iPhone: ಐಫೋನ್ 15, 14, 13 ಸರಣಿಯಲ್ಲಿ ಆಪ್‌ಗಳನ್ನು ಮರೆಮಾಡೋದೇಗೆ? ಇಲ್ಲಿದೆ ವಿವರ
ಐಫೋನ್‌ಗಳಿಗೆ ಮನಸೋಲದ ಮನಸ್ಸು ಯಾವುದಿದೆ ಹೇಳಿ. ಈ ಫೋನ್‌ಗಳು ಅತ್ಯುತ್ತಮ ಹಾಗೂ ವಿಶೇಷ ಫೀಚರ್ಸ್ ಆಯ್ಕೆ ಪಡೆಯುವ ಮೂಲಕ ಸ್ಮಾರ್ಟ್‌ಫೋನ್‌ಗಳ ವಲಯದಲ್ಲಿ ಅಗ್ರಸ್ಥಾನ ಪಡೆದುಕೊಂಡಿವೆ. ಈ ನಡುವೆ ಇತ್ತೀಚೆಗೆ ಲಾಂಚ್ ಆದ ಐಫೋನ್ 15, 14, 13 ಸರಣಿ (iPhone 15, 14, 13 series) ಫೋನ್‌ಗಳು ಇನ್ನೂ ಸಹ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಹೊಂದಿವೆ.
ಹೌದು, ಐಫೋನ್‌ಗಳು ವಿಶೇಷ ಫೀಚರ್ಸ್ ಆಯ್ಕೆ ಪಡೆಯುವ ಮೂಲಕ ಆಂಡ್ರಾಯ್ಡ್ ಫೋನ್‌ಗಳಿಗಿಂತ ತುಂಬಾ ಭಿನ್ನ ಎನಿಸಿವೆ. ಈ ನಡುವೆ ನೀವು ಐಫೋನ್‌ನ 15, 14, 13 ಸರಣಿಯ ಯಾವುದಾದರೂ ಫೋನ್ ಬಳಕೆ ಮಾಡುತ್ತಿದ್ದು, ಆಗಾಗ್ಗೆ ಇತರರ ಕೈಗೆ ನಿಮ್ಮ ಐಫೋನ್ ಅನ್ನು ನೀಡುತ್ತಿದ್ದರೆ ಅಗತ್ಯವಾಗಿ ಕೆಲವು ಆಪ್‌ಗಳನ್ನು ನಿರ್ಬಂಧಿಸುವುದು ಉತ್ತಮ. ಯಾಕೆಂದರೆ ಫೋನ್ ಪಡೆದವರು ಏನು ಮಾಡುತ್ತಾರೆ ಎಂದು ಯಾರಿಗೆ ತಾನೆ ಗೊತ್ತು. ಹಾಗಿದ್ರೆ, ಬೇರೆಯವರು ನಿಮ್ಮ ಫೋನ್ ಪಡೆದರೂ ಸಹ ಅವರಿಗೆ ಕೆಲವು ಆಪ್‌ಗಳು ಕಾಣಿಸಬಾರದು ಎಂದರೆ ಏನು ಮಾಡಬೇಕು ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.

ಆಪ್‌ಗಳನ್ನು ಮರೆಮಾಡಿ: ನಿರ್ದಿಷ್ಟ ಆಪ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲು ನೀವು ಬಯಸಿದರೆ ಆ ಆಪ್‌ಗಳನ್ನು ಅವುಗಳನ್ನು ಮರೆಮಾಡಲು ಐಫೋನ್‌ನಲ್ಲಿ ಒಂದು ಆಯ್ಕೆ ಇರುತ್ತದೆ. ಒಮ್ಮೆ ಮರೆಮಾಡಿದರೆ, ಈ ಆಪ್‌ಗಳು ನಿಮ್ಮ ಹೋಮ್‌ಸ್ಕ್ರೀನ್‌ನಲ್ಲಿ ಮತ್ತು ಸಿರಿ ಹುಡುಕಾಟದಲ್ಲಿ ಕಾಣಿಸುವುದಿಲ್ಲ. ಬದಲಾಗಿ ಲೈಬ್ರರಿಯಲ್ಲಿ ಸ್ಥಾಪಿಸಲಾದ ಎಲ್ಲಾ ಆಪ್‌ಗಳ ಪಟ್ಟಿಯನ್ನು ನ್ಯಾವಿಗೇಟ್ ಮಾಡುವ ಮೂಲಕ ನೀವು ಅವುಗಳನ್ನು 'ಆಪ್ ಲೈಬ್ರರಿ'ಯಿಂದ ಮಾತ್ರ ಪ್ರವೇಶಿಸಬಹುದು.
ಐಫೋನ್‌ನಲ್ಲಿ ಹೋಮ್‌ಸ್ಕ್ರೀನ್‌ನಿಂದ ಆಪ್‌ಗಳನ್ನು ಮರೆಮಾಡುವುದು ಹೇಗೆ?
ಹಂತ 1 : ಹೋಮ್‌ಸ್ಕ್ರೀನ್‌ನಿಂದ ಆಪ್‌ಗಳನ್ನು ಮರೆಮಾಡಲು ಮತ್ತು ತೆಗೆದುಹಾಕಲು ಕೇವಲ ಒಂದು ಬಟನ್ ಒತ್ತಿದರೆ ಸಾಕು.ಇದಕ್ಕಾಗಿ ನಿಮ್ಮ ಐಫೋನ್ ಅನ್ನು ಅನ್‌ಲಾಕ್ ಮಾಡಿ ಮತ್ತು ನೀವು ಹೋಮ್‌ಸ್ಕ್ರೀನ್‌ನಿಂದ ಮರೆಮಾಡಲು ಬಯಸುವ ಆಪ್ ಅನ್ನು ಪತ್ತೆ ಮಾಡಿ.
ಹಂತ 2 : ಇದಾದ ನಂತರದಲ್ಲಿ ಅಪ್ಲಿಕೇಶನ್ ಐಕಾನ್ ಅನ್ನು ಒತ್ತಿ ಮತ್ತು ಹಿಡಿದುಕೊಳ್ಳಿ. ಬಳಿಕ ಹೋಮ್ ಸ್ಕ್ರೀನ್‌ನಿಂದ ತೆಗೆದುಹಾಕಿ ಎಂಬ ಪಾಪ್‌ಅಪ್ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ. ಇದಾದ ನಂತರದಲ್ಲಿ ಅಪ್ಲಿಕೇಶನ್ ಅನ್ನು ಅಲ್ಲಿಂದ ಮರೆ ಮಾಡಲಾಗುತ್ತದೆ. ಇದಾದ ನಂತರದಲ್ಲಿ ಗುಪ್ತ ಆಪ್‌ಗಳನ್ನು ಬಳಕೆ ಮಾಡಲು ನಿಮ್ಮ ಹೋಮ್‌ಸ್ಕ್ರೀನ್‌ನ ಕೊನೆಯಲ್ಲಿ ಇರುವ ಬಲಭಾಗದಲ್ಲಿರುವ ಆಪ್ ಲೈಬ್ರರಿಗೆ ಹೋಗಬೇಕಾಗುತ್ತದೆ.

ಹೋಮ್‌ಸ್ಕ್ರೀನ್‌ನಲ್ಲಿ ನಿರ್ದಿಷ್ಟ ಪೇಜ್‌ಗಳನ್ನ ಮರೆಮಾಡುವುದು ಹೇಗೆ? :
ಹಂತ 1: ಆಪ್‌ಗಳು ಮಾತ್ರವಲ್ಲದೆ ಪೇಜ್‌ಗಳನ್ನ ಸಹ ನೀವು ಮರೆಮಾಡಬಹುದು. ಇದಕ್ಕಾಗಿ ಐಫೋನ್‌ನ ಹೋಮ್‌ಸ್ಕ್ರೀನ್‌ಗೆ ಹೋಗಿ ಮತ್ತು ಆಪ್‌ಗಳು ಅಲುಗಾಡುವವರೆಗೆ ಕೆಳಭಾಗದಲ್ಲಿರುವ ಸರ್ಚ್ ಬಟನ್ ಒತ್ತಿ ಮತ್ತು ಹಿಡಿದುಕೊಳ್ಳಿ.
ಹಂತ 2 : ಇದಾದ ನಂತರದಲ್ಲಿ ಸರ್ಚ್ ಟೆಕ್ಸ್ಟ್ ಅನ್ನು ಚುಕ್ಕೆಗಳಿಂದ ಬದಲಾಯಿಸಲಾಗುತ್ತದೆ. ಅದನ್ನು ಆಯ್ಕೆ ಮಾಡಿ. ಇದಾದ ನಂತರದಲ್ಲಿ ನಿಮ್ಮ ಎಲ್ಲಾ ಹೋಮ್‌ಸ್ಕ್ರೀನ್ ಪುಟಗಳನ್ನು ಲೇಔಟ್ ಮಾಡಲಾಗುತ್ತದೆ. ಈ ವೇಳೆ ನೀವು ಮರೆಮಾಡಲು ಬಯಸುವ ಪೇಜ್‌ಗಳನ್ನು ಆಯ್ಕೆ ಮಾಡಿ ನಂತರ ಮುಗಿದಿದೆ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ. ಹಾಗೆಯೇ ಮರೆಮಾಡಿದ ಪೇಜ್‌ಗಳನ್ನು ಮರಳಿ ತರಲು, ಮೇಲೆ ನೀಡಲಾದ ಅದೇ ಪ್ರಕ್ರಿಯೆಯನ್ನು ಅನುಸರಿಸಿ.
ಸಿರಿ ಮತ್ತು ಹೋಮ್‌ಸ್ಕ್ರೀನ್ ಸರ್ಚ್‌ನಿಂದ ಆಪ್‌ಗಳನ್ನ ಮರೆಮಾಡುವುದು ಹೇಗೆ?
ಹಂತ 1: ನೀವು ಐಫೋನ್‌ನಲ್ಲಿ ಆಪ್‌ಗಳನ್ನು ಮರೆಮಾಡಿದರೂ ಸಹ, ಅವುಗಳು ಸ್ಪಾಟ್‌ಲೈಟ್ ಅಥವಾ ಸಿರಿ ಹುಡುಕಾಟಗಳಲ್ಲಿ ಇನ್ನೂ ಕಾಣಿಸಿಕೊಳ್ಳಬಹುದು. ಸರ್ಚ್ ಫಲಿತಾಂಶಗಳಲ್ಲಿ ಅಪ್ಲಿಕೇಶನ್‌ಗಳು ಕಾಣಿಸದಂತೆ ಮಾಡಲು ನಿಮ್ಮ ಐಫೋನ್ ನಲ್ಲಿ ಸೆಟ್ಟಿಂಗ್‌ಗಳ ಆಪ್ ಓಪನ್ ಮಾಡಿ.

ಹಂತ 2: ಇದಾದ ನಂತರದಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ಸಿರಿ ಮತ್ತು ಸರ್ಚ್' ಆಯ್ಕೆಮಾಡಿ. ಬಳಿಕ ಸರ್ಚ್‌ನಲ್ಲಿ ಕಾಣಿಸಿಕೊಳ್ಳಲು ನೀವು ಬಯಸದ ಆಪ್ ಅನ್ನು ಪತ್ತೆ ಮಾಡಿ ನಂತರದಲ್ಲಿ ಶೋ ಆಪ್ ಇನ್ ಸರ್ಚ್ ಎಂಬ ಆಯ್ಕೆ ಕಾಣಿಸುತ್ತದೆ ಅದನ್ನು ಆಫ್ ಮಾಡಿ. ಇಷ್ಟು ಮಾಡಿದ್ರೆ ನೀವು ಇನ್ನಷ್ಟು ನಿರ್ಬಯವಾಗಿ ನಿಮ್ಮ ಫೋನ್ ಅನ್ನು ಬೇರೆಯವರ ಕೈಗೆ ಕೊಡಬಹುದು.


Click it and Unblock the Notifications








