ಫೋನ್ ಸ್ಕ್ರೀನ್ ಆಫ್ ಆಗಿದ್ದರೂ, ಯೂಟ್ಯೂಬ್‌ನಲ್ಲಿ ವಿಡಿಯೋ ಪ್ಲೇ ಮಾಡಬಹುದು;..ಹೇಗೆ?
ಯೂಟ್ಯೂಬ್ ಜಾಗತಿಕ ಆನ್‌ಲೈನ್ ವಿಡಿಯೋ ಹಂಚಿಕೆ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿದ್ದು, ಬಹುಪಾಲು ಮಂದಿ ಸಂಚಾರ ಮಾಡುವಾಗ ಅಥವಾ ಮನರಂಜನೆ ಉದ್ದೇಶಕ್ಕೆ ಯೂಟ್ಯೂಬ್ ಅನ್ನು ನಿರಂತರವಾಗಿ ಬಳಕೆ ಮಾಡುತ್ತಾರೆ. ವಿಷಯ ಏನೆಂದರೆ ಯೂಟ್ಯೂಬ್ ಆಪ್ ಓಪನ್ ಮಾಡಿ ಅದರಲ್ಲಿ ಸಕ್ರಿಯವಾಗಿ ಇರಬೇಕು ಎಂದರೆ ಆಪ್ ಕ್ಲೋಸ್ ಮಾಡುವ ಹಾಗಿಲ್ಲ. ಆಪ್ ಕ್ಲೋಸ್ ಮಾಡಿದರೆ ವಿಡಿಯೋಗಳು ಪ್ಲೇ ಆಗುವುದಿಲ್ಲ. ಇದು ಹಲವಾರು ಬಳಕೆದಾರರಿಗೆ ತಲೆನೋವಿನ ವಿಷಯವಾಗಿದೆ.

ಹೌದು, ಯೂಟ್ಯೂಬ್‌ನಲ್ಲಿ ಏನಾದರೂ ನೋಡಬೇಕು ಎಂದರೆ ಆಪ್ ಅನ್ನು ಯಾವಾಗಲು ಆನ್ ಮಾಡಿಕೊಂಡೇ ಇರಬೇಕು. ಇಯರ್‌ಬಡ್ಸ್ ಅಥವಾ ಇಯರ್ ಫೋನ್ ಮೂಲಕ ಯಾವುದಾದರೂ ವಿಡಿಯೋ ಪ್ಲೇ ಮಾಡಿ ಸಂಗೀತ ಆಲಿಸಲು ಮುಂದಾದರೂ ಸಹ ಯೂಟ್ಯೂಬ್ ಓಪನ್ ಆಗಿಯೇ ಇರಬೇಕು. ಆದರೆ, ಈ ಮಾರ್ಗದ ಮೂಲಕ ಬಳಕೆದಾರರು ಯೂಟ್ಯೂಬ್ ಸ್ಕ್ರೀನ್ ಆಫ್ ಆಗಿದ್ದಾಗಲೂ ಯೂಟ್ಯೂಬ್‌ನಲ್ಲಿ ವಿಡಿಯೋ ಪ್ಲೇ ಮಾಡಬಹುದು.
ಯೂಟ್ಯೂಬ್‌ನಲ್ಲಿ ಸ್ಕ್ರೀನ್ ಆಫ್ ಆಗಿದ್ದಾಗಲೂ ವಿಡಿಯೋ ಗಳನ್ನು ಪ್ಲೇ ಮಾಡಲು ಎರಡು ಆಯ್ಕೆಗಳಿವೆ ಅದರಲ್ಲಿ ಪ್ರಮುಖವಾದುದು ಎಂದರೆ ಪ್ರೀಮಿಯಂ ಚಂದಾದಾರಿಕೆ. ಸದ್ಯಕ್ಕೆ ಬಹುಪಾಲು ಜನರು ಉಚಿತ ಯೂಟ್ಯೂಬ್ ಸೇವೆ ಪಡೆದುಕೊಂಡರೆ ಇನ್ನಷ್ಟು ಮಂದಿ ಹಣ ಪಾವತಿ ಮಾಡುವ ಮೂಲಕ ವಿಶೇಷ ಫೀಚರ್ಸ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಪಾವತಿ ಮಾಡಿ ಬಳಕೆ ಮಾಡುವ ಜನರು ಸ್ಕ್ರೀನ್ ಆಫ್ ಆಗಿರುವಾಗಲೂ ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡುವ ಅವಕಾಶ ಪಡೆದಿದ್ದಾರೆ.

ಯೂಟ್ಯೂಬ್ ಚಂದಾದಾರಿಕೆ ಪಡೆದವರು ಈ ಕ್ರಮ ಅನುಸರಿಸಿ
ಹಂತ 1
ಬಳಕೆದಾರರು ಮೊದಲು ನಿಮ್ಮ ಆಂಡ್ರಾಯ್ಡ್ ಹಾಗೂ ಐಓಎಸ್ ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್ ಆಪ್ ಓಪನ್ ಮಾಡಿ. ಹಾಗೆಯೇ ನಿಮಗೆ ಇಷ್ಟವಾಗುವ ಯಾವುದಾದರೂ ವಿಡಿಯೋವನ್ನು ಪ್ಲೇ ಮಾಡಿ ಜೊತೆಗೆ ಪವರ್ ಬಟನ್ ಒತ್ತುವ ಮೂಲಕ ಡಿಸ್‌ಪ್ಲೇ ಆಫ್ ಮಾಡಿ.
ಹಂತ 2
ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ನೀವು ಆ ವಿಡಿಯೋವನ್ನು ನೋಡಬೇಕು ಎಂದರೆ ವಿಡಿಯೋವನ್ನು ಮಿನಿಮೈಸ್ ಮಾಡಬಹುದು. ಈ ಮೂಲಕ ಪ್ಲೋಟಿಂಗ್ ವಿಂಡೋದಲ್ಲಿ ವಿಡಿಯೋ ಪ್ಲೇ ಆಗುತ್ತದೆ.

ಇನ್ನು ಎಲ್ಲರೂ ಚಂದಾದಾರಿಕೆ ಪಡೆಯಲು ಸಾಧ್ಯವಿಲ್ಲದ ಕಾರಣ ಈ ಫೀಚರ್ಸ್ ಸಾಮಾನ್ಯ ಬಳಕೆದಾರರಿಗೆ ಲಭ್ಯ ಇಲ್ಲ ಎಂಬುದು ಈಗಾಗಲೇ ನಿಮಗೆ ತಿಳಿದಿದೆ. ಅದಾಗ್ಯೂ ನೀವು ಈ ಫೀಚರ್ಸ್‌ನಲ್ಲಿ ವಿಡಿಯೋ ಪ್ಲೇ ಮಾಡಲು ಈ ಹಂತ ಅನುಸರಿಸಿ.
ಹಂತ 1
ಮೊದಲು ನಿಮ್ಮ ಸ್ಮಾರ್ಟ್‌ಡಿವೈಸ್‌ನಲ್ಲಿ ವೆಬ್ ಬ್ರೌಸರ್ ಓಪನ್ ಮಾಡಿ ನಂತರ ಅಲ್ಲಿ ಯೂಟ್ಯೂಬ್ ಎಂದು ಸರ್ಚ್ ಮಾಡಿ. ಅದರಂತೆ ನಿಮ್ಮ ಫೋನ್ ಅಥವಾ ಇತರೆ ಡಿವೈಸ್‌ನಲ್ಲಿ ಯೂಟ್ಯೂಬ್ ತೆರೆದುಕೊಳ್ಳುತ್ತದೆ.
ಹಂತ 2
ಇನ್ನು ಯಾವ ವಿಡಿಯೋವನ್ನು ನೋಡಲು ಇಚ್ಚಿಸುವಿರೋ ಅದನ್ನು ಪ್ಲೇ ಮಾಡಿ. ವಿಡಿಯೋ ಪ್ಲೇ ಆಗಲು ಮುಂದಾದಾಗ ಅಲ್ಲಿ ನೀಡಲಾದ ಆಯ್ಕೆ ಮೂಲಕ ಆ ಪೇಜ್ ಅನ್ನು ಡೆಸ್ಕ್‌ಟಾಪ್ ಆವೃತ್ತಿಗೆ ಬದಲಾಯಿಸಿ, ಇದಾದ ನಂತರ ಸ್ವಲ್ಪ ವಿಡಿಯೋ ಪ್ಲೇ ಆಗಲು ಸ್ವಲ್ಪ ಸಮಯ ಹಿಡಿಯುತ್ತದೆ.
ಹಂತ 3
ನಂತರದಲ್ಲಿ ಯೂಟ್ಯೂಬ್ ಸ್ಕ್ರೀನ್ ಆಫ್ ಮಾಡಿ, ಬಳಿಕ ಮೊಬೈಲ್ ಬಳಕೆದಾರರು ಫೋನ್ ಅನ್ನು ಮೇಲಿಂದ ಕೆಳಗೆ ಸ್ವೈಪ್ ಮಾಡಿ. ಆಗ ಅಲ್ಲಿ ವಿಡಿಯೋವನ್ನು ವಿರಾಮ ಅಥವಾ ಪ್ಲೇ ಮಾಡುವ ನೋಟಿಫಿಕೇಶನ್ ಕಾಣಿಸಿಕೊಳ್ಳುತ್ತದೆ. ಈ ಮೂಲಕ ಪ್ಲೇ ಬಟನ್ ಮೇಲೆ ಕ್ಲಿಕ್ ಮಾಡಿ. ಇಷ್ಟು ಕೆಲಸ ಮಾಡಿದರೆ ನಿಮ್ಮ ಯೂಟ್ಯೂಬ್ ಸ್ಕ್ರೀನ್ ಆಫ್ ಆಗಿದ್ದರು ನಿಮ್ಮ ಇಷ್ಟದ ವಿಡಿಯೋ ಪ್ಲೇ ಆಗುತ್ತಲೇ ಇರುತ್ತದೆ. ಇದರಿಂದ ಯಾವಾಗಲು ಫೋನ್ ಅನ್ನು ಆನ್ ಮಾಡಿಟ್ಟುಕೊಂಡು ನೋಡುವ ಅವಶ್ಯಕತೆ ಇರುವುದಿಲ್ಲ.
ಯೂಟ್ಯೂಬ್ ಚಂದಾದಾರಿಕೆ ಎಷ್ಟು?
ಯೂಟ್ಯೂಬ್ ಸ್ಕ್ರೀನ್ ಆಫ್ ಆಗಿದ್ದಾಗಲೂ ಸುಲಭವಾಗಿ ವಿಡಿಯೋ ಪ್ಲೇ ಮಾಡಲು ಇಷ್ಟ ಇರುವವರು ಚಂದಾದಾರರಾಗಬಹುದು. ಈ ಚಂದಾದಾರಿಕೆಯಲ್ಲಿ ಇದೊಂದೇ ಫೀಚರ್ಸ್ ಅಲ್ಲದೆ ಇನ್ನೂ ಹತ್ತು ಹಲವು ಆಕರ್ಷಕ ಫೀಚರ್ಸ್‌ಗಳನ್ನು ಅನುಭವಿಸಬಹುದಾಗಿದೆ. ಅಂತೆಯೇ ನಿಯಮಿತ ಯೋಜನೆಯು ತಿಂಗಳಿಗೆ 129 ರೂ. ಆಗಿದ್ದು, ತ್ರೈಮಾಸಿಕ ಯೋಜನೆಗೆ 399 ರೂ. ಗಳನ್ನು ಪಾವತಿ ಮಾಡಬೇಕಿದೆ. ಜೊತೆಗೆ ವಾರ್ಷಿಕ ಚಂದಾದಾರಿಕೆ ಬೇಕು ಎಂದರೆ ಬಳಕೆದಾರರು 12,90 ರೂ. ಗಳನ್ನು ಪಾವತಿ ಮಾಡಬೇಕು.
ಜಾಗತಿಕವಾಗಿ 154 ಮಿಲಿಯನ್ ಡೌನ್‌ಲೋಡ್‌ಗಳೊಂದಿಗೆ 2022 ರಲ್ಲಿ ವಿಶ್ವಾದ್ಯಂತ ಹೆಚ್ಚು ಡೌನ್‌ಲೋಡ್ ಆದ ಮನರಂಜನಾ ಆಪ್‌ಗಳಲ್ಲಿ ಯೂಟ್ಯೂಬ್ ಒಂದಾಗಿದೆ. ಜೊತೆಗೆ 2 ಬಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಲಾಗ್ ಇನ್ ಬಳಕೆದಾರರನ್ನು ಯೂಟ್ಯೂಬ್ ಹೊಂದಿದ್ದು, 100 ಕ್ಕೂ ಹೆಚ್ಚು ದೇಶಗಳಲ್ಲಿನ ಜನರು 80 ಭಾಷೆಗಳಲ್ಲಿ ಈ ಪ್ಲಾಟ್‌ಫಾರ್ಮ್ ಅನ್ನು ಬಳಕೆ ಮಾಡುತ್ತಿದ್ದಾರೆ. ಅದರಂತೆ ಪ್ರತಿ ನಿಮಿಷಕ್ಕೂ 500 ಗಂಟೆಗಳ ಕಂಟೆಂಟ್ ಅನ್ನು ಇದರಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಇನ್ನು ಭಾರತದ ವಿಷಯಕ್ಕೆ ಬಂದರೆ 467 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಯೂಟ್ಯೂಬ್ ಪ್ರಮುಖ ದೇಶಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.


Click it and Unblock the Notifications








