Home
ಟೆಕ್ ನೌಕರಿ

ಉಚಿತ ಆನ್ಟಿ ವೈರಸ್‌ ಇನ್ಸ್ಟಾಲ್‌ ಮಾಡುವುದು ಹೇಗೆ?

By Super
ಉಚಿತ ಆನ್ಟಿ ವೈರಸ್‌ ಇನ್ಸ್ಟಾಲ್‌ ಮಾಡುವುದು ಹೇಗೆ?

ರೋಗಗಳ ವಿರುದ್ಧ ಹೇಗೆ ಔಷಧಿಗಳು ಹೇಗೆ ಹೋರಾಡುತ್ತವೋ ಅದೇ ರೀತಿ ನಿಮ್ಮ ಕಂಪ್ಯೂಟರ್‌ನಲ್ಲಿನ ವೈರ್ಸ್‌ಗಳ ವಿರುದ್ಧ ಆನ್ಟಿ ವೈರಸ್‌ ಹೋರಾಡುತ್ತದೆ. ಅದಕ್ಕಾಗಿಯೇ ನಿಮ್ಮ ಕಂಪ್ಯೂಟರ್‌ನಲ್ಲಿ

ಆನ್ಟಿ ವೈರಸ್‌ ಇನ್ಸ್ಟಾಲ್‌ ಮಾಡುವುದು ಅತ್ಯಗತ್ಯವಾಗಿದೆ. ಆದರೆ ಮಾರುಕಟ್ಟೆಯಲ್ಲಿನ ದುಬಾರಿ ಆನ್ಟಿ ವೈರಸ್‌ ಖರೀದಿಸಲು ಸಾಧ್ಯವಾಗುತ್ತಿಲ್ಲವೆ? ಅಂದಹಾಗೆ ಈ ಕುರಿತು ನೀವು ಹೆಚ್ಚು ಚಿಂತೆ ಪಡುವ ಅಗತ್ಯವೇ ಇಲ್ಲ ಏಕೆಂದರೆ ಇಂದು ಆನ್‌ಲೈನ್‌ನಲ್ಲಿ ನೂರಾರು ಆನ್ಟಿ ವೈರಸ್‌ಗಳು ಲಭ್ಯವಿದ್ದು ಅದೂ ಕೂಡಾ ಸಂಪೂರ್ಣ ಉಚಿತವಾಗಿ ನಿಮ್ಮ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ಗೆ ಇನ್ಸ್ಟಾಲ್‌ ಮಾಡಿಕೊಳ್ಳ ಬಹುದಾಗಿದೆ.

ಆದರೆ ಉಚಿತ ಆನ್ಟಿ ವೈರಸ್‌ ಹೇಗೆ ಡೌನ್ಲೋಡ್‌ ಮಾಡಿಕೊಳ್ಳುವುದು ಎಂದು ಆಲೋಚಿಸುತ್ತಿದ್ದೀರಾ? ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಉಚಿತವಾಗಿ ಕಂಪಯೂಟರ್‌ಗೆ

ಆನ್ಟಿ ವೈರಸ್‌ ಡೌನ್ಲೋಡ್‌ ಮಾಡಿಕೊಳ್ಳುವುದರ ಕುರಿತಾಗಿ ಸರಳ ವಿಧಾನವನ್ನು ತಂದಿದೆ. ಈ ಕೆಳಗೆ ನೀಡಲಾಗಿರುವ ವಿಧಾನವನ್ನು ಅನುಸರಿಸುವ ಮೂಲಕ ನೀವು ನಿಮ್ಮ ಕಂಪ್ಯೂಟರ್‌ನಲ್ಲಿ ಆನ್ಟಿ ವೈರಸ್‌ ಇನ್ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

ಇನ್ಸ್ಟಾಲ್‌ ಮಾಡುವ ವಿಧಾನ

  • ಮೊದಲಿಗೆ ನೀವು ಯಾವ ಆನ್ಟಿ ವೈರಸ್‌ ಇನ್ಸಟಾಲ್‌ ಮಾಡಬೇಕೆಂದಿದ್ದೀರಿ ಅದನ್ನು ಮೊದಲಿಗೆ ಡೌನ್ಲೋಡ್‌ ಮಾಡಿಕೊಳ್ಳಿ.

  • ಎಲ್ಲಿ ಆನ್ಟಿ ವೈರಸ್‌ ಇನ್ಸಟಾಲ್‌ ಮಾಡಿದ್ದೀರೋ ಅಲ್ಲಿರುವ ಐಕಾನ್‌ ಮೇಲೆ ರೈಟ್‌ ಕೀ ಅಂದರೆ ಮೌಸ್‌ನ ಬಲ ಕೀ ಅನ್ನು ಕ್ಲಿಕ್‌ ಮಾಡಿ.

  • ಕ್ಲಿಕ್‌ ಮಾಡಿದ ಕೂಡಲೇ (Run as) ಆಪ್ಷನ್‌ ಕಾಣಿಸಿಕೊಳ್ಳುತ್ತದೆ ಅದನ್ನು ಕ್ಲಿಕ್‌ ಮಾಡಿ.

  • ರನ್‌ ಆಪ್ಷನ್‌ ಮೇಲೆ ಕ್ಲಿಕ್‌ ಮಾಡುತ್ತಿದ್ದಂತೆಯೇ ನಿಮ್ಮ ಕಂಪ್ಯೂಟರ್‌ಗೆ ಆನ್ಟಿ ವೈರಸ್‌ ಇನ್ಸ್ಟಾಲ್‌ ಆಗಲು ಶುರುವಾಗುರತ್ತದೆ.

  • ಇನ್ಸ್ಟಾಲ್‌ಗೂ ಮುನ್ನ ಆನ್ಟಿ ವೈರಸ್‌ನಲ್ಲಿ ಕಸ್ಟಂ ಹಾಗೂ ಮ್ಯಾನುಯೆಲ್‌ ಆಪ್ಷನ್‌ ಕಾಣಿಸಿಕೊಳ್ಳುತ್ತದೆ. ಅಂದರೆ ನಿಮಗೆ ಬೇಕಾದದನ್ನು ನೀವೇ ಇನ್ಸ್ಟಾಲ್‌ ಮಾಡಿಕೊಳ್ಳ ಬಹುದಾಗಿದೆ ಅಥವಾ ಮ್ಯಾನುಯೆಲ್‌ ಆಪ್ಷನ್‌ ಆಯ್ಕೆ ಮಾಡಿಕೊಂಡಲ್ಲಿ ಆನ್ಟಿ ವೈರಸ್‌ ತನಗೆ ಬೇಕಾದ ಫೈಲ್‌ಗಳನ್ನು ತಾನಾಗಿಯೇ ಆಯ್ಕೆ ಮಾಡಿಕೊಳ್ಳುತ್ತದೆ.

  • ಆನ್ಟಿ ವೈರಸ್‌ ಇನ್ಸ್ಟಾಲ್‌ ಆದಮೇಲೆ ನಿಮ್ಮ ಕಂಪ್ಯೂಟರ್‌ನ ಪರದೆಯ ಮೇಲೆ ಆನ್ಟಿ ವೈರಸ್‌ನ ಐಕಾನ್‌ ಕಾಣಿಸಿಕೊಳ್ಳುತ್ತದೆ ಅದನ್ನು ಕ್ಲಿಕ್‌ ಮಾಡಿ.

  • ಐಕಾನ್‌ ಮೇಲೆ ಕ್ಲಿಕ್‌ ಮಾಡುತ್ತಿದ್ದಂತೆ ಆನ್ಟಿ ವೈರಸ್‌ನ ಕಂಟ್ರೋಲ್‌ ಪ್ಯಾನೆಲ್‌ ತೆರೆದುಕೊಳ್ಳುತ್ತದೆ.

  • ಈಗ ನಿಮ್ಮ ಆನ್ಟಿ ವೈರಸ್‌ ಆಕ್ಟಿವೇಟ್‌ ಮಾಡಬೇಕಾಗುತ್ತದೆ ಇದಕ್ಕಾಗಿ ನಿಮ್ಮ ಕಂಪ್ಯೂಟರ್‌ ಆಥವಾ ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್‌ ಕನೆಕ್ಷನ್ ಹೊಂದಿರುವುದು ಅತ್ಯವಶ್ಯಕವಾಗಿದೆ. ಒಂದುಬಾರಿ ಆನ್ಟಿ ವೈರಸ್‌ ನಿಮ್ಮ ಲಕಂಪ್ಯೂಟರ್‌ ಪ್ರವೇಶಿಸಿದ ಕೂಡಲೇ ನಿಮ್ ಕಂಪ್ಯೂಟರ್‌ ಸಂಪೂರ್ಣ ಸುರಖ್ಷಿತವಾಗು ಬಿಡುತ್ತದೆ.

  • ಮೊಬಲ ಬಾರಿಗೆ ಆನ್ಟಿ ವೈರಸ್‌ ಆಪ್‌ಡೇಟ್‌ ಆಗಲು ಕೊಂಚ್ಚ ಹೆಚ್ಚಿನ ಸಮಯ ತೆಗೆದುಕೊಲ್ಳುತ್ತದೆ ಆದ್ದರಿಂದ ತಾಳ್ಮೆ ಇಂದ ಕಾಯಿರಿ.

  • ಆನ್ಟಿ ವೈರಸ್‌ ಅಪ್ಡೇಟ್‌ ಆದ ಬಳಿಕ ಕಂಟ್ರೋಲ್‌ ಪ್ಯಾನೆಲ್‌ಗೆ ತೆರಳಿ ಪರೀಕ್ಷಿಸಿ ರೆಡ್‌ ಬದಲಾಗಿ ಗ್ರೀನ್‌ ಬಣ್ಣದ ಐಕಾನ್ ಕಾಣಿಸಿಕೊಳ್ಳುತ್ತದೆ.

ಆನ್‌ಲೈನ್‌ನಲ್ಲಿನ ಉಚಿತ ಆನ್ಟಿ ವೈರಸ್‌ಗಳು

1. ಕೊಮೊಡೊ ಇಂಟರ್‌ನೆಟ್‌ ಸೆಕ್ಯುರಿಟಿ ಪ್ರೀಮಿಯಂ ಆನ್ಟಿ ವೈರಸ್‌.

2. ಪಾಂಡಾ ಕ್ಲೌಡ್‌ ಆನ್ಟಿ ವೈರಸ್‌.

3. ಮೈಕ್ರೋಸಾಫ್ಟ್‌ ಸೆಕ್ಯೂರಿಟಿ ಎಸೆನ್ಷಿಯಲ್‌ ಆನ್ಟಿ ವೈರಸ್‌.

4. ಅವೀರಾ ಆನ್ಟಿವೀರ್‌ ಪರ್ಸನಲ್‌ ಆನ್ಟಿ ವೈರಸ್‌.

5. ಅವಾಸ್ತ್‌ ಉಚಿತ ಆನ್ಟಿ ವೈರಸ್‌.

ಟಾಪ್‌ 5 ಮೊಬೈಲ್‌ ಆನ್ಟಿವೈರಸ್‌ ಫ್ರೀ ಡೌನ್ಲೋಡ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+