Home
ಟೆಕ್ ನೌಕರಿ

ಒಂದು ರೂಪಾಯಿ ಖರ್ಚಿಲ್ಲದೆ ನಿಮ್ಮ ಹಳೆಯ ಫೋನ್‌ ಅನ್ನು ಹೊಸತರಂತೆ ಮಾಡಿ! ಹೇಗೆ ಅಂತೀರಾ?

ಸ್ಮಾರ್ಟ್‌ಫೋನ್‌ಗಳು(Smartphone) ಇಂದು ಅಗತ್ಯ ಹಾಗೂ ಅನಿವಾರ್ಯ ಡಿವೈಸ್‌ಗಳಾಗಿವೆ. ಅದರಲ್ಲೂ ಫೋನ್‌ ಅನ್ನು ಎಲ್ಲಾ ಕಡೆ ಬಳಕೆ ಮಾಡುವುದರಿಂದಾಗಿ ಅದು ಹೆಚ್ಚಿನ ಒತ್ತಡ ಅನುಭವಿಸಿ ಕಾರ್ಯಕ್ಷಮತೆ ಕಡಿಮೆ ಆಗುತ್ತದೆ. ಇದಕ್ಕಾಗಿ ನೀವು ಅಂಗಡಿಗಳಿಗೆ ಹೋಗಬೇಕಿಲ್ಲ, ಬದಲಾಗಿ ಒಂದು ರೂಪಾಯಿ ಸಹ ಖರ್ಚು ಮಾಡದೆ ನಿಮ್ಮ ಮನೆಯಲ್ಲೇ ನಿಮ್ಮ ಫೋನ್‌ ಅನ್ನು ಹೊಸತರಂತೆ ಮಾಡಿಕೊಳ್ಳಿ.

ಹೌದು, ಸ್ಮಾರ್ಟ್‌ಫೋನ್‌ಗಳಿಗೆ ಇಂತಿಷ್ಟೇ ಆಯಸ್ಸು ಎಂದು ನಿಗದಿ ಮಾಡಿಲ್ಲ. ಆದರೂ ಕೆಲವು ಫೋನ್‌ಗಳು ಒಂದು ವರ್ಷದ ಬಾಳಿಕೆ ಬರಬಹುದು ಇನ್ನೂ ಕೆಲವು ಫೋನ್‌ಗಳು ಹಲವು ವರ್ಷ ಬಾಳಿಕೆ ಬರಬಹುದು. ಈ ಬಾಳಿಕೆ ವಿಚಾರ ಬಳಕೆದಾರರ ಬಳಕೆಯ ಮೇಲೆ ಕೇಂದ್ರೀಕರಿಸಿರುತ್ತದೆ. ಅದರಂತೆ ನಿಮ್ಮ ಫೋನ್ ಅನ್ನು ಯಾವಾಗಲೂ ಹೊಸತರಂತೆ ಕಾಪಾಡಿಕೊಳ್ಳುವುದು ಹೇಗೆ ಹಾಗೂ ದೀರ್ಘಬಾಳಿಕೆ ಬರುವ ಹಾಗೆ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒಂದು ರೂಪಾಯಿ ಖರ್ಚಿಲ್ಲದೆ ನಿಮ್ಮ ಹಳೆಯ ಫೋನ್‌ ಅನ್ನು ಹೊಸತರಂತೆ ಮಾಡಿ!

ಹಳೆಯ ಫೋನ್‌ ಅನ್ನು ಹೊಸತರಂತೆ ಮಾಡಿ: ಪ್ರತಿ ದಿನವೂ ಒಂದಲ್ಲಾ ಒಂದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಲಾಂಚ್‌ ಆಗುತ್ತಲೇ ಇರುತ್ತದೆ. ಆದರೆ, ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಎಲ್ಲರೂ ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್‌ ಆಗಲು ಆಗುವುದಿಲ್ಲ. ಅದಾಗ್ಯೂ ಭಾರತದಲ್ಲಿ ಸೆಕೆಂಡ್‌ ಹ್ಯಾಂಡ್ ಫೋನ್‌ಗಳಿಗೂ ಭಾರೀ ಬೇಡಿಕೆ ಇದ್ದು, ಈ ಫೋನ್‌ಗಳನ್ನೂ ಕೊಳ್ಳಲಾರದ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಅವರು ಇರುವ ಫೋನ್ ಅನ್ನೇ ಹೊಸತರಂತೆ ಮಾಡಿಕೊಳ್ಳಬಹುದು. ಈ ಮೂಲಕ ಹಣ ಉಳಿತಾಯ ಮಾಡಬಹುದು.

ಫೋನ್‌ ಬೇಗ ಹಾಳಾಗಲು ಕಾರಣ ಏನು?: ಸಾಮಾನ್ಯವಾಗಿ ಫೋನ್‌ಗಳು ಹಾಳಾಗಲು ಹಲವು ಕಾರಣ ಇವೆ. ಆದರೆ, ಪ್ರಮುಖವಾಗಿ ಇತ್ತೀಚಿನ ಟ್ರೆಂಡ್‌ ಆಗಿರುವ ಹೆಚ್ಚಿನ ಸ್ಟೋರೇಜ್‌ ಆಯ್ಕೆ ಸಹ ಫೋನ್‌ಗಳ ಜೀವಿತಾವಧಿ ಕಡಿಮೆ ಮಾಡುತ್ತಿವೆ ಎನ್ನಲಾಗಿದೆ. ಆರಂಭದಲ್ಲಿ 64 GB ಯೇ ಹೆಚ್ಚು ಎನ್ನಲಾಗಿತ್ತು. ಆದರೆ, ಈಗ 128GB ರಿಂದ 256GB ವರೆಗೂ ಸಾಮರ್ಥ್ಯ ಹೊಂದಿದೆ. ಕೆಲವು ಫೋನ್‌ಗಳು 1TB ಸಾಮರ್ಥ್ಯ ಪಡೆದುಕೊಂಡಿವೆ.

ಸ್ಮಾರ್ಟ್ ಫೋನ್ ಗಳಲ್ಲಿ ಸ್ಟೋರೇಜ್ ಹೆಚ್ಚಾದಂತೆ ಅವುಗಳಲ್ಲಿ ಸಮಸ್ಯೆಗಳೂ ಸಹ ಹೆಚ್ಚಾಗುತ್ತವೆ ಎನ್ನಲಾಗಿದೆ. ಯಾಕೆಂದರೆ ಸ್ಟೋರೇಜ್ ಹೆಚ್ಚಾಗಿದೆ ಎಂದು ಸಿಕ್ಕ ಸಿಕ್ಕ ಫೈಲ್‌ಗಳನ್ನು ಡೌನ್‌ಲೋಡ್‌ ಮಾಡುತ್ತೇವೆ. ಅದರಲ್ಲೂ ಸಾಮಾನ್ಯವಾಗಿ ಫೋನ್‌ನಲ್ಲಿ ಕಾಡುವ ಮುಖ್ಯ ಸಮಸ್ಯೆ ಎಂದರೆ ನಿಧಾನವಾಗಿ ಕಾರ್ಯನಿರ್ವಹಿಸುವುದು. ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಅನಗತ್ಯ ಆಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಬೇಕಿದೆ. ಜೊತೆಗೆ ಸ್ಮಾರ್ಟ್‌ಫೋನ್ ಮೆಮೊರಿಯಲ್ಲಿ ಸಂಗ್ರಹವಾಗಿರುವ ಅನಗತ್ಯ ಡೇಟಾವನ್ನು ಸಹ ಡಿಲೀಟ್‌ ಮಾಡಬೇಕು.

ಇದರೊಂದಿಗೆ ನಿಮ್ಮ ಸ್ಮಾರ್ಟ್‌ಫೋನ್ ಬಿಸಿಯಾಗದಂತೆ ನೋಡಿಕೊಳ್ಳಿ. ಅಂದರೆ ನೀವು ಹೆಚ್ಚು ಬಳಕೆ ಮಾಡಿದಷ್ಟು ಹಾಗೂ ಅನಗತ್ಯವಾಗಿ ಚಾರ್ಜಿಂಗ್‌ಗೆ ಇಟ್ಟಾಗ ಫೋನ್‌ಗಳು ಬಿಸಿ ಆಗುತ್ತವೆ. ನಮಗೆಲ್ಲಾ ಹೇಗೆ ವಿಶ್ರಾಂತಿ ಅವಶ್ಯಕತೆ ಇದೆಯೋ ಅದೇ ರೀತಿ ಫೋನ್‌ಗಳಿಗೂ ಸಹ ರೆಸ್ಟ್‌ ಬೇಕಿದೆ. ಆದರೆ, ನಾವು ವಿಶ್ರಾಂತಿ ಪಡೆಯಲು ಹೋದಾಗಲೆಲ್ಲಾ ಫೋನ್‌ ಅನ್ನು ಹೆಚ್ಚಾಗಿಯೇ ಬಳಕೆ ಮಾಡುತ್ತೇವೆ ಇದನ್ನು ನಿಯಂತ್ರಣ ಮಾಡಬೇಕು. ಅನಗತ್ಯ ಸಮಯದಲ್ಲಿ ಫೋನ್ ಅನ್ನು ಪವರ್-ಸೇವರ್ ಮೋಡ್‌ನಲ್ಲಿ ಇರಿಸಬೇಕು.

ಫೋನ್‌ನಲ್ಲಿ ನಾವೆಲ್ಲಾ ಮಾಡುವ ಮತ್ತೊಂದು ತಪ್ಪು ಎಂದರೆ ಅತಿಯಾದ ಬ್ರೈಟ್‌ನೆಸ್‌ ಬಳಕೆ. ಇತ್ತೀಚೆಗೆ ಲಾಂಚ್ ಆಗುತ್ತಿರುವ ಫೋನ್‌ಗಳು ಹೆಚ್ಚು ಬ್ರೈಟ್‌ನೆಟ್‌ ಆಯ್ಕೆ ಪಡೆಯುತ್ತವೆಯಾದರೂ ಅದನ್ನು ಬಳಕೆ ಮಾಡಲೇಬೇಕು ಅಂತೇನಿಲ್ಲ. ಅಗತ್ಯ ಎಂದಾಗ ಮಾತ್ರ ಬಳಕೆ ಮಾಡಿದರೆ ಉತ್ತಮ. ಎಲ್ಲಾ ಸಮಯದಲ್ಲೂ ಹೆಚ್ಚಿನ ಬ್ರೈಟ್‌ನೆಸ್‌ ಬಳಕೆ ಮಾಡುವುದರಿಂದ ಫೋನ್‌ ಹಾಗೂ ಫೋನ್‌ ಬ್ಯಾಟರಿ ಶೀಘ್ರವೇ ಹಾಳಾಗುತ್ತದೆ.

ಇದೆಲ್ಲದಕ್ಕಿಂತ ಮಿಗಿಲಾಗಿ ಕೆಲವರು ಇತರೆ ಸ್ಮಾರ್ಟ್‌ ಗ್ಯಾಜೆಟ್‌ ಬಳಕೆ ಮಾಡುವುದರಿಂದ ತ್ವರಿತ ಕನೆಕ್ಟಿವಿಟಿಗಾಗಿ ಬ್ಲೂಟೂತ್‌ ಹಾಗೂ ವೈ-ಫೈ ಅನ್ನು ಯಾವಾಗಲೂ ಆನ್‌ ಆಗಿಯೇ ಇಟ್ಟಿರುತ್ತಾರೆ. ಇವು ನಿಮ್ಮ ಫೋನ್‌ಗಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುವುದಲ್ಲದೆ ಈ ಮೂಲಕ ವೈರಸ್‌ ಅಥವಾ ಮಾಲ್‌ವೇರ್‌ ಈ ಮೂಲಕ ಎಂಟ್ರಿ ಕೊಟ್ಟು ನಿಮ್ಮ ಫೋನ್‌ಗೆ ಸಮಸ್ಯೆ ಉಂಟು ಮಾಡುತ್ತದೆ ಎಂಬುದು ತಿಳಿದಿರಲಿ.

ಒಂದು ರೂಪಾಯಿ ಖರ್ಚಿಲ್ಲದೆ ನಿಮ್ಮ ಹಳೆಯ ಫೋನ್‌ ಅನ್ನು ಹೊಸತರಂತೆ ಮಾಡಿ!

ಉಳಿದಂತೆ ಬ್ಯಾಟರಿಗೂ ಸಹ ಹೆಚ್ಚಿನ ಮಹತ್ವ ಕೊಡಬೇಕಾದದ್ದು ಪ್ರಮುಖ ಕೆಲಸ. ಅದಕ್ಕಾಗಿ ಲೊಕೇಶನ್ ಸರ್ವಿಸ್, ಬ್ಲೂಟೂತ್, ಮೊಬೈಲ್ ಡೇಟಾ, ಜಿಪಿಎಸ್ ನಂತಹ ಸೇವೆಗಳನ್ನು ಅನಗತ್ಯ ಎಂದಾಗ ಆಫ್‌ ಮಾಡಿ. ಜೊತೆಗೆ ಪವರ್ ಸೇವರ್ ಮೋಡ್‌ನಲ್ಲಿ ಇರಿಸಿ. ಇದರಿಂದ ಬ್ಯಾಟರಿ ಸಹ ದೀರ್ಘ ಬ್ಯಾಕಪ್‌ ನೀಡುತ್ತದೆ. ಅದೆಲ್ಲಕ್ಕೂ ಮಿಗಿಲಾಗಿ ಚಾರ್ಜ್ ಆಗುತ್ತಿರುವಾಗ ಫೋನ್ ಬಳಕೆ ಮಾಡಬೇಡಿ.

Best Mobiles in India

English summary
some Smartphone can last for a year and some phones can last for many years. This durability concept focuses on user usage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+