ಸ್ಮಾರ್ಟ್‌ಫೋನ್‌ನ ಸುರಕ್ಷಾ ಕವಚಗಳಾಗಿರುವ 10 ಸಲಹೆಗಳು

By Shwetha
|

ಸ್ಮಾರ್ಟ್‌ಫೋನ್ ಅನ್ನು ಈ ಕಾಲದಲ್ಲಿ ಖರೀದಿಸುವುದಕ್ಕಿಂತಲೂ ಅದನ್ನು ಜೋಪಾನವಾಗಿ ಇರಿಸುವುದು ಅತಿ ಮುಖ್ಯವಾಗಿರುತ್ತದೆ. ಹೌದು ನಿಮ್ಮ ಸ್ಮಾರ್ಟ್‌ಫೋನ್ ನಿಮ್ಮನ್ನು ಅಪಾಯಕ್ಕೆ ಸಿಲುಕಿಸುವ ಪ್ರಸಂಗವೇ ಅಧಿಕವಾಗಿರುವುದರಿಂದ ನಿಮ್ಮ ಫೋನ್‌ನ ಜಾಗರೂಕತೆಯನ್ನು ನೀವು ಮಾಡಲೇಬೇಕು.

ಓದಿರಿ: ಉಚಿತ ವೈಫೈ ಹೊಂದಿರುವ ಟಾಪ್ 20 ದೇಶಗಳು

ಇನ್ನು ಇದನ್ನೇ ಚಿಂತೆಮಾಡಿಕೊಂಡು ಕೂರಬೇಡಿ. ಏಕೆಂದರೆ ನಿಮ್ಮ ಫೋನ್‌ನಲ್ಲಿ ಒದಗುವ ತೊಂದರೆಗಳನ್ನು ನಿವಾರಿಸಲೆಂದೇ ಇಂದಿನ ಲೇಖನದಲ್ಲಿ ಕೆಲವೊಂದು ಅತಿ ಮುಖ್ಯವಾದ ಅಂಶಗಳ ಕುರಿತು ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ. ನಿಮ್ಮ ಫೋನ್‌ನ ಭದ್ರತೆಯನ್ನು ಈ ಅಂಶಗಳ ಕಾಪಾಡುವುದರ ಜೊತೆಗೆ ಅತಿ ಮುಖ್ಯ ಅಂಶಗಳು ಹೊರಹೋಗದಂತೆ ಜಾಗರೂಕತೆಯನ್ನು ವಹಿಸುತ್ತದೆ.

"http" ಬದಲಿಗೆ "https" ಗೆ ಮಹತ್ವ ನೀಡಿ

ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಏನಾದರೂ ಬ್ರೌಸ್ ಮಾಡುತ್ತಿದ್ದಲ್ಲಿ ಇಲ್ಲವೇ ಶಾಪಿಂಗ್ ಮಾಡುತ್ತಿದ್ದಲ್ಲಿ ಯಾವಾಗಲೂ https ಗೆ ಮಹತ್ವ ನೀಡಿ.

ಫೋನ್‌ಗೆ ಪಾಸ್‌ವರ್ಡ್ ಲಗತ್ತಿಸಿ

ಫೋನ್‌ಗೆ ಪಾಸ್‌ವರ್ಡ್ ಲಗತ್ತಿಸಿ

ಆಗಾಗ್ಗೆ ಪಾಸ್‌ವರ್ಡ್ ಬಳಸಿ ಫೋನ್ ಅನ್ನು ತೆರೆಯುವುದು ಕಷ್ಟದಾಯಕ ಎಂದು ನಿಮಗೆ ಅನ್ನಿಸಬಹುದು. ಆದರೆ ಪಾಸ್‌ವರ್ಡ್ ಇಲ್ಲದೆ ಫೋನ್‌ನಿಂದ ಉಂಟಾಗುವ ಅಪಾಯಗಳಿಂದ ಇದು ಉತ್ತಮ ಅಲ್ಲವೇ. ಆದ್ದರಿಂದ ಪಾಸ್‌ವರ್ಡ್ ಅನ್ನು ನಿಮ್ಮ ಫೋನ್‌ಗೆ ಅಳವಡಿಸುವುದು ಅತೀ ಮುಖ್ಯವಾದುದು.

"ಫೈಂಡ್ ಯುವರ್ ಫೋನ್ ಟೂಲ್" ಅಳವಡಿಸಿ

ಫೈಂಡ್ ಮೈ ಫೋನ್ ಮೊದಲಾದ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ಗಳಿದ್ದು ನಿಮ್ಮ ಫೋನ್ ಕಳೆದುಹೋದಲಿ ಈ ಪರಿಕರವನ್ನು ಬಳಸಿ ಸುಲಭವಾಗಿ ನಿಮ್ಮ ಫೋನ್ ಅನ್ನು ಕಂಡುಕೊಳ್ಳಬಹುದು.

ಸ್ವಯಂಚಾಲಿತ ಸಂಪರ್ಕಗಳಿಗೆ ಅನುಮತಿ ನೀಡದಿರಿ

ಸ್ವಯಂಚಾಲಿತ ಸಂಪರ್ಕಗಳಿಗೆ ಅನುಮತಿ ನೀಡದಿರಿ

ಲಭ್ಯವಿರುವ ವೈಫೈ ಮತ್ತು ಬ್ಲ್ಯೂಟೂತ್ ಡಿವೈಸ್‌ಗಳಿಗೆ ನಿಮ್ಮ ಫೋನ್ ಸ್ವಯಂಚಾಲಿತ ಸಂಪರ್ಕವನ್ನು ಪಡೆದುಕೊಳ್ಳುವಂತಿರಬಹುದು. ಈ ರೀತಿ ಇದ್ದಲ್ಲಿ ಇದನ್ನು ಶೀಘ್ರದಲ್ಲೇ ನಿಲ್ಲಿಸಿ.

ಅಪರಿಚಿತರ ಕೋರಿಕೆ ಮನ್ನಿಸದಿರಿ

ಅಪರಿಚಿತರ ಕೋರಿಕೆ ಮನ್ನಿಸದಿರಿ

ಅಪರಿಚಿತರಿಂದ ನಿಮ್ಮ ಫೋನ್‌ಗೆ ಸಾಮಾಜಿಕ ತಾಣದ ಕೋರಿಕೆ ಬಂದಲ್ಲಿ ಅದನ್ನು ಸಾರಾಸಗಟಾಗಿ ತಿರಸ್ಕರಿಸಿ. ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ ಎಂಬ ವಿಷಯವನ್ನು ಮರೆಯದಿರಿ.

ಜಾಗೃತಾ ಖರೀದಿದಾರರಾಗಿರಿ

ಜಾಗೃತಾ ಖರೀದಿದಾರರಾಗಿರಿ

ಆನ್‌ಲೈನ್ ಅಥವಾ ಫೋನ್‌ನಲ್ಲಿ ಶಾಪಿಂಗ್ ಮಾಡುವುದು ಕೆಟ್ಟದ್ದೇನು ಅಲ್ಲ ಆದರೆ ಅಜ್ಞಾತ ತಾಣಗಳಲ್ಲಿ ಶಾಪಿಂಗ್ ಮಾಡುವಾಗ ಹೆಚ್ಚಿನ ಕಾಳಜಿ ವಹಿಸಿ.

ಅಪ್ಲಿಕೇಶನ್‌ಗಳಲ್ಲಿ ಗೌಪ್ಯತಾ ಸೆಟ್ಟಿಂಗ್ ಪರಿಶೀಲಿಸಿ

ಅಪ್ಲಿಕೇಶನ್‌ಗಳಲ್ಲಿ ಗೌಪ್ಯತಾ ಸೆಟ್ಟಿಂಗ್ ಪರಿಶೀಲಿಸಿ

ಕೆಲವು ಅಪ್ಲಿಕೇಶನ್‌ಗಳು ನಿಮ್ಮಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತವೆ. ಅಂದರೆ ನಿಮ್ಮ ಸ್ಥಾನ ಮತ್ತು ಪಾಸ್‌ವರ್ಡ್ ಪ್ರವೇಶ ಇತ್ಯಾದಿ. ಇಂತಹ ಮಾಹಿತಿಯನ್ನು ಕೊಡದಿರಿ.

ಪ್ಯಾಕೇಜ್ ಟ್ರ್ಯಾಕಿಂಗ್ ಮೋಸದ ಬಗ್ಗೆ ಅರಿವಿರಲಿ

ಪ್ಯಾಕೇಜ್ ಟ್ರ್ಯಾಕಿಂಗ್ ಮೋಸದ ಬಗ್ಗೆ ಅರಿವಿರಲಿ

ಆನ್‌ಲೈನ್‌ನಲ್ಲಿ ಹೆಚ್ಚಿನ ಪ್ಯಾಕೇಜ್‌ಗಳನ್ನು ನೀವು ಆರ್ಡರ್ ಮಾಡುತ್ತೀರಿ ಎಂದಾದಲ್ಲಿ, ಇದರ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಪ್ಯಾಕೇಜ್ ಬಂದಿರುವ ಇಮೇಲ್ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ.

ಮೋಸದ ವೈಫೈ ನೆಟ್‌ವರ್ಕ್ ಬಗ್ಗೆ ಅರಿವಿರಲಿ

ಮೋಸದ ವೈಫೈ ನೆಟ್‌ವರ್ಕ್ ಬಗ್ಗೆ ಅರಿವಿರಲಿ

ಮೋಸದ ವೈಫೈ ಕುರಿತು ನೀವು ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಉಚಿತ ವೈಫೈ ಸೇವೆಯನ್ನು ಅವರು ನಿಮಗೆ ಒದಗಿಸುತ್ತಿದ್ದಾರೆ ಎಂದಾದಲ್ಲಿ ಮೋಸದ ಕುರಿತು ಹೆಚ್ಚಿನ ಅಂದಾಜಿರಲಿ.

ಉತ್ತಮ ಪಾಸ್‌ವರ್ಡ್‌ಗಳನ್ನು ಬಳಸಿ

ಉತ್ತಮ ಪಾಸ್‌ವರ್ಡ್‌ಗಳನ್ನು ಬಳಸಿ

ಹೆಚ್ಚಿನ ಸೈಟ್‌ಗಳಿಗೆ ಒಂದೇ ಪಾಸ್‌ವರ್ಡ್ ಬಳಸಿ ಪ್ರವೇಶ ಪಡೆಯುವುದು ಸೂಕ್ತವಲ್ಲ. ನಿಮ್ಮ ಹುಟ್ಟಿದ ದಿನ ಅಥವಾ ತಾಯಿಯ ಹೆಸರು ನಿಮ್ಮ ಪಾಸ್‌ವರ್ಡ್ ಆಗಿರಲಿ.

Best Mobiles in India

English summary
If you’re one of the 58 percent of Americans who own a smartphone, then you probably use it every day: In addition to making calls and sending texts, you might use it for directions, to post to social media, browse the Internet and shop. but you should consider following these 10 steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X