ಅಮೆಜಾನ್ ಆಪ್ ಮೂಲಕ ಮೊಬೈಲ್ ರೀಚಾರ್ಜ್ ಮಾಡುವುದು ಹೇಗೆ?
ಅಮೆಜಾನ್ ಇ-ಕಾಮರ್ಸ್ ದೈತ್ಯ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದೆ. ಅನೇಕ ಆನ್‌ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ಅಡ್ಡಾ ಆಗಿರುವ ಅಮೆಜಾನ್ ಹಲವು ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಶಾಪಿಂಗ್ ಜೊತೆಗೆ ಇತರೆ ಕೆಲವು ಸೇವೆಗಳನ್ನು ಸಹ ಅಮೆಜಾನ್ ಒದಗಿಸುತ್ತಿದೆ. ಆ ಪೈಕಿ ಅಮೆಜಾನ್ ತಾಣದಲ್ಲಿ ರೀಚಾರ್ಜ್ ಮಾಡುವ ಅವಕಾಶವು ಒಂದಾಗಿದೆ. ಇತರೆ ಯುಪಿಐ ಆಪ್‌ಗಳಂತೆ ಅತೀ ಸುಲಭವಾಗಿ ಗ್ರಾಹಕರು ಅಮೆಜಾನ್ ನಲ್ಲಿ ತಮ್ಮ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಹೌದು, ಜನಪ್ರಿಯ ಅಮೆಜಾನ್ ತಾಣವು ಹಲವು ಆನ್‌ಲೈನ್ ಸೇವೆಗಳನ್ನು ಒದಗಿಸಿದೆ. ಮುಖ್ಯವಾಗಿ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು, ಫ್ಲೈಟ್ ಟಿಕೆಟ್‌ಗಳನ್ನು ಕಾಯ್ದಿರಿಸಲು, ಚಲನಚಿತ್ರ ಟಿಕೆಟ್‌ಗಳನ್ನು ಖರೀದಿಸಲು, ಚಿನ್ನವನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಮತ್ತು ವಾಹನ ವಿಮೆಯನ್ನು ಖರೀದಿಸಲು ಇದು ನಿಮಗೆ ಅನುಮತಿಸುತ್ತದೆ. ಇವೆಲ್ಲವುಗಳ ನಡುವೆ ಬಳಕೆದಾರರು ಸರ್ಚ್ ಮಾಡುವ ಮತ್ತೊಂದು ಸಾಮಾನ್ಯ ಸೇವೆ ಎಂದರೇ ಅದು ಮೊಬೈಲ್ ರೀಚಾರ್ಜ್. ಅಮೆಜಾನ್ ಅಪ್ಲಿಕೇಶನ್‌ನಲ್ಲಿ ಮೊಬೈಲ್ ರೀಚಾರ್ಜ್ ಸಹ ಮಾಡಬಹುದು. ಹಾಗಾದರೇ ಅಮೆಜಾನ್ ತಾಣದಲ್ಲಿ ಮೊಬೈಲ್ ರೀಚಾರ್ಜ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಅಮೆಜಾನ್ ತಾಣದಲ್ಲಿ ಮೊಬೈಲ್ ರೀಚಾರ್ಜ್ ಮಾಡಲು ಈ ಕ್ರಮ ಅನುಸರಿಸಿ:
* ಮುಖಪುಟ ಸ್ಕ್ರೀನ್, ಮೇಲಿನ ಎಡ ಭಾಗದಲ್ಲಿರುವ ಹ್ಯಾಂಬರ್ಗರ್ ಮೆನು (ನಾಲ್ಕು ಅಡ್ಡ ರೇಖೆಗಳು) ಕ್ಲಿಕ್ ಮಾಡಿ.
* ಅಮೆಜಾನ್ ಪೇ ಆಯ್ಕೆಮಾಡಿ. ವಿಭಾಗದ ಒಳಗೆ, ನೀವು ಮುಖ್ಯ ಸ್ಕ್ರೀನ್‌ನಲ್ಲಿ ಮೊಬೈಲ್ ರೀಚಾರ್ಜ್ ಆಯ್ಕೆಯನ್ನು ನೋಡಬೇಕು.
* ನಂತರ ಮೊಬೈಲ್ ರೀಚಾರ್ಜ್ > ಮೊಬೈಲ್ ಸಂಖ್ಯೆಯನ್ನು ನಮೂದಿಸಿ > ಆಪರೇಟರ್ ಸೆಲೆಕ್ಟ್ ಮಾಡಿ > ಯೋಜನೆ ಮೊತ್ತವನ್ನು ಆಯ್ಕೆಮಾಡಿ. (ನಿಮ್ಮ ವಲಯದಲ್ಲಿನ ಆಪರೇಟರ್‌ನಿಂದ ಯೋಜನೆಗಳನ್ನು ವೀಕ್ಷಿಸಲು ಅಮೆಜಾನ್ ನಿಮಗೆ ಅನುಮತಿಸುತ್ತದೆ.)
* ನೀವು ರೀಚಾರ್ಜ್ ಮಾಡಲು ಬಯಸುವ ಯೋಜನೆಯನ್ನು ನೀವು ಆಯ್ಕೆ ಮಾಡಿದ ನಂತರ, ಮುಂದುವರಿಸಿ ಕ್ಲಿಕ್ ಮಾಡಿ.
* ಬಳಿಕ ಪಾವತಿ ವಿಧಾನಗಳಾಗಿ ಆಯ್ಕೆ ಮಾಡಲು ಅಮೆಜಾನ್ ನಿಮಗೆ ಹಲವಾರು ಆಯ್ಕೆಗಳನ್ನು ನೀಡುತ್ತದೆ. ನಿಮ್ಮ ಆದ್ಯತೆಯ ವಿಧಾನವಾಗಿ ಯುಪಿಐ / ನೆಟ್‌ಬ್ಯಾಂಕಿಂಗ್ ಆಯ್ಕೆಮಾಡಿ.
* ನೀವು ಅಮೆಜಾನ್ ಪೇ ಯುಪಿಐ ಅನ್ನು ಬಳಸಲು ಪ್ರಾರಂಭಿಸಲು ಬಯಸಿದರೆ, ಪಾಪ್ ಅಪ್ ಪಟ್ಟಿಯಿಂದ ನಿಮ್ಮ ಬ್ಯಾಂಕ್ ಅನ್ನು ಕ್ಲಿಕ್ ಮಾಡಿ. ಅಮೆಜಾನ್ ನಂತರ ಒಟಿಪಿ ಕಳುಹಿಸುವ ಮೂಲಕ ನಿಮ್ಮ ನೋಂದಾಯಿತ ಸಂಖ್ಯೆಯನ್ನು ಪರಿಶೀಲಿಸುತ್ತದೆ. ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ, ನಾಲ್ಕು-ಅಂಕಿಯ ಯುಪಿಐ ಕೋಡ್ ಅನ್ನು ರಚಿಸಲು ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ಆಯ್ಕೆಯ ಕೋಡ್ ಅನ್ನು ಆರಿಸಿ, ಮತ್ತು ಅಮೆಜಾನ್ ನಿಮ್ಮ ಬ್ಯಾಂಕ್ ಖಾತೆಯನ್ನು ಅಮೆಜಾನ್ ಪೇ ಯುಪಿಐನೊಂದಿಗೆ ಸ್ವಯಂಚಾಲಿತವಾಗಿ ಲಿಂಕ್ ಮಾಡುತ್ತದೆ.


Click it and Unblock the Notifications








