Subscribe to Gizbot

ಆಂಡ್ರಾಯ್ಡ್‌ ಫೋನ್‌ ಕಳ್ಳರನ್ನು ಪತ್ತೆ ಹಚ್ಚುವುದು ಹೇಗೆ..?

Posted By:

ಮಾರುಕಟ್ಟೆಯಲ್ಲಿ ಈಗ ಆಂಡ್ರಾಯ್ಡದ್ದೇ ರಾಜ್ಯಭಾರ. ಹೆಚ್ಚಿನ ಎಲ್ಲಾ ಕಂಪೆನಿಗಳು ಆಂಡ್ರಾಯ್ಡ್‌ ಆಧಾರಿತ ಸ್ಮಾರ್ಟ್‌ಫೋನ್‌ನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಈ ಸ್ಮಾರ್ಟ್‌ಫೋನ್‌ನಿಂದ ನಮ್ಮ ಕೆಲಸವು ಸುಲಭದ ಜೊತೆಗೆ ಸ್ಮಾರ್ಟ್‌ಫೋನ್‌ ಯಾರಾದ್ರೂ ಕದ್ದರೂ ಅದನ್ನು ಪತ್ತೆಹಚ್ಚಬಹುದು.ಹಾಗಾಗಿ ಗ್ರಾಹಕರು ಇಂದು ಸ್ಮಾರ್ಟ್‌ಫೋನ್‌ ಖರೀದಿಗೆ ಮುಗಿಬೀಳುತ್ತಿದ್ದಾರೆ. ಗೂಗಲ್‌ ಅಪ್ಲಿಕೇಶನ್‌ನಲ್ಲಿ ಕಳವು ಪತ್ತೆಹಚ್ಚಲು ಆನೇಕ ಅಪ್ಲಿಕೇಶನ್‌ಗಳಿವೆ. ಈ ಅಪ್ಲಿಕೇಶನ್‌ಗಳನ್ನು ನೀವು ನಿಮ್ಮ ಅಂಡ್ರಾಯ್ಡ್‌ ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿದ್ರೆ ಮತ್ತೆ ಫೋನ್‌ನ್ನು ಪತ್ತೆಹಚ್ಚಬಹುದು. ಹಾಗಾಗಿ ಗಿಜ್ಬಾಟ್‌ ಕಳ್ಳತನ ವಿರೋಧಿ ಅಪ್ಲಿಕೇಶನ್‌ಗಳ ಮಾಹಿತಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿ ನೋಡಿ ನಿಮಗಿಷ್ಟವಾದ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಎಂಇಐ

ಐಎಂಇಐ

ಪ್ರತಿ ಮೊಬೈಲ್‌ನಲ್ಲೂ ಒಂದೊಂದು ಐಎಂಇಐ [ International Mobile Station Equipment Identity] ನಂ ಇರುತ್ತದೆ. ನಿಮ್ಮ ಮೊಬೈಲ್‌ನಿಂದ *#06# ಅಂಕಿಯನ್ನು ಡಯಲ್‌ ಮಾಡಿದಾಗ ನಿಮ್ಮ ಮೊಬೈಲ್‌ನ IMEI ನಂ ಸ್ಕ್ರೀನ್‌ನಲ್ಲಿ ಬರುತ್ತದೆ. ಇದನ್ನು ನೀವು ಜೋಪಾನವಾಗಿ ಒಂದು ಕಡೆ ಬರೆದಿಟ್ಟುಕೊಳ್ಳಿ.ಒಂದು ವೇಳೆ ನಿಮ್ಮ ಹ್ಯಾಂಡ್‌ಸೆಟ್‌ ಕಳವಾದಾಗ ಪೊಲೀಸರಲ್ಲಿ ಎಫ್‌ಐಆರ್‌ ದಾಖಲಿಸುವ ಸಂದರ್ಭದಲ್ಲಿ IMEI ನಂಬರನ್ನು ಅರ್ಜಿಯಲ್ಲಿ ದಾಖಲಿಸಿ. ಆವಾಗ ನಿಮ್ಮ ಹ್ಯಾಂಡ್‌ಸೆಟ್‌ನ್ನು ಪೊಲೀಸರಿಗೆ ಬ್ಲಾಕ್‌ ಮಾಡಲು ಸಾಧ್ಯವಾಗುತ್ತದೆ. ಅಥವಾ ನಿಮ್ಮ ಮೊಬೈಲ್‌ನಲ್ಲಿ ಬೇರೆಯವರು ಸಿಮ್‌ ಕಾರ್ಡ್‌ ಹಾಕಿ ಬಳಸುತ್ತಿದ್ದರೂ IMEI ಮುಖಾಂತರ ಅವರ ಮೊಬೈಲ್‌ ನಂ ಪತ್ತೆಹಚ್ಚಲು ಸಾಧ್ಯವಾಗುತ್ತದೆ.

ಅವಾಸ್ಟ್‌ ಮೊಬೈಲ್‌ ಸೆಕ್ಯೂರಿಟಿ

ಅವಾಸ್ಟ್‌ ಮೊಬೈಲ್‌ ಸೆಕ್ಯೂರಿಟಿ

ಅವಾಸ್ಟ್‌ ಮೊಬೈಲ್‌ ಸೆಕ್ಯೂರಿಟಿ ಯಲ್ಲಿ ನಿಮಗೆ ಎರಡು ರೀತಿಯಲ್ಲಿ ಸುರಕ್ಷತೆ ಕೊಡುತ್ತದೆ. ಒಂದು ಆಂಟಿವೈರಸ್‌ ಆಗಿಯೂ ಕೆಲಸ ಮಾಡುತ್ತದೆ ಮತ್ತೆ ನಿಮ್ಮ ಮೊಬೈಲ್‌ನಲ್ಲಿ ಪತ್ತೆ ಮಾಡುವಲ್ಲಿಯೂ ಸಹಕಾರಿಯಾಗುತ್ತದೆ. ಈ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿದ ಮೇಲೆ ಬೇರೆಯವರಯ ಸಿಮ್‌ ಹಾಕಿದ್ರೆ ಅದು ಸೈರನ್‌ ಮಾಡುತ್ತದೆ, ಅಲ್ಲದೆ ನಿಮಗೆ ಎಸ್‌ಎಂಎಸ್‌ ಸಹ ಕಳುಹಿಸುತ್ತದೆ.

ಗೂಗಲ್‌ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ

ಮೊಬೈಲ್‌ ಚೇಸ್‌ ಲೋಕೆಶನ್‌ ಟ್ರ್ಯಾಕರ್‌:

ಮೊಬೈಲ್‌ ಚೇಸ್‌ ಲೋಕೆಶನ್‌ ಟ್ರ್ಯಾಕರ್‌:

ಈ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿದ ಮೇಲೆ ಅದರಲ್ಲಿ ನಿಮ್ಮ ಇನ್ನೊಂದು ನಂ ಸುರಕ್ಷತೆಗಾಗಿ ಸೇವ್ ಮಾಡಬೇಕು. ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್‌ ಕಳುವಾಗಿ ಅದರಲ್ಲಿನ ನಿಮ್ಮ ಸಿಮ್‌ ತೆಗೆದು ಬೇರೆ ಸಿಮ್‌ ಹಾಕಿದಾಗ ಐದು ನಿಮಿಷದ ಒಳಗೆ ಇನ್ನೊಂದು ಮೊಬೈಲ್‌ ನಂಬರಿಗೆ ಕಳ್ಳರು ಉಪಯೋಗಿಸುತ್ತಿರುವ ಮೊಬೈಲ್‌ ನಂಬರ್‌ ಮತ್ತು ಅವರು ಇರುವ ಸ್ಥಳದ ಮಾಹಿತಿ ಇರುವ ಮೆಸೆಜ್‌ ಬರುತ್ತದೆ.

ಗೂಗಲ್‌ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ

ಥೀಫ್‌ ಟ್ರ್ಯಾಕರ್‌

ಥೀಫ್‌ ಟ್ರ್ಯಾಕರ್‌

ಈ ಅಪ್ಲಿಕೇಶನ್‌ ಕಳ್ಳರನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿಯಬಹುದು. ನಿಮ್ಮ ಸ್ಮಾರ್ಟ್‌ಫೋನ್‌ ಕಳುವಾದ್ರೆ ತಕ್ಷಣ ನಿಮ್ಮ ಸ್ಮಾರ್ಟ್‌ಫೋನ್‌ ಎದುರುಗಡೆ ಕ್ಯಾಮೆರಾದಿಂದ ಕಳ್ಳನ ಫೋಟೋ ತೆಗೆದು ನಿಮ್ಮ ಇ ಮೇಲ್‌ಗೆ ಕಳುಹಿಸಿತ್ತದೆ. ಆದರೆ ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಬೇಕಾದ್ರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎದುರುರುಗಡೆ ಕ್ಯಾಮೆರಾ ಇರಲೇಬೇಕು.

ಗೂಗಲ್‌ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ

ಸ್ಮಾರ್ಟ್‌ಲುಕ್‌ :

ಸ್ಮಾರ್ಟ್‌ಲುಕ್‌ :

ಇದು ಸಹ ಥೀಫ್‌ ಟ್ರ್ಯಾಕರ್‌ ಅಪ್ಲಿಕೇಶನ್‌ನಂತೆ ಕೆಲಸ ಮಾಡುತ್ತದೆ. ಕಳ್ಳರಿಗೆ ಗೊತ್ತಾಗದ ಹಾಗೇ ಎದುರುಗಡೆ ಕ್ಯಾಮೆರಾದಿಂದ ಅವರ ಚಿತ್ರ ತೆಗೆದು ನಿಮ್ಮ ಈ ಮೇಲ್‌ಗೆ ಫೋಟೋ ಕಳುಹಿಸುತ್ತದೆ. ಅಲ್ಲದೇ ಗೂಗಲ್‌ ಮ್ಯಾಪ್‌ನ ಸಹಾಯದಿಂದ ಕಳ್ಳರು ಇರುವ ಸ್ಥಳದ ಮಾಹಿತಿಯನ್ನು ನಿಮ್ಮ ಈ ಮೇಲ್‌ಗೆ ತಿಳಿಸುತ್ತದೆ.
ಗೂಗಲ್‌ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ

ಆಂಟಿ- ಥೆಫ್ಟ್‌ ಆಲಾರ್ಮ್

ಆಂಟಿ- ಥೆಫ್ಟ್‌ ಆಲಾರ್ಮ್

ಈ ಅಪ್ಲಿಕೇಶನ್‌ನ್ನು ನೀವು ಇನ್‌ಸ್ಟಾಲ್‌ ಮಾಡಿದ ಮೇಲೆ ನೀವು ಸ್ಮಾರ್ಟ್‌ಫೋನ್‌ ಎಲ್ಲಿ ಬೇಕಾದ್ರೂ ಬಿಟ್ಟುಹೋಗಬಹುದು. ಸ್ಮಾರ್ಟ್‌ಫೋನ್‌ನ್ನು ಬಿಟ್ಟಹೋಗುವ ಮೊದಲು ಆಲಾರ್ಮ್‌ನ್ನು ಆನ್‌ ಮಾಡಿ ಟೇಬಲ್‌ನಲ್ಲಿ ಬಿಟ್ಟು ಹೋಗಬಹುದು. ಆಲಾರ್ಮ್‌ ಆನ್‌ ಮಾಡಿದ ಮೇಲೆ ಅಪ್ಪಿತಪ್ಪಿ ಯಾರಾದ್ರೂ ನಿಮ್ಮ ಮೊಬೈಲ್‌ ಮುಟ್ಟಿದ್ರೂ ಅದು ಆಲಾರ್ಮ್‌ ಆಗುತ್ತದೆ. ಎಲ್ಲಿಯವರಗೂ ಅಲಾರ್ಮ್‌ ಪಿನ್‌ ಟೈಪ್‌ ಮಾಡುವುದಿಲ್ಲವೋ ಅಲ್ಲಿಯವರೆಗೂ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಲಾರ್ಮ್‌ ಆಗುತ್ತಲೇ ಇರುತ್ತದೆ.
ಗೂಗಲ್‌ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ

ಕ್ಯಾಸ್ಪರ್ಸ್ಕಿ ಮೊಬೈಲ್‌ ಸೆಕ್ಯೂರಿಟಿ

ಕ್ಯಾಸ್ಪರ್ಸ್ಕಿ ಮೊಬೈಲ್‌ ಸೆಕ್ಯೂರಿಟಿ

ಕ್ಯಾಸ್ಪರ್ಸ್ಕಿ ಅಪ್ಲಿಕೇಶನ್‌ನಲ್ಲಿ ನೀವು ಸ್ಮಾರ್ಟ್‌ಫೋನ್‌ನ್ನು ಬ್ಲಾಕ್‌ ಮಾಡಬಹುದು. ಅಲ್ಲದೇ ಎಸ್‌ಎಂಎಸ್‌ ಮತ್ತು ಬೇಡದ ಕಾಲ್‌ಗಳನ್ನು ನೀವು ಬ್ಲಾಕ್‌ ಮಾಡಬಹುದು. ಜೊತೆಗೆ ಇದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಂಟಿವೈರಸ್‌ ಆಗಿಯೂ ಕೆಲಸ ಮಾಡುತ್ತದೆ.

ಗೂಗಲ್‌ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ

ಲುಕ್‌ಔಟ್‌ ಸೆಕ್ಯೂರಿಟಿ ಆಂಟಿವೈರಸ್‌

ಲುಕ್‌ಔಟ್‌ ಸೆಕ್ಯೂರಿಟಿ ಆಂಟಿವೈರಸ್‌

ಈ ಅಪ್ಲಿಕೇಶನ್‌ ಮುಖಾಂತರ ನೀವು ನಿಮ್ಮ ಮೊಬೈಲ್‌ ಇರುವ ಸ್ಥಳವನ್ನು ಪತ್ತೆಹಚ್ಚಬಹುದು. ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿದ ಮೇಲೆ ಗೂಗಲ್‌ ಮ್ಯಾಪ್‌ನ ಮುಖಾಂತರ ಪ್ರಸ್ತುತ ಸ್ಮಾರ್ಟ್ ಫೋನ್‌ ಇರುವ ಸ್ಥಳವನ್ನು ಪತ್ತೆಹಚ್ಚಿ ಲುಕ್‌ಔಟ್‌.ಕಾಂ ಮೇಲ್‌ ಮಾಡುತ್ತದೆ.
ಗೂಗಲ್‌ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ

ಟೆಂಡ್‌ ಮೈಕ್ರೋ ಮೊಬೈಲ್‌ ಸೆಕ್ಯೂರಿಟಿ & ಆಂಟಿವೈರಸ್‌

ಟೆಂಡ್‌ ಮೈಕ್ರೋ ಮೊಬೈಲ್‌ ಸೆಕ್ಯೂರಿಟಿ & ಆಂಟಿವೈರಸ್‌

ಬೇಡಿಕೆಯಲ್ಲಿರುವ ಅಪ್ಲಿಕೇಶನ್‌ ಇದಾಗಿದ್ದು, ಇದು ಆಂಟಿವೈರಸ್‌ ಆಗಿಯೂ ಕೆಲಸ ಮಾಡುತ್ತದೆ ಜೊತೆಗೆ ಮೊಬೈಲ್‌ ಪತ್ತೆ ಹಚ್ಚುವಲ್ಲಿ ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿ ನಿಮಗೆ ಬೇಡದ ಸೈಟ್‌ಗಳನ್ನು ಬ್ಲಾಕ್‌ ಮಾಡಬಹುದು

ಗೂಗಲ್‌ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ

ಪ್ಲಾನ್‌ ಬಿ.ಲುಕ್‌ಔಟ್‌ ಮೊಬೈಲ್‌ ಸೆಕ್ಯೂರಟಿ:

ಪ್ಲಾನ್‌ ಬಿ.ಲುಕ್‌ಔಟ್‌ ಮೊಬೈಲ್‌ ಸೆಕ್ಯೂರಟಿ:

ಈ ಅಪ್ಲಿಕೇಶನ್‌ನ್ನು ವಿಶೇಷವಾಗಿ ತಯಾರಿಸಲಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ ನಾಪತ್ತೆಯಾದ ನಂತರ ಈ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿದ್ರೂ ನಿಮ್ಮ ಸ್ಮಾರ್ಟ್‌ಫೋನ್‌ ಪತ್ತೆಹಚ್ಚುತ್ತದೆ. ಇನ್‌ ಸ್ಟಾಲ್‌ ಮಾಡಿದ ಮೇಲೆ ಅದರಲ್ಲಿ ನಿಮ್ಮ ಇ ಮೇಲ್‌ ಐಡಿಯನ್ನು ನಮೂದಿಸಬೇಕು. ನಂತರ ಕಳುವಾದ ಸ್ಮಾರ್ಟ್‌ಫೋನ್‌ನ್ನು ಇಎಂಐಇ ಜಿಪಿಎಸ್‌ ಮುಖಾಂತರ ಪ್ಲ್ಯಾನ್‌ ಬಿ ಪತ್ತೆಹಚ್ಚಿ ನಿಮ್ಮ ಇಮೇಲ್‌ಗೆ ಸ್ಮಾರ್ಟ್‌ಫೋನ್‌ ಇರುವ ಸ್ಥಳ ಮತ್ತು ಸಿಮ್‌ ನಂಬರನ್ನು ಕಳುಹಿಸುತ್ತದೆ.


ಗೂಗಲ್‌ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot