ವಾಟ್ಸಾಪ್ ಹೆಚ್ಚಾಗಿ ಬಳಕೆ ಮಾಡ್ತೀರಾ?..ಹಾಗಿದ್ರೆ, ಈ ವಿಷಯ ನಿಮಗೆ ತಿಳಿದಿರಲಿ!
ಮೆಟಾ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ (WhatsApp) ಅಪ್ಲಿಕೇಶನ್ ಹಲವು ಉಪಯುಕ್ತ ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ಆಪ್ತ ಆಗಿದೆ. ಹಾಗೆಯೇ ವಾಟ್ಸಾಪ್ ಇತ್ತೀಚಿಗೆ ನೂತನವಾಗಿ ಚಾನೆಲ್ ಫೀಚರ್ಸ್ ಅನ್ನು ಪರಿಚಯಿಸಿದ್ದು, ಹೊಸ ಅಲೆ ಎಬ್ಬಿಸಿದೆ.
ಹೌದು, ವಾಟ್ಸಾಪ್ ಹಲವು ಜನಪ್ರಿಯ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಆ ಸಾಲಿಗೆ ಚಾನೆಲ್ (WhatsApp channel) ಎಂಬ ಫೀಚರ್ ಕೂಡಾ ಈಗ ಸೇರ್ಪಡೆ ಆಗಿದೆ. ಬಳಕೆದಾರರಿಗೆ ಬಹು ಅನುಕೂಲಕರ ಎನಿಸಿರುವ ವಾಟ್ಸಾಪ್ ಚಾನೆಲ್ ಆಯ್ಕೆಯು, ಒಂದು ವೇಳೆ ಬೇಡ ಎನಿಸಿದರೆ ಡಿಲೀಟ್ ಮಾಡುವ ಸೌಲಭ್ಯ ಸಹ ಇದೆ.

ನೀವೇನಾದರೂ ವಾಟ್ಸಾಪ್ ಚಾನೆಲ್ ಪ್ರಾರಂಭಿಸಿದ್ದು, ಆ ಚಾನಲ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಬಯಸಿದರೆ, ಅದನ್ನು ಸುಲಭವಾಗಿ ಡಿಲೀಟ್ ಮಾಡಬಹುದು. ಹಾಗಾದರೆ ವಾಟ್ಸಾಪ್ ಚಾನಲ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು. ಮುಂದೆ ಓದಿರಿ.
ವಾಟ್ಸಾಪ್ ಚಾನಲ್ ಪ್ರಾರಂಭಿಸಲು ಈ ಕ್ರಮಗಳನ್ನು ಅನುಸರಿಸಿ :
ಹಂತ 1 : ಆಂಡ್ರಾಯ್ಡ್ ಅಥವಾ iOS ನಲ್ಲಿ ವಾಟ್ಸಾಪ್ ಆಪ್ ತೆರೆಯಿರಿ (ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಆಗಿರಲಿ)
ಹಂತ 2 : ನಂತರ ಕಾಣಿಸುವ ಅಪ್‌ಡೇಟ್ಸ್ (Updates) ಆಯ್ಕೆಯನ್ನು ಕ್ಲಿಕ್ ಮಾಡಿರಿ. ನಂತರ ಅಲ್ಲಿ ಕಾಣಿಸುವ ಚಾನೆಲ್ಸ್ ಮುಂದಿನ ''+'' ಆಯ್ಕೆ ಟ್ಯಾಪ್ ಮಾಡಿ
ಹಂತ 3 : ಬಳಿಕ, ವಾಟ್ಸಾಪ್ ಚಾನೆಲ್ ರಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಚಾನಲ್ ರಚಿಸಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಹಂತ 4 : ಒಂದು ವೇಳೇ ಮೊದಲ ಬಾರಿಗೆ ಚಾನೆಲ್ ಪ್ರಾರಂಭಿಸಿದರೆ, ನೀವು ಸೂಚನೆಗಳೊಂದಿಗೆ ಪಾಪ್ಅಪ್ ವಿಂಡೋವನ್ನು ಕಾಣುತ್ತಿರಿ. ಇಲ್ಲಿ ಮುಂದುವರಿಸಿ ಆಯ್ಕೆ ಕ್ಲಿಕ್ ಮಾಡಿ.
ಹಂತ 5 : ನಂತರ, ವಾಟ್ಸಾಪ್ ಗ್ರುಪ್‌ನಂತೆಯೇ, ಒಂದೆರಡು ಕಸ್ಟಮೈಸೇಶನ್ ಆಯ್ಕೆಗಳನ್ನು ಕಾಣುವಿರಿ. ಚಾನೆಲ್ ಹೆಸರು ಮತ್ತು ಚಾನೆಲ್ ಬಗ್ಗೆ ವಿವರಣೆಯನ್ನು ಎಂಟ್ರಿ ಮಾಡಿರಿ. ಆ ಬಳಿಕ ಪ್ರೊಫೈಲ್ ಫೋಟೋ ಸೆಟ್ ಮಾಡಿರಿ, ಬಳಿಕ ಚಾನಲ್ ಕ್ರಿಯೆಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ವಾಟ್ಸಾಪ್ ಚಾನೆಲ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಈ ಕ್ರಮ ಫಾಲೋ ಮಾಡಿರಿ :
ಹಂತ 1 : ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಆಪ್ ತೆರೆಯಿರಿ.
ಹಂತ 2 : ನಂತರ ಕಾಣಿಸುವ ಅಪ್‌ಡೇಟ್ಸ್ (Updates) ಆಯ್ಕೆಯನ್ನು ಕ್ಲಿಕ್ ಮಾಡಿರಿ. ನಂತರ ಅಲ್ಲಿ ಕಾಣಿಸುವ ನಿಮ್ಮ ಚಾನೆಲ್ಸ್ ಅಥವಾ ಚಾನೆಲ್ ಕ್ಲಿಕ್ ಮಾಡಿರಿ.
ಹಂತ 3 : ನಂತರ ಅಲ್ಲಿ ಕಾಣಿಸುವ ನಿಮ್ಮ ಚಾನೆಲ್ಸ್ ಅಥವಾ ಚಾನೆಲ್ ಕ್ಲಿಕ್ ಮಾಡಿರಿ.
ಹಂತ 4 : ಬಳಿಕ ಚಾನೆಲ್ ಹೆಸರಿನ ಮೇಲೆ ಟ್ಯಾಪ್ ಮಾಡಿ.
ಹಂತ 5 : ಆಗ ಚಾನೆಲ್ ಪ್ರೊಫೈಲ್ ಕಾಣಿಸುತ್ತದೆ.
ಹಂತ 6 : ಪ್ರೊಫೈಲ್ ಕೆಳಗಡೆ ಸ್ಕ್ರಾಲ್ ಮಾಡಿದಾಗ ಕೆಂಪು ಅಕ್ಷರದಲ್ಲಿ Delete channel ಆಯ್ಕೆ ಕಾಣಿಸುತ್ತದೆ
ಹಂತ 7 : ಡಿಲೀಟ್ ಚಾನೆಲ್ ಆಯ್ಕೆ ಕ್ಲಿಕ್ ಮಾಡಿದಾಗ, ಮತ್ತೊಮ್ಮೆ ಡಿಲೀಟ್ ಆಯ್ಕೆ ಕೇಳುತ್ತದೆ
ಹಂತ 8 : ನಂತರ ಡಿಲೀಟ್ ದೃಢೀಕರಣಕ್ಕಾಗಿ ಮೊಬೈಲ್ ಸಂಖ್ಯೆ ಕೇಳುತ್ತದೆ. ನಂತರ ಡಿಲೀಟ್ ಆಗುತ್ತದೆ.
ವಾಟ್ಸಾಪ್ ಚಾನೆಲ್ ಡಿಲೀಟ್ ಮಾಡಿದರೇ, ಅದು ಶಾಶ್ವತವಾಗಿ ಡಿಲೀಟ್ ಆಗುತ್ತದೆ. ಮತ್ತೆ ರೀಕವರಿ ಮಾಡಲು ಆಗದು. ಹಾಗೆಯೇ ಡಿಲೀಟ್ ಮಾಡಲಾದ ಚಾನೆಲ್ ಫಾಲೋವರ್ಸ್ ಡಿಲೀಟ್ ಮಾಡುವವರೆಗಿನ ಚಾನೆಲ್‌ನಲ್ಲಿನ ಮಾಹಿತಿ ಅವರ ಫೋನಿನಲ್ಲಿ ವೀಕ್ಷಿಸಬಹುದಾಗಿರುತ್ತದೆ.


Click it and Unblock the Notifications








