Home
ಟೆಕ್ ನೌಕರಿ

ತುಂಬಾ ಸುಲಭ..! ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡಲು ಹೀಗೆ ಮಾಡಿ.. ಇಲ್ಲಿವೆ ಟ್ರಿಕ್ಸ್

ಪ್ರಸ್ತುತ ಮೊಬೈಲ್ ಬಳಕೆ ಚಟವಾಗಿ ಮಾರ್ಪಟ್ಟಿದೆ. ಹಲವು ಪೋಷಕರು ದಿನವಿಡೀ ಸ್ಮಾರ್ಟ್‌ಫೋನ್‌ (Smartphones) ಬಳಕೆಯಲ್ಲಿ ನಿರತರಾಗಿರುತ್ತಾರೆ. ಕುಟುಂಬ ಮತ್ತು ಮಕ್ಕಳೊಂದಿಗೆ ಕೆಲಸ ಸಮಯವನ್ನು ಕಳೆಯುವ ಬದಲು, ಮೊಬೈಲ್ ಒಂದು ಅಭ್ಯಾಸವಾಗುತ್ತದೆ. ಇದನ್ನು ನೋಡಿ ಮಕ್ಕಳೂ (Child) ಸಹ ಫೋನ್‌ಗಳ ಕೆಟ್ಟ ಅಭ್ಯಾಸಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ಮೊಬೈಲ್ ಕೊಡುವುದು ದೊಡ್ಡ ಅಪಾಯವೇ ಸರಿ. ಮಕ್ಕಳಿಗೆ ಮೊಬೈಲ್ ಫೋನ್ ನೀಡುವುದರಿಂದ ಹಲವು ಸಮಸ್ಯೆಗಳು ಉಂಟಾಗುತ್ತವೆ. ಕೆಲವೊಮ್ಮೆ ಮಕ್ಕಳು ರಹಸ್ಯವಾಗಿ ಫೋನ್ ಬಳಸುತ್ತಾರೆ. ತಜ್ಞರು, ಮಕ್ಕಳಲ್ಲಿ ಮೊಬೈಲ್ ಫೋನ್ ಬಳಸುವ ಅಭ್ಯಾಸ ಹೋಗಲಾಡಿಸಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಹೌದು, ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿಯೂ (Childrens) ಸಹ ಮೊಬೈಲ್ (Mobile) ಚಟವು ತೀವ್ರವಾಗಿ ಹೆಚ್ಚುತ್ತಿದೆ. ನಿಮ್ಮ ಮಕ್ಕಳು ಕೂಡ ಫೋನ್‌ಗಳಿಗೆ ವ್ಯಸನಿಗಳಾಗಿದ್ದರೆ, ಅವರನ್ನು ಇದರಿಂದ ಹೊಸ ತರಲು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಮಕ್ಕಳ ಮೊಬೈಲ್ ಚಟವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಮಕ್ಕಳು ಒಮ್ಮೆ ಫೋನ್‌ಗಳಿಗೆ ಒಗ್ಗಿಕೊಂಡರೆ, ಅವುಗಳಿಂದ ದೂರ ಮಾಡುವುದು ತುಂಬಾ ಕಷ್ಟ. ಆದರೂ, ಅನೇಕ ಪೋಷಕರು ತಮ್ಮ ಮಗು ದಿನವಿಡೀ ಫೋನ್‌ನಲ್ಲಿ ಬ್ಯುಸಿಯಾಗಿರುತ್ತದೆ ಎಂದು ಹೇಳುತ್ತಾರೆ. ಕೆಲವು ಪೋಷಕರು ದಿನವಿಡೀ ಫೋನ್‌ಗಳಲ್ಲಿ ಬ್ಯುಸಿಯಾಗಿರುತ್ತಾರೆ. ಇದು ಒಂದು ಅಭ್ಯಾಸವಾಗುತ್ತದೆ. ಇದನ್ನು ನೋಡಿ ಮಕ್ಕಳೂ ಮೊಬೈಲ್ ಫೋನ್‌ಗಳ ಕೆಟ್ಟ ಅಭ್ಯಾಸಕ್ಕೆ ಒಳಗಾಗುತ್ತಾರೆ.

ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡುವುದು ಹೇಗೆ? ಇಲ್ಲಿವೆ ಟ್ರಿಕ್ಸ್

ಶೇ.82 ರಷ್ಟು ಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಕೆ ಗೊತ್ತು!

ಭಾರತದಲ್ಲಿ 14 ವರ್ಷದಿಂದ 16 ವರ್ಷಗಳ ನಡುವಿನ ಶೇ.82 ರಷ್ಟು ಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಕೆ ಮಾಡುವುದು ಗೊತ್ತಿದೆ. ಆದರೆ, ಈ ಪೈಕಿ ಶೇ.57 ಮಕ್ಕಳು ಮಾತ್ರ ಇದನ್ನು ಶಾಲೆಯಲ್ಲಿ ಹೇಳಿಕೊಡಲಾಗುವ ಪಾಠ, ಶೈಕ್ಷಣಿಕ ವಿಡಿಯೋ ಹಾಗೂ ಶಾಲೆ ಸಂಬಂಧಿತ ಚಟುವಟಿಕೆಗಳಿಗೆ ಬಳಸುತ್ತಾರೆ ಎಂದು ವರದಿಯಾಗಿದೆ. ಶೇ.18 ಮಕ್ಕಳಿಗೆ ಸ್ಮಾರ್ಟ್ ಫೋನ್ ಬಳಕೆ ಗೊತ್ತಿಲ್ಲ.

ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಕೊಡಬೇಡಿ

ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡುವುದು ಹೇಗೆ? ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ನೀವು ಈ ತಂತ್ರಗಳನ್ನು ಅನುಸರಿಸಿ, ಸುಲಭವಾಗಿ ಮಕ್ಕಳಲ್ಲಿರುವ ಮೊಬೈಲ್ ಬಳಕೆ ಚಟವನ್ನು ದೂರ ಮಾಡಬಹುದು. ಮೊದಲನೆಯದಾಗಿ, ನೀವು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಫೋನ್ ಕೊಡಬಾರದು. ನಿಮ್ಮ ಮಗು ನಿಮ್ಮೊಂದಿಗೆ ಇರುವಾಗ ಸಾಧ್ಯವಾದಷ್ಟು ಫೋನ್‌ಗಳಿಂದ ದೂರವಿರಿ. ಏಕೆಂದರೆ ನೀವು ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದರೆ, ನಿಮ್ಮ ಮಕ್ಕಳು ನಿಮ್ಮನ್ನು ನೋಡಿದ ಬಳಿಕ, ನಿಮ್ಮ ಮೊಬೈಲ್ ಅನ್ನು ತೆಗೆದುಕೊಂಡು ಹೋಗುತ್ತಾರೆ. ಇದು ಮಕ್ಕಳಿಗೆ ಮೊಬೈಲ್ ಕಡೆ ಒಗ್ಗಿಕೊಳ್ಳಲು ಪ್ರೇರೇಪಿಸುತ್ತದೆ.

Take a Poll

ಊಟ ಮಾಡುವ ಮೊದಲು ಫೋನ್ ಕೊಡಬೇಡಿ

ವಿಶೇಷವಾಗಿ, ಮಕ್ಕಳು ಊಟ ಮಾಡುವಾಗ ಮೊಬೈಲ್ ಕೊಡಬೇಡಿ. ನೀವು ಹಾಗೆ ಮಾಡಿದರೆ, ತಿನ್ನುವ ಮೊದಲು ಪ್ರತಿ ಬಾರಿಯೂ ನಿಮ್ಮ ಫೋನ್ ಅನ್ನು ಅವರಿಗೆ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಅವರಿಗೆ ಊಟ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನಿಮ್ಮ ಮೊಬೈಲ್ ಅನ್ನು ಸ್ವಲ್ಪ ದೂರವಿಡಿ. ಮಕ್ಕಳನ್ನು ಫೋನ್‌ಗಳಿಂದ ದೂರವಿಡುವುದು ಸರಿಯಾದ ಪರಿಹಾರ. ಅವರನ್ನು ಹೊರಾಂಗಣ ಆಟಗಳು ಅಥವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿ. ಉದಾಹರಣೆಗೆ, ನೀವು ಮಕ್ಕಳನ್ನು ಸೈಕ್ಲಿಂಗ್ ಸವಾರಿಗೆ ಕರೆದುಕೊಂಡು ಹೋಗಬಹುದು.

ಮಕ್ಕಳಿಂದ ಮೊಬೈಲ್ ಕಿತ್ತುಕೊಳ್ಳಬೇಡಿ

ಮಕ್ಕಳ ಕೈಯಲ್ಲಿ ಫೋನ್ ಕಂಡರೆ, ತಕ್ಷಣ ಅದನ್ನು ತೆಗೆದುಕೊಂಡು ಹೋಗಬೇಡಿ. ಇದು ನಿಮ್ಮ ಮಗುವಿಗೆ ಕೋಪ ತರಿಸುತ್ತದೆ. ಶಾಂತವಾಗಿ ವಿವರಿಸಲು ಪ್ರಯತ್ನಿಸಿ ಮತ್ತು ಅವರಿಂದ ಫೋನ್ ಅನ್ನು ತೆಗೆದುಹಾಕಿ.

ಇಂಟರ್ನೆಟ್ ಅಥವಾ ವೈಫೈ ಆಫ್ ಮಾಡಿ

ನಿಮ್ಮ ಮೊಬೈಲ್‌ನಲ್ಲಿ ಕೆಲಸ ಮುಗಿದ ಈ ಕೆಲಸ ಮಾಡಲೇಬೇಕು. ನಿಮ್ಮ ಫೋನಿನಲ್ಲಿ ಇಂಟರ್ನೆಟ್ ಅಥವಾ ವೈ-ಫೈ ಆಫ್ ಮಾಡಿ. ಹೀಗೆ ಮಾಡುವುದರಿಂದ ಮಕ್ಕಳು ಮೊಬೈಲ್ ಅನ್ನು ಬಳಸುವುದಿಲ್ಲ. ನಿಮ್ಮ ಮಕ್ಕಳು ನಿಮ್ಮ ಅನುಮತಿಯಿಲ್ಲದೆ ಬಳಸದಂತೆ ನಿಮ್ಮ ಮೊಬೈಲ್‌ನಲ್ಲಿ ಪಾಸ್‌ವರ್ಡ್ ಹಾಕಬೇಕು.

ಟಿವಿ ನೋಡಲು, ಪುಸ್ತಕಗಳನ್ನು ಓದುವುದಕ್ಕೆ ಸಮಯ ಮೀಸಲಿಡಿ

ನಿಮ್ಮ ಮಕ್ಕಳು ಸ್ಮಾರ್ಟ್ ಟಿವಿ ವೀಕ್ಷಿಸಲು ಸಮಯವನ್ನು ಸಹ ನೀವು ನಿಗದಿಪಡಿಸಬಹುದು. ಟಿವಿ ನೋಡುವುದರಿಂದ ಮಕ್ಕಳ ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ. ಮನೆಯಲ್ಲಿ ಮಕ್ಕಳು ಟಿವಿ ನೋಡುವುದು, ಪುಸ್ತಕಗಳನ್ನು ಓದುವುದು ಮತ್ತು ಸ್ಪೀಕರ್‌ಗಳಲ್ಲಿ ಹಾಡುಗಳನ್ನು ಕೇಳುವ ಮೂಲಕ ಮನರಂಜನೆ ಪಡೆಯುವಂತೆ ಪ್ರೋತ್ಸಾಹಿಸಿ.

ದಿನಕ್ಕೆ ಒಂದು ಗಂಟೆ ಉಪಯೋಗಿಸಲು ಅವಕಾಶ

ನಿಮ್ಮ ಮಕ್ಕಳು ಒಂದು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ಬಳಸಬಹುದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಇದರಿಂದ ಅವರಿಗೂ ಕೂಡ ಅರ್ಥವಾಗುತ್ತದೆ. ಯಾವುದೇ ಕಾರಣಕ್ಕೂ 18 ತಿಂಗಳ ಒಳಗಿನ ಮಕ್ಕಳಿಗೆ ಫೋನ್ ಕೊಡಬಾರದು. 18 ತಿಂಗಳಿಂದ 24 ತಿಂಗಳ ಒಳಗಿನ ಮಕ್ಕಳಿಗೆ ಪೋಷಕರೇ ಪಕ್ಕದಲ್ಲಿ ಕುಳಿತು ಮಕ್ಕಳ ಪ್ರೋಗ್ರಾಂಗಳನ್ನು ತೋರಿಸಬಹುದು. ಎರಡು ವರ್ಷದಿಂದ ಐದು ವರ್ಷದ ಒಳಗಿನ ಮಕ್ಕಳಿಗೆ ಒಂದು ದಿನಕ್ಕೆ ಒಂದು ಗಂಟೆ ಫೋನ್ ಉಪಯೋಗಿಸಲು ಅವಕಾಶ ನೀಡಬೇಕು. ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಬೇರೆ ಬೇರೆ ಚಟುವಟಿಕೆಗಳು ಕೂಡ ಇರುತ್ತದೆ. ಇದದರಿಂದ ಜೊತೆಗೆ ಚೆನ್ನಾಗಿ ನಿದ್ರೆ ಮಾಡಬೇಕಾಗಿರುತ್ತದೆ. ಇದೆಲ್ಲವನ್ನು ನೋಡಿಕೊಂಡು ದಿನಕ್ಕೆ ಇಂತಿಷ್ಟು ಸಮಯ ಮೊಬೈಲ್ ಬಳಕೆಗೆ ಸಮಯ ನೀಡಬೇಕು.

ಸ್ಮಾರ್ಟ್‌‌ಫೋನ್‌ ಬಳಕೆಯಲ್ಲಿ ಹೆಚ್ಚಳ

2018ರಲ್ಲಿ ಸುಮಾರು 90 ಪ್ರತಿಶತ ಗ್ರಾಮೀಣ ಕುಟುಂಬಗಳು ಸರಳ ಮೊಬೈಲ್‌ಗಳನ್ನು ಹೊಂದಿದ್ದು, ಶೇ.36 ರಷ್ಟು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಫೋನ್‌ಗಳನ್ನು ಹೊಂದಿರುವ ಕುಟುಂಬಗಳ ಸಂಖ್ಯೆಯು 2022 ರಲ್ಲಿ ಶೇ. 74 ಕ್ಕಿಂತ ಹೆಚ್ಚು ಮತ್ತು ಈ ವರ್ಷ ಶೇ. 84 ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಇನ್ನು ಮೊಬೈಲ್ ಅನ್ನು ಬಳಸುವ 14 ರಿಂದ 16ರ ವಯಸ್ಸಿನ ಮಕ್ಕಳನ್ನು ಗಮನಿಸಿದರೆ, ಈ ಮಕ್ಕಳ ಸಂಖ್ಯೆ ಶೇ.31ರಷ್ಟಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಇದು ಕೇವಲ ಶೇ. 19ರಷ್ಟಿತ್ತು ಎನ್ನುವುದು ಗಮನಿಸಬೇಕಾದ ಸಂಗತಿ.

ಸಾಮಾಜಿಕ ಜಾಲತಾಣ ಹೆಚ್ಚು ಬಳಸುವುದು ಯಾರು?

ಸೋಷಿಯಲ್‌ ಮೀಡಿಯಾ ಬಳಸುವುದು ಯಾರು ಎಂಬ ಕುತೂಹಲ ನಿಮ್ಮಲ್ಲಿರುತ್ತದೆ. 14 ರಿಂದ 16 ವರ್ಷ ವಯಸ್ಸಿನ ಶೇ. 82.2 ರಷ್ಟು ಮಕ್ಕಳು ಸ್ಮಾರ್ಟ್‌ಫೋನ್ ಅನ್ನು ಹೇಗೆ ಬಳಸಬೇಕು ಎಂಬ ಜ್ಞಾನ ಹೊಂದಿದ್ದಾರೆ. ಸಮೀಕ್ಷೆಯ ಪ್ರಕಾರ, ಅವರಲ್ಲಿ ಶೇ. 57 ರಷ್ಟು ಜನರು ಶೈಕ್ಷಣಿಕ ಚಟುವಟಿಕೆಗಳಿಗೆ ಸ್ಮಾರ್ಟ್‌ಫೋನ್ ಬಳಸಿದ್ದರು ಎಂದು ತಿಳಿದುಬಂದಿದೆ. ಶೇ.76 ರಷ್ಟು ಜನರು ಇದೇ ಅವಧಿಯಲ್ಲಿ ಸೋಷಿಯಲ್‌ ಮೀಡಿಯಾಗಾಗಿ ಮೊಬೈಲ್ ಬಳಕೆ ಮಾಡಿರುವುದು ವರದಿಯಾಗಿದೆ.

ಮೊಬೈಲ್ ಬಳಕೆಯಿಂದ ಈ ರೋಗಗಳ ಅಪಾಯ!

ಮೊಬೈಲ್ ಅತಿಯಾದ ಬಳಕೆಯು ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಕಾಲದ ವರೆಗೆ ಮೊಬೈಲ್‌ನಲ್ಲಿ ಕೆಲಸ ಮಾಡಬಾರದು. ಇದರಿಂದ ಕಣ್ಣು ಮಸುಕಾಗುವುದು, ಕಿರಿಕಿರಿಯಂತಹ ಸಮಸ್ಯೆಗಳು ಉಂಟಾಗಬಹುದು. ರಾತ್ರಿ ಮಲಗುವ ಮೊದಲು ಫೋನ್ ಬಳಸುವುದರಿಂದ ಮೆಲಟೋನಿನ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದು ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ. ಇದಲ್ಲದೆ, ಫೋನ್‌ಗಳನ್ನು ನಿರಂತರವಾಗಿ ಕೈಯಲ್ಲಿ ಹಿಡಿದುಕೊಳ್ಳುವುದು ಅಥವಾ ಕುತ್ತಿಗೆ ಬಗ್ಗಿಸಿ ಮೊಬೈಲ್ ನೋಡುವುದರಿಂದ ದೇಹವು ಕೆಟ್ಟ ಭಂಗಿಯಿಂದ ಬಳಲು ಕಾರಣವಾಗುತ್ತದೆ. ನೀವು ಮೊಬೈಲ್ ಫೋನ್ ಬಳಸುವಾಗ ದೀರ್ಘಕಾಲ ಕುಳಿತುಕೊಳ್ಳಬೇಡಿ. ಇದರಿಂದ ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಹೆಚ್ಚಿದೆ. ದೈಹಿಕ ಚಟುವಟಿಕೆಯ ಕೊರತೆ, ಒತ್ತಡ ಮತ್ತು ತಲೆನೋವು ಸಹ ಉಂಟಾಗಬಹುದು.

Best Mobiles in India

English summary
How to Keep Your Childrens Away from Smartphones: What's the expert's advice?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+