ನೆಟ್ವರ್ಕ್‌ ಪೊರ್ಟ್‌ ಮಾಡಿಕೊಳ್ಳುವುದು ಹೇಗೆ?

Posted By: Staff
ನೆಟ್ವರ್ಕ್‌ ಪೊರ್ಟ್‌ ಮಾಡಿಕೊಳ್ಳುವುದು ಹೇಗೆ?

ನೀವು ಈಗ ಬಳಸುತ್ತಿರು ನೆಟ್ವರ್ಕ್‌ ಬದಲಾಯಿಸ ಬೇಕೆಂದಿದ್ದೀರ? ಹಾಗಿದ್ದರೆ ನಿಮ್ಮ ಸಿಮ್‌ ನಂಬರ್‌ ಬದಲಾಯಿಸದೇ ನೆಟ್ವರ್ಕ್‌ ಬದಲಾವಣೆ ಮಾಡುವುದಾದರೂ ಹೇಗೆ? ಇಂತಹ ಗೊಂದಲಗಳಿಗೆ ಪರಿಹಾರವಾಗಿ ಗಿಜ್ಬಾಟ್‌ ನಿಮಗಾಗಿ ಫೋನ್‌ ಸಂಖ್ಯೆ ಬದಲಾಯಿಸದೆ ಕೇವಲ ನೆಟ್ವರ್ಕ್‌ ಬದಲಾಯಿಸಿ ಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ತಂದಿದೆ ಓದಿ ನೋಡಿ.

ಈ ಕಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಮೊಬೈಲ್‌ ನೆಟ್ವರ್ಕ್‌ ಪೊರ್ಟ್‌ ಮಾಡಿಕೊಳ್ಳ ಬಹುದಾಗಿದೆ.

ಮೊದಲನೆಯದಾಗಿ: ಮೊದಲಿಗೆ PORT ಎಂದು ಟೈಪ್‌ಮಾಡಿ <99999888888> ನಿಮ್ಮ ಮೊಬೈಲ್‌ ಸಂಖ್ಯೆ ಸೇರಿಸಿ 1900 ಸಂಖ್ಯೆಗೆ SMS ಕಳುಹಿಸಿದ ನಂತರ ಆಪರೇಟರ್‌ ನಿಂದ ನಿಮಗೊಂದು ಯುನೀಕ್‌ ನಂಬರ್‌ ದೊರೆಯುತ್ತದೆ.

ಎರಡನೆಯದಾಗಿ: ನಂತರ ನಿಮ್ಮಿಷ್ಟದ ಮತ್ತೊಂದು ನೆಟ್ವರ್ಕ್‌ನ ಶೋರೂಂಗೆ ತೆರಳಿ ನಿಮ್ಮ ಮನವಿಯನ್ನು ತಿಳಿಸಿ.

ಮೂರನೆಯದಾಗಿ: ಹೊಸ ಸಿಮ್‌ನ ವೆಚ್ಚವಾಗಿ 19 ಶುಲ್ಕ ಪಡೆದುಕೊಳ್ಳಲಾಗುತ್ತದೆ.

ನಾಲ್ಕನೆಯದಾಗಿ: ನೀವು ನಿಮ್ಮ ಇತ್ತೀಚಿ ಪಾಸ್‌ಪೊರ್ಟ್‌ ಗಾತ್ರದ ಫೋಟೊ ಒಂದನ್ನು ಹಾಗೂ ಗುರುತಿನ ಪ್ರತಿಯೊಂದನ್ನು ನೀಡಬೇಕಾಗುತ್ತದೆ.

ಕೊನೆಯದಾಗಿ: ನಿಮಗೊಂದು ಹೊಸ ಸಿಮ್‌ ಕಾರ್ಡ್‌ ನೀಡಲಾಗಿತ್ತದೆ ಇದರೊಂದಿಗೆ 7 ದಿನಗಳ ಕಾಲಾವಧಿಯಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆ ಫೊರ್ಟ್‌ ಆಗಿರುತ್ತದೆ ನಂತರ ನೀವು ನಿಮ್ಮ ನೂತನ ಮೊಬೈಲ್‌ ನೆಟ್ವರ್ಕ್‌ನ ಆನಂದ ಪಡೆಯಬಹುದಾಗಿದೆ.

Read In English

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot