Subscribe to Gizbot

ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗದಂತೆ ರಕ್ಷಿಸುವುದು ಹೇಗೆ?

Posted By: Super
ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗದಂತೆ ರಕ್ಷಿಸುವುದು ಹೇಗೆ?

ದಿನೇ ದಿನೇ ಸಾಮಾಜಿಕ ಸಂಪರ್ಕ ತಾಣವಾದ ಫೇಸ್‌ಬುಕ್‌ನ ಬಳಕೆದಾರರ ಸಂಖ್ಯೆ ಹೆಚ್ಚುತ್ತಾ ಹೋದಂತೆ, ಫೇಸ್‌ಬುಕ್‌ನಲ್ಲಿನ ಸುರಕ್ಷತೆ ಕುರಿತಾಗಿ ಬಳಕೆದಾರಲ್ಲಿ ಆತಂಕ ಕೂಡಾ ಹೆಚ್ಚಾಗುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ ಹೆಚ್ಚುತ್ತಿರುವ ಫೇಸ್‌ಬುಕ್‌ ಜನಪ್ರಯತೆಯ ಮೇಲೆ ಹ್ಯಾಕರ್‌ಗಳ ಕಣ್ಣು ಬಿದ್ದಿರುವುದು ಬಳಕೆದಾರರಲ್ಲಿನ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.

ಆದ್ದರಿಂದಲೇ ಫೇಸ್‌ಬುಕ್‌ ಲಾಗ್‌ಇನ್‌ ಆಗುವ ಮುನ್ನ ನಿಮ್ಮ ಪಿಸಿ ಹಾಗೂ ಖಾತೆಯ ಸುರಕ್ಷತೆ ಕುರಿತಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಉತ್ತಮ. ಅಂದಹಾಗೆ ಹೇಗೆ ರಕ್ಷಣೆ ಮಾಡಿಕೊಳ್ಳುವುದು ಎಂದು ಆಲೋಚಿಸುತ್ತಿದ್ದೀರಾ? ಅದಕ್ಕಾಗಿಯೇ ಗಿಜ್ಬಾಟ್‌ ಇಂದು ನಿಮ್ಮ ಫೇಸ್‌ಬುಕ್‌ ಖಾತೆಯ ಸುರಕ್ಷತೆಯ ನಿಟ್ಟಿನಲ್ಲಿ ಅನುಸರಿಸ ಬೇಕಾದ ಕೆಲ ವಿಧಾನಗಳನ್ನು ನಿಮ್ಮ ಮುಂದೆ ತಂದಿದೆ ಒಮ್ಮೆ ಓದಿ ನೋಡಿ.

ಪಿಸಿ ಯಲ್ಲಿನ ಸ್ಪಾಮ್‌ ಹಾಗೂ ವೈರಸ್‌ ಫಯರ್‌ವಾಲ್‌ ಆಕ್ಟಿವೇಟ್‌ ಮಾಡಿಕೊಳ್ಳಿ

ಅಂದಹಾಗೆ ಕೆಲವೊಂದು ವೈರಸ್‌ಗಳು ನೇರವಾಗಿ ನಮ್ಮ್ ಕಂಪ್ಯೂಟರ್‌ನ ಮೆಮೊರಿಯಲ್ಲಿ ಸೇವ್‌ ಆಗಿಬಿಡುತ್ತವೆ ನಂತರ ನಾವೂ ಯಾವುದೇ ಖಾತೆಯನ್ನು ತೆರೆದಲ್ಲಿ ಆ ಖಾತೆಯಲ್ಲಿನ ಮಾಹಿತಿಗಳನ್ನು ವೈರಸ್‌ ಹ್ಯಾಕ್‌ ಮಾಡಿಬಿಡುತ್ತದೆ. ಆದ್ದರಿಂದ ಮೊದಲಿಗೆ ನಿಮ್ಮ ಪಿಸಿಯನ್ನು ವೈರಸ್‌ನಿಂದ ಕಾಪಾಡಲು ಫೈಯರ್‌ವಾಲ್‌ ಪ್ರೊಟೆಕ್ಟರ್‌ ಆಕ್ಟೀವ್‌ ಮಾಡಿಕೊಳ್ಳಿ ಹಾಗೂ ಉತ್ತಮವಾದ ಆನ್ಟಿವೈರಸ್‌ ಇನ್ಸ್ಟಾಲ್‌ ಮಾಡಿಕೊಳ್ಳಿ.

ಖಾತೆಯನ್ನು ಬಳಸಿದ ಬಳಿಕ ಲಾಗ್‌ಔಟ್‌ ಮಾಡುವುದನ್ನು ಮರೆಯಬೇಡಿ

ಯವಾಗಲೂ ಫೇಸ್‌ಬುಕ್‌ ಖಾತೆ ಕ್ಲೋಸ್‌ ಮಾಡುವಾಗ ಲಾಗ್‌ಔಟ್‌ ಮಾಡುವುದನ್ನು ಮಾತ್ರ ಮರೆಯಬೇಡಿ. ಅದರಲ್ಲಿಯೂ ಪಬ್ಲಿಕ್‌ ಕಂಪ್ಯೂಟರ್‌ ಹಾಗೂ ಬೇರೆಯವರ ಲ್ಯಾಪ್‌ಟಾಪ್‌ನಲ್ಲಿ ನಿಮ್ಮ ಫೇಸ್‌ಬುಕ್‌ ಖಾತೆ ತೆರೆದಿದ್ದಲ್ಲಿ ಮರೆಯದೇ ಲಾಗ್‌ಔಟ್‌ ಮಾಡಿ. ಇದರಿಂದಾಗಿ ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ಅಷ್ಟು ಸುಲಭವಾಗಿ ಹ್ಯಾಕ್‌ ಮಾಡಲು ಸಾಧ್ಯವಿಲ್ಲ.

ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot