Home
ಟೆಕ್ ನೌಕರಿ

ಆಪಲ್‌ IOS 14 ಇನ್‌ಸ್ಟಾಲ್ ಮಾಡುವುದು ಹೇಗೆ?

ಜನಪ್ರಿಯ ಆಪಲ್ ಸಂಸ್ಥೆಯು ಇತ್ತೀಚಿಗಷ್ಟೆ ಐಫೋನ್ ಮತ್ತು ಐಪ್ಯಾಡ್‌ಗೆ ಬೆಂಬಲಿಸುವ ಐಒಎಸ್ 14 ಅಪರೇಟಿಂಗ್ ಸಿಸ್ಟಮ್ ಅನಾವರಣ ಮಾಡಿದೆ. ಆಪಲ್‌ನ ಹೊಸ ಐಒಎಸ್ 14 ಮತ್ತು ಐಪ್ಯಾಡ್‌ ಓಎಸ್‌ 14 ಗಳನ್ನು ಮೊದಲು ಬೀಟಾ ಆವೃತ್ತಿಯ ಬಳಕೆದಾರರಿಗೆ ಮಾತ್ರ ಲಭ್ಯವಾಗಿಸಿತ್ತು. ಆದರೆ ಇದೀಗ ಇತರೆ ಐಫೋನ್ ಡಿವೈಸ್‌ ಬಳಕೆದಾರರಿಗೂ ಐಒಎಸ್ 14 ಮತ್ತು ಐಪ್ಯಾಡ್‌ ಓಎಸ್‌ 14 ಲಭ್ಯ ಮಾಡಿದೆ.

ಐಓಎಸ್‌ 14

ಐಫೋನ್ ಬಳಕೆದಾರರು ಹೊಸ ಐಓಎಸ್‌ 14 ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಕೆಲವು ಸಂಗತಿಗಳನ್ನು ತಿಳಿಯಲೇಬೆಕು. ಐಓಎಸ್‌ 14 ಐಫೋನ್ 6 ಎಸ್ ಮತ್ತು ನಂತರದ ಐಫೋನ್‌ಗಳಿಗೆ ಲಭ್ಯವಿರುತ್ತದೆ ಎಂಬುದನ್ನು ನೀವು ಗಮನಿಸಬೇಕು ಇನ್ನು ಐಪ್ಯಾಡ್‌ ಓಎಸ್ 14 ಐಪ್ಯಾಡ್ ಏರ್ 2 ಮತ್ತು ನಂತರ ಎಲ್ಲಾ ಐಪ್ಯಾಡ್ ಪ್ರೊ ಮಾದರಿಗಳು, ಐಪ್ಯಾಡ್ 5 ನೇ ತಲೆಮಾರಿನ ಮತ್ತು ನಂತರದ ಡಿವೈಸ್‌ಗಳಿಗೆ ಬೆಂಬಲಿಸುತ್ತದೆ. ಮತ್ತು ಐಪ್ಯಾಡ್ ಮಿನಿ 4 ಮತ್ತು ನಂತರದ ಡಿವೈಸ್‌ಗಳು ಸಫೋರ್ಟ್ ಮಾಡುತ್ತವೆ. ಹಾಗಾದರೇ ಐಓಎಸ್‌ 14 ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡೋಣ.

ಐಓಎಸ್‌ 14 ಡೌನ್‌ಲೋಡ್ ಮಾಡಲು ಈ ಕ್ರಮ ಅನುಸರಿಸಿ

ಐಓಎಸ್‌ 14 ಡೌನ್‌ಲೋಡ್ ಮಾಡಲು ಈ ಕ್ರಮ ಅನುಸರಿಸಿ

ಹಂತ 1: ನಿಮ್ಮ ಐಫೋನ್‌ನಲ್ಲಿ ಸಫಾರಿ ತೆರೆಯಿರಿ ಮತ್ತು ಆಪಲ್‌ನ ಬೀಟಾ ಪ್ರೋಗ್ರಾಂ ಪುಟಕ್ಕೆ ಭೇಟಿ ನೀಡಿ

ಹಂತ 2: ಸೈನ್ ಅಪ್ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಆಪಲ್ ಐಡಿ ಬಳಸಿ ಸೈನ್ ಇನ್ ಮಾಡಿ ಮತ್ತು ಕೇಳಿದಾಗ ಬೀಟಾ ಕಾರ್ಯಕ್ರಮಗಳ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

ಸಾಧನ

ಹಂತ 3: ನೀವು ಸಾಧನದ ಡೇಟಾವನ್ನು ಬ್ಯಾಕಪ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ, ಈಗ "ಪ್ರೊಫೈಲ್ ಡೌನ್‌ಲೋಡ್" ಅನ್ನು ಟ್ಯಾಪ್ ಮಾಡಿ ಮತ್ತು ಕೇಳಿದಂತೆ ಕಾರ್ಯವಿಧಾನವನ್ನು ಅನುಸರಿಸಿ.

ಹಂತ 4: ಸೆಟ್ಟಿಂಗ್‌ಗಳು> ಸಾಮಾನ್ಯ> ಸಾಫ್ಟ್‌ವೇರ್ ನವೀಕರಣಕ್ಕೆ ಹೋಗಿ ಮತ್ತು ಬೀಟಾ ಪ್ರೊಫೈಲ್ ಡೌನ್‌ಲೋಡ್ ಮಾಡಿ.
ಐಓಎಸ್‌ 14 ನಲ್ಲಿರುವ ನೂತನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಬದಲಾದ ಹೋಮ್ ಸ್ಕ್ರೀನ್

ಬದಲಾದ ಹೋಮ್ ಸ್ಕ್ರೀನ್

ಆಪಲ್ ಸಂಸ್ಥೆಯ ಹೊಸ ಐಓಎಸ್ 14 ಐಫೋನ್‌ಗಳ ಹೋಮ್ ಸ್ಕ್ರೀನ್‌ ಲುಕ್ ಅನ್ನು ಬದಲು ಮಾಡಿದೆ. widgets ಗಳ ಗಾತ್ರ ಬದಲಾವಣೆಗೆ ಅವಕಾಶ ಇದೆ. ಹಾಗೂ widgets ಪಿನ್ ಮಾಡುವ ಆಯ್ಕೆಯು ಸೇರಿದೆ.

ಆಪ್ ಲೈಬ್ರರಿ

ಆಪ್ ಲೈಬ್ರರಿ

ಫೋನಿನಲ್ಲಿ ಒಂದೇ ರೀತಿಯ ಅಪ್ಲಿಕೇಶನ್‌ಗಳ ಗುಂಪುಗಳಂತೆ ವರ್ತಿಸುವ ಅಪ್ಲಿಕೇಶನ್ ಲೈಬ್ರರಿ ಅನ್ನು ಈ ಓಎಸ್ ಒದಗಿಸಿದೆ. ಸಲಹೆಗಳು ಹಾಗೂ ಇತ್ತೀಚಿಗೆ ಸೇರಿಸಲಾದ ಆಪ್ಸ್‌ಗಳ ಸಂಗ್ರಹಕ್ಕೆ AI ಬಳಕೆ ಮಾಡಲಾಗುತ್ತದೆ. ಆಪ್ಸ್‌ ಹುಡುಕಾಟ ಪ್ರಕ್ರಿಯೆಯು ಸುಲಭವಾಗಿರಲಿದೆ.

ಪಿಚ್ಚರ್ ಟು ಪಿಚ್ಚರ್ (pip)

ಪಿಚ್ಚರ್ ಟು ಪಿಚ್ಚರ್ (pip)

ಸದ್ಯ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈಗ pip ಫೀಚರ್‌ ಹೆಚ್ಚು ಬಳಕೆಯಲ್ಲಿದೆ. ವಿಡಿಯೊ ಲಿಂಕ್‌ಗಳನ್ನು ತೆರೆಯಲು ಪ್ರತ್ಯೇಕ ಆಪ್ ತೆರೆಯದೆ ಅಲ್ಲಿಯೇ ವಿಡಿಯೊ ಪ್ಲೇ ಆಗುವ ಅವಕಾಶವನ್ನು ಈ ವ್ಯವಸ್ಥೆ ಒಳಗೊಂಡಿರುತ್ತದೆ. ಲಿಂಕ್ ಇರುವ ಆಪ್‌ನಲ್ಲಿಯೇ ಸಣ್ಣ ವಿಂಡೊದಲ್ಲಿ ವಿಡಿಯೊ ವೀಕ್ಷಿಸಬಹುದು.

ಟ್ರಾನ್ಸಲೇಟ್ ಆಪ್

ಟ್ರಾನ್ಸಲೇಟ್ ಆಪ್

ಆಪಲ್ IOS 14 ಟ್ರಾನ್ಸ್‌ಲೇಟ್ ಆಪ್ ಸೌಲಭ್ಯವನ್ನು ಒಳಗೊಂಡಿದ್ದು, ಆಫ್‌ಲೈನ್‌ನಲ್ಲಿರುವಾಗಲೂ ಸುಲಭವಾಗಿ ಟ್ರಾನ್ಸ್‌ಲೇಟ್ ಮಾಡುವ ಅನುಕೂಲವನ್ನು ಒದಗಿಸಲಿದೆ. ಗೂಗಲ್ ಟ್ರಾನ್ಸ್‌ಲೇಟ್ ಹಾಗೂ ಮೈಕ್ರೋಸಾಫ್ಟ್‌ ಟ್ರಾನ್ಸ್‌ಲೇಟ್ ಮಾದರಿಯಂತೆ ಆಪಲ್ ಕ್ವಿಕ್ ಟ್ರಾನ್ಸ್‌ಲೇಟ್ ಇದೆ.

imessage ಆಪ್

imessage ಆಪ್

ಆಪಲ್ IOS 14 ಸುಧಾರಿತ ಮತ್ತು ಪೂರ್ಣ ಅಪ್‌ಡೇಟ್‌ನೊಂದಿಗೆ imessage ಆಪ್‌ ಅನ್ನು ಹೊಂದಿದೆ. ಈ ಆಪ್‌ನಲ್ಲಿ ಅಪ್‌ಡೇಟ್ ಮೆಮೋಜಿ, ಗ್ರೂಪ್ ಸಂಭಾಷಣೆಯಲ್ಲಿ ಬದಲಾವಣೆ, ಡೈನಾಮಿಕ್ ಲೊಗೊ ಆಯ್ಕೆಗಳು ಸೇರಿವೆ.

ಕಾರ ಪ್ಲೇ

ಕಾರ ಪ್ಲೇ

ಆಪಲ್ IOS 14 ಓಎಸ್ ಡಿಜಿಟಲ್ ಕಾರ್ ಕೀ ಯನ್ನು ಹೊಸದಾಗಿ ಪರಿಚಯಿಸಿದೆ. ಈ ಮೂಲಕ ಕಾರ ಪ್ಲೇ ಗೆ ಸಾಕಷ್ಟು ಸುಧಾರಣೆಗಳನ್ನು ಮಾಡಿದೆ. NFC ತಂತ್ರಜ್ಞಾನದೊಂದಿಗೆ ಐಫೋನ್ ಬಳಸಿ ಕಾರ ಲಾಕ್ ಹಾಗೂ ಅನ್‌ಲಾಕ್ ಮಾಡಬಹುದಾಗಿದೆ.

Best Mobiles in India

English summary
Apple has released the first beta builds of iOS 14 and iPadOS 14 for the public.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+