ಮಳೆಗಾಲದಲ್ಲಿ ಈ ಡಿವೈಸ್ ಬಗ್ಗೆ ಈ ರೀತಿ ಕಾಳಜಿ ವಹಿಸಿ, ಇಲ್ಲವಾದ್ರೆ ಹಾಳಾಗಬಹುದು!
ಸ್ಮಾರ್ಟ್ ಡಿವೈಸ್‌ಗಳು (Smart device) ಜನರಿಗೆ ಅಗತ್ಯವಾದ ವಸ್ತುಗಳಾಗಿವೆ. ಅದರಲ್ಲೂ ಸ್ಮಾರ್ಟ್‌ಫೋನ್ ಇಲ್ಲದೆ ಅರೆಕ್ಷಣವೂ ಇರಲಾರೆ ಎನ್ನುವ ಅದೆಷ್ಟೋ ಮಂದಿ ಸಹ ನಮ್ಮ ನಡುವೆ ಇದ್ದಾರೆ. ಆದರೆ ಈ ಡಿವೈಸ್ ಯಾವಾಗಲೂ ಜೊತೆಯಲ್ಲೇ ಇಟ್ಟುಕೊಂಡರೆ ಸಾಲದು ಬದಲಾಗಿ ಅವುಗಳ ಬಗ್ಗೆ ಕಾಳಜಿ ವಹಿಸಿದರೆ ಖಂಡಿತಾ ದೀರ್ಘಕಾಲ ನಿಮ್ಮ ಜೊತೆಯಲ್ಲೇ ಇರುತ್ತವೆ.
ಹೌದು, ಯಾವುದೇ ಡಿವೈಸ್ ಅನ್ನು ಜೋಪಾನವಾಗಿ ನೋಡಿಕೊಂಡರೆ ದೀರ್ಘ ಬಾಳಿಕೆ ಬರುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ನಿತ್ಯವೂ ಅಥವಾ ಸದಾಕಾಲ ಬಳಕೆ ಮಾಡುವ ಸ್ಮಾರ್ಟ್‌ಫೋನ್ ಬಗ್ಗೆ ಕಾಳಜಿ ಹೆಚ್ಚಾಗಿಯೇ ಇರಬೇಕು. ಈಗಂತೂ ವಾಟರ್ ಪ್ರೂಫ್ ಹಾಗೂ ಡಸ್ಟ್ ಪ್ರೂಫ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆಯಾದರೂ ಇವುಗಳನ್ನು ನೀರಿನಲ್ಲಿ ಮುಳುಗಿಸಲು ಸಾಧ್ಯವಿಲ್ಲ. ಅಷ್ಟೇ ಯಾಕೆ ಮಳೆಯಲ್ಲೂ ಸಹ ಅವುಗಳನ್ನು ಬಳಕೆ ಮಾಡಲು ಆಗುವುದಿಲ್ಲ. ಪರಿಣಾಮ ಮಳೆಗಾಲದಲ್ಲಿ ಫೋನ್ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬ ಬಗ್ಗೆ ತಿಳಿಸಿಕೊಡಲಾಗಿದೆ ಓದಿರಿ.

ಮಳೆಯಿಂದ ಸ್ಮಾರ್ಟ್‌ಫೋನ್ ರಕ್ಷಣೆ ಹೇಗೆ? : ಮಳೆಗಾಲ ಇನ್ನೂ ಮುಗಿದಿಲ್ಲ. ಆಗಾಗ್ಗೆ ಮಳೆ ಬಂದು ಹೋಗುವ ಕೆಲಸ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಅನೇಕ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅನಿವಾರ್ಯ. ವಿಶೇಷವಾಗಿ ಫೋನ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆಯಿದೆ. ಏಕೆಂದರೆ ಅದು ಒಮ್ಮೆ ಒದ್ದೆಯಾದರೆ, ನಿಮಗೂ ಗಂಭೀರ ಹಾನಿಯಾಗಬಹುದು. ಆದ್ದರಿಂದ ಮಳೆ ಬಂದಾಗ ಫೋನ್ ಅನ್ನು ಹೇಗೆ ಬಳಕೆ ಮಾಡಬೇಕೆಂಬ ಇಂಟ್ರೆಸಿಂಗ್ ಮಾಹಿತಿ ಇಲ್ಲಿದೆ ನೋಡಿ.
ದೇಸಿ ಹ್ಯಾಕ್ ಪಾಲಿಥಿನ್ ಬ್ಯಾಗ್ ಬಳಕೆ ಮಾಡಿ: ಇತ್ತೀಚಿನ ದಿನಗಳಲ್ಲಿ ಈ ಕವರ್‌ಗಳ ಬಳಕೆ ಕಡಿಮೆಯಾಗಿದೆಯಾದರೂ ಇವುಗಳು ಮಳೆಗಾಲದಲ್ಲಿ ತುಂಬಾನೇ ಸಹಕಾರಿಯಾಗಲಿವೆ. ಇವು ನಿಮ್ಮ ಮೊಬೈಲ್ ಡ್ರೈ ಆಗಿರುವುದನ್ನು ಖಚಿತಪಡಿಸುತ್ತದೆ. ಅಂದರೆ ಮಳೆ ಬಂದಾಗ ಪಾಲಿಥಿನ್ ಬ್ಯಾಗ್ ತೆಗೆದುಕೊಂಡು ಅದರಲ್ಲಿ ನಿಮ್ಮ ಫೋನ್ ಅನ್ನು ಇರಿಸಿ. ಪಾಲಿಥಿನ್ ತೆರೆಯದಂತೆ ಬಿಗಿಯಾಗಿ ಗಂಟು ಹಾಕಿ.ಅಷ್ಟೇ ಅಲ್ಲದೆ ಇತ್ತೀಚಿಗೆ ನಿಮ್ಮ ಮೊಬೈಲ್ ಅನ್ನು ತೇವಾಂಶದಿಂದ ರಕ್ಷಿಸಲು ಜಿಪ್ ಲಾಕ್ ಬ್ಯಾಗ್ ಸಹ ಬಂದಿವೆ. ಅವುಗಳನ್ನು ಬಳಕೆ ಮಾಡಿಕೊಳ್ಳಬಹುದು.
ವಾಟರ್ ಪ್ರೂಫ್ ಕವರ್ ಬಳಕೆ: ಇದರೊಂದಿಗೆ ಮಳೆ ಸಾಮಾನ್ಯವಾಗಿದ್ದರೆ ಜಲನಿರೋಧಕ ಮೊಬೈಲ್ ಕವರ್ ಉತ್ತಮ ಆಯ್ಕೆಯಾಗಿದೆ. ಇದು ಸಣ್ಣ ಪ್ರಮಾಣದ ಮಳೆಯನ್ನು ತಡೆಯಲಿದ್ದು, ಈ ಮೂಲಕ ನಿಮ್ಮ ಫೋನ್ ಅನ್ನು ರಕ್ಷಣೆ ಮಾಡಲಿದೆ. ಮಾರುಕಟ್ಟೆಯಲ್ಲಿ ನಿಮ್ಮ ಫೋನ್‌ಗೆ ಹೊಂದುವ ವಾಟರ್ ಪ್ರೂಫ್ ಕವರ್ ಅನ್ನು ಖರೀದಿ ಮಾಡಬಹುದಾಗಿದೆ.
ಕರೆ ಮಾಡುವುದು, ಸ್ವೀಕಾರ ಮಾಡುವುದು ಬೇಡ: ಮಳೆ ಬಂದಾಗ ಕರೆ ಮಾಡುವುದು ಅಥವಾ ಯಾರಿಂದಲಾದರೂ ಕರೆ ಬಂದಾಗ ಅದನ್ನು ಸ್ವೀಕಾರ ಮಾಡುವ ಕೆಲಸ ಮಾಡಬೇಡಿ. ಈ ರೀತಿ ಮಾಡಿದ್ರೆ ನಿಮ್ಮ ಫೋನ್ ಒಳಗೆ ನೀರು ಹೋಗುವ ಸಂಭವ ಹೆಚ್ಚಾಗಿರುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರೀಲ್‌ಗಳ ಟ್ರೆಂಡ್ ನೋಡಿ ಜನರು ರೈನ್ ರೀಲ್‌ಗಳನ್ನು ಮಾಡಲು ಹಾತೊರೆಯುತ್ತಾರೆ. ಆದರೆ ಒಂದು ಕ್ಷಣದ ಖುಷಿಗೋಸ್ಕರ ಸಾವಿರಾರು ಹಣ ನೀಡಿ ಖರೀದಿ ಮಾಡಿದ ಫೋನ್ ಕಳೆದುಕೊಳ್ಳಬೇಡಿ.
ಬ್ಲೂಟೂತ್ ಬಳಕೆ ಮಾಡಿ: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬ್ಲೂಟೂತ್ ಡಿವೈಸ್‌ಗಳ ಬಳಕೆ ಹೆಚ್ಚಾಗಿಯೇ ಇದೆ. ದರಲ್ಲೂ ಇಯರ್‌ಬಡ್ಸ್ ಅಥವಾ ಸ್ಮಾರ್ಟ್‌ವಾಚ್ ಅನ್ನು ಈ ವೇಳೆ ಬಳಕೆ ಮಾಡಬಹುದು. ಬಹುಪಾಲು ಡಿವೈಸ್‌ಗಳು ನೀರು ನಿರೋಧಕವಾಗಿದ್ದು, ಇವು ಮಳೆಯಿಂದ ಬೇಗನೇ ಹಾಲಾಗುವುದಿಲ್ಲ. ಈ ಮೂಲಕ ನೀವು ಕರೆಯಲ್ಲಿ ತೊಡಗಬಹುದು ಅಥವಾ ಯಾರಿಗಾದರೂ ಮೆಸೆಜ್ ಮಾಡಬಹುದಾಗಿದೆ.

ಚಾರ್ಜ್ ಮಾಡಬೇಡಿ: ಇದೆಲ್ಲಕ್ಕಿಂತ ಮಿಗಿಲಾಗಿ ನೀವು ಮಾಡಬಾರದ ಮತ್ತೊಂದು ಪ್ರಮುಖ ಕೆಲಸ ಏನೆಂದರೆ ನಿಮ್ಮ ಫೋನ್ ಒದ್ದೆಯಾಗಿರುವಾಗ ಅಥವಾ ಸ್ವಲ್ಪ ಒದ್ದೆಯಾಗಿದ್ದರೂ ಸಹ ಅದನ್ನು ಚಾರ್ಜ್ ಮಾಡಬೇಡಿ. ವಿದ್ಯುತ್ ಮತ್ತು ನೀರಿನ ಸಂಯೋಜನೆಯು ಮಾರಣಾಂತಿಕವಾಗಬಹುದು. ಇದು ಅಪಾಯಕಾರಿ ವಿದ್ಯುತ್ ಆಘಾತವನ್ನು ಸಹ ಉಂಟುಮಾಡಬಹುದು. ಪರಿಣಾಮ ಫೋನ್ ಸಂಪೂರ್ಣವಾಗಿ ಒಣಗಲು ಬಿಡಿ, ಇದಾದ ನಂತರ ನೀವು ಅದನ್ನು ಚಾರ್ಜಿಂಗ್ ಸಾಕೆಟ್‌ಗೆ ಪ್ಲಗ್ ಮಾಡಬಹುದು.


Click it and Unblock the Notifications








