Home
ಟೆಕ್ ನೌಕರಿ

LIC ಪ್ರೀಮಿಯಂ ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ ಗೊತ್ತಾ?

ಅಕಸ್ಮಿಕವಾಗಿ ಏನಾದರು ಅವಘಡ ನಡೆದರೇ ನಷ್ಟ ಭರಿಸಲು ನೆರವಾಗುವುದೇ 'ಇನ್ಶೂರೆನ್ಸ್‍'. ಹೀಗಾಗಿ ಇಂದು ಸ್ಮಾರ್ಟ್‌ಫೋನ್‌ಗಳಿಗೂ ವಿಮೆ ಮಾಡಿಸುವ ಸೌಲಭ್ಯಗಳು ಇವೆ. ಆದ್ರೆ ಜನರು ಈ ಗ್ಯಾಜೆಟ್ಸ್ ಸೇರಿದಂತೆ ಕೆಲವು ಎಲೆಕ್ಟ್ರಾನಿಕ್ ವಸ್ತುಗಳಗೆ ಇನ್ಶೂರೆನ್ಸ್‌ ಮಾಡಿಸುತ್ತಾರೊ ಅಥವಾ ಇಲ್ಲವೋ ನಿಖರವಾಗಿ ಹೇಳುವುದು ಕಷ್ಟ. ಆದ್ರೆ, (ಲೈಫ್) ಜೀವವಿಮೆ ಮತ್ತು ವಾಹನ ವಿಮೆಯನ್ನು ಮಾತ್ರ ಕಡ್ಡಾಯವಾಗಿ ಮಾಡಿಸಿಕೊಂಡಿರುತ್ತಾರೆ ಎಂದು ಹೇಳಬಹುದು.

LIC ಪ್ರೀಮಿಯಂ ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ ಗೊತ್ತಾ?

ಹೌದು, ವಾಹನ ವಿಮೆ ಮತ್ತು ಜೀವವಿಮೆಗಳನ್ನು ಜನರು ಮರೆಯದೆ ಮಾಡಿಸಿರುತ್ತಾರೆ. ಅದರಲ್ಲಿಯೂ ಜೀವವಿಮೆ ಪಾಲಿಸಿಗಳನ್ನು ಪ್ರತಿಯೊಬ್ಬರು ಎಲ್‌ಐಸಿ ಸಂಸ್ಥೆಯಲ್ಲಿಯೇ ಮಾಡಿಸುತ್ತಾರೆ. ಪಾಲಸಿದಾರನಿಲ್ಲದ ಕಾಲಕ್ಕೆ ತನ್ನ ನಂಬಿದವರಿಗೆ ಆರ್ಥಿಕ ನೆರವಾಗಲಿ ಎಂದು ಎಲ್‌ಐಸಿ ಪಾಲಿಸಿಗಳನ್ನು ಮಾಡಿಸುವವರೇ ಹೆಚ್ಚು. ಹಾಗೆಯೇ ಪಾಲಸಿಯ ಪ್ರೀಮಿಯಂ ಕಂತು ಪಾವತಿಸಲು ಈಗಂತೂ ಆನ್‌ಲೈನ್‌ನಲ್ಲಿ ಹಲವು ಅನಕೂಲಗಳ ಲಭ್ಯ ಇವೆ.

LIC ಪ್ರೀಮಿಯಂ ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ ಗೊತ್ತಾ?

ಎಲ್‌ಐಸಿ ಪ್ರೀಮಿಯಂ ಹಣ ಪಾವತಿಸಲು ಕಚೇರಿಗೆ ಹೋಗಬೇಕಾದ ಅವಶ್ಯಕತೆ ಈಗಿಲ್ಲ. ಎಲ್‌ಐಸಿಯು ಡಿಜಿಟಲ್ ರೂಪ ಹೊಂದಿದ್ದು, ಎಲ್ಲ ಬಗೆಯ ಪ್ರೀಮಿಯಂ ಕಂತುಗಳನ್ನು ಆನ್‌ಲೈನ್‌ ಮೂಲಕವೇ ಪಾವತಿಸಬಹುದು ಮತ್ತು ಅದಕ್ಕೆ ಪ್ರತಿಯಾಗಿ ಸ್ವೀಕೃತಿಯನ್ನು ಸಹ ಪಡೆಯಬಹುದಾಗಿದೆ. ಹಾಗಾದರೇ ಆನ್‌ಲೈನ್‌ ಮೂಲಕ ಎಲ್‌ಐಸಿ ಪ್ರೀಮಿಯಂ ಹಣ ಪಾವತಿಸುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಎಲ್‌ಐಸಿ ಪ್ರೀಮಿಯಂ  ಶುಲ್ಕ ಪಾವತಿ

ಎಲ್‌ಐಸಿ ಪ್ರೀಮಿಯಂ ಶುಲ್ಕ ಪಾವತಿ

ಎಲ್‌ಐಸಿ ಪ್ರೀಮಿಯಂ ಹಣವನ್ನು ಆನ್‌ಲೈನ್‌ ಪಾವತಿ ಮಾಡುಲು ಹಲವು ವಿಧಾನಗಳಿದ್ದು, ಅವುಗಳಲ್ಲಿ ಎಲ್‌ಐಸಿ ಅಧಿಕೃತ ವೆಬ್‌ಸೈಟ್‌ನ ಮೂಲಕ ಸಹ ಪಾವತಿಸಲು ಅವಕಾಶವಿದೆ. ಗ್ರಾಹಕರು ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಅಕೌಂಟ್‌ ತೆರೆದು(ರಿಜಿಸ್ಟರ್ ಆಗಿ)ಪಾವತಿಸಬಹುದು ಅಥವಾ ಆನ್‌ಲೈನ್‌ ಅಕೌಂಟ್ ರಿಜಿಸ್ಟರ್ ಮಾಡಿಕೊಳ್ಳದೆಯೂ ಸಹ ಹಣ ಪಾವತಿಸಬಹುದಾಗಿದೆ.

ಈ ಹಂತಗಳನ್ನು ಅನುಸರಿಸಿ(Without login)

ಈ ಹಂತಗಳನ್ನು ಅನುಸರಿಸಿ(Without login)

* ಅಧಿಕೃತ ಎಲ್‌ಐಸಿ ವೆಬ್‌ಸೈಟ್‌ಗೆ ಭೇಟಿ ನೀಡಿ. www.licindia.in
* ಪೇ ಪ್ರೀಮಿಯಂ ಆಯ್ಕೆ ಸೆಲೆಕ್ಟ್‌ ಮಾಡಿರಿ, ನಂತರ ಪೇ ಡೈರೆಕ್ಟ್‌ ಆಯ್ಕೆ ಕ್ಲಿಕ್ ಮಾಡಿ
* ಪ್ರೀಮಿಯಂ ಪೇಮೆಂಟ್ ಆಯ್ಕೆ ಒತ್ತಿರಿ, ಆನಂತರ ಪ್ರೊಸಿಡ್ ಆಯ್ಕೆ ಕ್ಲಿಕ್ಕ್ ಮಾಡಿರಿ
* ಪಾಲಿಸಿ ನಂಬರ್, ಪಾಲಿಸಿ ಮೊತ್ತ, ಸೇರಿದಂತೆ ಅಗತ್ಯ ಮಾಹಿತಿಗಳನ್ನು ತುಂಬಿರಿಸು
* ಮಾಹಿತಿ ತುಂಬಿದ ನಂತರ ಕ್ಯಾಪ್ಚಾ ಕೋಡ್ ನಮೂದಿಸಿ(captcha code), 'ಐ ಅಗ್ರೀ' ಬಾಕ್ಸ್ ಸೆಲೆಕ್ಟ್ ಮಾಡಿ, ಸಬ್ಮಿಟ್ ಒತ್ತಿರಿ.
* ಪಾಲಿಸಿ ಮಾಹಿತಿ ಮತ್ತು ಪಾವತಿಸುವ ಮೊತ್ತ ಚೆಕ್‌ ಮಾಡಿ. ಚೆಕ್‌ ಮತ್ತು ಪೇ ಆಯ್ಕೆ ಕ್ಲಿಕ್ಕ್ ಮಾಡಿ.
* ಆಗ ಹಣ ಪಾವತಿಯ ವಿವಿಧ ಆಯ್ಕೆಗಳು ಕಾಣಿಸುತ್ತವೆ ಅವುಗಳಲ್ಲಿ ನಿಮಗೆ ಅನುಕೂಲವಾದ ಪೇಮೆಂಟ್ ಆಯ್ಕೆ ಮಾಡಿ ಹಣ ಪಾವತಿಸಿ.

ಆಪ್‌ಗಳ ಮೂಲಕ ಶುಲ್ಕ ಪಾವತಿಸಬಹುದು

ಆಪ್‌ಗಳ ಮೂಲಕ ಶುಲ್ಕ ಪಾವತಿಸಬಹುದು

ಎಲ್‌ಐಸಿ ಪಾಲಿಸಿದಾರನು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಎಲ್ಐಸಿಯ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೂಲಕ ತನ್ನ ಎಲ್‌ಐಸಿ ಪಾಲಿಸಿ ಪ್ರೀಮಿಯಂ ಪಾವತಿಸುವ ಆಯ್ಕೆ ಸಹ ದೊರೆಯುತ್ತದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್‌ನ ಆಪ್ ಸ್ಟೋರ್‌ನಲ್ಲಿ ಮುಖ್ಯವಾಗಿ ಮೂರು ಅಪ್ಲಿಕೇಶನ್‌ಗಳು ಲಭ್ಯ ಇವೆ. ಅವುಗಳೆಂದರೇ LIC Customer, LIC Pay Direct ಮತ್ತು My LIC ಆಪ್ಸ್‌ಗಳು ಉಪಯುಕ್ತ.

ಆನ್‌ಲೈನ್‌ ಪಾವತಿ ವೇಳೆ ಈ ಅಂಶಗಳನ್ನು ಗಮನಿಸಿ

ಆನ್‌ಲೈನ್‌ ಪಾವತಿ ವೇಳೆ ಈ ಅಂಶಗಳನ್ನು ಗಮನಿಸಿ

* ಸರಿಯಾದ ಮತ್ತು ಚಾಲ್ತಿ ಇರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಒದಗಿಸಿ.
* ಪಾತಿಯ ರಶೀದಿಯನ್ನು ನಿಮ್ಮ ಇಮೇಲ್ ವಿಳಾಸಕ್ಕೆ ಮೇಲ್ ಮಾಡಲಾಗುತ್ತದೆ.
* ಆನ್‌ಲೈನ್ ಪ್ರೀಮಿಯಂ ಪಾವತಿಯನ್ನು ಪಾಲಿಸಿದಾರರಿಂದಲೇ ಮಾಡಬೇಕು. ಪ್ರೀಮಿಯಂ ಪಾವತಿಸಲು ಮೂರನೇ ವ್ಯಕ್ತಿಯ ಕೈಗೆ ನೀಡಬೇಡಿ.
* ಪ್ರೀಮಿಯಂ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಡೆಬಿಟ್ ಮಾಡಲಾಗಿದ್ದರೂ, ಯಾವುದೇ ತಾಂತ್ರಿಕ ಸಮಸ್ಯೆ eror ಕಂಡು ಬಂದರೇ '[email protected]' ಗೆ ವರದಿ ಮಾಡಬಹುದು.

Best Mobiles in India

English summary
LIC made easy way to pay premium through online. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+