Flood warnings: ಪ್ರವಾಹ, ಮಳೆ ಎಚ್ಚರಿಕೆಯನ್ನು ಪೂರ್ವದಲ್ಲೇ ತಿಳಿಯಲು ನಿಮ್ಮ ಫೋನ್‌ನಲ್ಲಿ ಈ ರೀತಿ ಮಾಡಿ!
ಮಳೆಗಾಲ ಆರಂಭ ಆಗಿದ್ದು, ಈ ನಡುವೆ ಮಳೆಯಿಂದ ನಗರದ ಅಲ್ಲಲ್ಲಿ ಅನಾಹುತಗಳು ವರದಿ ಆಗುತ್ತಿದ್ದು, ಕೆಲವರಂತೂ ಮನೆಯಿಂದ ಆಚೆ ಹೋಗಲು ಭಯ ಪಡುವಂತಾಗಿದೆ. ಅದಾಗ್ಯೂ ಕೆಲವೆಡೆ ಮಳೆ ಭಾರೀ(heavy rain) ಜೋರಾಗಿ ಬಂದರೆ ಇನ್ನೂ ಕೆಲವೆಡೆ ಮಳೆಯ ಕೊರತೆ ಎದ್ದು ಕಾಣುತ್ತಿದೆ.
ಹೌದು, ಈ ಹಿಂದೆ ಹಿರಿಯರು ಆಕಾಶಕ್ಕೆ ಕತ್ತೆತ್ತಿ ನೋಡಿ ಮಳೆ ಬರುತ್ತದೋ? ಇಲ್ಲವೋ? ಎಂದು ಸುಲಭವಾಗಿ ಹೇಳುತ್ತಿದ್ದರು. ಆದರೆ, ಬದಲಾದ ಕಾಲಘಟ್ಟದಲ್ಲಿ ಪ್ರಕೃತಿಯ ಬದಲಾವಣೆಗಳನ್ನು ನಿರ್ಣಯಿಸಲು ಕಷ್ಟ. ಆದರೆ, ಕೆಲವು ಸುಧಾರಿತ ತಂತ್ರಜ್ಞಾನಗಳು ಇವುಗಳನ್ನು ಸಾಧ್ಯವಾಗಿಸಿವೆ. ಅಂದರೆ ನಿಮ್ಮ ಬಳಿ ಇರುವ ಸ್ಮಾರ್ಟ್‌ಫೋನ್ ಮೂಲಕವೇ ಎಲ್ಲಿ ಜೋರಾಗಿ ಮಳೆ ಆಗುತ್ತಿದೆ, ಎಲ್ಲಿ ಮಳೆ ಆಗಲಿದೆ, ಎಷ್ಟು ಪ್ರಮಾಣದ ಮಳೆಯಾಗಲಿದೆ? ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಈಗಾಗಲೇ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಮಳೆ ಭಾರೀ ಹಾನಿಯನ್ನುಂಟುಮಾಡಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳು ನಿರಂತರ ಮಳೆಯಿಂದ ತತ್ತರಿಸಿ ಹೋಗಿದ್ದಾರೆ. ಕೆಲವು ಭಾಗಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಎಚ್ಚರಿಕೆ ಸಹ ನೀಡಿದ್ದು, ಅಗತ್ಯವಿಲ್ಲದಿದ್ದಲ್ಲಿ ಹೊರಗೆ ಕಾಲಿಡದಂತೆ ಜನರಿಗೆ ತಿಳಿಸಲಾಗಿದೆ. ಈ ನಡುವೆ ನೀವು ಸ್ಮಾರ್ಟ್‌ಫೋನ್‌ಗಳಲ್ಲಿ ತೀವ್ರ ಹವಾಮಾನ ಎಚ್ಚರಿಕೆಗಳನ್ನು ಪಡೆದುಕೊಳ್ಳಬಹುದು.
ಐಫೋನ್‌ನಲ್ಲಿ ಈ ಮಾಹಿತಿ ಪಡೆಯುವುದು ಹೇಗೆ?
ಹಂತ 1: ಆಪಲ್ ಐಫೋನ್‌ಗಳು ಇನ್‌ಬಿಲ್ಟ್ ಆಗಿಯೇ ಹವಾಮಾನ ಆಪ್ ತೀವ್ರ ಹವಾಮಾನ ನೋಟಿಫಿಕೇಶನ್ ಆಯ್ಕೆಯನ್ನು ಹೊಂದಿರುತ್ತವೆ. ಇದನ್ನು ಒಮ್ಮೆ ಸಕ್ರಿಯಗೊಳಿಸಿದರೆ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದ ಕುರಿತು ಆಪ್ ಆಟೋಮ್ಯಾಟಿಕ್ ಆಗಿ ಮಾಹಿತಿ ನೀಡುತ್ತಲೇ ಇರುತ್ತದೆ. ಇದಕ್ಕಾಗಿ ನೀವು ಮೊದಲು ಫೋನ್‌ನಲ್ಲಿರುವ ಹವಾಮಾನ ಅಥವಾ ವೆದರ್ ಆಪ್ ಓಪನ್ ಮಾಡಿ.
ಹಂತ 2: ನಂತರದಲ್ಲಿ ಆಪ್‌ನ ಕೆಳಗಿನ ಬಲ ಮೂಲೆಯಲ್ಲಿರುವ ಪಟ್ಟಿ ಐಕಾನ್ ಮೇಲೆ ಟ್ಯಾಪ್ ಮಾಡಿ. ಅಲ್ಲಿ ನೋಟಿಫಿಕೇಶನ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿದ ಬಳಿಕ ತೀವ್ರ ಹವಾಮಾನ ಟಾಗಲ್ ಅನ್ನು ಆಕ್ಟಿವ್ ಮಾಡಲು ಬಲಕ್ಕೆ ಸರಿಸಿ. ಇದರೊಂದಿಗೆ ಯಾವ ಸ್ಥಳದ ನೋಟಿಫಿಕೇಶನ್‌ಗಳು ಬೇಕು ಎಂಬುದನ್ನೂ ಸಹ ಈ ವಿಭಾಗದಲ್ಲಿ ಆಯ್ಕೆ ಮಾಡಿ.
ಈ ರೀತಿ ಮೇಲೆ ತಿಳಿಸಿದ ಹಾಗೆ ಮಾಡಿದ್ದೇ ಆದರೆ ಐಫೋನ್‌ನಲ್ಲಿನ ವೆದರ್ ಆಪ್ ಆಟೋಮ್ಯಾಟಿಕ್ ಆಗಿ ಪ್ರವಾಹ, ಮಳೆ ಮತ್ತು ಇತರ ಕೆಟ್ಟ ಹವಾಮಾನ ಎಚ್ಚರಿಕೆಗಳನ್ನು ನಿರಂತರವಾಗಿ ನೀಡುವ ಮೂಲಕ ನಿಮ್ಮನ್ನು ಎಚ್ಚರಿಸುತ್ತದೆ. ಅಷ್ಟು ಮಾತ್ರವಲ್ಲದೆ ಈ ಮಾಹಿತಿಯನ್ನು ಲಾಕ್ ಸ್ಕ್ರೀನ್‌ನಲ್ಲಿ ತೋರಿಸುತ್ತದೆ. ಈ ಮೂಲಕ ನೀವು ಮುಂದಾಗುವ ತೊಂದರೆಗಳಿಂದ ಪಾರಾಗಲು ಕ್ರಮ ತೆಗೆದುಕೊಕೊಳ್ಳಬಹುದು.
ಆಂಡ್ರಾಯ್ಡ್‌ನಲ್ಲಿ ಈ ಸಂಬಂಧ ಮಾಹಿತಿ ಪಡೆಯುವುದು ಹೇಗೆ?:
ಹಂತ 1: ಐಫೋನ್‌ನಲ್ಲಿ ಕೆಲವು ಸುಲಭ ಮಾರ್ಗಗಳ ಮೂಲಕ ಇದನ್ನು ಆಕ್ಟಿವ್ ಮಾಡಬಹುದು. ಆದರೆ, ಆಂಡ್ರಾಯ್ಡ್‌ಫೋನ್ ಬಳಕೆದಾರರು ಸ್ವಲ್ಪ ಹೆಚ್ಚಿನ ಸೆಟ್ಟಿಂಗ್‌ಗಳನ್ನು ಮಾಡುವ ಮೂಲಕ ಈ ಹವಾಮಾನ ಸಂಬಂಧಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಫೋನ್‌ನಲ್ಲಿ ಗೂಗಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ನಂತರ ಇನ್‌ಸ್ಟಾಲ್ ಮಾಡಿ.
ಹಂತ 2: ಇದಾದ ನಂತರದಲ್ಲಿ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಅಲ್ಲಿ ಸೆಟ್ಟಿಂಗ್ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಬಳಿಕ ನೋಟಿಫಿಕೇಶನ್ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿದರೆ ಹವಾಮಾನ ಮುನ್ಸೂಚನೆ, ಸಾರ್ವಜನಿಕ ಎಚ್ಚರಿಕೆಗಳು ಮತ್ತು ಪ್ರಸ್ತುತ ಪರಿಸ್ಥಿತಿ ಎಂಬ ಆಯ್ಕೆಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.
ಹಂತ 3 : ಈ ರೀತಿ ಮಾಡಿದ ನಂತರ ಮತ್ತೆ ಗೂಗಲ್ ಆಪ್‌ಗೆ ಹಿಂತಿರುಗಿ ಬನ್ನಿ. ಅಲ್ಲಿ ಮೇಲ್ಭಾಗದಲ್ಲಿರುವ ಹವಾಮಾನ ವಿಜೆಟ್ ಆಯ್ಕೆ ಮೇಲೆ ಟ್ಯಾಪ್ ಮಾಡಿ ಜೊತೆಗೆ ನಿಮ್ಮ ಪ್ರದೇಶದಲ್ಲಿ ನೀಡಲಾದ ಇತರ ಹವಾಮಾನ ಎಚ್ಚರಿಕೆಗಳ ಜೊತೆಗೆ ಪ್ರಸ್ತುತ ಹವಾಮಾನ ಪರಿಸ್ಥಿತಿಗಳನ್ನು ನೀವು ನಿಮ್ಮ ಫೋನ್‌ನಲ್ಲಿಯೇ ಪಡೆದುಕೊಳ್ಳಬಹುದು.


Click it and Unblock the Notifications








