Home
ಟೆಕ್ ನೌಕರಿ

ನಿಮ್ಮ ಎತ್ತರ ಎಷ್ಟಿದೆ ಎಂದು ತಿಳಿದುಕೊಳ್ಳಲು ಮೆಷರ್‌ ಟೇಪ್‌‌ ಬೇಕಿಲ್ಲ, ಫೋನ್ ಇದ್ರೆ ಸಾಕು!

ಆಪಲ್‌ ಕಂಪೆನಿಯ ಐಫೋನ್ ಈಗಾಗಲೇ ಬಳಕೆದಾರರಿಗೆ ಹಲವಾರು ರೀತಿಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಈ ಫೋನ್‌ನ ಕಾರ್ಯಕ್ಷಮತೆ ಹಾಗೂ ನವೀನ ಫೀಚರ್ಸ್‌ಗಳು ಗ್ರಾಹಕರನ್ನು ಕೈ ಬೀಸಿ ಕರೆಯುವಲ್ಲಿ ಯಶಸ್ವಯಾಗಿವೆ. ಅದರಂತೆ ಐಫೋನ್‌ಗಳಲ್ಲಿ ಫೋಟೊ ಸೆರೆಹಿಡಿಯುವಾಗ ಶಟರ್ ಬಟನ್ ಕ್ಲಿಕ್ ಮಾಡದೆ ಫೋಟೊ ತೆಗೆಯಬಹುದು. ಹಾಗೆಯೇ ಹಿಂಭಾಗದ ಪ್ಯಾನೆಲ್‌ ಅನ್ನು ಬಟನ್‌ ನಂತೆ ಬಳಕೆ ಮಾಡಲು ಬಳಕೆದಾರರು 'ಬ್ಲ್ಯಾಕ್ ಟ್ಯಾಪ್' (black tap) ಫೀಚರ್ಸ್‌ ಎಂಬ ಆಯ್ಕೆ ಸಹ ಲಭ್ಯವಿದೆ. ಇದರ ನಡುವೆ ನಿಮಗೆ ಆಶ್ಚರ್ಯ ಎನಿಸುವ ಮತ್ತೊಂದು ಫೀಚರ್ಸ್‌ ಬಗ್ಗೆ ತಿಳಿಸಲಿದ್ದೇವೆ.

ಆಪಲ್‌

ಹೌದು, ಆಪಲ್‌ನ ಐಫೋನ್‌ಗಳು ಒಂದಕ್ಕೊಂದು ಭಿನ್ನ ಫೀಚರ್ಸ್‌ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇನ್ನೇನು ಮುಂದಿನ ವರ್ಷದಲ್ಲಿ ಐಫೋನ್ 15 ನ ಸರಣಿ ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಲು ಮುಂದಾಗುತ್ತಿವೆ. ಆದರೂ, ಆಪಲ್‌ ಡಿವೈಸ್‌ಗಳಲ್ಲಿ ಬಹುಪಾಲು ಜನರಿಗೆ ಗೊತ್ತೇ ಇರದ ಫೀಚರ್ಸ್‌ಗಳಿವೆ. ಅಕಸ್ಮಾತ್‌ ಗೊತ್ತಿದ್ದರೂ ಬಳಕೆ ಮಾಡುವುದು ಹೇಗೆ ಎಂಬ ಗೊಂದಲದಲ್ಲಿ ಆ ಕಡೆ ಕೆಲವರು ಗಮನ ಹರಿಸುವುದಿಲ್ಲ. ಅಂತೆಯೇ ಐಫೋನ್‌ನಲ್ಲಿ ಹಲವರಿಗೆ ತಿಳಿದಿರದ ಪ್ರಮುಖ ಫೀಚರ್ಸ್‌ ಆಗಿರುವ ಎತ್ತರ ಅಳೆಯುವ ಆಪ್‌ಬಗ್ಗೆ ಈ ಲೇಖನದಲ್ಲಿ ತಿಳಿದ್ದೇವೆ ಓದಿರಿ.

ಕ್ಯಾಮೆರಾ ಮೂಲಕವೇ ನಿಮ್ಮ ಎತ್ತರ ಎಷ್ಟು ಎಂದು ತಿಳಿಯಿರಿ

ಕ್ಯಾಮೆರಾ ಮೂಲಕವೇ ನಿಮ್ಮ ಎತ್ತರ ಎಷ್ಟು ಎಂದು ತಿಳಿಯಿರಿ

ಅರೇ.. ಕ್ಯಾಮೆರಾದಲ್ಲಿ ಅದೇಗೆ ನಮ್ಮ ಎತ್ತರ ಪತ್ತೆ ಮಾಡುವುದು ಎಂಬ ಪ್ರಶ್ನೆ ನಿಮ್ಮಲ್ಲಿ ಖಂಡಿತಾ ಮೂಡಿರುತ್ತದೆ. ಆದರೆ, ಐಫೋನ್‌ ಮೂಲಕ ನಿಮ್ಮ ಎತ್ತರವನ್ನು ಕಂಡುಕೊಳ್ಳಬಹುದು ಎಂಬ ವಿಷಯ ಮಾತ್ರ ನಿಮಗೆ ಇನ್ನಷ್ಟು ಅನುಕೂಲ ಮಾಡಿಕೊಡುತ್ತದೆ. ಸಾಮಾನ್ಯವಾಗಿ ಹಲವಾರು ಕಾರಣಗಳಿಗೆ ದೇಹದ ಎತ್ತರವನ್ನು ಕಂಡುಕೊಳ್ಳಲು ಮೆಷರ್‌ ಟೇಪ್‌ ಬಳಕೆ ಮಾಡಲಾಗುತ್ತದೆ. ಆದರೆ, ನೀವು ಆ ಟೇಪ್‌ ಇಲ್ಲದೆ ಐಫೋನ್‌ನಲ್ಲೇ ಎತ್ತರ ಅಳೆಯಬಹುದು.

ಹೇಗೆ ಸಾಧ್ಯ?

ಹೇಗೆ ಸಾಧ್ಯ?

ನಿಮ್ಮ ಬಳಿ ಐಫೋನ್‌ ಇದೆ ಎಂದಾದರೆ ನೀವು ಸಹ ಒಮ್ಮೆ ಈ ಫೀಚರ್ಸ್‌ ಬಳಕೆ ಮಾಡಬಹುದು. ಐಫೋನ್‌ಗಳಲ್ಲಿ ಇನ್‌ಬಿಲ್ಟ್‌ ಅಳತೆ ಮಾಡುವ ಆಪ್‌ ಇದ್ದು, ಈ ಆಪ್‌ ಬಳಕೆದಾರರಿಗೆ ವಸ್ತು ಅಥವಾ ಮೇಲ್ಮೈಯ ಉದ್ದ ಹಾಗೂ ಎತ್ತರವನ್ನು ಅಳೆಯಲು ಸಹಾಯಕವಾಗಲಿದೆ.

ಯಾವೆಲ್ಲಾ ಫೋನ್‌ಗಳಲ್ಲಿ ಲಭ್ಯ

ಯಾವೆಲ್ಲಾ ಫೋನ್‌ಗಳಲ್ಲಿ ಲಭ್ಯ

ಆಪಲ್‌ನ ಐಫೋನ್‌ 12 ಪ್ರೊ, ಐಫೋನ್‌ 12 ಪ್ರೊ ಮ್ಯಾಕ್ಸ್‌, ಐಫೋನ್‌ 13 ಪ್ರೊ, ಐಫೋನ್‌ 13 ಪ್ರೊ ಮ್ಯಾಕ್ಸ್, ಐಫೋನ್‌ 14 ಪ್ರೊ ಹಾಗೂ ಐಫೋನ್‌ 14 ಪ್ರೊ ಮ್ಯಾಕ್ಸ್ ಫೋನ್‌ಗಳಲ್ಲಿ ಈ ಫೀಚರ್ಸ್‌ ಬಳಕೆಗೆ ಲಭ್ಯ ಇದೆ.

LiDAR ಸ್ಕ್ಯಾನರ್‌

LiDAR ಸ್ಕ್ಯಾನರ್‌

ಈ ಮೇಲೆ ತಿಳಿಸಿದ ಎಲ್ಲಾ ಐಫೋನ್‌ಗಳ ಆವೃತ್ತಿಯಲ್ಲಿನ ರಿಯರ್‌ ಕ್ಯಾಮೆರಾ ಪಕ್ಕದಲ್ಲಿ LiDAR ಸ್ಕ್ಯಾನರ್‌ ಆಯ್ಕೆ ನೀಡಲಾಗಿದೆ. ಈ ಸ್ಕ್ಯಾನರ್‌ ಮೂಲಕ ನೀವು ನಿಮ್ಮ ಅಳತೆಯನ್ನಷ್ಟೇ ಅಲ್ಲದೆ ಯಾವುದೇ ವಸ್ತುವನ್ನು ಅಳೆಯಲು ಸಹಾಯ ಮಾಡಲಿದೆ. ಅದರಲ್ಲೂ ಇದು ಕೂಲಂಕಷವಾಗಿ ಮಾಹಿತಿಯನ್ನು ನೀಡಲಿದೆ. ಹಾಗಿದ್ರೆ, ನಿಮ್ಮ ಐಫೋನ್‌ನಲ್ಲಿ ನಿಮ್ಮ ಎತ್ತರವನ್ನು ಅಥವಾ ನಿಮ್ಮ ಸ್ನೇಹಿತರು ಕುಟುಂಬದವರ ಎತ್ತರದ ಅಳತೆಯನ್ನು ಹೇಗೆ ಮಾಡುವುದು ಎಂಬ ಬಗ್ಗೆ ಹಂತಹಂತವಾಗಿ ವಿವರಿಸಿದ್ದೇವೆ ಗಮನಿಸಿ

ಹಂತ 1

ಹಂತ 1

ಮೊದಲು ನಿಮ್ಮ ನೆಚ್ಚಿನ ಐಫೋನ್‌ನಲ್ಲಿ ಮೆಷರ್ ಆಪ್‌ ಓಪನ್‌ ಮಾಡಿ. ಬಳಿಕ ಯಾರ ಎತ್ತರವನ್ನು ಅಳೆಯುಲು ಮುಂದಾಗುವಿರೋ ಅವರನ್ನು ನಿಮ್ಮ ಎದುರಿಗೆ ನಿಲ್ಲಿಸಿಕೊಳ್ಳಿ.

ಹಂತ 2

ಹಂತ 2

ಇದಾದ ಬಳಿಕ ನೀವು ಎತ್ತರ ಅಳೆಯಲು ಮುಂದಾದಾಗ ಡಿಸ್‌ಪ್ಲೇ ನಲ್ಲಿ ತಲೆಯಿಂದ ಕಾಲಿನವರೆಗೂ ಅವರ ಚಿತ್ರ ಕಾಣಿಸಿಕೊಳ್ಳುತ್ತಿದೆಯೇ ಎಂಬುದನ್ನು ಗಮನಿಸಿ. ಅದನ್ನು ಖಚಿತಪಡಿಸಿಕೊಳ್ಳಿ.

ಹಂತ 3

ಹಂತ 3

ನಂತರ ವ್ಯಕ್ತಿಯ ತಲೆಯ ಮೇಲ್ಭಾಗದಲ್ಲಿ ಆತ ಎಷ್ಟು ಎತ್ತರ ಇದ್ದಾನೆ ಎಂಬುದನ್ನು ಅದು ತಿಳಿಸುತ್ತದೆ. ಈ ಆಯ್ಕೆಯಲ್ಲಿ ನೀವು ಅಡಿಗಳ ಲೆಕ್ಕದಲ್ಲಿ, ಇಂಚುಗಳ ಲೆಕ್ಕದಲ್ಲಿ ಅಥವಾ ಸೆಂಟಿಮೀಟರ್‌ ಲೆಕ್ಕದಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು ಅಲ್ಲೇ ಕಾಣಿಸಿಕೊಳ್ಳುವ ಸೆಟ್ಟಿಂಗ್‌ ಆಪ್‌ನಲ್ಲಿ ,ಮೆಷರ್‌, ಆಯ್ಕೆ ಮಾಡಿ ನಂತರ ಆ ವಿಭಾಗದಲ್ಲಿ ಕಾಣಿಸಿಕೊಳ್ಳುವ 'ಮೆಷರ್‌ ಯೂನಿಟ್‌' ಮೇಲೆ ಟ್ಯಾಪ್‌ ಮಾಡಿ.

Best Mobiles in India

English summary
How to measure your height using Phone's camera; explained.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+