ವಾಟ್ಸಾಪ್‌ನಲ್ಲಿ ಚಾಟ್‌ಗಳನ್ನು ಶಾಶ್ವತವಾಗಿ ಹೈಡ್ ಮಾಡುವುದು ಹೇಗೆ?
ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್ ವಾಟ್ಸಾಪ್ ತನ್ನ ಬಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್ ಪರಿಚಯಿಸಿದೆ. ಅಲ್ಲದೇ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಕೆಲವೊಂದು ಆಯ್ಕೆಗಳನ್ನು ಅಳವಡಿಸಿದೆ. ಈ ನಿಟ್ಟಿನಲ್ಲಿ ವಾಟ್ಸಾಪ್ ಚಾಟ್‌ಗಳನ್ನು ಹೈಡ್ ಮಾಡುವ ಅವಕಾಶ ಸಹ ನೀಡಿದೆ. ಈ ಮೂಲಕ ಅನಗತ್ಯ ಚಾಟ್‌ಗಳನ್ನು ಹಾಗೂ ಸಂಭಾಷಣೆಗಳನ್ನು ದೂರ ಇಡಬಹುದಾಗಿದೆ.

ಹೌದು, ಜನಪ್ರಿಯ ವಾಟ್ಸಾಪ್ ತನ್ನ ಬಳಕೆದಾರರಿಗೆ ಅನಗತ್ಯ ಚಾಟ್‌ಗಳನ್ನು ಹೈಡ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಬಳಕೆದಾರರು ಆರ್ಕೈವ್ ಮಾಡುವ ಮೂಲಕ ಬೇಡದ ಚಾಟ್‌ಗಳನ್ನು ಶಾಶ್ವತವಾಗಿ ಹೈಡ್ ಮಾಡಬಹುದಾಗಿದೆ. ಈ ಆಯ್ಕೆ ಮಾಡಿದ ನಂತರ ಹೊಸ ಮೆಸೆಜ್ ಬಂದರೂ ಮುಖ್ಯ ಚಾಟ್ ಲಿಸ್ಟ್‌ನಲ್ಲಿ ಅದು ಕಾಣಿಸಿಕೊಳ್ಳುವುದಿಲ್ಲ. ಕಳೆದ ಜುಲೈನಲ್ಲಿ ವಾಟ್ಸಾಪ್ ಆಪ್ ತನ್ನ ಹೊಸ ಆರ್ಕೈವ್ ಚಾಟ್ಸ್ ಸೆಟ್ಟಿಂಗ್‌ಗಳ ಆಯ್ಕೆಯ ಹೊರಹೊಮ್ಮುವಿಕೆಯನ್ನು ಘೋಷಿಸಿತು.

ಈ ಸೆಟ್ಟಿಂಗ್ ಆರ್ಕೈವ್ ಮಾಡಿದ ಮೆಸೆಜ್‌ಗಳ ಥ್ರೆಡ್‌ನಲ್ಲಿ ಹೊಸ ಮೆಸೆಜ್ ಅನ್ನು ಸ್ವೀಕರಿಸಿದಾಗಲೂ ಬಳಕೆದಾರರು ತಮ್ಮ ಆರ್ಕೈವ್ ಮಾಡಿದ ಚಾಟ್‌ಗಳನ್ನು ಮ್ಯೂಟ್ ಮಾಡಲು ಅವಕಾಶ ಮಾಡಿ ಕೊಡುತ್ತದೆ. ಬಳಕೆದಾರರು ಆರ್ಕೈವ್ ಮಾಡಿದ ಎಲ್ಲಾ ಚಾಟ್‌ಗಳನ್ನು ಮ್ಯಾನುವಲ್ ಆಗಿ ಅನ್‌ಆರ್ಕೈವ್ ಮಾಡಲು ಆಯ್ಕೆ ಮಾಡದ ಹೊರತು ಅವುಗಳು ಶಾಶ್ವತವಾಗಿ ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ಹಾಗಾದರೇ ವಾಟ್ಸಾಪ್‌ನಲ್ಲಿ ಚಾಟ್‌ಗಳನ್ನು ಶಾಶ್ವತವಾಗಿ ಹೈಡ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್ ನಲ್ಲಿ ಚಾಟ್‌ಗಳನ್ನು ಶಾಶ್ವತವಾಗಿ ಹೈಡ್ ಮಾಡಲು ಹೀಗೆ ಮಾಡಿ:
ವಾಟ್ಸಾಪ್‌ನ ಹೊಸ ಆರ್ಕೈವ್ ಮಾಡಿದ ಸೆಟ್ಟಿಂಗ್‌ಗಳು ಬಳಕೆದಾರರಿಗೆ ಅನಗತ್ಯ ಮೆಸೆಜ್‌ಗಳನ್ನು ಮುಖ್ಯ ಚಾಟ್ ಲಿಸ್ಟ್‌ನಿಮದ ಹೈಡ್ ಮಾಡಲು ಅನುಮತಿಸುತ್ತದೆ. ಆರ್ಕೈವ್ ಮಾಡಿದ ಚಾಟ್‌ಗಳಿಗಾಗಿ ಬಳಕೆದಾರರು ಸೂಚಿಸದಿದ್ದರೆ ಅಥವಾ ಉತ್ತರಿಸದ ಹೊರತು ಅಧಿಸೂಚನೆಗಳನ್ನು ಸ್ವೀಕರಿಸುವುದಿಲ್ಲ. ಇನ್ನು ವೈಯಕ್ತಿಕ ಮತ್ತು ಗ್ರೂಪ್ ಚಾಟ್‌ಗಳನ್ನು ಆರ್ಕೈವ್ ಮಾಡಬಹುದಾಗಿದೆ. ಅದಕ್ಕಾಗಿ ಈ ಮುಂದಿನ ಹಂತಗಳನ್ನು ಅನುಸರಿಸಿ:

* ವಾಟ್ಸಾಪ್ ತೆರೆಯಿರಿ, ನೀವು ಆರ್ಕೈವ್ ಮಾಡಲು ಬಯಸುವ ಚಾಟ್ ಅನ್ನು ಆಯ್ಕೆ ಮಾಡಿ. ಇದು ಗ್ರೂಪ್ ಅಥವಾ ವೈಯಕ್ತಿಕ ಚಾಟ್ ಆಗಿರಬಹುದು.
* ಮೂರು ಆಯ್ಕೆಗಳು ಮೇಲ್ಭಾಗದಲ್ಲಿ ಕಾಣಿಸುತ್ತದೆ. ಪಿನ್, ಮ್ಯೂಟ್, ಮತ್ತು ಆರ್ಕೈವ್ (ಕೆಳಗೆ ಮುಖ ಮಾಡಿದ ಬಾಣ ಐಕಾನ್ ಎದುರಿಸುತ್ತಿದೆ). ಆರ್ಕೈವ್ ಬಟನ್ ಮೇಲೆ ಕ್ಲಿಕ್ ಮಾಡಿ.

* ಆರ್ಕೈವ್ ಮಾಡಿದ ವಿಭಾಗವು ನಿಮ್ಮ ಚಾಟ್ ಫೀಡ್‌ನ ಮೇಲ್ಭಾಗದಲ್ಲಿ ತೋರಿಸುತ್ತದೆ. ನೀವು ಯಾವುದೇ ಸಮಯದಲ್ಲಿ ವಿಭಾಗಕ್ಕೆ ಹೋಗಿ ಮತ್ತು ನಿಮ್ಮ ಖಾಸಗಿ ಚಾಟ್‌ಗಳನ್ನು ನೋಡಬಹುದು. ಬಳಕೆದಾರರು ಚಾಟ್ ಅನ್ನು ಆಯ್ಕೆ ಮಾಡುವುದರ ಮೂಲಕ ಮತ್ತು ಮೇಲಿನ ಅನ್‌ಆರ್ಕೈವ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಚಾಟ್ ಅನ್ನು ಸುಲಭವಾಗಿ ಅನ್‌ಆರ್ಕೈವ್ ಮಾಡಬಹುದು.
* ನೀವು ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಲು ಬಯಸಿದರೆ, ಚಾಟ್ಸ್ ಟ್ಯಾಬ್‌ಗೆ ಹೋಗಿ ಮತ್ತು ಮೋರ್ > ಸೆಟ್ಟಿಂಗ್ಸ್ ಆಯ್ಕೆ ಟ್ಯಾಪ್ ಮಾಡಿ. ಚಾಟ್‌ಗಳು > ಚಾಟ್ ಹಿಸ್ಟರಿ > ಆರ್ಕೈವ್ ಆಲ್ ಚಾಟ್ಸ್ ಆಯ್ಕೆ ಮೇಲೆ ಟ್ಯಾಪ್ ಮಾಡಿ.

ವಾಟ್ಸಾಪ್ ಸ್ಟೇಟಸ್ ಸೇವ್ ಮಾಡುವುದಕ್ಕಾಗಿ ಹೀಗೆ ಮಾಡಿ:
ಫೈಲ್ ಮ್ಯಾನೇಜರ್- ಪ್ರತಿ ಸ್ಮಾರ್ಟ್‌ಫೋನ್‌ಗಳಲ್ಲಿ ಫೈಲ್ ಮ್ಯಾನೇಜರ್ ಪೋಲ್ಡರ್ ಇದ್ದೇ ಇರುತ್ತದೆ. ಫೈಲ್ ಮ್ಯಾನೇಜರ್ ಪೋಲ್ಡರ್‌ನಲ್ಲಿ ಫೋಟೊ, ಪಿಡಿಎಫ್, ಡಾಕ್ಯುಮೆಂಟ್ಸ್, ವಿಡಿಯೊ ಸೇರಿದಂತೆ ಎಲ್ಲ ಮಾದರಿಯ ಫೈಲ್‌ಗಳು ಮತ್ತು ಆಪ್ಸ್‌ಗಳ ಮೀಡಿಯಾ ಫೈಲ್‌ಗಳು ಸಹ ಒಳಗೊಂಡಿರುತ್ತವೆ. ಒಂದು ವೇಳೆ ಫೈಲ್ ಮ್ಯಾನೇಜರ್ ಆಪ್ ಇಲ್ಲದಿದ್ದರೇ ಗೂಗಲ್ ಪ್ಲೇ ಸ್ಟೋರ್‌ನಿಂದ ಅತ್ಯುತ್ತಮ ಫೈಲ್ ಮ್ಯಾನೇಜರ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸ್ಟೇಟಸ್ ಸೇವ್ ಮಾಡಲು ಈ ಹಂತಗಳನ್ನು ಅನುಸರಿಸಿ
* ಸ್ಮಾರ್ಟ್‌ಫೋನ್‌ನಲ್ಲಿ ಫೈಲ್ ಮಾನೇಜರ್ ಅಪ್ಲಿಕೇಶನ್ ತೆರೆಯಿರಿ
* ನಂತರ ಫೋನ್ ಮೆಮೊರಿ ಆಯ್ಕೆಯನ್ನು ಕ್ಲಿಕ್ಕ ಮಾಡಿರಿ
* ಫೋನ್ ಮೆಮೊರಿಯಲ್ಲಿ ವಾಟ್ಸಪ್ ಆಪ್ ಐಕಾನ್ ತೆರೆಯಿರಿ
* ವಾಟ್ಸಪ್‌ನಲ್ಲಿ ಮೀಡಿಯಾ ಫೈಲ್ ಕ್ಲಿಕ್ಕ ಮಾಡಿ
* ನಂತರ ಸ್ಟೇಟಸ್ ಆಯ್ಕೆ ಸೆಲೆಕ್ಟ್ ಮಾಡಿ, ಸ್ಟೇಟಸ್‌ಗಳು ಕಾಣಿಸುತ್ತವೆ.
* ಸೇವ್ ಮಾಡಬೇಕಾದ ಸ್ಟೇಟಸ್ ಪ್ರೆಸ್ ಮಾಡಿ ನಂತರ ಕಾಪಿ ಮಾಡಿ ಗ್ಯಾಲರಿಗೆ ಪೇಸ್ಟ್ ಮಾಡಿರಿ.


Click it and Unblock the Notifications








