Home
ಟೆಕ್ ನೌಕರಿ

ಟಾಟಾಸ್ಕೈ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಟಿವಿ ಶೋ ರೇಕಾರ್ಡ್‌ ಮಾಡುವುದು ಹೇಗೆ?

ಡಿಟಿಎಚ್ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾಸ್ಕೈ ಸಂಸ್ಥೆಯು ತನ್ನ ಗ್ರಾಹಕರಿಗೆ ಹಲವು ಹೊಸ ಸೇವೆಗಳನ್ನು ಪರಿಚಯಿಸಿದೆ. ಸಂಸ್ಥೆಯು ಈಗಾಗಲೇ ಎಸ್‌ಡಿ ಹಾಗೂ ಹೆಚ್‌ಡಿ ಕ್ವಾಲಿಟಿ ಸೆಟ್‌ಅಪ್‌ ಬಾಕ್ಸ್‌ ಆಯ್ಕೆಯನ್ನು ಹೊಂದಿದ್ದು, ಅವುಗಳನ್ನು ಈಗ ಅಪ್‌ಗ್ರೇಡ್ ಮಾಡಿದೆ. ಹಾಗೆಯೇ ಇತ್ತೀಚಿಗೆ ಅಮೆಜಾನ್ ಫೈರ್‌ಸ್ಟೀಕ್‌ ತರಹ, ಟಾಟಾಸ್ಕೈ ಬಿಂಜ್ ಪ್ಲಸ್‌(binge+) ಕನೆಕ್ಟಿವಿಟಿ ಸೌಲಭ್ಯವನ್ನು ಪರಿಚಯಿಸಿದೆ.

ಟಾಟಾಸ್ಕೈ ಸೆಟ್‌ಟಾಪ್‌

ಟಾಟಾಸ್ಕೈ ಸೆಟ್‌ಟಾಪ್‌ ಬಾಕ್ಸ್‌ ಡಿವೈಸ್ ನೂತನ ಮಾದರಿಯಲ್ಲಿ ಇದ್ದು, ಅವು ಗ್ರಾಹಕರಿಗೆ ಅನುಕೂಲಕರ ಫೀಚರ್ಸ್‌ ಹೊಂದಿದೆ. ಆ ಪೈಕಿ ರೇಕಾರ್ಡ್‌ ಆಯ್ಕೆ ಹೆಚ್ಚು ಆಕರ್ಷಕವಾಗಿದ್ದು, ಈ ಆಯ್ಕೆಯು ಲೈವ್‌ ಟಿವಿ ಶೋಗಳನ್ನು, ಇತರೆ ಕಾರ್ಯಕ್ರಮಗಳನ್ನು ರೇಕಾರ್ಡ್ ಮಾಡಿಕೊಂಡು ಮತ್ತೆ ವೀಕ್ಷಿಸಬಹುದಾದ ಸವಲತ್ತು ಹೊಂದಿದೆ. ಆದರೆ ಅನೇಕರಿಗೆ ಟಾಟಾಸ್ಕೈ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಕಾರ್ಯಕ್ರಮಗಳನ್ನು ರೇಕಾರ್ಡ್ ಮಾಡಿಕೊಳ್ಳುವುದು ಹೇಗೆ ಎಂಬುದು ಗೊತ್ತಿಲ್ಲ. ಅದಕ್ಕಾಗಿ ಇಂದಿನ ಈ ಲೇಖನದಲ್ಲಿ ಟಾಟಾಸ್ಕೈ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ರೇಕಾರ್ಡ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿದ್ದೆವೆ. ಮುಂದೆ ಓದಿರಿ.

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಇತ್ತೀಚಿಗೆ ಬೆಲೆ ಇಳಿಕೆ ಕಂಡಿದ್ದು, ಇದೀಗ ಆರಂಭಿಕ ಬೆಲೆಯು 1,399ರೂ.ಗಳಿಗೆ ದೊರೆಯುತ್ತದೆ. ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್ ಡಿವಿಡಿ ಕ್ವಾಲಿಟಿಯ ವಿಡಿಯೊ ಗುಣಮಟ್ಟ ಪಡೆದಿರುತ್ತದೆ. ಆಡಿಯೊ ಗುಣಮಟ್ಟವು ಸಿಡಿ ಕ್ವಾಲಿಟಿಯಲ್ಲಿರುತ್ತದೆ. ವಿವಿಧ ಚಾನೆಲ್ ಲಿಸ್ಟ್‌ ಇದ್ದು, ಗ್ರಾಹಕರು ಅವರಿಷ್ಟದ ಚಾನಲ್‌ ಗುಚ್ಛ ಆಯ್ಕೆ ಮಾಡಿಕೊಳ್ಳಬಹುದು.

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ 1080i ವಿಡಿಯೊ ಕ್ವಾಲಿಟಿ ಹೊಂದಿರುವುದರೊಂದಿಗೆ, 16:9 ಅನುಪಾತ ರಚನೆ ಇರುತ್ತದೆ. ಜೊತೆಗೆ ಡಾಲ್ಬಿ ಸರೌಂಡ್‌ ಸೌಂಡ್‌ ಸೌಲಭ್ಯವನ್ನು ಹೊಂದಿರುತ್ತದೆ. vivid ಕಲರ್‌ ಸೌಲಭ್ಯ ಪಡೆದಿದೆ. ಹೊಸ ಮಾದರಿಯ ಸ್ಮಾರ್ಟ್‌ಟಿವಿ ಇದ್ದರೇ ಹೆಚ್‌ಡಿ ಸೆಟ್‌ಟಾಪ್‌ ಆಯ್ಕೆಯೇ ಉತ್ತಮ. ಆರಂಭಿಕ ಬೆಲೆಯು 1499ರೂ. ಆಗಿದೆ.

ಟಿವಿ ಶೋ ರೇಕಾರ್ಡ್ ಮಾಡಲು ಈ ಕ್ರಮ ಅನುಸರಿಸಿ

ಟಿವಿ ಶೋ ರೇಕಾರ್ಡ್ ಮಾಡಲು ಈ ಕ್ರಮ ಅನುಸರಿಸಿ

* ಟಾಟಾಸ್ಕೈ ಹೆಚ್‌ಡಿ ಪ್ಲಸ್‌ ರಿಮೋಟ್‌ನಲ್ಲಿ Guide-ಗೈಡ್‌ ಬಟನ್ ಒತ್ತಿರಿ.
* ನಂತರ ಯಾವ ಕಾರ್ಯಕ್ರಮ ರೇಕಾರ್ಡ್ ಮಾಡುವಿರಿ ಎಂಬುದನ್ನು ಅಪ್‌/ಡೌನ್‌ ಬಟನ್ ಬಳಸಿ ನೋಡಿಕೊಳ್ಳಿ.
* ರೇಕಾರ್ಡ್ ಮಾಡುವ ಕಾರ್ಯಕ್ರಮ ಸೆಲೆಕ್ಟ್ ಮಾಡಿದ ನಂತರ ರೇಕಾರ್ಡ್‌ ಬಟನ್ ಒತ್ತಿರಿ.
* ಆ ನಂತರ 'ರೇಕಾರ್ಡ್‌ ಇವೇಂಟ್' ಆಯ್ಕೆ ಒತ್ತಿರಿ. ಆಗ ರೇಕಾರ್ಡಿಂಗ್ ಶುರುವಾಗುತ್ತದೆ.

ರೇಕಾರ್ಡಿಂಗ್

* ಕಾರ್ಯಕ್ರಮ ಮುಗಿದ ಬಳಿಕ ಆಟೋಮ್ಯಾಟಿಕ್ ಆಗಿ ರೇಕಾರ್ಡಿಂಗ್ ಸ್ಟಾಪ್ ಆಗುತ್ತದೆ.
* ರೇಕಾರ್ಡಿಂಗ್ ಆದ ಮೇಲೆ ಅದನ್ನು ಪ್ಲೇ ಮಾಡಲು, ರಿಮೋಟ್‌ನಲ್ಲಿ ಪ್ಲ್ಯಾನ್ -plan ಬಟನ್ ಒತ್ತಿರಿ.
* ನಂತರ ಅಲ್ಲಿ ಕಾಣಿಸುವ, ರೇಕಾರ್ಡೆಡ್‌-Recorded ಆಯ್ಕೆ ಒತ್ತಿರಿ.
* ಕೊನೆಯದಾಗಿ ರೇಕಾರ್ಡೆಡ್ ಲಿಸ್ಟ್‌ನಲ್ಲಿ ಯಾವ ಕಾರ್ಯಕ್ರಮ ವೀಕ್ಷಿಸುವಿರೊ ಅದನ್ನು ಪ್ಲೇ ಮಾಡಿ.

Best Mobiles in India

English summary
Tata Sky enables you to record TV shows and watch later. But there is a catch. Here is how to go about it. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+