ಏರ್‌ಸೆಲ್ ಗ್ರಾಹಕರಿಗೆ ಉಚಿತ ಇಂಟರ್‌ನೆಟ್
ದಿನನಿತ್ಯ ಇಂಟರ್‌ನೆಟ್ ಬಳಕೆಯಿಲ್ಲದೇ ಸ್ಮಾರ್ಟ್‌ಫೋನ್ ಬಳಕೆದಾರರು ಇರಲಾರರು. ಆದರೆ ಆ ಇಂಟರ್‌ನೆಟ್ ಬಳಕೆಗೆ ಬಿಲ್ ಪಾವತಿ ಮಾಡುವುದು ಮಾತ್ರ ಕಷ್ಟವಾಗುತ್ತಿತ್ತು. ಈಗ ಕಷ್ಟವನ್ನು ನೀಗಿಸಲು ಏರ್‌ಸೆಲ್ ಕಂಪನಿ ಹೊಸ ಪ್ರಾಡಕ್ಟ್‌ಅನ್ನು ತನ್ನ ಹೊಸ ಗ್ರಾಹಕರಿಗೆ ಮಾತ್ರ ನೀಡುತ್ತಿದೆ. ಆ ಯೋಜನೆ ಎಲ್ಲರಿಗೂ ಖುಷಿ ತರುವ ಉಚಿತ ಇಂಟರ್‌ನೆಟ್ ಸೌಲಭ್ಯವಾಗಿದೆ.
ಓದಿರಿ: ಫೇಸ್‌ಬುಕ್‌ನಲ್ಲಿಯ ಎಮೋಜಿ ಬಟನ್‌ಗಳ ವಿಶೇಷತೆ ಏನು
ಹೌದು ಏರ್‌ಸೆಲ್ ತನ್ನ ಹೊಸ ಬಳಕೆದಾರರಿಗೆ ಉಚಿತ ಡಾಟಾ ನೀಡುತ್ತಿದ್ದು, ದಿನನಿತ್ಯ ಅಪ್ಲಿಕೇಶನ್‌ಗಳನ್ನು ರೀಚಾರ್ಜ್ ಮಾಡಿಸದೆ ಗ್ರಾಹಕರು ಬಳಸಬಹುದಾಗಿದೆ. ಇದರ ವಿಶೇಷತೆಯನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ.

ಉಚಿತ ಬೇಸಿಕ್ ಇಂಟರ್‌ನೆಟ್
ಭಾರತದ ಪ್ರಮುಖ ಮೊಬೈಲ್ ಸೇವಾ ಪೂರೈಕೆ ಕಂಪನಿ ಆದ ಏರ್‌ಸೆಲ್ ಈಗ ಹೊಸ ಗ್ರಾಹಕರಿಗೆ ಉಚಿತ ಬೇಸಿಕ್ ಇಂಟರ್‌ನೆಟ್ ಅನ್ನು ಪರಿಚಯಿಸುತ್ತಿದೆ.

ಭಾರತದಲ್ಲೇ ಇದೇ ಮೊದಲ ಬಾರಿಗೆ
ಈ ರೀತಿ ಸೌಲಭ್ಯ ಒದಗಿಸಿರುವುದು ಭಾರತದಲ್ಲೇ ಇದೇ ಮೊದಲ ಬಾರಿಗೆ

ಶಂಕರ ನಾರಾಯಣ
ಈ ಯೋಜನೆಯನ್ನು ಮೊಬೈಲ್ ಡಾಟಾ ಬಳಕೆದಾರರನ್ನು ಹೆಚ್ಚಿಸಲು ಏರ್‌ಸೆಲ್ ಪ್ರಾಡಕ್ಟ್ ರೂಪಿಸಿದ್ದು, ದಿನನಿತ್ಯ ಡಾಟಾ ಬಳಸುವ ಬಳಕೆದಾರರನ್ನು ಗಮನದಲ್ಲಿಟ್ಟು ಯೋಜನೆ ಕೈಗೊಳ್ಳಲಾಗಿದೆ ಎಂದು ಏರ್‌ಸೆಲ್ ಟಿಕ್ನಿಕಲ್ ಮುಖ್ಯಸ್ಥ ಶಂಕರ ನಾರಾಯಣ ಹೇಳಿದ್ದಾರೆ.

ಅಪ್ಲಿಕೇಶನ್‌ಗಳ ಉಚಿತ ಬಳಕೆ
ಏರ್‌ಸೆಲ್ ಹೊಸ ಗ್ರಾಹಕರು ಈ ಸೌಲಭ್ಯದಿಂದ ದಿನನಿತ್ಯ ಬಳಕೆಮಾಡುವ ವಾಟ್ಸ್ಯಾಪ್, ಫೇಸ್‌ಬುಕ್, ಟ್ವಿಟರ್, ಬ್ಯಾಂಕಿಂಗ್ ಮತ್ತು ಟ್ರಾವೆಲ್ ಸಂಬಂಧಿ ಅಪ್ಲಿಕೇಶನ್‌ಗಳನ್ನು ಬಳಸಬಹುದು ಎಂದು ಶಂಕರ ನಾರಾಯಣ ಹೇಳಿದ್ದಾರೆ.

64kbps ಉಚಿತ ಡಾಟಾ
ಈ ಹೊಸ ಏರ್‌ಸೆಲ್ ಸಿಮ್ 144 ರೂಪಾಯಿಗಳಿಗೆ ಲಭ್ಯವಿದ್ದು, 90 ದಿನಗಳಿಗೆ 64kbps ಉಚಿತ ಡಾಟಾ ಸಿಗಲಿದೆ. ಆದರೆ ವಿಡಿಯೋ ಸ್ಟ್ರೀಮಿಂಗ್, ವಿಡಿಯೋ ಕರೆ ಮತ್ತು ಆನ್‌ಲೈನ್ ಗೇಮ್ ಲಭ್ಯವಿಲ್ಲ.

ಪೋಸ್ಟ್‌ಪೇಡ್ ಗ್ರಾಹಕ ಸಂಪೂರ್ಣ ಉಚಿತ ಡಾಟಾ
ಪೋಸ್ಟ್‌ಪೇಡ್ ಗ್ರಾಹಕರಿಗೆ ಅವರ ಬಿಲ್ ಯೋಜನೆಗೆ ತಕ್ಕಂತೆ ಪ್ಯಾಕೇಜ್ ಸೌಲಭ್ಯ ಆಧಾರದಲ್ಲಿ ಸಂಪೂರ್ಣ ಉಚಿತ ಡಾಟಾ ಸಿಗಲಿದೆ ಎನ್ನಲಾಗಿದೆ.

5000 ನಗರ ಗ್ರಾಹಕರಿಗೆ 3G ಸೌಲಭ್ಯ
ಕಂಪನಿಯು ಈಗಾಗಲೇ 7000 ಟವರ್‌ಗಳೊಂದಿಗೆ 5000 ನಗರ ಗ್ರಾಹಕರಿಗೆ 3G ಸೌಲಭ್ಯ ಒದಗಿಸಿದ್ದು, ಹೊಸ ಪ್ರಾಡಕ್ಟ್ ಗ್ರಾಹಕರಿಗೆ 24*7 ರೀತಿಯಲ್ಲಿ ಅನ್‌ಲಿಮಿಟೆಡ್ ಡಾಟಾವನ್ನು ಉಚಿತವಾಗಿ ಬ್ರೌಸ್ ಮಾಡಬಹುದು ಎಂದು ಶಂಕರ ನಾರಾಯಣ ಹೇಳಿದ್ದಾರೆ.

ಏರ್‌ಸೆಲ್ 4G
ಏರ್‌ಸೆಲ್ 4G ಇಂಟರ್‌ನೆಟ್ ಒದಗಿಸಲು ಕಾರ್ಯಪ್ರವೃತ್ತಿಗೊಳಿಸಿದ್ದು, ಈ ವರ್ಷದ ಕೊನೆಯಲ್ಲಿ ಸೇವೆ ದೊರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


Click it and Unblock the Notifications








