ಉಚಿತ ಮಿಸ್‌ಕಾಲ್‌ ಅಲರ್ಟ್ ಸೇವೆ ಪಡೆಯುವುದು ಹೇಗೆ?

Posted By: Staff
ಉಚಿತ ಮಿಸ್‌ಕಾಲ್‌ ಅಲರ್ಟ್ ಸೇವೆ ಪಡೆಯುವುದು ಹೇಗೆ?

ಈಗಂತೂ ಮೊಬೈಲ್‌ ಫೋನ್‌ಗಳಲ್ಲಿ ಸಿಗ್ನಲ್‌ ಸಿಗದೇ ಹೋಗುವ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಪ್ರತಿಯೊಬ್ಬರೂ ಕುಡಾ ಸರಿಯಾಗಿ ಸಿಗ್ನಲ್‌ ಸಿಗದೆ ಸಮಸ್ಯೆ ಅನುಭವಿಸಿಯೇ ಇರುತ್ತಾರೆ. ನೆಟ್ವರ್ಕ್‌ ಸಮಸ್ಯೆ ಇಂದಾಗಿ ಇಂದು ಪ್ರತಿನಿತ್ಯ ಗ್ರಾಹಕರುಗಳು ನಾನಾ ತೊಂದರೆ ಅನುಭವಿಸುವಂತಾಗಿ ಬಿಟ್ಟಿದೆ. ಅದರಲ್ಲಿಯೂ ಪೊಷಕರಿಗಂತೂ ಮಕ್ಕಳ ಫೋನ್‌ನಂಬರ್‌ ಸಂಪರ್ಕಿಸಲು ಸಾಧ್ಯವಾಗದೇ ಹೋದರಂತೂ ಗಾಬರಿ ಗೊಳ್ಳುತ್ತಾರೆ ಹಾಗೂ ಸದಾ ನಿಮ್ಮ ಫೋನ್‌ ನೆಟ್ವರ್ಕ್‌ ವ್ಯಾಪ್ತಿಯಿಂದ ಹೊರಗಿರುತ್ತದೆ ಅಥವಾ ಸ್ವಿಚ್‌ ಆಫ್‌ ಆಗಿರುತ್ತದೆ ಯಾಕೆ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ ಬಿಡುತ್ತಾರೆ.

ಅಂದಹಾಗೆ ಫೋನ್‌ ಸ್ವಿಚ್‌ ಆನ್‌ ಆಗಿದ್ದು ಕರೆ ಬಂದಿರುವುದು ನಿಮ್ಮ ಗಮನಕ್ಕೆ ಬಂದಿಲ್ಲದೇ ಹೋದಲ್ಲಿ ನಂತರ ಮಿಸ್‌ ಕಾಲ್‌ ಣೋಡಿಯಾದರೂ ನೀವು ರೆಟರ್ನ್‌ ಕಾಲ್‌ ಮಾಡೇ ಮಾಡುತ್ತೀರ. ಆದರೆ ನೆಟ್ವರ್ಕ್‌ ಸಂಪರ್ಕ ಸಂಪೂರ್ಣ ಕಳೇದು ಕೊಂಡ ಸಂದರ್ಭದಲ್ಲಿ ಯಾರು ಕರೆ ಮಾಡಿದ್ದಾರೆ ಎಂಬುದನ್ನು ಹೇಗೆ ತಾನೆ ತಿಳಿಯಲು ಸಾಧ್ಯ. ಇಂತಹ ಸಮಸ್ಯೆಯ ಸಲುವಾಗಿಯೆ ನೆಟ್ವರ್ಕ್‌ ಪ್ರೋವೈಡರ್ ಸಂಸ್ಥೆಗಳು ಮಿಸ್‌ ಕಾಲ್‌ ಅಲರ್ಟ್‌ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ಒದಗಿಸಿದ್ದು ಗ್ರಾಹಕರು ಈ ಸೇವೆಯ ಮೂಲಕ ಸ್ವಿಚ್‌ ಆಫ್‌ ಆದಂತಹ ಅಥವಾ ನೆಟ್ವರ್ಕ್‌ ಇರದೇ ಇದ್ದಂತಹ ಸಂದರ್ಭಗಳಲ್ಲಿ ಬಂದಂತಹ ಮಿಸ್‌ ಕಾಲ್‌ಗಳ ವಿವರ ಪಡೆಯ ಬಹುದಾಗಿದೆ.

ಸೂಚನೆ: ಮೊದಲಿಗೆ ನಿಮ್ಮ ನಟ್ವರ್ಕ್ ಪ್ರೊವೈಡರ್‌ನ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ಮಿಸ್‌ ಕಾಲ್‌ ಅಲರ್ಟ್‌ ಕುರಿತಾಗಿ ಸಂಪೂರ್ಣ ಮಾಹಿತಿ ಪಡೆದು ಕೊಳ್ಳಿ.

ರಿಲೈನ್ಸ್

*62*+919025000700#

ಬಿಎಸ್‌ಎನ್‌ಎಲ್‌

*62*17010#

ಏರ್ಟೆಲ್‌

*321*882#: FOR 3MONTHS.

ಏರ್ಸೆಲ್‌

*62*+91984221006#

ಐಡಿಯಾ

*62*+919847926340#

ಐಡಿಯಾ

*62*+919708002800#

ಐಡಿಯಾ

*62*+919822001711#

ಐಡಿಯಾ

*62*919887040012#

ಮೊಬೈಲ್‌ ನೆಟ್ವರ್ಕ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸಫರ್‌ ಮಾಡುವುದು ಹೇಗೆ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot