ಮನೆಯಲ್ಲೇ ಕುಳಿತು ಸುಲಭವಾಗಿ ಎಲ್‌ಐಸಿ ಪ್ರೀಮಿಯಂ ಪಾವತಿಸಲು ಹೀಗೆ ಮಾಡಿರಿ!
ಅನಿರೀಕ್ಷಿತ ಅವಘಡ/ಹಾನಿಯಿಂದ ಆಗುವ ನಷ್ಟ ತಕ್ಕಮಟ್ಟಿಗೆ ಸರಿದೂಗಿಸಲು ಇನ್ಶೂರೆನ್ಸ್ ನೆರವಾಗುವುದು. ಈ ನಿಟ್ಟಿನಲ್ಲಿ ಸದ್ಯ ವಾಹನಗಳಿಗೂ, ಗ್ಯಾಡ್ಜೆಟ್ಸ್‌ಗಳಿಗೂ ಇನ್ಶುರೆನ್ಸ್ ಮಾಡಿಸುತ್ತಾರೆ. ಅದರಂತೆ ಜೀವವಿಮೆಯೂ ಸಹ ಅಗತ್ಯ ಮತ್ತು ಅವಶ್ಯವಾಗಿದೆ. ಜೀವವಿಮೆ ಪಾಲಿಸಿಯನ್ನು ಅನೇಕರು ಎಲ್‌ಐಸಿ ಯಲ್ಲಿ ಮಾಡಿಸುತ್ತಾರೆ. ನಿಗದಿತ ಎಲ್‌ಐಸಿ ಪ್ರೀಮಿಯಂ ಪಾವತಿಗಳನ್ನು ಆನ್‌ಲೈನ್ ಮೂಲಕ ಸುಲಭವಾಗಿ ಪಾವತಿಸಬಹುದಾಗಿದೆ.

ಫೋನ್‌ಪೇ, ಪೇಟಿಎಮ್ ಮತ್ತು ಗೂಗಲ್ ಪೇ ಅಪ್ಲಿಕೇಶನ್‌ಗಳು ಭಾರತದ ಪ್ರಮುಖ ಡಿಜಿಟಲ್ ಪಾವತಿ ವೇದಿಕೆಯಾಗಿವೆ. ಪೇಟಿಎಮ್, ಫೋನ್‌ಪೇ ಮತ್ತು ಗೂಗಲ್ ಪೇ ಯುಪಿಐ ಆಪ್ ಬಳಸಿ, ಮನೆಯಿಂದಲೇ ಎಲ್‌ಐಸಿ ಪ್ರೀಮಿಯಂ ಪಾವತಿಗಳನ್ನು ಮಾಡಬಹುದಾಗಿದೆ. ಆನ್‌ಲೈನ್ ಪಾವತಿಗಳಿಗೆ ಬಿಲ್ ಸಹ ಗ್ರಾಹಕರಿಗೆ ಲಭ್ಯವಾಗುತ್ತದೆ. ಹೀಗಾಗಿ ಪ್ರಸ್ತುತ ಬಹುತೇಕ ಬಳಕೆದಾರರು ಆನ್‌ಲೈನ್ ತಾಣಗಳ ಮೂಲಕ ಪಾವತಿ ಮಾಡುತ್ತಾರೆ.

ಪ್ರಸ್ತುತ, ಫೋನ್‌ಪೇ, ಪೇಟಿಎಮ್ ಮತ್ತು ಗೂಗಲ್ ಪೇ ಅಪ್ಲಿಕೇಶನ್‌ಗಳು ಲೀಡಿಂಗ್‌ನಲ್ಲಿ ಇರುವ ಯುಪಿಐ ಪೇಮೆಂಟ್ ಆಪ್‌ಗಳಾಗಿ ಗುರುತಿಸಿಕೊಂಡಿವೆ. ಈ ಆಪ್‌ಗಳ ಮೂಲಕ ವಿದ್ಯುತ್ ಬಿಲ್, ನೀರಿನ ಬಿಲ್, ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್ ಸೇರಿದಂತೆ ಇನ್ನು ಹಲವು ಅಗತ್ಯ ಸೇವೆಗಳನ್ನು ನಡೆಸಬಹುದಾಗಿದೆ. ಇದರೊಂದಿಗೆ ಇನ್ಶೂರೆನ್ಸ ಪಾವತಿ ಮಾಡುವ ಸೇವೆಯನ್ನು ಹೊಂದಿವೆ. ಹೀಗಾಗಿ ಎಲ್‌ಐಸಿ ಸೇರಿದಂತೆ ಇತರೆ ಜೀವ ವಿಮಾ ಪಾಲಸಿದಾರರು ಪ್ರೀಮಿಯಂ ಕಂತುಗಳನ್ನು ಈ ಫೋನ್‌ಪೇ, ಪೇಟಿಎಮ್ ಮತ್ತು ಗೂಗಲ್ ಪೇ ಅಪ್ಲಿಕೇಶನ್‌ಗಳ ಮೂಲಕ ಇಲ್ಲವೇ ವಿಮಾ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಪಾವತಿ ಮಾಡಬಹುದಾಗಿದೆ. ಹಾಗಾದರೇ ಆನ್‌ಲೈನ್ ಮೂಲಕ ಎಲ್‌ಐಸಿ ಪ್ರೀಮಿಯಂ ಕಂತು ಪಾವತಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ.

ಪೇಟಿಎಮ್ ಅಪ್ಲಿಕೇಶನ್‌ನಲ್ಲಿ LIC ಪ್ರೀಮಿಯಂ ಪಾವತಿಸಲು ಹೀಗೆ ಮಾಡಿ:
* ನಿಮ್ಮ ಮೊಬೈಲ್ ಫೋನ್‌ನಲ್ಲಿ ಪೇಟಿಎಂ ಆಪ್ ತೆರೆಯಿರಿ
* ಪೇಟಿಎಂ ಆಪ್‌ನಲ್ಲಿ ಖಾತೆಯನ್ನು ರಚಿಸಿ
* ಆಯ್ಕೆಗಳಲ್ಲಿ ನಂತರ LIC ವಿಮಾದಾರರನ್ನು ಆಯ್ಕೆ ಮಾಡಿ
* ಬಳಿಕ ನಿಮ್ಮ ಪಾಲಿಸಿ ಸಂಖ್ಯೆಯನ್ನು ನಮೂದಿಸಿ
* ಪಾಲಿಸಿ ಸಂಖ್ಯೆ, ಪಾಲಿಸಿದಾರರ ಹೆಸರು, ಪ್ರೀಮಿಯಂ ಪಾವತಿ ದಿನಾಂಕ, ಕಂತಿನ ಬಾಕಿ ಮತ್ತು ಪ್ರೀಮಿಯಂ ಮೊತ್ತದಂತಹ ಪಾಲಿಸಿ ವಿವರಗಳನ್ನು ಒಮ್ಮೆ ಚೆಕ್ ಮಾಡಿ.
* ನಿಮ್ಮ ಆಯ್ಕೆಯ ವಿಮಾ ಕೊಡುಗೆಗಳು ಮತ್ತು ಪ್ರೋಮೋ ಕೋಡ್ ಅನ್ನು ಆಯ್ಕೆ ಮಾಡಿ
* ಪಾವತಿಗಾಗಿ proceed ಆಯ್ಕೆ ಟ್ಯಾಪ್ ಮಾಡಿ ಮತ್ತು ಪಾವತಿ ವಿಧಾನವನ್ನು ಆಯ್ಕೆ ಮಾಡಿ

ಫೋನ್‌ಪೇ ಅಪ್ಲಿಕೇಶನ್‌ನಲ್ಲಿ LIC ಪ್ರೀಮಿಯಂ ಪಾವತಿಸಲು ಹೀಗೆ ಮಾಡಿ:
ಹಂತ 1: ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ ಮತ್ತು LIC ಪ್ರೀಮಿಯಂ ಐಕಾನ್ ಕ್ಲಿಕ್ ಮಾಡಿ
ಹಂತ 2: ವಿವರಗಳನ್ನು ನಮೂದಿಸಿ, ಬಾಕಿ ಮೊತ್ತವನ್ನು ಪಾವತಿಸಿ
ಹಂತ 3: ತೆರಿಗೆ ಪ್ರಯೋಜನಗಳನ್ನು ಪಡೆಯಲು ಬಿಲ್ ಅನ್ನು ತ್ವರಿತವಾಗಿ ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು ‘View Receipt' ಆಯ್ಕೆ ಕ್ಲಿಕ್ ಮಾಡಿ.

ಗೂಗಲ್ ಪೇ ಮೂಲಕ LIC ಪ್ರೀಮಿಯಂ ಪಾವತಿಸಲು ಈ ಕ್ರಮ ಅನುಸರಿಸಿ:
ಹಂತ 1: ಮೊದಲು, ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ.
ಹಂತ 2: ಬ್ಯುಸಿನೆಸ್ ಮತ್ತು ಬಿಲ್ ಆಯ್ಕೆಯಲ್ಲಿ ಕಾಣಿಸುವ LIC ಐಕಾನ್ ಟ್ಯಾಪ್ ಮಾಡಿ.
ಹಂತ 3: LIC ಪಾಲಿಸಿಯನ್ನು ಲಿಂಕ್ ಮಾಡಬೇಕಾಗಿರುವುದರಿಂದ ನಿಮ್ಮ ಪಾವತಿಗಳನ್ನು ಸುಲಭವಾಗಿ ಪಾವತಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದು. ಸ್ಟಾರ್ಟ್ ಟ್ಯಾಪ್ ಮಾಡಿ.
ಹಂತ 4: ನಿಮ್ಮ ಪಾಲಿಸಿ ಸಂಖ್ಯೆ, ಇಮೇಲ್ ಐಡಿ, ಖಾತೆಯ ಹೆಸರನ್ನು LIC ಪಾಲಿಸಿ ರೆಕಾರ್ಡ್ಸ್ ಪ್ರಕಾರ ಭರ್ತಿ ಮಾಡಿ ಇದರಿಂದ ನಿಮ್ಮ ಎಲ್ಐಸಿ ಪಾಲಿಸಿಯನ್ನು ಲಿಂಕ್ ಮಾಡಬಹುದು ಮತ್ತು ಪ್ರೀಮಿಯಂ ಪಾವತಿಸಬಹುದು.


Click it and Unblock the Notifications








