ನಿಮ್ಮ ಪಿಎಫ್‌ ಖಾತೆಗೆ ಪ್ಯಾನ್‌ ಲಿಂಕ್ ಆಗುತ್ತಿಲ್ಲವೇ?..ಹಾಗಿದ್ರೆ ಹೀಗೆ ಮಾಡಿ!

|

ನೌಕರರ ಭವಿಷ್ಯ ನಿಧಿ ಸಂಸ್ಥೆಯು ಉದ್ಯೋಗಿಗಳ ಪಾಲಿಗೆ ಕಷ್ಟಕಾಲಕ್ಕೆ ಆರ್ಥಿಕ ನೆರವಿನ ಭರವಸೆ ಆಗಿದೆ. ಪ್ರತಿ ತಿಂಗಳು ಕಾರ್ಯನಿರತ ಉದ್ಯೋಗಿಗಳ ಸಂಬಳದಲ್ಲಿನ ಒಂದು ನಿರ್ದಿಷ್ಟ ಮೊತ್ತ ಮತ್ತು ಉದೋಗ ಸಂಸ್ಥೆಯಿಂದ ಒಂದು ನಿರ್ದಿಷ್ಟ ಮೊತ್ತ ಉದ್ಯೋಗಿಯ ಪಿಎಫ್‌ ಖಾತೆಯಲ್ಲಿ ಜಮಾ ಆಗುತ್ತದೆ. ಹಣಕಾಸಿನ ತುರ್ತು ಅಗತ್ಯ ಇದ್ದಾಗ ಉದ್ಯೋಗಿಯು ತನ್ನ ಪಿಎಫ್ ಖಾತೆಯಿಂದ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದಾಗಿದೆ.

ಪಿಎಫ್‌ ಖಾತೆ

ಪಿಎಫ್‌ ಖಾತೆಯಿಂದ ಹಣ ವಿತ್‌ಡ್ರಾ ಮಾಡಲು ಉದ್ಯೋಗಿಯ ತನ್ನ ಕೆವೈಸಿ ಮಾಹಿತಿಯನ್ನು ನಮೂದಿಸಿರಬೇಕು. ಉದ್ಯೋಗಿಯು ಮುಖ್ಯವಾಗಿ ಆಧಾರ್ ಕಾರ್ಡ್‌ ಮಾಹಿತಿ ಸರಿಯಾಗಿರಬೇಕು. ಆಧಾರ್‌ ಕಾರ್ಡ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಬಳಕೆಯಲ್ಲಿಟ್ಟಿರಬೇಕು. ಹಾಗೆಯೇ ಬ್ಯಾಂಕ್ ಖಾತೆಯ ವಿವರ, ಪ್ಯಾನ್ ಕಾರ್ಡ್‌ ಮಾಹಿತಿ ಒದಗಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ಆನ್‌ಲೈನ್‌ ಮೂಲಕ ಪಿಎಫ್‌ ಖಾತೆಯಲ್ಲಿ ಪ್ಯಾನ್ ಮಾಹಿತಿ ಹೇಗೆ ತುಂಬುವುದು ಎನ್ನುವ ಬಗ್ಗೆ ತಿಳಿಸಲಾಗಿದೆ. ಮುಂದೆ ಓದಿರಿ.

ಪ್ಯಾನ್ ಲಿಂಕ್ ಮಾಡಬೇಕು

ಪ್ಯಾನ್ ಲಿಂಕ್ ಮಾಡಬೇಕು

ಉದ್ಯೋಗಿಯು ತನ್ನ ಪಿಎಫ್ ಖಾತೆಯಿಂದ ಹಣ ವಿತ್‌ಡ್ರಾ ಮಾಡಿಕೊಳ್ಳಲು ಕೆವೈಸಿ ಮಾಹಿತಿ ನೀಡಬೇಕಿದೆ. ಅವುಗಳಲ್ಲಿ ಸರಿಯಾಗಿ ಪ್ಯಾನ್ ಕಾರ್ಡ್ ಮಾಹಿತಿ ನಮೂದಿಸಬೇಕಿದೆ. ಪ್ಯಾನ್ ಕಾರ್ಡ್‌ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ ರಿಜಿಸ್ಟರ್ ಮೊಬೈಲ್ ನಂಬರ್ ನಮೂದಿಸಬೇಕು.

ಹಂತ 1

ಉದ್ಯೋಗಿಗಳು ನೌಕರರ ಭವಿಷ್ಯ ನಿಧಿ ಸಂಸ್ಥೆಯ ಅಧಿಕೃತ EPFO UAN Member e-Seva ಪೋರ್ಟಲ್‌ಗೆ ಭೇಟಿ ನೀಡಿವುದು. ಈ ವೆಬ್‌ಸೈಟ್‌ನಲ್ಲಿ ಪಿಎಫ್‌ ಖಾತೆಯ UAN ಮತ್ತು ಪಾಸ್‌ವರ್ಡ್‌ ನಮೂದಿಸಿ ಪೋರ್ಟಲ್‌ನಲ್ಲಿ ಲಾಗ್‌ ಇನ್ ಆಗಿರಿ.

ಹಂತ 2

ಹಂತ 2

EPFO UAN ಮೆಂಬರ್ ಇ-ಸೇವಾ ಪೋರ್ಟಲ್‌ನಲ್ಲಿ ಲಾಗ್ ಇನ್ ಆದ ನಂತರ, ಅಲ್ಲಿ ಕಾಣಿಸುವ ಹೋಮ್, ವ್ಯೂವ್, ಮ್ಯಾನೇಜ್, ಅಕೌಂಟ್, ಆನ್‌ಲೈನ್‌ ಸರ್ವೀಸ್‌ ಆಯ್ಕೆಗಳಲ್ಲಿ ಮ್ಯಾನೇಜ್ ಆಯ್ಕೆಯ ಮೆನುವನ್ನು ಸೆಲೆಕ್ಟ್ ಮಾಡುವುದು. ಆನಂತರ ಅಲ್ಲಿ ಕಾಣಿಸುವ ಕೆವೈಸಿ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.

ಹಂತ 3

ಹಂತ 3

ಕೆವೈಸಿ ಆಯ್ಕೆ ಕ್ಲಿಕ್ ಮಾಡಿದ ಬಳಿಕ, ಉದ್ಯೋಗಿಯ ದಾಖಲೆಗಳ ಮಾಹಿತಿ ಪುಟ ತೆರೆದುಕೊಳ್ಳುತ್ತದೆ. ಬ್ಯಾಂಕ್, ಪ್ಯಾನ್, ಆಧಾರ್, ಪಾಸ್‌ಪೋರ್ಟ್‌, ಡ್ರೈವಿಂಗ್ ಲೈಸೆನ್ಸ್‌, ಎಲೆಕ್ಷನ್ ಕಾರ್ಡ್‌, ರೇಷನ್ ಕಾರ್ಡ್, ನ್ಯಾಶನಲ್ ಪಾಪ್ಯುಲೇಶನ್ ರಿಜಿಸ್ಟರ್ ಗಳ ಮಾಹಿತಿ ಪಟ್ಟಿ ಕಾಣಿಸುತ್ತದೆ. ಅವುಗಳಲ್ಲಿ ಪ್ಯಾನ್ ಮಾಹಿತಿಗೆ ಕ್ಲಿಕ್ ಮಾಡಿ.

ಹಂತ 4

ಹಂತ 4

ಪ್ಯಾನ್ ಮಾಹಿತಿಯ ಕಾಲಂನಲ್ಲಿ ಪ್ಯಾನ್ ಕಾರ್ಡ್‌‌ ನಂಬರ್, ಪ್ಯಾನ್‌ನಲ್ಲಿರುವಂತೆ ನಿಮ್ಮ ಹೆಸರು ಸರಿಯಾಗಿ ನಮೂದಿಸಿ. ನಂತರ ಸೇವ್ ಮತ್ತು ಸಬ್‌ಮಿಟ್ ಬಟನ್ ಒತ್ತಿರಿ. ಪ್ಯಾನ್ ಮಾಹಿತಿ ವೇರಿಫಿಕೇಶನ್ ಪ್ರಕ್ರಿಯೆ ಮಾಡಲಾಗುತ್ತದೆ.

ಹಂತ 5

ಹಂತ 5

ಉದ್ಯೋಗಿಯು ನಮೂದಿಸಿದ ಪ್ಯಾನ್ ಮಾಹಿತಿಯ ವಿವರವನ್ನು NSDLಯು ವೇರಿಫಿಕೇಶನ್/ ದೃಢೀಕರಣ ಮಾಡತ್ತದೆ. ಉದ್ಯೋಗಿಯು ನೀಡಿರುವ ಪ್ಯಾನ್ ಮಾಹಿತಿ ಸರಿಯಾಗಿ ಇದ್ದರೆ ಸುಮಾರು 10 ದಿನಗಳ ಒಳಗೆ ಪ್ಯಾನ್ ವೇರಿಫೈಡ್ ಆಗುತ್ತದೆ.

ಹಂತ 6

ಹಂತ 6

ಪ್ಯಾನ್ ಮಾಹಿತಿ ದೃಢೀಕರಣ ಆದ ಬಳಿಕ, ಉದ್ಯೋಗಿಯ ಪ್ಯಾನ್ ಮಾಹಿತಿ ಅವರ ಪಿಎಫ್‌ ಖಾತೆಯೊಂದಿಗೆ ಲಿಂಕ್/ಜೋಡಣೆ ಆಗುತ್ತದೆ. ಹಾಗೆಯೇ ಯಶಸ್ವಿಯಾಗಿ ಲಿಂಕ್ ಆಗಿರುವುದಕ್ಕೆ ವೇರಿಫೈಡ್‌ ಚಿಹ್ನೆ ಕಾಣಿಸುತ್ತದೆ.

ಪಿಎಫ್‌ ಖಾತೆಯಲ್ಲಿ ಪ್ಯಾನ್ ಲಿಂಕ್ ಆಗದಿದ್ದರೇ?

ಪಿಎಫ್‌ ಖಾತೆಯಲ್ಲಿ ಪ್ಯಾನ್ ಲಿಂಕ್ ಆಗದಿದ್ದರೇ?

ಬಹುತೇಕ ಉದ್ಯೋಗಿಗಳು ಪಿಎಫ್‌ ಖಾತೆಯಲ್ಲಿ ಪ್ಯಾನ್ ಲಿಂಕ್ ಮಾಡುವಾಗ ಅವರ ಪ್ಯಾನ್ ಮಾಹಿತಿ ವೇರಿಫೈಡ್ ಆಗುವುದಿಲ್ಲ. ಏಕೆಂದರೇ ಉದ್ಯೋಗಿಯ ಹೆಸರು ಅಥವಾ ಜನ್ಮ ದಿನಾಂಕ ಮಾಹಿತಿ ಆ ಉದ್ಯೋಗಿಯ ಇನ್ನೊಂದು ಕೆವೈಸಿಗೆ ಹೋಲಿಕೆ ಆಗಿರುವುದಿಲ್ಲ. ಉದಾಹರಣೆಗೆ ಆಧಾರ ಕಾರ್ಡ್‌ನಲ್ಲಿ ಹೆಸರು ಅಥವಾ ಜನ್ಮ ದಿನಾಂಕಕ್ಕೂ ಮತ್ತು ಪ್ಯಾನ್ ಕಾರ್ಡ್‌ನಲ್ಲಿನ ಹೆಸರಿನಲ್ಲಿ ಭಿನ್ನತೆ ಕಂಡುಬಂದರೇ ಲಿಂಕ್ ಆಗುವುದಿಲ್ಲ.

ತಂದೆಯ ಹೆಸರು ನಮೂದಿಸಬೇಕು

ತಂದೆಯ ಹೆಸರು ನಮೂದಿಸಬೇಕು

ಉದ್ಯೋಗಿಯು ಪಿಎಫ್‌ ಖಾತೆಯಲ್ಲಿ ಪ್ಯಾನ್ ಕಾರ್ಡ್‌ ಕಾಲಂ ಭರ್ತಿ ಮಾಡುವಾಗ ಪೂರ್ಣ ಹೆಸರು ಬರೆಯಬೇಕು. ತನ್ನ ಹೆಸರು ಮತ್ತು ಇನ್ಶಿಯಲ್ ನಮೂದಿಸಿದರೇ ಪ್ಯಾನ್ ದೃಢೀಕರಣ ಆಗುವುದಿಲ್ಲ. ಹೀಗಾಗಿ ತನ್ನ ಹೆಸರು, ತಂದೆಯ ಹೆಸರು ಕಾಗೂ ಸರ್‌ನೇಮ್/ಕೊನೆಯ ಹೆಸರು ಬರೆಯಬೇಕು.

Most Read Articles
Best Mobiles in India

English summary
Your PF number is now called UAN. To know what your UAN is, you can use your Aadhaar number or PAN.Here are the steps to link PAN Card to EPF Account.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X