ಎಲ್ಲಿದ್ದರೂ ಹೇಗಿದ್ದರೂ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?

Written By:

ಇಂದಿನ ದಿನಗಳಲ್ಲಿ ಇಂಟರ್ನೆಟ್ ನಮ್ಮ ಮೂಲಭೂತ ಸೌಕರ್ಯಗಳಲ್ಲಿ ಒಂದು ಎಂಬಂತಾಗಿಬಿಟ್ಟಿದೆ. ಇಂಟರ್ನೆಟ್ ಇದ್ದಲ್ಲಿ ಯಾವ ಕೆಲಸವನ್ನಾದರೂ ಹೇಗೆ ಬೇಕಾದರೂ ಮಾಡಿ ಮುಗಿಸಬಹುದೆಂಬ ಒಂದು ವಿಶ್ವಾಸ ನಮ್ಮ ಮನದಲ್ಲಿ ಮೂಡುತ್ತದೆ. ಆದರೆ ನಿಮ್ಮ ಮೊಬೈಲ್‌ಗೆ ಇಂಟರ್ನೆಟ್ ಚಾರ್ಜ್ ಮಾಡಿದಲ್ಲಿ ಮಾತ್ರವೇ ಅಲ್ಲವೇ ಇಂಟರ್ನೆಟ್ ಸೌಲಭ್ಯವನ್ನು ನಿಮಗೆ ಪಡೆದುಕೊಳ್ಳಲು ಆಗುವುದು. ಆದರೆ ನೀವು ಎಲ್ಲಿಗೆ ಬೇಕಾದರೂ ಹೋಗಿ ಇಂಟರ್ನೆಟ್ ಸೌಲಭ್ಯ ನಿಮಗೆ ದೊರೆಯುವಂತೆ ಮಾಡುವ ಒಂದು ವಿಧಾನವನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಓದಿರಿ: ಏರ್‌ಸೆಲ್‌ ಗ್ರಾಹಕರಿಗೆ ಉಚಿತ ಇಂಟರ್‌ನೆಟ್‌

ಬನ್ನಿ ಕೆಳಗಿನ ಲೇಖನದಲ್ಲಿ ಅದು ಹೇಗೆ ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹತ್ತಿರದ ಹಾಟ್‌ಸ್ಪಾಟ್‌

ಹತ್ತಿರದ ಹಾಟ್‌ಸ್ಪಾಟ್‌

ಹತ್ತಿರದ ಹಾಟ್‌ಸ್ಪಾಟ್‌ಗಳನ್ನು ನಿಮಗೆ ಪರಿಶೀಲಿಸಲು ಅನುಮತಿಸುವ ಉಚಿತ ಅಪ್ಲಿಕೇಶನ್ ಆದ ವೆಫಿಯನ್ನು ನಾವು ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಇದೊಂದು ಉಚಿತ ಅಪ್ಲಿಕೇಶನ್ ಆಗಿದೆ.

ವೆಫಿ

ವೆಫಿ

200 ಮಿಲಿಯನ್ ವೈಫೈ ಹಾಟ್‌ಸ್ಪಾಟ್‌ಗಳನ್ನು ಪಟ್ಟಿಮಾಡುವ ಸಾಮರ್ಥ್ಯವನ್ನು ವೆಫಿ ಹೊಂದಿದೆ. ಆದ್ದರಿಂದ ನೀವು ಸಂಪರ್ಕಕ್ಕಾಗಿ ಹೆಚ್ಚು ದೂರ ಹೋಗಬೇಕೆಂದೇನಿಲ್ಲ.

ಕೇಬಲ್ ಕಂಪೆನಿ

ಕೇಬಲ್ ಕಂಪೆನಿ

ಇನ್ನು ನಿಮ್ಮ ಕೇಬಲ್ ಕಂಪೆನಿ ಕೂಡ ನಿಮ್ಮ ಇಂಟರ್ನೆಟ್ ಸಂಪರ್ಕಕ್ಕೆ ಜವಬ್ದಾರನಾಗಿರುತ್ತದೆ. ನಿಮ್ಮ ಪ್ರವೈಡರ್ ಅನ್ನು ಆಧರಿಸಿ, ಉಚಿತ ವೈಫೈ ಪ್ರವೇಶವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ವೈಫೈ ಫೈಂಡರ್ ಅಪ್ಲಿಕೇಶನ್

ವೈಫೈ ಫೈಂಡರ್ ಅಪ್ಲಿಕೇಶನ್

ಈ ಉಚಿತ ವೈಫೈ ಫೈಂಡರ್ ಅಪ್ಲಿಕೇಶನ್ ನಿಮ್ಮ ಹತ್ತಿರದ ಹಾಟ್‌ಸ್ಪಾಟ್‌ಗಳನ್ನು ಗುರುತಿಸುವಲ್ಲಿ ಸಿದ್ಧಹಸ್ತ ಎಂದೆನಿಸಿದೆ.

ಟೆದರಿಂಗ್

ಟೆದರಿಂಗ್

ಇನ್ನು ಟೆದರಿಂಗ್ ಮೂಲಕ ಕೂಡ ಉಚಿತ ವೈಫೈ ಸೌಲಭ್ಯವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಈ ಫೀಚರ್ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಪೋರ್ಟೇಬಲ್ ವೈಫೈ ಹಾಟ್‌ಸ್ಪಾಟ್ ಅನ್ನಾಗಿ ಪರಿವರ್ತಿಸುತ್ತದೆ. ಹೆಚ್ಚಿನ ಫೋನ್‌ಗಳು ಈ ಸಾಮರ್ಥ್ಯವನ್ನು ಮೊದಲೇ ಪಡೆದುಕೊಂಡಿರುತ್ತವೆ.

"ಪರ್ಸನಲ್ ಹಾಟ್‌ಸ್ಪಾಟ್"

ಆಕ್ಟಿವೇಟ್ ಮಾಡಲು ನಿಮ್ಮ ವೈಫೈ ಸೆಟ್ಟಿಂಗ್ಸ್‌ಗಳಿಗೆ ಹೋಗಿ ಮತ್ತು ಇಲ್ಲಿ "ಪರ್ಸನಲ್ ಹಾಟ್‌ಸ್ಪಾಟ್" ಆಪ್ಶನ್ ಅನ್ನು ಸಕ್ರಿಯಗೊಳಿಸಿ.

ವೈಫೈ ನೆಟ್‌ವರ್ಕ್‌

ವೈಫೈ ನೆಟ್‌ವರ್ಕ್‌

ಒಮ್ಮೆ ಇದು ಹೊಂದಿಕೆಯಾದೊಡನೆ ಲಭ್ಯವಿರುವ ವೈಫೈ ನೆಟ್‌ವರ್ಕ್‌ನಂತೆ ನಿಮ್ಮ ಫೋನ್ ಗೋಚರಿಸುತ್ತದೆ. ತದನಂತರ ನೀವು ನಿಮ್ಮ ಫೋನ್‌ನ ಕನೆಕ್ಶನ್ ಅನ್ನು ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗೆ ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Need to stay connected? Don't panic. There are several ways you can find free WiFi wherever you are.If you want a quick and easy way to scan your area to find the closest hotspots, check out a free app called WeFi.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot