Cyclone Biparjoy: ಬಿಪರ್ಜೋಯ್ ಚಂಡಮಾರುತ ಬಗ್ಗೆ ತಿಳಿಯಲು ನಿಮ್ಮ ಫೋನ್‌ನಲ್ಲಿ ಈ ರೀತಿ ಮಾಡಿ!
ದೊಡ್ಡ ಮಟ್ಟದಲ್ಲಿ ಹಾನಿಯುಂಟುಮಾಡುವ ಸಾಮರ್ಥ್ಯ ಇರುವ ಬಿಪರ್ಜೋಯ್ ಚಂಡಮಾರುತಕ್ಕೆ (Cyclone Biparjoy) ಹೆದರಿ ಈಗಾಗಲೇ ಕರಾವಳಿ ಭಾಗದಲ್ಲಿರುವ ಜನರು ಸ್ಥಳಾಂತರ ಆಗುತ್ತಿದ್ದಾರೆ. ಇದರ ಜೊತೆಗೆ ಸರ್ಕಾರ ಸಹ ಕರಾವಳಿ ಜಿಲ್ಲೆಗಳಿಂದ 21000 ಜನರನ್ನು ಆಶ್ರಯ ಕೇಂದ್ರಗಳಿಗೆ ಕಳುಹಿಸಿಕೊಟ್ಟಿದೆ. ಈ ನಡುವೆ ನಿಮ್ಮ ಫೋನ್‌ಗಳಲ್ಲಿಯೇ ಹವಾಮಾನ ಎಚ್ಚರಿಕೆಗಳನ್ನು ಪಡೆದುಕೊಂಡು ಮುನ್ನೆಚ್ಚರಿಕೆ ವಹಿಸಿಕೊಳ್ಳಿ.
ಹೌದು, ಸೈಕ್ಲೋನ್ ಬಿಪರ್ಜೋಯ್, ಅತ್ಯಂತ ತೀವ್ರವಾದ ಚಂಡಮಾರುತ ಆಗಿದ್ದು, ಇದರಿಂದ ಅಪಾರ ಆಸ್ತಿ-ಪಾಸ್ತಿ ಹಾನಿಯಾಗಲಿದೆ ಎನ್ನಲಾಗಿದೆ. ಅದರಂತೆ ಜೂನ್ 15 ರಂದು ಗುಜರಾತ್‌ಗೆ ಅಪ್ಪಳಿಸುವ ನಿರೀಕ್ಷೆಯಿದ್ದು, ಸದ್ಯಕ್ಕೆ ಪೋರಬಂದರ್‌ನಿಂದ ನೈಋತ್ಯಕ್ಕೆ 290 ಕಿಮೀ ಮತ್ತು ಜಖೌ ಬಂದರಿನ ನೈಋತ್ಯಕ್ಕೆ 360 ಕಿಮೀ ದೂರದಲ್ಲಿದೆ. ಈ ಚಂಡಮಾರುತ ಗಂಟೆಗೆ 150 ಕಿಮೀ ವೇಗದಲ್ಲಿ ಭಾರೀ ಗಾಳಿ ಮಳೆಯೊಂದಿಗೆ ಬರಲಿದೆ. ಇದರ ಎಫೆಕ್ಟ್ ಹಲವಾರು ಕಡೆ ಆಗಲಿದ್ದು, ಇದರಿಂದ ತೊಂದರೆಗೆ ಒಳಗಾಗುವ ಮುನ್ನ ಎಚ್ಚೆತ್ತುಕೊಳ್ಳಲು ಈ ಮಾರ್ಗ ಅನುಸರಿಸಿ.

ಐಫೋನ್‌ನಲ್ಲಿ ಹವಾಮಾನ ಎಚ್ಚರಿಕೆಗಳನ್ನು ಪಡೆದುಕೊಳ್ಳುವುದು ಹೇಗೆ?
ಹಂತ 1 : ಮೊದಲು ನಿಮ್ಮ ಐಫೋನ್‌ನಲ್ಲಿ ಸೆಟ್ಟಿಂಗ್ ಆಪ್ ಓಪನ್ ಮಾಡಿ. ಅಲ್ಲಿ ಗೌಪ್ಯತೆ ಮತ್ತು ಭದ್ರತೆಗೆ ವಿಭಾಗಕ್ಕೆ ಹೋಗಿ ಅದರ ಕೆಳಗೆ ಕಾಣಿಸಿಕೊಳ್ಳುವ ಸ್ಥಳ ಸೇವೆ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿದರೆ ವೆದರ್ ಅಥವಾ ಹವಾಮಾನ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.
ಹಂತ 2: ಇದಾದ ನಂತರದಲ್ಲಿ ನಿಮ್ಮ ಪ್ರಸ್ತುತ ಸ್ಥಳದಲ್ಲಿ ಏನೆಲ್ಲಾ ಸಂಭವಿಸುತ್ತದೆ ಎಂದು ತಿಳಿದುಕೊಳ್ಳಲು ನೋಟಿಫಿಕೇಶನ್ ಪಡೆಯುವ ಉದ್ದೇಶದಿಂದ ನಿಖರವಾದ ಸ್ಥಳವನ್ನು ಆನ್ ಮಾಡಿ. ಬಳಿಕ ಮತ್ತೆ ಅಲ್ಲಿ ವೆದರ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಈ ವೇಳೆ ಹವಾಮಾನ ಪಟ್ಟಿಯನ್ನು ವೀಕ್ಷಿಸಲು ಎಡಿಟ್ ಸಿಟೀಸ್ ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ 3 : ಮೇಲಿನ ಪ್ರಕ್ರಿಯೆ ಮುಗಿಸಿದ ನಂತರ ಮೋರ್ ಎಂಬ ಆಯ್ಕೆ ಅಲ್ಲೇ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಬಳಿಕ ನೋಟಿಫಿಕೇಶನ್ ಎಂಬ ಆಯ್ಕೆ ಮೇಲೆ ಒತ್ತಿರಿ. ಇದಾದ ನಂತರದಲ್ಲಿ ಹವಾಮಾನ ಆಪ್‌ನಿಂದ ನೋಟಿಫಿಕೇಶನ್ ಅನುಮತಿಸಿ. ಜೊತೆಗೆ ಪ್ರಸ್ತುತ ಸ್ಥಳ (Current Location) ಎಂಬ ಆಯ್ಕೆಯ ಕೆಳಗೆ ತೀವ್ರ ಹವಾಮಾನ ಮತ್ತು ಮುಂದಿನ ಮಳೆಗಾಗಿ ನೋಟಿಫಿಕೇಶನ್ ಎಂಬ ಆಯ್ಕೆ ಕಾಣ ಸಿಗುತ್ತದೆ ಅದನ್ನು ಆನ್ ಮಾಡಿ.
ಆಂಡ್ರಾಯ್ಡ್ ಫೋನ್‌ಗಳಲ್ಲಿ ಹವಾಮಾನ ಎಚ್ಚರಿಕೆಗಳನ್ನು ಹೇಗೆ ಪಡೆಯುವುದು ಎಂಬುದಕ್ಕೆ ಈ ಸರಳ ಹಂತ ಅನುಸರಿಸಿ. ಹಂತ 1: ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್ ಅಥವಾ ಗೂಗಲ್ ಅಸಿಸ್ಟೆಂಟ್ ಆಪ್ ಓಪನ್ ಮಾಡಿ. ನಂತರದಲ್ಲಿ ಮೆನು ವಿಭಾಗಕ್ಕೆ ಎಂಟ್ರಿ ಕೊಡಲು ಕೆಳಗಿನ ಬಲ ಮೂಲೆಯಲ್ಲಿರುವ ಮೂರು ಅಡ್ಡ ಸಾಲುಗಳ ಮೇಲೆ ಟ್ಯಾಪ್ ಮಾಡಿ. ಬಳಿಕ ಸೆಟ್ಟಿಂಗ್ ವಿಭಾಗದ ಮೇಲೆ ಟ್ಯಾಪ್ ಮಾಡಿ.

ಹಂತ 2: ಇದಾದ ಬಳಿಕ ಕೆಳಗೆ ಸ್ಕ್ರಾಲ್ ಮಾಡಿದರೆ ನಿಮಗೆ ವೆದರ್‌ಅಥವಾ ಹವಾಮಾನ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ನಂತರದಲ್ಲಿ ನಿಮಗೆ ಹಲವು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಆ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ಮತ್ತು ಆಯಾ ಟಾಗಲ್ ಅನ್ನು ಸಕ್ರಿಯಗೊಳಿಸುವ ಮೂಲಕ ದೈನಂದಿನ ಹವಾಮಾನದ ವಿಷಯ ಅಥವಾ ತೀವ್ರ ಹವಾಮಾನ ಎಚ್ಚರಿಕೆಗಳ ನೋಟಿಫಿಕೇಶನ್ ಅನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಪ್ರಮುಖ ವಿಷಯ ಏನೆಂದರೆ ಈ ಚಂಡಮಾರುತ ಗುಜರಾತ್‌ನ ಕಚ್, ದೇವಭೂಮಿ ದ್ವಾರಕಾ ಮತ್ತು ಜಾಮ್‌ನಗರ ಜಿಲ್ಲೆಗಳ ಹಲವು ಕಡೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಅಲ್ಲಿನ ಜನರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ವೈಮಾನಿಕ ಸೇವೆಗಳಿಗೆ ಈಗಾಗಲೇ ಅಡ್ಡಿಯನ್ನುಂಟು ಮಾಡಿದೆ. ಅದರಲ್ಲೂ ಮುಂಬೈ ಏರ್ ಪೋರ್ಟ್‌ನಲ್ಲಿ ವಿಮಾನಗಳ ಆಗಮನ-ನಿರ್ಗಮನದಲ್ಲಿ ದೊಡ್ಡ ಬದಲಾವಣೆ ಆಗಿದೆ. ಈ ಮೂಲಕ ಜನರು ಪರದಾಡುತ್ತಿದ್ದಾರೆ.


Click it and Unblock the Notifications








