ಕಳುವಾದ ಕ್ಯಾಮೆರಾವನ್ನು ಪತ್ತೆಹಚ್ಚುವುದು ಹೇಗೆ?

Posted By:

ಮೊಬೈಲ್‌ ಕಳೆದುಹೋದರೆ ಐಎಂಇಐ ನಂಬರ್‌ ಮೂಲಕ ಪತ್ತೆ ಹಚ್ಚಬಹುದು. ಒಂದು ವೇಳೆ ನಿಮ್ಮಲ್ಲಿ ಆಂಡ್ರಾಯ್ಡ್ ಫೋನ್‌ ಇದ್ದರೆ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಮೂಲಕ ಕಳೆದು ಹೋದಂತಹ ಫೋನ್‌ಗಳನ್ನು ಪತ್ತೆ ಹಚ್ಚಬಹುದು. ಆದ್ರೆ ನಿಮ್ಮಲ್ಲಿರುವ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕ್ಯಾಮೆರಾ ಕಳೆದು ಹೋದರೆ ಏನು ಮಾಡವುದು ಎಂದು ಯೋಚಿಸುತ್ತಿದ್ದೀರಾ? ಕ್ಯಾಮೆರಾ ಕಳೆದು ಹೋದರೂ ಇಂದಿನ ಇಂಟರ್‌ನೆಟ್‌ ಯುಗದಲ್ಲಿ ಪತ್ತೆ ಹಚ್ಚಲು ಸಾಧ್ಯ.

ಹೌದು ಕಣ್ರೀ ಇಂದು ಮೊಬೈಲ್‌ ನಾಪತ್ತೆಯಾದ್ರೂ, ಡಿಜಿಟಲ್‌ ಕ್ಯಾಮೆರಾ ಕಳೆದು ಹೋದರೂ ಮೊಬೈಲ್‌ ಮತ್ತು ಕ್ಯಾಮೆರಾಕ್ಕೆ ಸಂಬಂಧಿಸಿದ ಮಾಹಿತಿಗಳು ನಿಮ್ಮಲ್ಲಿದ್ದರೆ ಅದು ಎಲ್ಲಿದೆ ಎಂದು ಪತ್ತೆ ಹಚ್ಚಬಹುದು. ಹೇಗೆ ಪತ್ತೆ ಹಚ್ಚಬಹುದು ಎಂಬುದಕ್ಕೆ ಮುಂದಿನ ಪುಟಗಳಲ್ಲಿ ವಿವರಿಸಲಾಗಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ನಂತರ ಎಲ್ಲಾ ಮಾಹಿತಿಯನ್ನು ಓದಿದ ಬಳಿಕ ಪರೀಕ್ಷೆ ಮಾಡಿಕೊಳ್ಳಿ.

ಇದನ್ನೂ ಓದಿ : ಆಂಡ್ರಾಯ್ಡ್‌ ಫೋನ್‌ ಕಳ್ಳರನ್ನು ಪತ್ತೆ ಹಚ್ಚುವುದು ಹೇಗೆ..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಳುವಾದ ಕ್ಯಾಮೆರಾವನ್ನು ಪತ್ತೆಹಚ್ಚುವುದು ಹೇಗೆ?

ಕಳುವಾದ ಕ್ಯಾಮೆರಾವನ್ನು ಪತ್ತೆಹಚ್ಚುವುದು ಹೇಗೆ?

ಸ್ಟೆಪ್‌ - 1
ಒಂದು ವೇಳೆ ಕ್ಯಾಮೆರಾ ಕಳೆದುಹೋದ್ರೆ, ನೀವು ಇಂಟರ್‌ನೆಟ್‌ನಲ್ಲಿರುವ Stolen Camera Finder ಹೋಮ್‌ ಪೇಜ್‌ಗೆ ಹೋಗಿ.

ಕಳುವಾದ ಕ್ಯಾಮೆರಾವನ್ನು ಪತ್ತೆಹಚ್ಚುವುದು ಹೇಗೆ?

ಕಳುವಾದ ಕ್ಯಾಮೆರಾವನ್ನು ಪತ್ತೆಹಚ್ಚುವುದು ಹೇಗೆ?

ಸ್ಟೆಪ್‌ - 2
Stolen Camera Finder ಪೇಜ್‌ನ ಮಧ್ಯಭಾಗದಲ್ಲಿ ಫೋಟೋಗಳನ್ನು ಡ್ರಾಪ್‌ ಮಾಡಲು ಒಂದು ಜಾಗ ತೋರಿಸುತ್ತಿರುತ್ತದೆ. ನಿಮ್ಮಲ್ಲಿದ್ದು ಕಳೆದು ಹೋದ ಡಿಜಿಟಲ್‌ ಕ್ಯಾಮೆರಾದಲ್ಲಿ ತಗೆದ ಒಂದು ಫೋಟೋವನ್ನು ಡ್ರ್ಯಾಗ್‌ ಮಾಡಿ ಈ ಜಾಗದಲ್ಲಿ ಡ್ರಾಪ್‌ ಮಾಡಿ.

ಕಳುವಾದ ಕ್ಯಾಮೆರಾವನ್ನು ಪತ್ತೆಹಚ್ಚುವುದು ಹೇಗೆ?

ಕಳುವಾದ ಕ್ಯಾಮೆರಾವನ್ನು ಪತ್ತೆಹಚ್ಚುವುದು ಹೇಗೆ?

ಸ್ಟೆಪ್‌ - 3
ಫೋಟೋವನ್ನು ಡ್ರಾಪ್‌ ಮಾಡಿದ ಮೇಲೆ Stolen Camera Finder ಅಟೋಮ್ಯಾಟಿಕ್‌ ಆಗಿ ಸರ್ಚ್ ಮಾಡಲು ತೊಡಗುತ್ತದೆ.ಒಂದು ವೇಳೆ ಈ ಕ್ಯಾಮೆರಾದಲ್ಲಿ ತೆಗೆದ ಫೋಟೋ ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್‌ ಆಗಿದ್ರೆ ಆ ಫೋಟೋಗಳನ್ನು ತೋರಿಸುತ್ತದೆ.

ಕಳುವಾದ ಕ್ಯಾಮೆರಾವನ್ನು ಪತ್ತೆಹಚ್ಚುವುದು ಹೇಗೆ?

ಕಳುವಾದ ಕ್ಯಾಮೆರಾವನ್ನು ಪತ್ತೆಹಚ್ಚುವುದು ಹೇಗೆ?

ಸ್ಟೆಪ್‌ - 4
ಒಂದು ವೇಳೆ ಮೊದಲಿನಂತೆ ಸರ್ಚ ಮಾಡಿದಾಗ ಯಾವುದೇ ಫೋಟೋ ತೋರಿಸದಿದ್ದಲ್ಲಿ ಅಲ್ಲೇ ಕಾಣುವಂತಹ no photo ಆಯ್ಕೆಯನ್ನು ಆರಿಸಿಕೊಳ್ಳಿ. ನಂತರ ಸರ್ಚ್ ಆಯ್ಕೆಯ ಕೆಳಗಡೆ 'options' ಆರಿಸಿ ನಿಮ್ಮ ಕ್ಯಾಮೆರಾಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಟೈಪ್‌ ಮಾಡಿ ನಿಮ್ಮ ಕ್ಯಾಮೆರಾವನ್ನು ಪತ್ತೆ ಹಚ್ಚಿ.

ಕಳುವಾದ ಕ್ಯಾಮೆರಾವನ್ನು ಪತ್ತೆಹಚ್ಚುವುದು ಹೇಗೆ?

ಕಳುವಾದ ಕ್ಯಾಮೆರಾವನ್ನು ಪತ್ತೆಹಚ್ಚುವುದು ಹೇಗೆ?

ಓದುಗರು ಒಂದು ಅಂಶವನ್ನು ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು. ಕಳುವಾದ ಕ್ಯಾಮೆರಾದಲ್ಲಿ ತೆಗೆದ ಫೋಟೋವನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್‌ ಆಗಿದ್ರೆ ಮಾತ್ರ ನಿಮಗೆ ಕ್ಯಾಮೆರಾ ಪತ್ತೆಹಚ್ಚಬಹುದು. ಒಂದು ವೇಳೆ ಫೋಟೋ ಇಂಟರ್‌ನೆಟ್‌ನೆಟ್‌ನಲ್ಲಿ ಅಪ್‌ಲೋಡ್‌ ಆಗದಿದ್ದಲ್ಲಿ Stolen Camera Finderನಲ್ಲಿ ಕ್ಯಾಮೆರಾ ಪತ್ತೆಹಚ್ಚಲು ಸಾಧ್ಯವಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot