Home
ಟೆಕ್ ನೌಕರಿ

ಪ್ಯಾನ್-ಆಧಾರ್ ಲಿಂಕ್‌ಗೆ ಡೆಡ್‌ಲೈನ್: ಲಿಂಕ್ ಮಾಡಲು ಇಲ್ಲಿದೆ ಸರಳ ಮಾರ್ಗ !

ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ವಿಷಯ ಭಾರತದಾದ್ಯಂತ ಭಾರೀ ಸುದ್ದಿಯಲ್ಲಿದೆ. ಅದರಲ್ಲೂ ಕರ್ನಾಟಕದಲ್ಲಿ ಈ ಬಗ್ಗೆ ಪರ ವಿರೋಧದ ಚರ್ಚೆಗಳು ಹೆಚ್ಚಾಗಿವೆ. ಯಾಕೆಂದರೆ ಈ ತಿಂಗಳ ಅಂತ್ಯದ ವೇಳೆಗೆ 1,000ರೂ. ಗಳ ದಂಡದ ಜೊತೆಗೆ ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಬೇಕಾಗಿದೆ.

ಹೌದು, ಭದ್ರತಾ ವಿಷಯಕ್ಕೆ ಸಂಬಂಧಿಸಿದಂತೆ ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್‌ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು ಎಂದು ಸೂಚಿಸಲಾಗಿದ್ದು, ಈಗಾಗಲೇ ಬಹುಪಾಲು ಮಂದಿ ಈ ಪ್ರಕ್ರಿಯೆಯನ್ನು ಪೂರೈಸಿದ್ದರೆ, ಇನ್ನೂ ಕೆಲವರು ಲಿಂಕ್‌ ಮಾಡಿಸಿಲ್ಲ. ಈ ಕಾರಣಕ್ಕೆ 1,000ರೂ.ಗಳ ದಂಡದ ಬಿಸಿ ನೀಡಿರುವ ಸರ್ಕಾರ ಈ ಮೂಲಕ ಎಲ್ಲರೂ ಕಡ್ಡಾಯವಾಗಿ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿದೆ. ಅದಾಗ್ಯೂ ಮುಂದಿನ ದಿನಗಳಲ್ಲಿ ಹೆಚ್ಚಿನ ದಂಡ ಸಹ ವಿಧಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಪ್ಯಾನ್-ಆಧಾರ್ ಲಿಂಕ್‌ಗೆ ಡೆಡ್‌ಲೈನ್: ಲಿಂಕ್ ಮಾಡಲು ಇಲ್ಲಿದೆ ಸರಳ ಮಾರ್ಗ !

ಆಧಾರ್‌ ಲಿಂಕ್‌ಗೆ ಮಾರ್ಚ್ 31 ಕೊನೇ ದಿನ: ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೇ ದಿನವಾಗಿದ್ದು, ಇದಾದ ನಂತರ ಮತ್ತೆ ಈ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ. ಬದಲಾಗಿ ಯಾರೆಲ್ಲಾ ಆಧಾರ್‌ ಲಿಂಕ್ ಮಾಡಿಸಿಲ್ಲವೋ ಅವರ ಪಾನ್ ಕಾರ್ಡ್‌ ನಿಷ್ಕ್ರಿಯಗೊಳಿಸುವ ಮೂಲಕ ದೊಡ್ಡ ಮೊತ್ತದ ದಂಡದ ಜೊತೆಗೆ ಹೊಸ ಪ್ಯಾನ್‌ ಮಾಡಿಸಲು ಸರ್ಕಾರ ಸೂಚನೆ ನೀಡಲಿದೆ ಎಂದು ತಿಳಿದುಬಂದಿದೆ.

ಈ ತಿಂಗಳ ಒಳಗೆ ಲಿಂಕ್ ಮಾಡಿಸಿ; ಈ ಸಂಬಂಧ ಟ್ವೀಟ್‌ ಮಾಡಿರುವ ಆದಾರ ಇಲಾಖೆ, ಐಟಿ ಕಾಯಿದೆ, 1961 ರ ಪ್ರಕಾರ ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲಾ ಪ್ಯಾನ್ ಹೊಂದಿರುವವರು 31.3.23 ರ ಮೊದಲು ತಮ್ಮ ಪ್ಯಾನ್ ಅನ್ನು ತಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. 1.4.23 ರಿಂದ, ಲಿಂಕ್ ಮಾಡದ ಪ್ಯಾನ್ ನಿಷ್ಕ್ರಿಯವಾಗುತ್ತದೆ ಎಂದು ಎಚ್ಚರಿಸಿದೆ.

ಆಧಾರ್‌ ಲಿಂಕ್ ಆಗಿದೆಯಾ ಎಂದು ಈ ರೀತಿ ತಿಳಿದುಕೊಳ್ಳಿ: ನೀವೇನಾದರೂ ಈಗಾಗಲೇ ಆಧಾರ್‌ ಲಿಂಕ್‌ ಮಾಡಿದ್ದು, ಈ ಬಗ್ಗೆ ಗೊಂದಲ ಇದ್ದರೆ ನೀವು ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್‌ಸೈಟ್‌ ಆಗಿರುವ incometax.gov.in/iec/foportal/ ಗೆ ತಲುಪಿ ಅಲ್ಲಿ ಪೇಜ್‌ನ ಎಡಭಾಗದಲ್ಲಿ ಕಾಣಿಸಿಕೊಳ್ಳುವ ಲಿಂಕ್ ಆಧಾರ್ ಸ್ಟೇಟಸ್‌ ಮೇಲೆ ಕ್ಲಿಕ್‌ ಮಾಡಿ.

ಪ್ಯಾನ್-ಆಧಾರ್ ಲಿಂಕ್‌ಗೆ ಡೆಡ್‌ಲೈನ್: ಲಿಂಕ್ ಮಾಡಲು ಇಲ್ಲಿದೆ ಸರಳ ಮಾರ್ಗ !

ಇದಾದ ಬಳಿಕ ಅಲ್ಲಿ ಕೇಳಲಾದ ಮಾಹಿತಿಯಂತೆ ನಿಮ್ಮ 10 ಅಂಕಿಯ ಪ್ಯಾನ್‌ ಸಂಖ್ಯೆ ಮತ್ತು 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ಆ ವೇಳೆ ಲಿಂಕ್ ಆಧಾರ್ ಸ್ಟೇಟಸ್‌ ವೀಕ್ಷಿಸಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್‌ ಲಿಂಕ್ ಆಗಿದ್ದರೆ ಈಗಾಗಲೇ ಲಿಂಕ್‌ ಆಗಿದೆ ಎಂಬ ಪಾಪ್‌ಅಪ್‌ ಮೆಸೆಜ್‌ ಕಾಣಿಸಿಕೊಳ್ಳುತ್ತದೆ, ಇಲ್ಲವಾದರೆ ಈ ಕೆಳಗಿನ ಹಂತ ಅನುಸರಿಸುವ ಮೂಲಕ ಲಿಂಕ್‌ ಮಾಡಿ.

ಹಂತ 1 : ಈವರೆಗೂ ನೀವು ಆಧಾರ್‌ ಅನ್ನು ಲಿಂಕ್‌ ಮಾಡದೆ ಇದ್ದರೆ ಇದೇ ವಿಭಾಗದಲ್ಲಿ ಲಿಂಕ್ ಆಧಾರ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. ಇದು ತಿಳಿಯುವುದಿಲ್ಲ ಎಂದಾದರೆ ಮೆನು ಬಾರ್‌ನಲ್ಲಿರುವ ಪ್ರೊಫೈಲ್ ಸೆಟ್ಟಿಂಗ್ ವಿಭಾಗಕ್ಕೆ ತಲುಪಿ ಅಲ್ಲಿ ಲಿಂಕ್ ಆಧಾರ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

ಹಂತ 2 : ಬಳಿಕ ನೀವು ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ನಿಮ್ಮ ಪ್ಯಾನ್ ವಿವರಗಳಿಂದ ಸ್ವಯಂಚಾಲಿತವಾಗಿ ತೆಗೆದುಕೊಳ್ಳುತ್ತದೆ. ನಂತರ ಆಧಾರ್‌ನಲ್ಲಿ ನಮೂದಿಸಲಾದ ನಿಮ್ಮ ಪ್ಯಾನ್ ವಿವರಗಳನ್ನು ನೀವು ಕಡ್ಡಾಯವಾಗಿ ಪರಿಶೀಲಿಸಿ, ಹೊಂದಾಣಿಕೆ ಇಲ್ಲ ಎಂದಾದರೆ ಅದನ್ನು ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಸರಿಪಡಿಸಿ.

ಹಂತ 3 : ವಿವರಗಳು ಹೊಂದಾಣಿಕೆಯಾದ ನಂತರ ಲಿಂಕ್‌ ನೌ ಎಂಬ ಬಟನ್‌ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ. ಇದಾದ ನಂತರ ಪಾಪ್‌ಅಪ್ ಮೆಸೆಜ್‌ ಮೂಲಕ ನಿಮ್ಮ ಆಧಾರ್ ಪ್ಯಾನ್ ಕಾರ್ಡ್‌ಗೆ ಲಿಂಕ್‌ ಆಗಿದೆ ಎಂಬ ಸಂದೇಶ ಬರುತ್ತದೆ. ಅದಾಗ್ಯೂ ನೀವು ಈ ಪ್ರಕ್ರಿಯೆ ನಡೆಸಲು UTIITSL ಅಥವಾ e-gov NSDL ವೆಬ್‌ಸೈಟ್‌ಗಳಿಗೂ ಭೇಟಿ ನೀಡಬಹುದು.

ಪ್ಯಾನ್-ಆಧಾರ್ ಲಿಂಕ್‌ಗೆ ಡೆಡ್‌ಲೈನ್: ಲಿಂಕ್ ಮಾಡಲು ಇಲ್ಲಿದೆ ಸರಳ ಮಾರ್ಗ !

ಆಧಾರ್-ಪ್ಯಾನ್ ಲಿಂಕ್‌ಗೆ ದಂಡ: ಯಾವುದೇ ದಂಡವಿಲ್ಲದೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಮಾರ್ಚ್ 31, 2022 ಅನ್ನು ನಿಗದಿಪಡಿಸಲಾಗಿತ್ತು. ಆದರೆ, ಸರ್ಕಾರವು ಮಾರ್ಚ್ 31, 2023 ರೊಳಗೆ ಆ ಗಡುವನ್ನು ವಿಸ್ತರಿಸಿದ್ದು, 1,000 ರೂ. ಗಳ ದಂಡ ವಿಧಿಸಿದೆ. ಹಾಗೆಯೇ, ಈ ದಂಡದಿಂದ ಅಥವಾ ಲಿಂಕ್‌ ಮಾಡುವ ಪ್ರಕ್ರಿಯೆಯಿಂದ ಯಾರಿಗೆಲ್ಲಾ ವಿನಾಯಿತಿ ಇದೆ ಗಮನಿಸಿ.

ದೇಶದ 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು ಈ ಪ್ಯಾನ್‌ಗೆ ಆಧಾರ್‌ ಲಿಂಕ್‌ ಮಾಡುವುದರಿಂದ ವಿನಾಯಿತಿ ಪಡೆದುಕೊಂಡಿದ್ದಾರೆ. ಹಾಗೆಯೇ ಆದಾಯ ತೆರಿಗೆ ಕಾಯಿದೆಯಿಂದ ವ್ಯಾಖ್ಯಾನಿಸಲಾದ ಅನಿವಾಸಿಗಳು ಮತ್ತು ಭಾರತೀಯರಲ್ಲದ ನಾಗರಿಕರು ಇದರಿಂದ ವಿನಾಯಿತಿ ಪಡೆದುಕೊಂಡಿದ್ದು, ಉಳಿದ ಎಲ್ಲರೂ ಲಿಂಕ್‌ ಮಾಡಿಸಬೇಕಿದೆ.

Best Mobiles in India

English summary
Aadhaar linking process with pan card in India is very fast, if you already linked, know the status.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+