ಗೂಗಲ್‌ನಿಂದ ವೈಯಕ್ತಿಕ ಡೇಟಾವನ್ನು ಅಳಿಸುವುದು ಹೇಗೆ?

Written By:

ಬಳಕೆದಾರರಿಗೆ ಎಂದಿಗೂ ಅತ್ಯುತ್ತಮ ಅಂಶಗಳನ್ನೇ ಉಣಬಡಿಸುತ್ತಿರುವ ಗೂಗಲ್ ಬಳಕೆದಾರ ಪ್ರೇಮಿ ಎಂದನೆನಿಸಿದೆ. ಯಾವುದೇ ಹೊಸ ಉತ್ಪನ್ನಗಳನ್ನು ಮಾರಾಟ ಮಾಡುವುದಿದ್ದರೂ ಗೂಗಲ್ ಬಳಕೆದಾರರಿಂದ ಯಾವುದೇ ಹಣವನ್ನು ಸ್ವೀಕರಿಸುವುದಿಲ್ಲ. ಅದೇ ರೀತಿ ಬಳಕೆದಾರರಿಗೆ ಯಾವುದೇ ಮಾಹಿತಿಯನ್ನು ಒದಗಿಸಲೂ ಕೂಡ ಇದು ಹಣವನ್ನು ಸ್ವೀಕರಿಸುವುದಿಲ್ಲ ಉಚಿತವಾಗಿ ಮಾಹಿತಿಯನ್ನು ಸಂಗ್ರಹಿಸಿ ನೀಡುತ್ತದೆ.

ಇದನ್ನೂ ಓದಿ: ಉಪಯೋಗಕಾರಿ ಟಾಪ್ 10 ಶಾರ್ಟ್‌ಕಟ್ ಕೀಗಳ ಮಹತ್ವ

ಅದಾಗ್ಯೂ ಗೂಗಲ್ ಒಮ್ಮೊಮ್ಮೆ ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ಇದನ್ನು ಅಳಿಸುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೊಕೇಶನ್ ಹಿಸ್ಟ್ರಿ ಡಿಲೀಟ್ ಮಾಡಿ

ಲೊಕೇಶನ್ ಹಿಸ್ಟ್ರಿ ಡಿಲೀಟ್ ಮಾಡಿ

ಗೂಗಲ್‌ನಿಂದ ವೈಯಕ್ತಿಕ ಡೇಟಾವನ್ನು ಅಳಿಸುವುದು ಹೇಗೆ?

ಲೊಕೇಶನ್ ಹಿಸ್ಟ್ರಿ ಡಿಲೀಟ್ ಮಾಡುವ ವ್ಯವಸ್ಥೆಯನ್ನು ಗೂಗಲ್ ತನ್ನ ಬಳಕೆದಾರರಿಗೆ ನೀಡಿದ್ದು ಹಿಸ್ಟ್ರಿ ಪೇಜ್‌ಗೆ ಹೋಗಿ ಅಲ್ಲಿ ಡಿಲೀಟ್ ಬಟನ್ ಒತ್ತುವ ಮೂಲಕ ಇತಿಹಾಸವನ್ನು ತೆರವುಗೊಳಿಸಬಹುದಾಗಿದೆ.

 ಗೂಗಲ್ ಸರ್ಚ್ ಹಿಸ್ಟ್ರಿ ಅಳಿಸುವುದು

ಗೂಗಲ್ ಸರ್ಚ್ ಹಿಸ್ಟ್ರಿ ಅಳಿಸುವುದು

ಗೂಗಲ್‌ನಿಂದ ವೈಯಕ್ತಿಕ ಡೇಟಾವನ್ನು ಅಳಿಸುವುದು ಹೇಗೆ?

ನಿಮ್ಮ ಬ್ರೌಸರ್ ಹಿಸ್ಟ್ರಿಯನ್ನು ಮಾತ್ರ ಅಳಿಸುವುದು ಯಾವಾಗಲೂ ನೆರವಾಗುವುದಿಲ್ಲ. ಗೂಗಲ್‌ನಲ್ಲಿ ನಿಮ್ಮ ಖಾತೆಗೆ ಹೋಗಿ ಹಾಗೂ ನೀವು ಇದುವರೆಗೆ ಹುಡುಕಾಡಿರುವುದನ್ನು ನೋಡಿ ನಂತರ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ ರಿಮೂವ್ ಐಟಮ್ಸ್ ಆರಿಸಿ ಮತ್ತು ಡಿಲೀಟ್ ಮಾಡಿ.

ಗೂಗಲ್ ಅನಾಲಿಟಿಕ್ಸ್‌ನಿಂದ ಹೊರ ಬರುವುದು

ಗೂಗಲ್ ಅನಾಲಿಟಿಕ್ಸ್‌ನಿಂದ ಹೊರ ಬರುವುದು

ಗೂಗಲ್‌ನಿಂದ ವೈಯಕ್ತಿಕ ಡೇಟಾವನ್ನು ಅಳಿಸುವುದು ಹೇಗೆ?

ಸೈಟ್‌ಗೆ ಯಾರು ಭೇಟಿ ನೀಡುತ್ತಾರೆ ಎಂಬುದನ್ನು ಕಣ್ಣಿಡುವುದಕ್ಕಾಗಿ ವೆಬ್‌ಸೈಟ್ ಮಾಲೀಕರು ಗೂಗಲ್ ಅನಾಲಿಟಿಕ್ಸ್ ಅನ್ನು ಬಳಸುತ್ತಾರೆ. ಗೂಗಲ್ ಅನಾಲಿಟಿಕ್ಸ್ ಆಪ್ಟ್ ಔಟ್ ಬ್ರೌಸರ್ ಇದಕ್ಕೆ ಹೋಗುವುದರ ಮೂಲಕ ಗೂಗಲ್ ಅನಾಲಿಟಿಕ್ಸ್‌ನಿಂದ ನಿಮಗೆ ಹೊರಬರಬಹುದಾಗಿದೆ.

 ಆಸಕ್ತಿ ಆಧಾರಿತ ಜಾಹೀರಾತುಗಳಿಂದ ಹೊರಬರುವುದು

ಆಸಕ್ತಿ ಆಧಾರಿತ ಜಾಹೀರಾತುಗಳಿಂದ ಹೊರಬರುವುದು

ಗೂಗಲ್‌ನಿಂದ ವೈಯಕ್ತಿಕ ಡೇಟಾವನ್ನು ಅಳಿಸುವುದು ಹೇಗೆ?

ಜಾಹೀರಾತುದಾರರಿಗೆ ನಿಮ್ಮ ವೈಯಕ್ತಿಕ ಡೇಟಾಗಳನ್ನು ಮಾರಾಟ ಮಾಡಲಾಗಿರುತ್ತದೆ. ಗೂಗಲ್ ಜಾಹೀರಾತಿನಿಂದ ಹೆಚ್ಚುವರಿ ಆದಾಯವನ್ನು ಗಳಿಸಿರುತ್ತದೆ. ಏಡ್ ಸೆಟ್ಟಿಂಗ್ ಈ ಪುಟಕ್ಕೆ ಭೇಟಿ ನೀಡುವುದರ ಮೂಲಕ ಈ ಆಯ್ಕೆಯಿಂದ ನೀವು ಹೊರಬರಬಹುದು.

ನಿಮ್ಮ ಗೂಗಲ್ ಡೇಟಾ ಬಳಸಿ ಅಪ್ಲಿಕೇಶನ್ ಮೇಲೆ ನಿಯಂತ್ರಣ ಸಾಧಿಸಿ

ನಿಮ್ಮ ಗೂಗಲ್ ಡೇಟಾ ಬಳಸಿ ಅಪ್ಲಿಕೇಶನ್ ಮೇಲೆ ನಿಯಂತ್ರಣ ಸಾಧಿಸಿ

ಗೂಗಲ್‌ನಿಂದ ವೈಯಕ್ತಿಕ ಡೇಟಾವನ್ನು ಅಳಿಸುವುದು ಹೇಗೆ?

ನಿಮ್ಮ ಗೂಗಲ್ ಖಾತೆಯನ್ನು ಬಳಸಿ ಹೆಚ್ಚುರಿ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ಲಾಗಿನ್ ಮಾಡಲು ಅನುಮತಿಸುತ್ತವೆ. ನೀವು ಅಪ್ಲಿಕೇಶನ್ ಮರೆತಿದ್ದರೂ ಡೈರೆಕ್ಟರಿಯಲ್ಲಿ ನಿಮ್ಮ ಹೆಸರು ಮತ್ತು ಇಮೇಲ್ ವಿಳಾಸವಿರುತ್ತದೆ. ನಿಮ್ಮ ಖಾತೆಗೆ ಲಾಗಿನ ಮಾಡಿ ಇದನ್ನು ಅಳಿಸಬಹುದಾಗಿದೆ.

ಗೂಗಲ್‌ನಿಂದ ಎಲ್ಲಾ ಡೇಟಾವನ್ನು ಎಕ್ಸ್‌ಪೋರ್ಟ್ ಮಾಡುವುದು

ಗೂಗಲ್‌ನಿಂದ ಎಲ್ಲಾ ಡೇಟಾವನ್ನು ಎಕ್ಸ್‌ಪೋರ್ಟ್ ಮಾಡುವುದು

ಗೂಗಲ್‌ನಿಂದ ವೈಯಕ್ತಿಕ ಡೇಟಾವನ್ನು ಅಳಿಸುವುದು ಹೇಗೆ?

ನಿಮ್ಮ ಎಲ್ಲಾ ಡೇಟಾವನ್ನು ಎಕ್ಸ್‌ಪೋರ್ಟ್ ಮಾಡಲು ಗೂಗಲ್ ನಿಮ್ಮನ್ನು ಅನುಮತಿಸುತ್ತದೆ. ಬುಕ್‌ಮಾರ್ಕ್ಸ್, ಇತಿಹಾಸ, ಡಿವೈಸ್‌ಗಳು, ಅಪ್ಲಿಕೇಶನ್‌ಗಳು, ವೀಡಿಯೊಗಳು ಮತ್ತು ಫೋಟೋಗಳಿಂದ ಡೇಟಾವನ್ನು ಎಕ್ಸ್‌ಪೋರ್ಟ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How To Find and Delete the Personal Data Google Has on You.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot