Just In
- 12 hrs ago
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- 13 hrs ago
ನೀವು ಸ್ಮಾರ್ಟ್ವಾಚ್ ಬಳಕೆ ಮಾಡುತ್ತೀರಾ!?... ಈ ಸೆನ್ಸರ್ಗಳ ಬಗ್ಗೆ ತಿಳಿಯಿರಿ!
- 14 hrs ago
ಬಿಡುಗಡೆಗೂ ಮುನ್ನವೇ ಸದ್ದು ಮಾಡ್ತಿದೆ ಒಪ್ಪೋ ರೆನೋ 8T! ಬೆಲೆ ಎಷ್ಟಿರಬಹುದು?
- 14 hrs ago
YONO ಆಪ್ ಪಾಸ್ವರ್ಡ್ ಮರೆತಿದ್ದೀರಾ?..ಹಾಗಿದ್ರೆ, ಈ ಕ್ರಮ ಅನುಸರಿಸಿ!
Don't Miss
- News
ವಿಮಾನದ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ: ಪ್ರಯಾಣಿಕರ ವಿರುದ್ಧ ಕ್ರಮ
- Automobiles
ಟಾಟಾ ಹ್ಯಾರಿಯರ್, ಸಫಾರಿ ಫೇಸ್ಲಿಫ್ಟ್ ಶೀಘ್ರ ಬಿಡುಗಡೆ: ಏನೆಲ್ಲ ಹೊಸತನ ಹೊಂದಿವೆ..
- Sports
ಹ್ಯಾರಿಸ್ ರೌಫ್ ಜೊತೆ ಭಾರತದ ಈ ವೇಗಿಯನ್ನು ಹೋಲಿಸಬೇಡಿ ಎಂದ ಪಾಕ್ ಮಾಜಿ ಕ್ರಿಕೆಟಿಗ
- Finance
America IT Company Layoffs: ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ: ಲಕ್ಷಾಂತರ ವೃತ್ತಿಪರರ ಬದುಕು ಅತಂತ್ರ
- Movies
ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ 'ಪದ್ಮಾವತಿ'ಯ ತುಳಸಿ
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೊಬೈಲ್ ಚಾರ್ಜ್ ಮಾಡುವಾಗ ಹೀಗೆ ಮಾಡಿದರೇ ಬ್ಯಾಟರಿ ಹಾಳಾಗೋದು ಗ್ಯಾರಂಟಿ!
ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಅವಶ್ಯಕ ಡಿವೈಸ್ ಆಗಿದ್ದು, ಪ್ರತಿಯೊಬ್ಬರಿಗೂ ಅತ್ಯಗತ್ಯ. ಆದರೆ ಸ್ಮಾರ್ಟ್‌ಪೋನ್ ಬ್ಯಾಟರಿ ಬ್ಯಾಕ್‌ಅಪ್ ಸರಿಯಾಗಿ ಬರ್ತಿಲ್ಲಾ ಎನ್ನುವುದು ಬಹುತೇಕರ ಗೋಳು. ಸಾಮಾನ್ಯವಾಗಿ ರಾತ್ರಿಯಿಡಿ ಚಾರ್ಜ್‌ಹಾಕಿ ಮಲಗುವವರು ಒಂದೆಡೆಯಾದರೇ, ಮೇಲಿಂದ ಮೇಲೆ ಚಾರ್ಜ್ ಮಾಡುವ ಬಳಕೆದಾರರಿಗೆನು ಕಡಿಮೆ ಇಲ್ಲ. ಪೋನ್ ಸರಿಯಾದ ಕ್ರಮದಲ್ಲಿ ಚಾರ್ಜ್ ಮಾಡುವವರು ತುಂಬಾ ವಿರಳ. ಸರಿಯಾದ ಕ್ರಮ ಅನುಸರಿಸದಿದ್ರೇ ಫೋನ್ ಬ್ಯಾಟರಿಗೆ ಧಕ್ಕೆ ಗ್ಯಾರಂಟಿ.

ಯಾವಾಗ ಚಾರ್ಜ್ ಮಾಡಬೇಕು?
ಸ್ಮಾರ್ಟ್‌ಫೋನ್ ಅನ್ನು ಇದೇ ಟೈಮಿನಲ್ಲಿ ಚಾರ್ಜ್ ಮಾಡಬೇಕೆಂದು ಯಾವುದೇ ರೂಲ್ಸ್ ಇಲ್ಲ. ಆದರೆ ಬ್ಯಾಟರಿ ಸಾಧ್ಯವಾದಷ್ಟು ಶೇ.50% ಟು ಶೇ.100% ಅಡುವಿನ ಅಂತರದಲ್ಲಿರಲಿ. ಅಂದರೇ 50 ಪರ್ಸೆಂಟ್‌ಗಿಂತ ಕಡಿಮೆಯಾದಾಗ ಚಾರ್ಜ್ ಮಾಡಬೇಕು ಮತ್ತು ಚಾರ್ಜಿಂಗ್ ಪೂರ್ಣ 100 ಪರ್ಸೆಂಟ್ ತಲುಪುವುದಕ್ಕೆ ಬಿಡಬಾರದು. 90ರ ಗಡಿ ದಾಟಿದಾಗ ಅನ್‌ಪ್ಲಗ್ ಮಾಡುವುದು ಒಳಿತು. ಇದು ಬ್ಯಾಟರಿಗೆ ದಕ್ಕೆ ಎನಿಸುವುದಿಲ್ಲ.

ಹೌದು, ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಖಾಲಿಯಾಗುವುದು ಬಳಕೆದಾರರ ಬಳಕೆಯ ಮೇಲೆ ಅವಲಂಭಿತವಾಗಿದ್ದು, ಆದರೆ ನಿರಂತರ ಇಂಟರ್ನೆಟ್ ಆಧಾರಿತ ಆಪ್‌ಗಳ ಬಳಕೆ ಮತ್ತು ಗೇಮ್ಸ್ ಆಡುವುದು ಬ್ಯಾಟರಿ ಬಾಳಿಕೆಯನ್ನು ಹೆಚ್ಚಾಗಿ ನುಂಗುತ್ತದೆ. ಇದರಿಂದಾಗಿ ಪದೇ ಪದೇ ಚಾರ್ಜ್ ಹಾಕಬೇಕಾಗುತ್ತದೆ. ಕೇಲವರಂತು ಪವರ್‌ಬ್ಯಾಂಕ್ ಮೋರೆ ಹೋಗುತ್ತಾರೆ. ಚಾರ್ಜ್ ಮಾಡುವಾಗ ಸರಿಯಾದ ಕ್ರಮಗಳನ್ನು ಅನುಸರಿಸುವುದು ಉತ್ತಮ.

ಚಾರ್ಜ್ ನಿಲ್ಲುತ್ತಿಲ್ಲವೆಂದು ಯಾವಾಗಲೂ ಚಾರ್ಜ್ ಮಾಡುತ್ತಲೇ ಇರುವುದು ಒಳ್ಳೆಯದಲ್ಲಾ. ಫೋನ್ ಅನ್ನು ಅತೀಯಾಗಿ ಚಾರ್ಜ್ ಮಾಡುವುದರಿಂದ ಅವಘಡಗಳು ಸಂಭವಿಸುವ ಸಾಧ್ಯತೆಗಳು ಇರುತ್ತದೆ. ಅದಕ್ಕಾಗಿ ಇಂದಿನ ಲೇಖನದಲ್ಲಿ ಫೋನ್ ಚಾರ್ಜಿಂಗ್ ಕುರಿತು ಕೇಲವು ಟಿಪ್ಸ್ ನೀಡಲಾಗಿದೆ. ಹಾಗಾದರೇ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಅನುಸರಿಸಬೇಕಾದ ಕೇಲವು ಕ್ರಮಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಫುಲ್ 100 ಪರ್ಸೆಂಟ್ ಚಾರ್ಜ್ ಮಾಡಬೇಕಾ?
ಫುಲ್ 100 ಪರ್ಸೆಂಟ್ ಚಾರ್ಜ್ ಮಾಡಬೇಕಾ?. ಖಂಡಿತಾ ಮಾಡಬೇಡಿ. ಚಾರ್ಜಿಂಗ್ ಪಾಯಿಂಟ್ ನೂರರ ಸನಿಹ ಬಂದಾಗ ಚಾರ್ಜ್ ತೆಗೆದುಬಿಡಿ. ಆದರೆ ಎಕ್ಸ್‌ಪರ್ಟ್ಸ್‌ಗಳು ಹೇಳುವ ಪ್ರಕಾರ ತಿಂಗಳಿಗೆಮ್ಮೆ ಸ್ಮಾರ್ಟ್‌ಫೋನ್ ಅನ್ನು 0 ದಿಂದ 100 ವರೆಗೂ ಪೂರ್ಣಚಾರ್ಜ್ ಮಾಡಬೇಕಂತೆ. ಇದು ಸ್ಮಾರ್ಟ್‌ಫೋನ್ ಬ್ಯಾಟರಿಗೆ ರೀಸ್ಟಾರ್ಟ್ ಮಾಡಿದಂತೆ.

ರಾತ್ರಿಯಿಡಿ ಚಾರ್ಜ್ ಹಾಕಬಹುದೇ?
ರಾತ್ರಿ ಚಾರ್ಜ್ ಹಾಕಬಹುದು ಆದರೆ ಫೋನ್ 100 ಪರ್ಸೆಂಟ್ ಆಗಿದ್ದರು ಚಾರ್ಜ್ ಹಾಗೇ ಇರುತ್ತದೆ. ಆಫ್ ಮಅಡುವುದೇ ಇಲ್ಲ. ಇದರಿಂದ ಫೋನ್ ಬಿಸಿಯಾಗಿ ಅವಘಡಗಳು ಆಗುವ ಛಾನ್ಸ್ ಇರುತ್ತದೆ. ಹೀಗಾಗಿ ರಾತ್ರಿಯಿಡಿ ಚಾರ್ಜ್ ಹಾಕುವುದು ಒಳ್ಳೆಯದಲ್ಲ. ಇತ್ತೀಚಿನ ನೂತನ ಸ್ಮಾರ್ಟ್‌ಫೋನ್‌ಗಳು ಚಾರ್ಜ್ ಪೂರ್ಣವಾದ ನಂತರ ಚಾರ್ಜಿಂಗ್ ತೆಗೆದುಕೊಳ್ಳುವುದನ್ನು ಸ್ಟಾಪ್ ಮಾಡಿಕೊಳ್ಳುತ್ತವೆ.

ಬೇರೆಫೋನ್ ಚಾರ್ಜರ್ ಬಳಸಬಹುದೇ?
ನಿಮ್ಮ ಸ್ಮಾರ್ಟ್‌ಫೋನ್‌ಗೆ ಕಂಪನಿಯು ನೀಡಿರುವ ಚಾರ್ಜರ್ ಮಾತ್ರ ಬಳಸಿ. ಥರ್ಡ್‌ಪಾರ್ಟಿ ಚಾರ್ಜರ್ ಮತ್ತು ಬೇರೆ ಕಂಪನಿಯ ಚಾರ್ಜರ್‌ಗಳನ್ನು ಬಳಸದಿರಿ. ಅದರಲ್ಲೂ ಕಡಿಮೆ ಬೆಲೆಗೆ ಸೀಗುವ ಚಾರ್ಜರ್‌ಗಳನ್ನು ಬಳಸುವ ಮುನ್ನ ಯೋಚಿಸಿ. ಯಾಕಂದ್ರೆ ಇವುಗಳು ನಿಮ್ಮ ಫೋನ್ ಬ್ಯಾಟರಿ ಬಾಳಿಕೆಯನ್ನು ಹಾಳುಮಾಡುವ ಸಾಧ್ಯತೆಗಳಿರುತ್ತವೆ.

ಫಾಸ್ಟ್ ಚಾರ್ಜಿಂಗ್ ಉತ್ತಮವೇ?
ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಚಾರ್ಜರ್ ನೀಡುತ್ತಿದ್ದು, ಇದರಿಂದ ಫೋನ್‌ಗಳು ಬೇಗನೆ ಚಾರ್ಜ್ ಪಡೆದುಕೊಳ್ಳುತ್ತವೆ. ಫೋನ್‌ಗಳ ಬ್ಯಾಟರಿಯಲ್ಲಿ ಪವರ್ ಮ್ಯಾನೇಜಮೆಂಟ್ ಐಸಿ ಚಿಪ್ ಇರುತ್ತದೆ(PMIC). ಫಾಸ್ಟ್‌ಚಾರ್ಜ್ ತಂತ್ರಜ್ಞಾನದ ಬೆಂಬಲವನ್ನು ಹೊಂದಿದ್ದರೇ, ಫೋನ್‌ಗಳಿಗೆ ಏನು ಸಮಸ್ಯೆ ಇಲ್ಲ.

ಬ್ಯಾಟರಿ ಸ್ಟೋರೇಜ್ ಹೇಗೆ?
ಲಿಥೀಯಮ್ ಬ್ಯಾಟರಿಗಳನ್ನು ಬಹಳ ದಿನಗಳ ಕಾಲ ಚಾರ್ಜ್ ಮಾಡದೇ ಖಾಲಿಯಾಗಿಡಬೇಡಿ. ನೀವು ಫೋನ್ ಬಳಸದಿದ್ದರೂ 50 ಪರ್ಸೆಂಟ್ ಆದ್ರೂ ಚಾರ್ಜ್ ಇರಬೇಕು. ಇಲ್ಲದಿಂದರೇ ಫೋನ್ ಬ್ಯಾಟರಿ ಬಾಳಿಕೆ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಆಗ ಪ್ರತಿ ತಿಂಗಳು ಫೋನ್ ಬ್ಯಾಟರಿಯು 5-10 ಪರ್ಸೆಂಟ್ ಚಾರ್ಜ್‌ನಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಓವರ್ ಚಾರ್ಜ್ ಬೇಡಾ
ಫೋನ್ ಚಾರ್ಜರ್ ಕಂಡ ಕೂಡಲೇ ಚಾರ್ಜಿಂಗ್ ಹಾಕುವುದು ಹಾಗೆಯೇ ಪದೇ ಪದೇ ಮೊಬೈಲ್ ಚಾರ್ಜ್ ಮಾಡುವ ಅಭ್ಯಾಸ ಬಿಟ್ಟುಬಿಡಿ. ಮೊಬೈಲ್ ಬ್ಯಾಟರಿಯನ್ನು ಒಮ್ಮೆ ( 80%-90%)ಪೂರ್ತಿಯಾಗುವವರೆಗೂ ಚಾರ್ಜ್ ಮಾಡಿ. ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸ್ಮಾರ್ಟ್‌ಫೋನಿನ ಬ್ಯಾಟರಿ ಚಾರ್ಜ್ ಪಿನ್ ಸಹ ಹಾಳಾಗಿಬಿಡುತ್ತದೆ.

ಬ್ಯಾಟರಿ ಸೇವಿಂಗ್ ಆಪ್ಸ್
ಬ್ಯಾಟರಿ ಸೇವಿಂಗ್ ಗಾಗಿ ಥರ್ಡ್ ಪಾರ್ಟಿ ಬ್ಯಾಟರಿ ಆಪ್‌ಗಳನ್ನು ಬಳಸುತ್ತಿದ್ದರೇ ಮೊದಲು ಡಿಲೀಟ್ ಮಾಡಿ. ಈ ಥರ್ಡ್ ಪಾರ್ಟಿ ಬ್ಯಾಟರಿ ಆಪ್‌ಗಳೂ ಜಾಹೀರಾತುಗಳನ್ನು ನಿಮ್ಮ ಸ್ಮಾರ್ಟ್‌ಫೋನಿಗೆ ಲೋಡ್ ಮಾಡುವುದಲ್ಲದೇ, ಇತರ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ನಿಮಗಾಗಿ ಶಿಫಾರಸ್ಸು ಮಾಡುತ್ತಲೇ ಇರುತ್ತವೆ. ಜೊತೆಗೆ ಫೋನ್ ಬ್ಯಾಟರಿಯನ್ನು ಸಹ ಕಬಳಿಸುತ್ತಲೇ ಇರುತ್ತದೆ.

ಮೇಲಿಂದ ಮೇಲೆ ಚಾರ್ಜ್
ಪೂರ್ಣ ರಾತ್ರಿಯಿಡೀ ಫೋನನ್ನು ಚಾರ್ಜ್‌ಗೆ ಇಡುವುದು ಹಾಗೂ ಮೇಲಿಂದ ಮೇಲೆ ಚಾರ್ಜ್ ಮಾಡುವುದು ಕೂಡ ಒಳ್ಳೆಯ ಅಭ್ಯಾಸವೇನಲ್ಲ. ಮೊಬೈಲ್ ಚಾರ್ಜ್ ಮಾಡುವಾಗ ಹೆಚ್ಚೆಂದರೆ ಶೇ.85%ರಷ್ಟು ಬ್ಯಾಟರಿ ಚಾರ್ಜ್ ಮಾಡಿ ಮತ್ತು ಕಡಿಮೆ ಎಂದರೂ 20 ಪರ್ಸೆಂಟ್ ಬ್ಯಾಟರಿ ಚಾರ್ಜ್ ಇರುವಂತೆ ನೋಡಿಕೊಳ್ಳಿ. ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್ ನಿಮ್ಮ ಫೋನ್ ಬ್ಯಾಟರಿಯ ಬಾಳಿಕೆಯನ್ನು ಕಡಿತಗೊಳಿಸಬಹುದು.

ಗುಣಮಟ್ಟದ ಚಾರ್ಜರ್
ಕಡಿಮೆ ಹಣಕ್ಕೆ ಸಿಗುವ ಸಾದಾ ಚಾರ್ಜರ್ ಬಳಸಿ ಫೋನ್ ಚಾರ್ಜ್ ಮಾಡಲೇ ಬೇಡಿ. ಅವುಗಳು ಗುಣಮಟ್ಟ ಉತ್ತಮವಾಗಿರುವುದಿಲ್ಲ ಹಾಗೂ ವಿದ್ಯುತ್ ಪ್ರವಾಹದ ಏರಿಳಿತಗಳಿಂದ ಅಥವಾ ಚಾರ್ಜ್ ಸಂಪೂರ್ಣವಾದ ಬಳಿಕ ಆಗುವ ಹಾನಿಯಿಂದ ರಕ್ಷಿಸುವ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಅಂತಹ ಚಾರ್ಜರ್'ಗಳಿಂದ ನಿಮ್ಮ ಫೋನ್ ಶಾಶ್ವತವಾಗಿ ಹಾಳಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಬ್ಯಾಟರಿ ಡ್ರೈ ಆಗಲು ಬಿಡಬೇಡಿ
ಸ್ಮಾರ್ಟ್‌ಫೋನಿನ ಪ್ರಮುಖ ಅಂಗವೇ ಬ್ಯಾಟರಿ. ಫೋನಿಗೆ ಜೀವ ಒದಗಿಸುವ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಅಂದರೇ ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣ 0 ಆಗುವವರೆಗೂ ಫೋನ್ ಬಳಕೆ ಮಾಡುವುದು ಒಳ್ಳೆಯದಲ್ಲ. ಹೀಗಾಗಿ ಫೋನ್ ಬ್ಯಾಟರಿ ಯಾವತ್ತು ಡ್ರೈ ಆಗಲು ಬಿಡಲೇಬೇಡಿ. ಶೇ.30% ಸನಿಹ ಬಂದಾಗ ಚಾರ್ಜ್ ಮಾಡುವುದು ಉತ್ತಮ.

ಬಿಸಿ ಮತ್ತು ತಂಪು ಒಗ್ಗಲ್ಲ
ಪ್ರಸ್ತುತ ಇಂದಿನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಲಿಥೀಯಮ್ ಬ್ಯಾಟರಿ (Lithium-ion batteries) ಗಳಿಗೆ ಅತೀಯಾದ ಬಿಸಿ ಮತ್ತು ಅತೀಯಾದ ತಂಪು ಆಗಿ ಬರುವುದಿಲ್ಲ. ಹೀಗಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಎಚ್ಚರವಹಿಸಬೇಕು. ಅಗತ್ಯವಾಗ ಕ್ರಮಗಳನ್ನು ಅನುಸರಿಸಿ ಚಾರ್ಜ್ ಮಾಡುವುದು ಉತ್ತಮ.

ಚಾರ್ಜ್ ಮಾಡುವಾಗ ಫೋನ್ ಬಳಕೆ ಬೇಡ
ಬಹುತೇಕರು ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುತ್ತಾರೆ. ಈ ರೀತಿ ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವುದು ಬ್ಯಾಟರಿ ಲೈಫ್‌ಗೂ ಧಕ್ಕೆ ಹಾಗೂ ಅಪಾಯದ ಸಾಧ್ಯತೆಗಳಿ ಅಧಿಕವಾಗಿರುತ್ತವೆ. ಚಾರ್ಜಿಂಗ್ ವೇಳೆ ಸಾಧ್ಯವಾದಷ್ಟು ಸ್ಮಾರ್ಟ್‌ಫೋನ್ ಬಳಕೆ ಮಾಡದೇ ಇರುವುದು ಅತೀ ಉತ್ತಮ.

ಒಂದೇ ಸಾರಿ ಪೂರ್ಣ ಚಾರ್ಜ್ ಮಾಡಲೇಬೇಡಿ
ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣ ಖಾಲಿಯಾಗಿದ್ದಾಗ ಫೋನ್ ಚಾರ್ಜಿಂಗ್ ಹಾಕಿ. ಆದರೆ ಫೋನ್ 0% ಪರ್ಸೆಂಟ್‌ನಿಂದ 100% ವರೆಗೆ ಪೂರ್ಣ ಚಾರ್ಜ್ ಮಾಡಲೇಬೇಡಿ. ಹೀಗೆ ಒಂದೇ ಬಾರಿಗೆ ಶೂನ್ಯದಿಂದ ಪೂರ್ಣ ಚಾರ್ಜ್ ಬ್ಯಾಟರಿ ಬಾಳಿಕೆಗೆ ಹಾನಿ ಉಂಡು ಮಾಡುವ ಸಾಧ್ಯತೆಗಳಿರುತ್ತವೆ. ಸುಮಾರು 60% ನಿಂದ 75% ಪರ್ಸೆಂಟ್ ನಡುವೆ ಇದ್ದಾಗ ಚಾರ್ಜಿಂಗ್ ತೆಗೆಯಿರಿ.

ಒಂದು ದಿನಕ್ಕೆ ಎಷ್ಟು ಬಾರಿ ಫೋನ್ ಚಾರ್ಜ್ ಮಾಡಬೇಕು
ಒಂದು ದಿನಕ್ಕೆ ಒಂದೇ ಬಾರಿ ಚಾರ್ಜ್ ಮಾಡಬೇಕು ಎಂದೆನಿಲ್ಲ. ಆದರೆ ದಿನಕ್ಕೆ ಎರಡು-ಮೂರು ಬಾರಿ ಚಾರ್ಜ್ ಮಾಡುವುದರಿಂದ ಏನು ಸಮಸ್ಯೆ ಇಲ್ಲ. ಸಾಧ್ಯವಾದಷ್ಟು ಫೋನ್ ಬ್ಯಾಟರಿಯನ್ನು 60% ನಿಂದ 75% ಪರ್ಸೆಂಟ್ ನಡುವೆ ಇರುವಂತೆ ನೋಡಿಕೊಳ್ಳಿ, ಅದಾಗ್ಯೂ ಚಾರ್ಜ್ ಅನಿವಾರ್ಯ ಎಂದಾಗ ಚಾರ್ಜ್ ಮಾಡಿ ಆದರೆ ಪದೇ ಪದೇ ಚಾರ್ಜ್ ಅಂತೂ ಮಾಡಲೆಬೇಡಿ.

ಚಾರ್ಜ್ ವೇಳೆ ಹೀಗೆ ಮಾಡಿ
ಸ್ಮಾರ್ಟ್‌ಫೋನ್‌ನಲ್ಲಿ ಲೊಕೇಶನ್, ವೈಫೈ, ಬ್ಲೂಟೂತ್, ಹಾಟ್‌ಸ್ಪಾಟ್, ವೈಬ್ರೆಷನ್ ಮೋಡ್ ಇಂತಹ ಸೇವೆಗಳನ್ನು ಆಫ್ ಮಾಡುವುದು ಬ್ಯಾಟರಿ ಚಾರ್ಜಿಂಗ್‌ಗೆ ಪೂರಕ ಅನಿಸುತ್ತದೆ. ಹೀಗಾಗಿ ಚಾರ್ಜ್ ಮಾಡುವಾಗ ಈ ಸೇವೆಗಳನ್ನು ಆಫ್ ಮಾಡಿಬಿಡಿ. ಅಗತ್ಯ ಇದ್ದಾಗ ಮಾತ್ರ ಈ ಸೇವೆಗಳನ್ನು ಸಕ್ರಿಯ ಮಾಡಿಕೊಳ್ಳಿರಿ.

ಬಿಸಿಲಿನಲ್ಲಿ ಚಾರ್ಜ್ ಬೇಡ
ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ನಿಮ್ಮ ಫೋನಿಗೆ ಬಿಸಿಲು ತಾಗದಿರಲಿ. ಏಕೆಂದರೇ ಈ ಮೇಲೆ ಹೇಳಿದಂತೆ ಫೋನಿನಲ್ಲಿನ ಲಿಥೀಯಮ್ ಬ್ಯಾಟರಿ ಅತೀಯಾದ ಬಿಸಿ ಸಹಿಸಲ್ಲ. ಇದರಿಂದ ಬ್ಯಾಟರಿ ಬಾಳಿಕೆ ಕುಗ್ಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ರೂಮ್ ಟೆಂಪರೇಚರ್ ಇದ್ದರೆ ಒಳ್ಳೆಯದು.

ಹೈ-ಸ್ಪೀಡ್ ಎಸ್‌ಡಿ ಕಾರ್ಡ್
ಇತ್ತೀಚಿನ ಹೊಸ ಸ್ಮಾರ್ಟ್‌ಫೋನಗಳು ಅಧಿಕ ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿರುತ್ತವೆ. ಅದ್ಯಾಗೂ ಕೆಲವು ಬಳಕೆದಾರರು ಹೆಚ್ಚಿನ ಮೆಮೊರಿಗಾಗಿ ಬಾಹ್ಯವಾಗಿ ಎಸ್‌ಡಿ ಕಾರ್ಡ್ ಬಳಕೆ ಮಾಡುತ್ತಾರೆ. ಕಡಿಮೆ ಸ್ಪೀಡಿನ ಎಸ್‌ಡಿ ಕಾರ್ಡ್ ಬಳಕೆಯು ಫೋನಿನ ಕಾರ್ಯವೈಖರಿಗೆ ದಕ್ಕೆ ಉಂಡುಮಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಎಸ್‌ಡಿ ಕಾರ್ಡ್ ಹೈ ಸ್ಪೀಡ್ ಸಾಮರ್ಥ್ಯ ಪಡೆದಿರಲಿ.

ಅಪ್‌ಡೇಟ್ ಇರಲಿ
ಸ್ಮಾರ್ಟ್‌ಫೋನ್‌ನಲ್ಲಿರುವ ಓಎಸ್ ಮೇಲಿಂದ ಮೇಲೆ ಅಪ್‌ಡೇಟ್ ಬೇಡುತ್ತಿರುತ್ತದೆ. ಅಪ್‌ಡೇಟ್ ಕೇಳಿದಾಗ ಅಪ್‌ಡೇಟ್ ಮಾಡಿಕೊಳ್ಳಿರಿ ಇದು ಸ್ಮಾರ್ಟ್‌ಫೋನ್ ವೇಗವನ್ನು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ ಜೊತೆಗೆ ಹೊಸ ಫೀಚರ್ಸ್‌ಗಳಿದ್ದರೇ ಅವುಗಳು ಸಹ ಲಭ್ಯವಾಗುತ್ತವೆ. ಈ ಹಂತಗಳನ್ನು ಬಳಿಸಿ ಸೆಟ್ಟಿಂಗ್ > ಸಿಸ್ಟಮ್ > ಅಬೌಂಟ್ ಫೋನ್ > ಸಿಸ್ಟಮ್ ಅಪ್‌ಡೇಟ್.

ಹೋಮ್ ಸ್ಕ್ರೀನ್ ಕಂಟ್ರೋಲ್
ಸ್ಮಾರ್ಟ್‌ಫೋನ್‌ನಲ್ಲಿ ಕೆಲವರು ಹೆಚ್ಚಾಗಿ widgets ಗಳನ್ನು ಮತ್ತು ಲೈವ್ ವಾಲ್‌ಪೇಪರ್‌ಗಳನ್ನು ಬಳಕೆಮಾಡುತ್ತಿರುತ್ತಾರೆ ಆದರೆ ಖಂಡಿತಾವಾಗಿಯೂ ಇದು ಸ್ಮಾರ್ಟ್‌ಫೋನ್ ಬ್ಯಾಟರಿ ಕಬಳಿಸುವ ಜತೆಗೆ ಫೋನ್ ಸ್ಪೀಡ್ ಕುಗ್ಗಿಸುತ್ತದೆ. ಹೀಗಾಗಿ ಅನಗತ್ಯವಾಗಿ ಹೋಮ್ ಸ್ಕ್ರೀನ್ನಲ್ಲಿ ಹೆಚ್ಚು widgets ಗಳನ್ನು ಮತ್ತು ಲೈವ್ ವಾಲ್‌ಪೇಪರ್‌ಗಳನ್ನು ಬಳಕೆ ಮಾಡಬೇಡಬೇಡಿ.

ಬ್ಯಾಕ್‌ಗ್ರೌಂಡ್ ಆಪ್ಸ್ ರನ್ನ
ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಆಪ್ಸ್‌ಗಳನ್ನು ಬಳಕೆ ಮಾಡಿ ಮಿನಿಮೈಸ್ ಮಾಡಿರುತ್ತಾರೆ. ಆದ್ರೆ ಅವುಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ನ ಆಗುತ್ತಿರುತ್ತವೆ. ಈ ಬ್ಯಾಕ್‌ಗ್ರೌಂಡ್ ರನ್ನ ಆಗುವ ಆಪ್ಸ್‌ಗಳಿಗೆ ಬ್ರೇಕ್ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.

ಆಟೋ ಸಿಂಕ್
ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಟೋ ಸಿಂಕ್ ಆಯ್ಕೆಯು ಸಕ್ರಿಯವಾಗಿರುತ್ತದೆ. ಇದು ಸಹ ಫೋನಿನ ವೇಗದ ಕುಂಠಿತಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಬಳಕೆದಾರರು ಆಟೋ ಸಿಂಕ್ ಆಯ್ಕೆಯನ್ನು ಸ್ಟಾಪ್ ಮಾಡುವುದು ಒಳಿತು. ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ನಲ್ಲಿ ಆಟೋ ಸಿಂಕ್ ಆಯ್ಕೆ ಸ್ಟಾಪ್ ಮಾಡಬಹುದಾಗಿದೆ.

ಚಾರ್ಜ್ ವೇಳೆ ಹೀಗೆ ಮಾಡಿ
ಸ್ಮಾರ್ಟ್‌ಫೋನ್‌ನಲ್ಲಿ ಲೊಕೇಶನ್, ವೈಫೈ, ಬ್ಲೂಟೂತ್, ಹಾಟ್‌ಸ್ಪಾಟ್, ವೈಬ್ರೆಷನ್ ಮೋಡ್ ಇಂತಹ ಸೇವೆಗಳನ್ನು ಆಫ್ ಮಾಡುವುದು ಬ್ಯಾಟರಿ ಚಾರ್ಜಿಂಗ್‌ಗೆ ಪೂರಕ ಅನಿಸುತ್ತದೆ. ಹೀಗಾಗಿ ಚಾರ್ಜ್ ಮಾಡುವಾಗ ಈ ಸೇವೆಗಳನ್ನು ಆಫ್ ಮಾಡಿಬಿಡಿ. ಅಗತ್ಯ ಇದ್ದಾಗ ಮಾತ್ರ ಈ ಸೇವೆಗಳನ್ನು ಸಕ್ರಿಯ ಮಾಡಿಕೊಳ್ಳಿರಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470