Home
ಸುದ್ದಿಜಾಲ

ಕರ್ನಾಟಕದಲ್ಲಿ ಇನ್ಮುಂದೆ ಮಕ್ಕಳು ಸ್ಮಾರ್ಟ್‌ಫೋನ್‌ ಮುಟ್ಟಿದ್ರೆ ಓಪನ್‌ ಆಗೋಲ್ವಂತೆ? ಹೊಸ ಆಪ್‌!

ಮಕ್ಕಳಲ್ಲಿ ಮೊಬೈಲ್‌ ಗೀಳು ಮಿತಿಮೀರುತ್ತಿದೆ. ಸ್ಮಾರ್ಟ್‌ಫೋನ್‌(Smartphone) ಕೈನಲ್ಲಿ ಇಲ್ಲದಿದ್ದರೆ ಏನನ್ನೂ ಮಾಡಲಾರೆ ಎಂಬ ಮಟ್ಟಕ್ಕೆ ಬೆಳೆದಿದ್ದಾರೆ. ಮಕ್ಕಳಲ್ಲಿನ ಈ ರೀತಿಯ ಬೆಳವಣಿಗೆ ಮುಂದಿನ ದಿನಗಳಲ್ಲಿ ಪೋಷಕರಿಗೆ ಹಾಗೂ ದೇಶಕ್ಕೂ ಸಮಸ್ಯೆ. ಈ ಕಾರಣಕ್ಕಾಗಿಯೇ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ(State Child Rights Commission) ಹೊಸ ಪ್ಲ್ಯಾನ್‌ವೊಂದಕ್ಕೆ ಕೈ ಹಾಕಿದೆ.

ಹೌದು, ರಾಜ್ಯದಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಈ ನಡುವೆ ಪ್ರಮುಖ ಕಂಪೆನಿಗಳು ವಿವಿಧ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿಕೊಂಡು ಬರುತ್ತಿದ್ದು, ಈ ಬಳಕೆಯನ್ನು ಇನ್ನಷ್ಟು ಹೆಚ್ಚಿಗೆ ಆಗುವಂತೆ ಈಗ 5G ಕ್ರಾಂತಿ ಬೇರೆ ಶುರುವಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗಿ ಹಲವಾರು ಸಮಸ್ಯೆಗಳನ್ನು ಅನುಭವಿಸುವುದು ನಮ್ಮ ನಿಮ್ಮೆಲ್ಲರಿಗೂ ತಿಳಿದ ವಿಚಾರ. ಇದನ್ನು ತಡೆಯಲೆಂದು ಕರ್ನಾಟಕದ ರಾಜ್ಯ ಮಕ್ಕಳ ಆಯೋಗ ಮಹತ್ವದ ಕೆಲಸಕ್ಕೆ ಮುಂದಾಗಿದೆ.

ಕರ್ನಾಟಕದಲ್ಲಿ ಇನ್ಮುಂದೆ ಮಕ್ಕಳು ಫೋನ್‌ ಮುಟ್ಟಿದ್ರೆ ಓಪನ್‌ ಆಗೋಲ್ವಂತೆ?

18 ವರ್ಷ ಆಗಲಿಲ್ಲ ಅಂದ್ರೆ ಫೋನ್‌ ಓಪನ್ ಆಗೋಲ್ಲ?: ಇನ್ನು ರಾಜ್ಯ ಮಕ್ಕಳ ಆಯೋಗ ಮಕ್ಕಳ ಮುಂದಿನ ಜೀವನ ಸುಗಮವಾಗಿರಲು ಹಾಗೂ ಅವರು ಎಲ್ಲಾ ರೀತಿಯಲ್ಲಿ ಚಟುವಟಿಕೆಯಿಂದ ಇರಲಿ ಎನ್ನುವ ಉದ್ದೇಶದಿಂದ ಈಗ ಹೊಸ ಯತ್ನಕ್ಕೆ ಮುಂದಾಗಿದೆ. ಅದರಂತೆ ಮಕ್ಕಳು ಸ್ಮಾರ್ಟ್‌ಫೋನ್‌ ಅನ್ನು ತೆರೆಯಲು ಮುಂದಾದಾಗ ಅದು ಓಪನ್‌ ಆಗದ ಹಾಗೆ ಮಾಡಲು ಆಪ್‌ ಸಿದ್ಧಪಡಿಸಲಿದೆಯಂತೆ.

ಈ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗೇಶ್‌ (K. Nagesh) ಅವರು ಕನ್ನಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಫೋನ್‌ನಲ್ಲಿ ಒಳ್ಳೆಯದನ್ನು ಬಳಕೆ ಮಾಡಿಕೊಳ್ಳುವ ಹಾಗೆ ಫೋನ್‌ ಉಪಯೋಗಿಸುವ ಸಾಧ್ಯತೆ ಕುರಿತು ಹಾಗೂ ಮಕ್ಕಳ ಬೆರಳಿನ ರೇಖೆಯ ಆಧಾರದಲ್ಲಿ ಅವರ ವಯಸ್ಸನ್ನು ನಿರ್ಧಾರ ಮಾಡುವ ಮೂಲಕ ಫೋನ್‌ ಕಾರ್ಯನಿರ್ವಹಿಸುವಂತೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್‌ ಹಾಗೂ ಇನ್ನಿತರೆ ದೊಡ್ಡ ಕಂಪೆನಿಗಳು ಸೇರಿದಂತೆ ಮನಶಾಸ್ತ್ರಜ್ಞರ ಜೊತೆ ಚರ್ಚೆ ನಡೆಸಲಾಗುವುದು ಹಾಗೂ ಫೋನ್‌ಅನ್ನು ಶೈಕ್ಷಣಿಕ ಉದ್ದೇಶಕ್ಕೆ ಹಾಗೂ ಒಳ್ಳೆಯ ಉದ್ದೇಶಕ್ಕೆ ಮಾತ್ರ ಬಳಕೆ ಆಗುವಂತೆ ಮಾಡಲು ಸಾಧ್ಯವಾಗಬಹುದಾ ಎಂಬುದರ ಬಗ್ಗೆ ಆಲೋಚನೆ ಮಾಡುತ್ತೇವೆ. ಈ ರೀತಿಯ ಪ್ರಯೋಗಗಳು ನಡೆದರೆ ಮಕ್ಕಳಿಗೂ ಸಂಸತ ಹಾಗೂ ಹೊಸ ಅನ್ವೇಷಣೆ ಆದಂತೂ ಆಗಲಿದೆ ಎಂದು ಹೇಳಿದ್ದಾರೆ.

ಮಕ್ಕಳು ಫೋನ್‌ ಬಳಕೆ ಮಾಡಿದ್ರೆ ಆಗುವ ಸಮಸ್ಯೆಗಳೇನು? : ಫೋನ್‌ಗಳಲ್ಲಿ ಹೆಚ್ಚು ಸಮಯವನ್ನು ಕಳೆಯುವುದರಿಂದ ಕಣ್ಣಿನ ಆಯಾಸ, ನಿದ್ರೆಯ ಸಮಸ್ಯೆ ಮತ್ತು ಜಡ ಜೀವನಶೈಲಿಯಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣ ಆಗುತ್ತದೆ. ಇದು ದೈಹಿಕ ಚಟುವಟಿಕೆ ಮತ್ತು ಹೊರಾಂಗಣ ಆಟದ ಕೊರತೆಗೂ ಕಾರಣವಾಗಬಹುದು. ಇದೆಲ್ಲದಕ್ಕಿಂತ ಮಿಗಿಲಾಗಿ ಇದು ಮಗುವಿನ ಬೆಳವಣಿಗೆಗೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ಕೆಟ್ಟದ್ದೂ ಆಗಿರಬಹುದು, ಒಳ್ಳೆಯದೂ ಆಗಿರಬಹುದು.

ಸಾಮಾಜಿಕ ಪ್ರತ್ಯೇಕತೆ: ಅತಿಯಾದ ಫೋನ್ ಬಳಕೆ ಮಾಡುವ ಅದೆಷ್ಟೋ ಮಕ್ಕಳು ಮುಖಾಮುಖಿ ಸಾಮಾಜಿಕ ಸಂವಹನಗಳಿಗೆ ಹೆದರುತ್ತಾರೆ. ಮಕ್ಕಳು ನೈಜ-ಜೀವನದ ಸಂವಹನಗಳಿಗಿಂತ ವರ್ಚುವಲ್ ಸಂವಹನಕ್ಕೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗುತ್ತಾರೆ. ಇದರಿಂದಾಗಿ ಅವರ ಸಾಮಾಜಿಕ ಅಭಿವೃದ್ಧಿ ಮತ್ತು ಸಂವಹನ ಕೌಶಲ್ಯಗಳಿಗೆ ಸ್ಮಾರ್ಟ್‌ಫೋನ್‌ ದೊಡ್ಡ ಏಟನ್ನು ನೀಡಲಿದೆ.

ಆನ್‌ಲೈನ್ ಕಿರುಕುಳ: ಮುಖ್ಯವಾಗಿ ಮಕ್ಕಳು ಆನ್‌ಲೈನ್‌ನಲ್ಲಿ ಸೈಬರ್‌ಬುಲ್ಲಿಂಗ್, ಕಿರುಕುಳ ಮತ್ತು ಅನುಚಿತ ವಿಚಾರಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಅವರ ಮಾನಸಿಕ ಆರೋಗ್ಯ ಮತ್ತು ಸ್ವಾಭಿಮಾನದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ. ಈ ವೇಳೆ ಇಂತಹ ಸಮಸ್ಯೆಗಳನ್ನು ನಿಭಾಯಿಸಲು ಮಕ್ಕಳು ಸಾಕಷ್ಟು ಪ್ರಬುದ್ಧತೆಯನ್ನು ಸಹ ಹೊಂದಲೂ ಸಾಧ್ಯವಾಗುವುದಿಲ್ಲ.

ಕರ್ನಾಟಕದಲ್ಲಿ ಇನ್ಮುಂದೆ ಮಕ್ಕಳು ಫೋನ್‌ ಮುಟ್ಟಿದ್ರೆ ಓಪನ್‌ ಆಗೋಲ್ವಂತೆ?

ಗೌಪ್ಯತೆ, ಭದ್ರತಾ ಅಪಾಯಗಳು: ಆನ್‌ಲೈನ್ ಗೌಪ್ಯತೆಯ ಪರಿಕಲ್ಪನೆಯನ್ನು ಮಕ್ಕಳು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದಿರಬಹುದು ಅಥವಾ ಅದರ ಬಗ್ಗೆ ಗೊತ್ತೇ ಇರುವುದಿಲ್ಲ. ಇದರಿಂದಾಗಿ ಮಕ್ಕಳು ಯಾರೊಂದಿಗಾದರೂ ಸಹ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಪರಿಣಾಮ ಮಕ್ಕಳು ಆನ್‌ಲೈನ್ ಸ್ಕ್ಯಾಮ್‌ಗಳು, ಫಿಶಿಂಗ್ ದಾಳಿಗಳಿಗೆ ಬಲಿಯಾಗಲಿದ್ದಾರೆ.

ಶೈಕ್ಷಣಿಕ ಕಾರ್ಯಕ್ಷಮತೆ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲೇ ಎಲ್ಲವನ್ನೂ ಸ್ಮಾರ್ಟ್‌ಫೋನ್‌ ಬಳಕೆ ಮಾಡಿಕೊಂಡೇ ಶೈಕ್ಷಣಿಕ ಅಭ್ಯಾಸ ಮಾಡಿದರೆ ಮುಂದೆ ಇದು ದೊಡ್ಡ ಶೈಕ್ಷಣಿಕ ಹಿನ್ನೆಡೆಗೆ ಕಾರಣವಾಗಬಹುದು ಹಾಗೂ ಅತಿಯಾದ ಫೋನ್ ಬಳಕೆ ಅಧ್ಯಯನ ಅಥವಾ ಹೋಮ್‌ವರ್ಕ್ ಸಮಯದಲ್ಲಿ ಮಕ್ಕಳ ಏಕಾಗ್ರತೆ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ.

ವ್ಯಸನಕಾರರಾಗುತ್ತಾರೆ: ಮಕ್ಕಳು ಹೆಚ್ಚಿನದಾಗಿ ಫೋನ್‌ ಬಳಕೆ ಮಾಡಲು ಮುಂದಾದರೆ ಕೆಲವು ರೀತಿಯ ವ್ಯಸನಗಳಿಗೆ ಒಳಗಾಗುವುದುಂಟು. ಫೋನ್‌ಗಳಲ್ಲಿ ಮನರಂಜನೆ, ಸಾಮಾಜಿಕ ಮಾಧ್ಯಮ ಬಳಕೆ ಆಕರ್ಷಕ ಗೇಮ್‌ಗಳು ಮಕ್ಕಳನ್ನು ಇನ್ನಿಲ್ಲದಂತೆ ಕಾಡಲು ಶುರು ಮಾಡುತ್ತವೆ. ಇದರೊಂದಿಗೆ ಫೋನ್‌ಗಳು ಮತ್ತು ಇತರ ಡಿಜಿಟಲ್ ಡಿವೈಸ್‌ಗಳ ಅತಿಯಾದ ಬಳಕೆಯು ಅರಿವಿನ ಬೆಳವಣಿಗೆಯನ್ನು ಉತ್ತೇಜಿಸುವ ಚಟುವಟಿಕೆಗಳನ್ನು ಬದಲಾಯಿಸುತ್ತದೆ.

ಇನ್ನು ಎಲ್ಲಾ ಮಕ್ಕಳು ಈ ಸಮಸ್ಯೆಗಳನ್ನು ಒಂದೇ ಪ್ರಮಾಣದಲ್ಲಿ ಅನುಭವಿಸುವುದಿಲ್ಲ ಎಂಬುದು ತಿಳಿದಿರಲಿ. ಜವಾಬ್ದಾರಿಯುತ ಮತ್ತು ಸಮತೋಲಿತ ಫೋನ್ ಬಳಕೆಯು ಈ ಸಮಸ್ಯೆಗಳನ್ನು ತಗ್ಗಿಸಬಹುದು.ಆದರೆ, ಈ ವಿಷಯದಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸಬೇಕಿದೆ. ಈ ಕಾರಣಕ್ಕಾಗಿಯೇ ಪೋಷಕರು ಆಗಾಗ್ಗೆ ಆನ್‌ಲೈನ್ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಮುಕ್ತ ಸಂವಹನವನ್ನು ಮಾಡುವುದು ಅಗತ್ಯವಾಗಿದೆ.

Best Mobiles in India

English summary
We all know that children get addicted to smartphone and suffer many problems. To prevent this, the State Children's Commission of Karnataka ready to going with new ideas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+