Home
ಟೆಕ್ ನೌಕರಿ

ಮಳೆಗಾಲದ ವೇಳೆ ಸ್ಮಾರ್ಟ್‌ ಡಿವೈಸ್‌ಗಳನ್ನು ರಕ್ಷಣೆ ಮಾಡುವುದು ಹೇಗೆ?: ಇಲ್ಲಿವೆ ಸರಳ ಸಲಹೆ!

ರಾಜ್ಯಾದ್ಯಂತ ಭಾರೀ ಮಳೆಗೆ ಅಲ್ಲಲ್ಲಿ ಅಪಾರ ಆಸ್ತಿ-ಪಾಸ್ತಿ ಹಾನಿಯಾದ ಘಟನೆಗಳು ವರದಿಯಾಗಿವೆ. ಅತಿಯಾದ ಮಳೆ ಕೇವಲ ಜಮೀನುಗಳು, ರಸ್ತೆಗಳು ಅಥವಾ ಕೆರೆ ಕಟ್ಟೆಗಳಿಗೆ ತೊಂದರೆ ಉಂಟುಮಾಡುವುದಲ್ಲದೆ ನಾವು ನಿತ್ಯ ಬಳಕೆ ಮಾಡುವ ಸ್ಮಾರ್ಟ್‌ಡಿವೈಸ್‌ಗಳಿಗೂ ತೊಂದರೆ ಉಂಟು ಮಾಡುತ್ತವೆ. ಪರಿಣಾಮ ಈ ಮಳೆಗಾಲದ ಸಂದರ್ಭದಲ್ಲಿ ಇವುಗಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಿದೆ.

ಹೌದು, ಮಳೆಗಾಲದಲ್ಲಿ ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಹಾನಿಯಾಗುವ ಸಂಭವ ಹೆಚ್ಚು, ಮನೆ ಬಿಟ್ಟು ಹೊರ ಹೋಗುವಾಗ ಅಥವಾ ಮನೆಯಲ್ಲಿ ಇರುವಾಗ ಸ್ಮಾರ್ಟ್‌ ಡಿವೈಸ್‌ಗಳು ನಿಮ್ಮ ಜೊತೆ ಇದ್ದು ನಿಮಗೆ ಅಗತ್ಯ ಸೇವೆಯನ್ನು ನೀಡುತ್ತಿರುತ್ತದೆ. ಈ ಕಾರಣಕ್ಕೆ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ಟಿವಿ, ಇಯರ್‌ಬಡ್ಸ್‌ ಸೇರಿದಂತೆ ಅನೇಕ ಡಿವೈಸ್‌ಗಳನ್ನು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಿದೆ. ಹೀಗಾಗಿ ಅವುಗಳನ್ನು ರಕ್ಷಿಸಲು ಕೆಲವು ಸರಳ ಸಲಹೆಗಳನ್ನು ನಾವಿಲ್ಲಿ ತಿಳಿಸಿದ್ದೇವೆ ಈ ಲೇಖನ ಓದಿರಿ.

ಮಳೆಗಾಲದ ವೇಳೆ ಸ್ಮಾರ್ಟ್‌ ಡಿವೈಸ್‌ಗಳನ್ನು ರಕ್ಷಣೆ ಮಾಡುವುದು ಹೇಗೆ?...

ಜಿಪ್-ಲಾಕ್ ಪೌಚ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಇರಿಸಿ: ನಾವು ದಿನ ನಿತ್ಯ ಹೆಚ್ಚಾಗಿ ಬಳಕೆ ಮಾಡುವ ಡಿವೈಸ್‌ ಅಂದರೆ ಅದು ಸ್ಮಾರ್ಟ್‌ಫೋನ್‌. ಈ ಡಿವೈಸ್‌ ಸಾಮಾನ್ಯವಾಗಿ ಮಳೆಯಿಂದಾಗಿ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ. ಅದರಲ್ಲೂ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಜಲನಿರೋಧಕ ಅಥವಾ ಸ್ಪ್ಲಾಶ್-ಪ್ರೂಫ್ ರೇಟಿಂಗ್‌ಗಳೊಂದಿಗೆ ಬಂದರೂ ಸಹ ಎಚ್ಚರಿಕೆ ವಹಿಸುವುದು ಅನಿವಾರ್ಯ. ಈ ಕಾರಣಕ್ಕೆ ಮಳೆಯಾಗುವಾಗ ಸಂಚಾರ ಮಾಡುತ್ತಿದ್ದರೆ ಅದು ಒದ್ದೆಯಾಗದಂತೆ ಜಿಪ್-ಲಾಕ್ ಪೌಚ್‌ಗಳಲ್ಲಿ ಅದನ್ನು ಇರಿಸಿ. ಅಥವಾ ಪ್ಲಾಸ್ಟಿಕ್‌ ಕವರ್ ಬಳಕೆ ಮಾಡಿ.

ಟ್ಯಾಬ್ಲೆಟ್‌ಗಳನ್ನು ವಾಟರ್‌ ಪ್ರೂಫ್‌ ಕವರ್‌ನಲ್ಲಿ ಇರಿಸಿ: ಸ್ಮಾರ್ಟ್‌ಫೋನ್‌ಗಳಂತೆ ಟ್ಯಾಬ್ಲೆಟ್‌ಗಳು ಸಹ ಹೆಚ್ಚು ಬಳಕೆಯಲ್ಲಿದ್ದು, ಈ ವೇಳೆ ನೀವು ವಾಟರ್‌ ರೆಸಿಸ್ಟೆಂಟ್‌ ಅಥವಾ ವಾಟರ್‌ ಪ್ರೂಫ್‌ ಕವರ್‌ನಲ್ಲಿ ಇದನ್ನು ಇರಿಸುವುದು ಅಗತ್ಯವಾಗಿದೆ. ಈ ಕವರ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡಬಹುದಾಗಿದ್ದು, ಸ್ವಲ್ಪ ದುಬಾರಿಯಾಗಬಹುದು. ಆದರೆ, ಅವು ನಿಮ್ಮ ಡಿವೈಸ್‌ಗೆ ಯಾವುದೇ ಹಾನಿಯಾಗದಂತೆ ಸಹಾಯ ಮಾಡುವುದರಿಂದ ಭಾರೀ ಹಣ ಉಳಿತಾಯ ಮಾಡುತ್ತವೆ.

ಮಳೆಗಾಲದ ವೇಳೆ ಸ್ಮಾರ್ಟ್‌ ಡಿವೈಸ್‌ಗಳನ್ನು ರಕ್ಷಣೆ ಮಾಡುವುದು ಹೇಗೆ?...

ಲ್ಯಾಪ್‌ಟಾಪ್ ಬ್ಯಾಗ್‌ನಲ್ಲಿ ಸಿಲಿಕಾ ಜೆಲ್ ಪ್ಯಾಕೆಟ್‌ ಬಳಸಿ: ಇನ್ನು ಮಳೆಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಲು ನಿಮ್ಮ ಲ್ಯಾಪ್‌ಟಾಪ್ ಅನ್ನು ವಾಟರ್‌ ಪ್ರೂಫ್‌ ಬ್ಯಾಕ್‌ನಲ್ಲಿ ಕೊಂಡೊಯ್ಯುವುದು ಉತ್ತಮ ಈ ವೇಳೆ ನೀವು ಸಿಲಿಕಾ ಜೆಲ್ ಪ್ಯಾಕೆಟ್‌ಗಳನ್ನು ನಿಮ್ಮ ಲ್ಯಾಪ್‌ಟಾಪ್ ಬ್ಯಾಗ್‌ಗೆ ಹಾಕಬೇಕಿದೆ. ಯಾಕೆಂದರೆ ಸಿಲಿಕಾ ಜೆಲ್ ತೇವಾಂಶವನ್ನು ಹೀರಿಕೊಳ್ಳುತ್ತದೆ ಜೊತೆಗೆ ಲ್ಯಾಪ್‌ಟಾಪ್ ಬ್ಯಾಗ್ ಬೇಗನೇ ತೇವಾಂಶದಿಂದ ಮುಕ್ತವಾಗುತ್ತದೆ. ಇನ್ನು ಸಿಲಿಕಾ ಜೆಲ್ ಪ್ಯಾಕೆಟ್‌ಗಳು ಬಣ್ಣವನ್ನು ಬದಲಾಯಿಸಿದಾಗ ಹೊಸ ಪ್ಯಾಕೆಟ್‌ ಬಳಕೆ ಮಾಡಿ.

ಮಳೆಗೆ ಒದ್ದೆಯಾದ ಡಿವೈಸ್‌ಗಳನ್ನು ಚಾರ್ಜಿಂಗ್‌ಗೆ ಹಾಕಬೇಡಿ: ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ ಅಥವಾ ಇನ್ನಿತರೆ ಡಿವೈಸ್‌ಗಳ ಬ್ಯಾಟರಿ ಡೆಡ್‌ ಆಗಿದ್ದರೂ ಸಹ ಅವು ಒದ್ದೆಯಾಗಿದ್ದಾಗ ಚಾರ್ಜಿಂಗ್‌ಗೆ ಹಾಕಬೇಡಿ. ಈ ರೀತಿ ಏನಾದರೂ ಮಾಡಿದ್ದೇ ಆದರೆ ಶಾಶ್ವತವಾಗಿ ಆಫ್‌ ಆಗುತ್ತವೆ. ಅದರಲ್ಲೂ ಸೋರುವ ಗೋಡೆಗಳು ಮತ್ತು ಚಾವಣಿಯ ಬಳಿ ನಿಮ್ಮ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಚಾರ್ಜಿಂಗ್‌ಗೆ ಇರಬೇಡಿ.

ಸರ್ಜ್ ಪ್ರೊಟೆಕ್ಟರ್‌ ಬಳಸಿ: ಮಳೆಗಾಲದ ಸಮಯದಲ್ಲಿ ವಿದ್ಯುತ್ ಕಡಿತ ಮತ್ತು ವಿದ್ಯುತ್ ಉಲ್ಬಣವು ಸಾಮಾನ್ಯವಾಗಿರುತ್ತದೆ. ಈ ವೇಳೆ ನಿಮ್ಮ ಮನೆಯಲ್ಲಿ ಸರ್ಜ್ ಪ್ರೊಟೆಕ್ಟರ್‌ ಬಳಕೆ ಮಾಡಿ. ಈ ಮೂಲಕ ಹಠಾತ್ ವಿದ್ಯುತ್ ಸಮಸ್ಯೆಗಳು ಅಥವಾ ಮಿಂಚಿನ ಹೊಡೆತಗಳಿಂದ ನಿಮ್ಮ ಸ್ಮಾರ್ಟ್‌ ಡಿವೈಸ್‌ ಸೇರಿದಂತೆ ನಿಮ್ಮ ಮನೆಗೆ ಯಾವುದೇ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ.

ಮಳೆಗಾಲದ ವೇಳೆ ಸ್ಮಾರ್ಟ್‌ ಡಿವೈಸ್‌ಗಳನ್ನು ರಕ್ಷಣೆ ಮಾಡುವುದು ಹೇಗೆ?...

ಗುಡುಗು ಸಹಿತ ಮಳೆ ವೇಳೆ ಸಂಪರ್ಕ ಕಡಿತಗೊಳಿಸಿ: ತೀವ್ರವಾದ ಮಿಂಚು ಹಾಗೂ ಗುಡುಗಿನೊಂದಿಗೆ ಮಳೆ ಬೀಳುತ್ತಿದ್ದರೆ ನಿಮ್ಮ ಸ್ಮಾರ್ಟ್ ಡಿವೈಸ್‌ಗಳ ಪವರ್ ಔಟ್‌ಲೆಟ್‌ಗಳನ್ನು ಕಡಿತಗೊಳಿಸಿ. ಹಾಗೆಯೇ ಇಂಟರ್ನೆಟ್‌ ಸಂಪರ್ಕ ಕಡಿತಗೊಳಿಸಿ. ಮಿಂಚಿನ ಸ್ಟ್ರೈಕ್‌ಗಳು ವಿದ್ಯುತ್ ಮತ್ತು ಡೇಟಾ ಕೇಬಲ್‌ಗಳ ಮೂಲಕ ಪ್ರವೇಶಿಸಲಿದ್ದು, ಈ ಮೂಲಕ ನಿಮ್ಮ ಸ್ಮಾರ್ಟ್‌ಡಿವೈಸ್ ಹಾನಿಗೆ ಒಳಗಾಗುತ್ತವೆ ಎಂಬುದು ತಿಳಿದಿರಲಿ.

Best Mobiles in India

English summary
There is a high chance of damage to electronic devices during rainy season, so we have explained how to take care of many devices including smartphones, smartwatch, smart TV, earbuds etc.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+