ ಸಂಗ್ರಹಣಾ ಸಾಮರ್ಥ್ಯವನ್ನು ಆಯ್ದುಕೊಳ್ಳುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ. ಮಾರುಕಟ್ಟೆಗೆ ಕಾಲಿರಿಸುವ ಹೆಚ್ಚಿನ ಫೋನ್‌ಗಳು ಕೂಡ ಸಂಗ್ರಹಣಾ ಸಾಮರ್ಥ್ಯಗಳನ್ನು ವಿಸ್ತರಿಸುವ ಸೌಲಭ್ಯಗಳೊಂದಿಗೆ ಬರುತ್ತಿವೆ. ಇಂದಿನ ಲೇಖನದಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್ ಇಲ್ಲದೆಯೇ ಫೋನ್‌ನ ಸಂಗ್ರಹಣಾ ಸಾಮರ್ಥ್ಯವನ್ನು ವಿಸ್ತರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಓದಿರಿ: 64ಜಿಬಿ ಸ್ಟೋರೇಜ್ ಹೊಂದಿರುವ ಟಾಪ್ 10 ಫೋನ್‌ಗಳು

ಅಂದರೆ ಥರ್ಡ್ ಪಾರ್ಟಿ ಡಿವೈಸ್‌ಗಳನ್ನು ಬಳಸಿ ಫೋನ್‌ನ ಸ್ಟೋರೇಜ್ ಸಾಮರ್ಥ್ಯವನ್ನು ನಿಮಗೆ ವಿಸ್ತರಿಸಿಕೊಳ್ಳಬಹುದಾಗಿದೆ. ಕ್ಲೌಡ್ ವೈರ್‌ಲೆಸ್ ಸಾಲಿಡ್ ಸ್ಟೇಟ್ ಡಿವೈಸ್ (ಎಸ್‌ಎಸ್‌ಡಿ) ಅನ್ನು ಬಳಸಿಕೊಂಡು ಫೋನ್‌ನ ಸಂಗ್ರಹಣಾ ಸಾಮರ್ಥ್ಯವನ್ನು ನಿಮಗೆ ಹೆಚ್ಚಿಸಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಕ್ಲೌಡ್‌ ವೈರ್‌ಲೆಸ್‌

ಕ್ಲೌಡ್‌ ವೈರ್‌ಲೆಸ್‌

ಕ್ಲೌಡ್‌ ವೈರ್‌ಲೆಸ್‌ ಎಸ್‌ಎಸ್‌ಡಿ ಹೆಚ್ಚುವರಿ ಸಂಗ್ರಹಣೆಯನ್ನು ದೊರಕಿಸಿಕೊಡುವಲ್ಲಿ ಕಮಾಲಿನ ಕೆಲಸವನ್ನು ಮಾಡಲಿದೆ. ಇವು ಗಾತ್ರದಲ್ಲಿ ಸಣ್ಣದಾಗಿದ್ದರೂ ಇದರ ಹೈ ಪೋರ್ಟೆಬಿಲಿಟಿ ಪ್ರಯಾಣಿಕರಿಗೆ ಅದ್ಭುತ ಸೇವೆಯನ್ನು ಒದಗಿಸಲಿದೆ.

ಆಂಡ್ರಾಯ್ಡ್ ಮತ್ತು ಐಓಎಸ್

ಆಂಡ್ರಾಯ್ಡ್ ಮತ್ತು ಐಓಎಸ್

ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರು ನಿಫ್ಟಿ ಅಪ್ಲಿಕೇಶನ್‌ನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಗೂಗಲ್ ಪ್ಲೇ ಅಥವಾ ಆಪಲ್ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.

ಕಿಂಗ್‌ಸ್ಟನ್ ವೈ-ಡ್ರೈವ್

ಕಿಂಗ್‌ಸ್ಟನ್ ವೈ-ಡ್ರೈವ್

ಮೆಮೊರಿ ಇದೆ ಎಂದಾದಲ್ಲಿ ಅಲ್ಲಿ ಕಿಂಗ್‌ಸ್ಟನ್ ಇರಬೇಕು. ವೈಡ್ರೈವ್ ಒಂದು ಪೋರ್ಟೇಬಲ್ ವೈರ್‌ಲೆಸ್ ಸ್ಟೋರೇಜ್ ಆಪ್ಶನ್ ಆಗಿದ್ದು ಐಪ್ಯಾಡ್, ಐಪೋಡ್ ಟಚ್, ಕಿಂಡಲ್ ಫೈರ್, ಆಂಡ್ರಾಯ್ಡ್ ರನ್ನಿಂಗ್ ಮೊಬೈಲ್ ಡಿವೈಸ್‌ಗಳಲ್ಲಿ ಬಳಸಬಹುದಾಗಿದೆ. ಇದು 64 ಜಿಬಿ ಮೆಮೊರಿಯೊಂದಿಗೆ ಬಂದಿದ್ದು, ಅಪ್ಲಿಕೇಶನ್ ಮೂಲಕ ವೈಡ್ರೈವ್ ಅನ್ನು ಪ್ರವೇಶಿಸಬಹುದಾಗಿದೆ.

ಸೀಗೇಟ್ ಸ್ಯಾಟಲೈಟ್

ಸೀಗೇಟ್ ಸ್ಯಾಟಲೈಟ್

ಸೀಗೇಟ್‌ನಿಂದ ಈ ಸ್ಯಾಟಲೈಟ್ ಬಳಸಲು ಸುಲಭವಾಗಿರುವ ಉತ್ಪನ್ನವಾಗಿದ್ದು ಬ್ರೌಸರ್ ಮತ್ತು ವೈಫೈ ಆಂಟೆನಾವನ್ನು ಆಧರಿಸಿದೆ. ಹೆಚ್ಚುವರಿ ವರ್ಗಾವಣೆ ವೇಗವನ್ನು ಇದು ಹೊಂದಿದ್ದು 7 ಗಂಟೆಗಳ ಬ್ಯಾಟರಿ ಲೈಫ್ ಅನ್ನು ನೀಡಲಿದೆ. ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್‌ಗೂ ಇದನ್ನು ಬಳಸಿಕೊಳ್ಳಬಹುದಾಗಿದೆ.

ಗೌಂಟ್‌ಲೆಟ್ 320

ಗೌಂಟ್‌ಲೆಟ್ 320

ಇದು 320 ಜಿಬಿ ಸ್ಟೋರೇಜ್ ಸ್ಪೇಸ್ ಅನ್ನು ಒಳಗೊಂಡಿದ್ದು ಮೀಡಿಯಾವನ್ನು ಪ್ರವೇಶಿಸಲು ಅತಿ ಸರಳ ಮಾರ್ಗವನ್ನು ಒದಗಿಸುತ್ತದೆ. 8 ಡಿವೈಸ್‌ಗಳನ್ನು ಒಮ್ಮೆಲೆ ಸಂಪರ್ಕಗೊಳಿಸಬಹುದಾಗಿದೆ.

ಯುಎಸ್‌ಬಿ ಓಟಿಜಿ

ಯುಎಸ್‌ಬಿ ಓಟಿಜಿ

ನೆಕ್ಸಸ್ ಪ್ರೇಮಿಗಳಿಗೆ 8ಜಿಬಿ ಸ್ಟೋರೇಜ್ ಎಳ್ಳಷ್ಟೂ ಸಾಲುವುದಿಲ್ಲ. ಸಂಗ್ರಹಣೆಯನ್ನು ವೃದ್ಧಿಸುವ ಇತರ ತಂತ್ರಗಳಿದ್ದು ಇದನ್ನು ಬಳಸಿಕೊಂಡು ಸಂಗ್ರಹಣಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಅದುವೇ ಯುಎಸ್‌ಬಿ ಓಟಿಜಿ ಸೇವೆಯಾಗಿದೆ.

ನೆಕ್ಸಸ್ ಬಳಕೆದಾರರು

ನೆಕ್ಸಸ್ ಬಳಕೆದಾರರು

ಈ ವ್ಯವಸ್ಥೆಯನ್ನು ಬಳಸಿಕೊಂಡು ನೆಕ್ಸಸ್ ಬಳಕೆದಾರರು ದೈನಂದಿನ ಯುಎಸ್‌ಬಿ ಸ್ಟೋರೇಜ್ ಡ್ರೈವ್ ಅನ್ನು ಮೈಕ್ರೋ ಎಸ್‌ಡಿಕಾರ್ಡ್ ಪ್ಯಾಕ್‌ನೊಂದಿಗೆ ಪೇರ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Today, we are going to explain how to extend the memory for devices without a microSD slot, a tactic which may be very welcomed, especially by those owning older Nexus tablets and smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X