Home
ಟೆಕ್ ನೌಕರಿ

hotspot: ಲ್ಯಾಪ್‌ಟಾಪ್‌ ಕ್ಷಣ ಮಾತ್ರದಲ್ಲಿ ನಿಮ್ಮ ಡೇಟಾ ಖಾಲಿ ಮಾಡುತ್ತಾ? ಹಾಗಿದ್ರೆ ಈ ಕೆಲಸ ಮಾಡಿ

ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ಗಳು (computer, laptop) ಡೇಟಾ ವಿಷಯದಲ್ಲಿ ರಾಕ್ಷಸರಿದ್ದಂತೆ. ಎಷ್ಟು ಕೊಟ್ಟರು ಬೇಡ ಎನ್ನುವುದಿಲ್ಲ. ಎಲ್ಲಾ ಡೇಟಾವನ್ನು ಕ್ಷಣ ಮಾತ್ರದಲ್ಲಿ ಹೀರಿಕೊಂಡು ಬಿಡುತ್ತವೆ. ಅದರಲ್ಲೂ ನೀವು ಸ್ಮಾರ್ಟ್‌ಫೋನ್‌ನಲ್ಲಿನ ಹಾಟ್‌ಸ್ಪಾಟ್‌ (hotspot) ಮೂಲಕ ಇರುವ ಸಣ್ಣ ಪ್ರಮಾಣದ ಡೇಟಾವನ್ನೇ ಬಳಕೆ ಮಾಡಲು ಮುಂದಾದರೆ ಕ್ಷಣ ಮಾತ್ರದಲ್ಲಿ ಡೇಟಾ ಖಾಲಿಯಾಯ್ತು ಎಂದು ಠಟ್‌ ಅಂತಾ ನಿಮ್ಮ ಮೊಬೈಲ್‌ಗೆ ಮೆಸೆಜ್‌ ಬರುತ್ತದೆ.

ಹೌದು, ಈ ರೀತಿಯ ಸಮಸ್ಯೆಗಳನ್ನು ಸಾಕಷ್ಟು ಜನರು ಅನುಭವಿಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಹುಪಾಲು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಮೊಬೈಲ್‌ ಮೂಲಕವೇ ಹಾಟ್‌ಸ್ಪಾಟ್‌ ಬಳಕೆ ಮಾಡಿಕೊಂಡು ಡೇಟಾ ಬಳಕೆ ಮಾಡುತ್ತಿದ್ದಾರೆ. ಈ ನಡುವೆ ನೀವು ಲ್ಯಾಪ್‌ಟಾಪ್‌ನಲ್ಲಿ ಈ ಕೆಲವು ಸೆಟ್ಟಿಂಗ್‌ಗಳನ್ನು ಆನ್‌ ಮಾಡುವ ಮೂಲಕ ಇರುವ ಸಣ್ಣ ಪ್ರಮಾಣದ ಡೇಟಾವನ್ನೇ ಒಂದು ದಿನ ಬಳಕೆ ಮಾಡಬಹುದು. ಹಾಗಿದ್ರೆ, ಈ ಸೆಟ್ಟಿಂಗ್ ಅನ್ನು‌ ಆನ್‌ ಮಾಡುವುದು ಹೇಗೆ ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಲ್ಯಾಪ್‌ಟಾಪ್‌ ಕ್ಷಣ ಮಾತ್ರದಲ್ಲಿ ನಿಮ್ಮ ಡೇಟಾ ಖಾಲಿ ಮಾಡುತ್ತಾ? ಹಾಗಿದ್ರೆ...

ಸ್ಮಾರ್ಟ್‌ಫೋನ್‌ ಹಾಟ್‌ಸ್ಪಾಟ್‌ : ನಿಮ್ಮ ಲ್ಯಾಪ್‌ಟಾಪ್ ಅನ್ನು ರೈಲಿನಲ್ಲಿ ಅಥವಾ ವೈ-ಫೈ ಇಲ್ಲದೆ ಎಲ್ಲಿಯಾದರೂ ಬಳಕೆ ಮಾಡಲು ಮುಂದಾದಾಗ ಖಂಡಿತಾ ನೀವು ನಿಮ್ಮ ಫೋನ್ ಅನ್ನು ಹಾಟ್‌ಸ್ಪಾಟ್ ಆಗಿ ಬಳಕೆ ಮಾಡಲು ಮುಂದಾಗುತ್ತೀರಿ. ಇಲ್ಲಿ ಆಗುವ ಸಮಸ್ಯೆ ಏನೆಂದರೆ ಕಂಪ್ಯೂಟರ್‌ಗಳು ಸಾಕಷ್ಟು ಡೇಟಾವನ್ನು ಹೀರಿಕೊಳ್ಳುತ್ತವೆ. ಇದಕ್ಕೆ ಕಾರಣ ಸಾಫ್ಟ್‌ವೇರ್ ಅಪ್‌ಡೇಟ್‌ ಆಗಲಿದ್ದು, ಇದಕ್ಕೆ ಹೆಚ್ಚಿನ ಡೇಟಾದ ಅವಶ್ಯಕತೆ ಇರುತ್ತದೆ. ಆದಾಗ್ಯೂ ನೀವು ಡೇಟಾ ಉಳಿಸಬೇಕು ಎಂದರೆ ಈ ಮಾರ್ಗ ಅನುಸರಿಸಿ.

ವಿಂಡೋಸ್‌ನಲ್ಲಿ ಮೀಟರ್ಡ್‌ ಸಂಪರ್ಕವನ್ನು ಸಕ್ರಿಯಗೊಳಿಸಿ:
ನೀವು ಇಂಟರ್ನೆಟ್‌ಗೆ ಸಂಪರ್ಕಿಸಿದಾಗಲೆಲ್ಲಾ ಮೈಕ್ರೋಸಾಫ್ಟ್‌ನಿಂದ ವಿಂಡೋಸ್ ಬಹಳಷ್ಟು ನವೀಕರಣಗಳು ಮತ್ತು ಇತರ ಮಾಹಿತಿಯನ್ನು ಡೌನ್‌ಲೋಡ್ ಮಾಡುತ್ತದೆ. ಇದಕ್ಕಾಗಿಯೇ ವಿಂಡೋಸ್ ನಿಮಗೆ ಯಾವುದೇ ಇಂಟರ್ನೆಟ್ ಸಂಪರ್ಕವನ್ನು ಸಹ ನಿರ್ದಿಷ್ಟ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಒಳಗೊಂಡಂತೆ ಮೀಟರ್ಡ್‌ ಎಂದು ಗುರುತಿಸಲು ಅನುಮತಿಸುತ್ತದೆ.

ಹಂತ 1 : ಮೊದಲು ನಿಮ್ಮ ಡಿವೈಸ್‌ನಲ್ಲಿ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ. ಅಲ್ಲಿ ನೆಟ್‌ವರ್ಕ್ ಮತ್ತು ಇಂಟರ್ನೆಟ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಇದಾದ ನಂತರದಲ್ಲಿ ನಿಮ್ಮ ಪ್ರಸ್ತುತ ವೈ-ಫೈ ನೆಟ್‌ವರ್ಕ್‌ನ ಹೆಸರಿನ ಮೇಲೆ ಕ್ಲಿಕ್‌ ಮಾಡಿ. ಬಳಿಕ ಮೀಟರ್ಡ್‌ ಕನೆಕ್ಷನ್‌ ಅನ್ನು ಆನ್‌ ಮಾಡಿದ್ರೆ ಸಾಕು. ಈ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಡೇಟಾ ಅಷ್ಟೇ ಅಲ್ಲದೆ ಇತರೆ ಡೇಟಾವನ್ನೂ ಸಹ ಉಳಿಸಬಹುದಾಗಿದೆ.

ಲ್ಯಾಪ್‌ಟಾಪ್‌ ಕ್ಷಣ ಮಾತ್ರದಲ್ಲಿ ನಿಮ್ಮ ಡೇಟಾ ಖಾಲಿ ಮಾಡುತ್ತಾ? ಹಾಗಿದ್ರೆ...

ಈ ರೀತಿ ಮಾಡಿದ್ರೆ ಏನಾಗುತ್ತದೆ?: ಮೈಕ್ರೋಸಾಫ್ಟ್ ಪ್ರಕಾರ ಈ ಫೀಚರ್ಸ್‌ ಅನ್ನು ಆನ್‌ ಮಾಡುವುದರಿಂದ ಕೆಲವು ವಿಷಯಗಳು ಬದಲಾಗುತ್ತವಂತೆ. ಈ ವಿಭಾಗದಲ್ಲಿ ಆದ್ಯತೆಯ ನವೀಕರಣಗಳನ್ನು ಮಾತ್ರ ಇನ್‌ಸ್ಟಾಲ್‌ ಆಗಲಿವೆ. ಇದರಲ್ಲಿನ ಒನ್ ಡ್ರೈವ್‌ ಎಲ್ಲಾ ಆಫ್‌ಲೈನ್ ಫೈಲ್‌ಗಳ ಆಟೋಮ್ಯಾಟಿಕ್‌ ಅಪ್‌ಲೋಡ್ ಮಾಡುವುದನ್ನು ವಿರಾಮಗೊಳಿಸುತ್ತದೆ.

ಇದರೊಂದಿಗೆ ಆಪ್ ಸ್ಟೋರ್ ಡೌನ್‌ಲೋಡ್‌ಗಳು ಮತ್ತು ಸ್ಕ್ರೀನ್ ಟೈಲ್ ಸಿಂಕ್ ಮಾಡುವಿಕೆ ಕಾರ್ಯ ಸಹ ನಿಲ್ಲುತ್ತದೆ. ಹೆಚ್ಚುವರಿಯಾಗಿ, ಕೆಲವು ಆಪ್‌ಗಳು ಈ ಆಯ್ಕೆಯನ್ನು ಸಕ್ರಿಯಗೊಳಿಸಿದಾಗ ನಿಮ್ಮ ಡೇಟಾ ಕೋಟಾವನ್ನು ಕಡಿಮೆ ಬಳಸಲು ಮುಂದಾಗುತ್ತವೆ. ಇದರೊಂದಿಗೆ ನೀವು ಸೀಮಿತ ಎಂದು ಗುರುತಿಸಿರುವ ನೆಟ್‌ವರ್ಕ್‌ಗೆ ಮಾಸಿಕ ಡೇಟಾ ಮಿತಿಯನ್ನು ಹೊಂದಿಸಬಹುದು.

ಮ್ಯಾಕ್‌ನಲ್ಲಿ ಹಾಟ್-ಸ್ಪಾಟ್ ಟ್ರಾಫಿಕ್ ಅನ್ನು ಹೇಗೆ ಆನ್‌ ಮಾಡುವುದು?:
ಆಪಲ್‌ನ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ವೈ ಫೈ ಬಳಕೆಯನ್ನು ಮಿತಿಗೊಳಿಸಲು ಯಾವುದೇ ಇನ್‌ಬಿಲ್ಟ್‌ ಆಯ್ಕೆ ಇಲ್ಲ. ಆದರೆ, ಟ್ರಿಪ್‌ಮೋಡ್ ಎಂಬ ಥರ್ಡ್‌ ಪಾರ್ಟಿ ಆಪ್‌ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಆರಂಭದಲ್ಲಿ ಏಳು ದಿನಗಳ ಉಚಿತ ಪ್ರಯೋಗವನ್ನು ನೀಡಲಿದೆ. ನಂತರ ಇದಕ್ಕೆ ಪಾವತಿ ಮಾಡಬೇಕು. ನೀವು ಕಂಪನಿಯಿಂದ ನೇರವಾಗಿ ಖರೀದಿ ಮಾಡಲು ಮುಂದಾದರೆ $17 ನ ಆರಂಭಿಕ ಬೆಲೆ ಪಾವತಿ ಮಾಡಬೇಕಿದೆ.

ಲ್ಯಾಪ್‌ಟಾಪ್‌ ಕ್ಷಣ ಮಾತ್ರದಲ್ಲಿ ನಿಮ್ಮ ಡೇಟಾ ಖಾಲಿ ಮಾಡುತ್ತಾ? ಹಾಗಿದ್ರೆ...

ಇದನ್ನು ಆಕ್ಟಿವ್ ಮಾಡುವುದು ಹೇಗೆ?: ಈ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿದ ಮೇಲೆ ನೀವು ಡೇಟಾ ಮೇಲೆ ನೀವು ಕಂಟ್ರೋಲ್‌ ತೆಗೆದುಕೊಳ್ಳಬಹುದು. ಅಂದರೆ ಮೇಲಿನ ಎಡ ಮೂಲೆಯಲ್ಲಿ ಸ್ವಿಚ್ ಅನ್ನು ಟಾಗಲ್ ಮಾಡಿ ಮತ್ತು ಪ್ರತಿ ಆಪ್‌ ಅನ್ನು ಇಂಟರ್ನೆಟ್ ಪ್ರವೇಶಿಸದಂತೆ ತಡೆಯುವ ಹಾಗೆ ಮಾಡಬಹುದು. ಕೆಲವು ಆಪ್‌ಗಳನ್ನು ಪರಿಶೀಲಿಸುವ ಮೂಲಕ ನೀವು ಅನುಮತಿಯನ್ನು ಮರಳಿ ನೀಡಬಹುದು. ಇದರರ್ಥ ನೀವು ನಿರ್ದಿಷ್ಟವಾಗಿ ಇಂಟರ್ನೆಟ್ ಅನ್ನು ಪ್ರವೇಶಿಸಲು ಅನುಮತಿ ನೀಡುವ ಆಪ್‌ಗಳು ಮಾತ್ರ ಇಂಟರ್ನೆಟ್ ಅನ್ನು ಬಳಕೆ ಮಾಡುತ್ತವೆ.

Best Mobiles in India

English summary
Turn on this setting for data save if you're using a laptop with smartphone hotspot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+