Home
ಟೆಕ್ ನೌಕರಿ

ನಿಮ್ಮ ಸುತ್ತಮುತ್ತಲೇ ಇದ್ದಾರೆ ರಕ್ತದಾನಿಗಳು: ಇವರನ್ನು ಹುಡುಕಲು ಈ ಮಾರ್ಗ ಅನುಸರಿಸಿ!

ಈಗಂತೂ ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ನಡುವೆ ಅಪಘಾತಕ್ಕೆ ಒಳಗಾದ ಅದೆಷ್ಟೋ ಜನ ಭಾರಿ ರಕ್ತಸ್ರಾವದಿಂದಾಗಿ ಸಾವಿಗೀಡಾಗುತ್ತಾರೆ. ಇನ್ನೂ ಕೆಲವೊಂದಿಷ್ಟು ಜನರನ್ನು ಆಸ್ಪತ್ರೆಗೆ ಸೇರಿಸಿದರೂ ಸರಿಯಾದ ಸಮಯಕ್ಕೆ ರಕ್ತ ಸಿಗದ ಹಿನ್ನೆಲೆ ಪ್ರಾಣ ಕಳೆದುಕೊಳ್ಳುತ್ತಾರೆ.ಆದರೆ, ಇನ್ಮುಂದೆ ಈ ತಪ್ಪುಗಳು ಸಂಭವಿಸಿದ ಹಾಗೆ ನೀವು ತಡೆಯಬಹುದು.

ಹೌದು, ಅಪಘಾತವಾದ ಸಂದರ್ಭದಲ್ಲಿ ಹಾಗೂ ಹೆಚ್ಚಿನ ರಕ್ತಸ್ರಾವವಾದ ಸಂದರ್ಭದಲ್ಲಿ ರೋಗಿಯ ಗ್ರೂಪ್‌ನ ರಕ್ತವನ್ನು ಪತ್ತೆ ಮಾಡಿ ತಕ್ಷಣಕ್ಕೆ ಆತನ ಜೀವವನ್ನು ನೀವು ಉಳಿಸಬಹುದಾಗಿದೆ. ಸಾಮಾನ್ಯವಾಗಿ ಮಹಾನಗರಗಳಲ್ಲಿ ಸುಲಭವಾಗಿ ರಕ್ತದಾನಿಗಳನ್ನು ಪತ್ತೆ ಮಾಡಬಹುದು ಇದಕ್ಕೆಂದೇ ಕೆಲವು ಸಂಸ್ಥೆಗಳು ಕೆಲಸ ಮಾಡುತ್ತವೆ. ಆದರೆ, ಹಳ್ಳಿಗಾಡಿನ ಅಥವಾ ಚಿಕ್ಕ ಪಟ್ಟಣಗಳಲ್ಲಿ ರಕ್ತದಾನಿಗಳನ್ನು ಪತ್ತೆ ಮಾಡುವುದು ಅಷ್ಟು ಸುಲಭದ ಮಾತಲ್ಲ.ಆದರೆ, ಈ ವೆಬ್‌ವೈಟ್‌ ಮೂಲಕ ಇದೆಲ್ಲಾ ಸರಳವಾದ ಪ್ರಕ್ರಿಯೆಯಾಗಿದೆ.

ಸುತ್ತಮುತ್ತಲೇ ಇದ್ದಾರೆ ರಕ್ತದಾನಿಗಳು: ಇವರನ್ನು ಹುಡುಕಲು ಈ ಮಾರ್ಗ ಅನುಸರಿಸಿ!

ಸಮಾಜದಲ್ಲಿ ರಕ್ತದಾನ ಎಂಬುವುದು ಶ್ರೇಷ್ಠ ಕೆಲಸವಾಗಿದೆ. ಆದರೆ, ಕೆಲವರು ಇದರ ಬಗೆಗಿನ ತಪ್ಪು ತಿಳುವಳಿಕೆಯಿಂದಾಗಿ ರಕ್ತದಾನ ಮಾಡುವುದಿಲ್ಲ.ಆದರೆ, ಈ ಬಗ್ಗೆ ಅರಿತಿರುವ ಲಕ್ಷಾಂತರ ಜನ ರಕ್ತ ನೀಡಲು ಸಿದ್ಧರಾಗಿದ್ದು, ಇವರುಗಳ ನಂಬರ್‌ ಹಾಗೂ ಬ್ಲಡ್ ಗ್ರೂಪ್‌ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಯನ್ನು ನೀವು ಒಂದೇ ಕ್ಲಿಕ್‌ನಲ್ಲಿ ಪಡೆದುಕೊಳ್ಳಬಹುದು. ಇದಕ್ಕೆ ನಿಮ್ಮ ಬಳಿ ಒಂದು ಮೊಬೈಲ್‌ ಇದ್ದರೆ ಸಾಕು.

ಫ್ರೆಂಡ್ಸ್‌2 ಸಪೋರ್ಟ್‌ ಎಂಬ ಸಂಸ್ಥೆಯು ಈ ಮಹತ್ವಕಾರ್ಯ ಮಾಡುತ್ತಿದ್ದು, ನೀವು ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ಸಹ ನಿಮ್ಮ ಸಮೀಪದಲ್ಲಿ ಯಾರ್ಯಾರು ರಕ್ತದಾನಿಗಳು ಇದ್ದರೆ ಎನ್ನುವುದನ್ನು ಪತ್ತೆ ಮಾಡಲು ವೇದಿಕೆ ಒದಗಿಸಿದೆ. ಇದರಲ್ಲಿ ನೀವು ಸಹ ರಕ್ತದಾನಿಗಳಾಗಿ ನಿಮ್ಮ ಮಾಹಿತಿ ನೋಂದಾಯಿಸಿಕೊಳ್ಳಬಹುದು. ಹಾಗಿದ್ರೆ, ತಡಯಾಕೆ ಬನ್ನಿ ನಮ್ಮ ಸಮೀಪ ಇರುವ ರಕ್ತದಾನಿಗಳನ್ನು ಪತ್ತೆ ಮಾಡುವುದು ಹೇಗೆ? ಎಂದು ಸರಳ ಹಂತದ ಮೂಲಕ ತಿಳಿಯೋಣ.

ಹಂತ 1: ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫ್ರೆಂಡ್ಸ್‌2 ಸಪೋರ್ಟ್ ಎಂಬ ಸೈಟ್‌ಗೆ ಭೇಟಿ ನೀಡಬೇಕಿದೆ. ಇದಕ್ಕಾಗಿ ನೀವು https:// www.friends2support.org/ inner/news/ searchresult.aspx ಲಿಂಕ್‌ ಅನ್ನು ಬಳಕೆ ಮಾಡಿಕೊಳ್ಳಬಹುದು. ನಂತರ ಅದರಲ್ಲಿ ಫೈಂಡ್ ಬ್ಲಡ್ ಡೋನರ್‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಗಮನಿಸಿ.

ಸುತ್ತಮುತ್ತಲೇ ಇದ್ದಾರೆ ರಕ್ತದಾನಿಗಳು: ಇವರನ್ನು ಹುಡುಕಲು ಈ ಮಾರ್ಗ ಅನುಸರಿಸಿ!

ಹಂತ 2: ಫೈಂಡ್ ಬ್ಲಡ್ ಡೋನರ್‌ ಮೇಲೆ ಕ್ಲಿಕ್‌ ಮಾಡಿದ ನಂತರ ಚಿಕ್ಕ ಪರದೆ ತೆರೆದುಕೊಳ್ಳಲಿದ್ದು, ಅದರಲ್ಲಿ ನಿಮಗೆ ಅಗತ್ಯ ಇರುವ ಬ್ಲಡ್‌ ಗ್ರೂಪ್, ದೇಶ, ರಾಜ್ಯ, ಜಿಲ್ಲೆ ಹಾಗೂ ನಿಮ್ಮ ನಗರದ ವಿವರವನ್ನು ಭರ್ತಿ ಮಾಡಿ. ನಂತರ ಸರ್ಚ್‌ ಮಾಡಿದರೆ ನಿಮ್ಮ ತಾಲೂಕಿನ ಅಥವಾ ನಿಮ್ಮ ನಗರದ ಸುತ್ತಮುತ್ತಾ ಯಾರೆಲ್ಲಾ ರಕ್ತದಾನಿಗಳು ಇದ್ದಾರೋ ಅವರ ಮಾಹಿತಿ ಕಾಣಿಸಿಕೊಳ್ಳುತ್ತದೆ.

ಈ ರೀತಿಯ ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಕುಟುಂಬದವರಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಿ ಅವರ ಜೀವ ಕಾಪಾಡಿಕೊಳ್ಳಬಹುದು. ಈ ಮಾನವೀಯತೆ ಮೆಚ್ಚಿ ನಿಮಗೂ ಸಹ ರಕ್ತದಾನ ಮಾಡಬೇಕು ಎಂದು ಮನಸ್ಸಾದರೆ ನೀವು ಸಹ ಈ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕಾಗಿ ಈ ಹಂತ ಅನುಸರಿಸಿ.

ಸುತ್ತಮುತ್ತಲೇ ಇದ್ದಾರೆ ರಕ್ತದಾನಿಗಳು: ಇವರನ್ನು ಹುಡುಕಲು ಈ ಮಾರ್ಗ ಅನುಸರಿಸಿ!

ಹಂತ 1 : ಫ್ರೆಂಡ್ಸ್‌2 ಸಪೋರ್ಟ್ ಪೋರ್ಟಲ್‌ ಅನ್ನು ಓಪನ್‌ ಮಾಡಿದ ಬಳಿಕ ಅದರಲ್ಲಿ ಮೊದಲ ಆಯ್ಕೆಯಾಗಿ ಬ್ಲಡ್‌ ಡೋನರ್‌ ಡಿಜಿಸ್ಟರ್‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರು, ರಕ್ತದ ಗುಂಪು, ಸಂಪರ್ಕ ಮಾಹಿತಿ, ಇಮೇಲ್‌ ಐಡಿ, ವಾಸಸ್ಥಳ ಸೇರಿದಂತೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಬಳಿಕ ನಿಮ್ಮ ಮಾಹಿತಿಯ ರಕ್ತದಾನಿಗಳ ಹೆಸರಿನ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.

Best Mobiles in India

English summary
You can now easily locate blood donors near you from use of Friends2support portal. It contains all the details of blood donors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+