ಕಳೆದುಹೋದ ಫೋನ್‌ನಲ್ಲಿನ ವಾಟ್ಸಾಪ್ ಡೇಟಾ ಮರುಪಡೆಯುವುದು ಹೇಗೆ?; ಇಲ್ಲಿದೆ ಸರಳ ಮಾರ್ಗ!
ವಾಟ್ಸಾಪ್ ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಡುವುದರ ಜೊತೆಗೆ ಹಲವರ ಜೊತೆ ಬಾಂಧವ್ಯದ ಕೊಂಡಿಯಾಗಿಯೂ ಇದೆ. ಈ ವೇಳೆ ನೀವೇನಾದರೂ ಫೋನ್ ಕಳೆದುಕೊಂಡರೆ ಅಥವಾ ಯಾರಾದರೂ ಫೋನ್ ಕದ್ದರೆ ವಾಟ್ಸಾಪ್ ನಲ್ಲಿ ಮಾಡಲಾದ ಚಾಟ್‌ಗಳನ್ನು ಮರು ಪಡೆಯುವುದು ಹೇಗೆ ಎಂದು ತಿಳಿದಿದೆಯಾ!?.
ಹೌದು, ಫೋನ್ ಕಳೆದುಹೋದರು ಪರವಾಗಿಲ್ಲ, ಅದರಲ್ಲಿ ಕೆಲವು ಖಾಸಗಿ ಸಂಭಾಷಣೆ ಇವೆ ಅಥವಾ ಅಗತ್ಯ ಮಾಹಿತಿಯನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಅದನ್ನು ಯಾರಾದರೂ ನೋಡಿದರೆ ಹೇಗೆ? ಎಂದು ಮಾತನಾಡುವರರನ್ನು ನೋಡೇ ಇರುತ್ತೇವೆ. ಯಾಕೆಂದರೆ ಇಂದು ಮೆಸೆಜಿಂಗ್ ಪ್ರತಿಯೊಬ್ಬರ ಖಾಸಗಿ ಬದುಕಿಗೆ ಅಗತ್ಯ ಸಾಧನವಾಗಿ ಪರಿಣಮಿಸಿದೆ. ಈ ನಡುವೆ ಕಳೆದುಕೊಂಡ ಮೊಬೈಲ್‌ನಲ್ಲಿ ಇರುವ ವಾಟ್ಸಾಪ್ ಸಂದೇಶಗಳನ್ನು ಹೇಗೆ ಮರುಪಡೆಯಬಹುದು ಎಂಬುದನ್ನು ವಿವರಿಸಿದ್ದೇವೆ ಓದಿರಿ.

ತಕ್ಷಣವೇ ಹಳೆಯ ನಿಮ್ಮ ಫೋನ್ ಸಂಖ್ಯೆಯ ಸಿಮ್ ಖರೀದಿಸಿ
ಸಾಮಾನ್ಯವಾಗಿ ಯಾರೇ ಫೋನ್ ಕಳೆದುಕೊಂಡರೂ ಸಹ ಮೊದಲು ಮಾಡುವ ಕೆಲಸ ಅದೇ ನಂಬರ್‌ನ ಹೊಸ ಸಿಮ್‌ಗಾಗಿ ಬೇಡಿಕೆ ಇಡುವುದು. ಇದು ಕರೆ ಉದ್ದೇಶಕ್ಕೆ ಮಾತ್ರವಲ್ಲದೆ ವಾಟ್ಸಾಪ್‌ನಲ್ಲಿನ ಮೆಸೆಜ್‌ಗಳನ್ನು ಮರುಪಡೆಯಲು ಸಹಾಯ ಮಾಡುತ್ತದೆ. ಇದಕ್ಕೂ ಮೊದಲು ಹಳೆಯ ಸಿಮ್ ಅನ್ನು ನಿರ್ಬಂಧಿಸಲು ನೀವು ಮನವಿ ಮಾಡಬೇಕು. ಈ ಮೂಲಕ ಕಳ್ಳರು ನಿಮ್ಮ ಮೊಬೈಲ್ ಅನ್ನು ಯಾವುದೇ ದುಷ್ಕೃತ್ಯಕ್ಕೆ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.
ನೀವು ಹೊಸ ಸಿಮ್ ಅನ್ನು ಖರೀದಿ ಮಾಡಿದ ನಂತರ ಅದನ್ನು ಹೊಸ ಫೋನ್‌ನಲ್ಲಿ ಹಾಕಿ. ಅದಕ್ಕೂ ಮೊದಲು ಹೊಸದಾಗಿ ಬಳಕೆ ಮಾಡುತ್ತಿರುವ ಫೋನ್ ಹಾಗೂ ಈಗ ಬಳಕೆ ಮಾಡುತ್ತಿರುವ ಫೋನ್ ಒಂದೇ ಆಗಿರಬೇಕು. ಅಂದರೆ, ಆಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದರೆ ಗೂಗಲ್ ಡ್ರೈವ್ ಮೂಲಕ ಡೇಟಾವನ್ನು ಮರುಪಡೆಯಬಹುದು. ಹಾಗೆಯೇ ಐಫೋನ್ ಹೊಂದಿದ್ದರೆ ಆಪಲ್ ಐಡಿಗೆ ಲಾಗಿನ್ ಆಗುವ ಮೂಲಕ ಡೇಟಾ ಮರು ಪಡೆದುಕೊಳ್ಳಬಹುದಾಗಿದೆ.
ಹಾಗೆಯೇ ಮೊದಲು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ನಲ್ಲಿ ಐಕ್ಲೌಡ್ ಅಥವಾ ಗೂಗಲ್ ಡ್ರೈವ್‌ನಲ್ಲಿ ವಾಟ್ಸಾಪ್ ಚಾಟ್‌ಗಳನ್ನು ಸೇವ್ ಮಾಡಿರಬೇಕಾಗುತ್ತದೆ. ಈ ರೀತಿ ಮಾಡಿದ್ದರೆ ಮಾತ್ರ ನೀವು ನಿಮ್ಮ ವಾಟ್ಸಾಪ್ ಚಾಟ್‌ಗಳನ್ನು ಮರುಪಡೆಯಲು ಸಾಧ್ಯವಾಗುತ್ತದೆ ಎಂಬುದೂ ಸಹ ನಿಮ್ಮ ಗಮನಕ್ಕೆ ಇರಲಿ. ಅದಾಗ್ಯೂ ಮತ್ತೊಂದು ಮಾರ್ಗದ ಮೂಲಕವೂ ಡೇಟಾ ಮರುಪಡೆಯಬಹುದು.

ಐಕ್ಲೌಡ್‌ನಿಂದ ವಾಟ್ಸಾಪ್ ಚಾಟ್‌ಗಳನ್ನು ಮರುಪಡೆಯುವುದು ಹೇಗೆ?
ಹಂತ 1
ಮೊದಲು ನಿಮ್ಮ ಹೊಸ ಫೋನ್‌ನಲ್ಲಿ ವಾಟ್ಸಾಪ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿ. ನಂತರ ಆಪ್ ಅನ್ನು ಓಪನ್ ಮಾಡಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ. ಈ ವೇಳೆ ನಿಮ್ಮ ಸಂಪರ್ಕಗಳು, ಫೋಟೋಗಳು ಮತ್ತು ಇತರ ಡೇಟಾ ಪ್ರವೇಶಕ್ಕೆ ಅನುಮತಿ ನೀಡಬೇಕು.
ಹಂತ 2
ಇದಾದ ನಂತರ ನೀವು ನಿಮ್ಮ ಫೋನ್ ಸಂಖ್ಯೆಯನ್ನು ಪರಿಶೀಲಿಸಬೇಕಾಗುತ್ತದೆ. ನಂತರದಲ್ಲಿ ವಾಟ್ಸಾಪ್ ಐಕ್ಲೌಡ್ ನಲ್ಲಿ ಬ್ಯಾಕಪ್‌ಗಳಿಗಾಗಿ ಸ್ಕ್ಯಾನ್ ಮಾಡಲಾಗುತ್ತದೆ. ಈ ವೇಳೆ ಬ್ಯಾಕಪ್‌ನಿಂದ ನಿಮ್ಮ ವಾಟ್ಸಾಪ್ ಡೇಟಾವನ್ನು ರಿಸ್ಟೋರ್ ಮಾಡಲು ನಿಮ್ಮನ್ನು ಕೇಳುತ್ತದೆ. ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ ಮತ್ತು ನೀವು ಮರುಸ್ಥಾಪಿಸಲು ಬಯಸುವ ಐಕ್ಲೌಡ್ ಬ್ಯಾಕ್ಅಪ್ ಅನ್ನು ಆಯ್ಕೆ ಮಾಡಿ.
ಆಂಡ್ರಾಯ್ಡ್ ಡಿವೈಸ್‌ನಲ್ಲಿ ಈ ಕೆಲಸ ಮಾಡಿ
ಹಂತ 1
ಹೊಸ ಮೊಬೈಲ್‌ನಲ್ಲಿ ಮೊದಲು ವಾಟ್ಸಾಪ್ ಅನ್ನು ಇನ್‌ಸ್ಟಾಲ್ ಮಾಡಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ. ಇದಾದ ನಂತರ ಫೋಟೋ, ಸಂಪರ್ಕಗಳು ಹಾಗೂ ಇನ್ನಿತರೆ ವಿಭಾಗಕ್ಕೆ ಅನುಮತಿ ನೀಡಿ. ನಂತರದಲ್ಲಿ ಬ್ಯಾಕಪ್ ರಿಸ್ಟೋರ್ ಪ್ರಕ್ರಿಯೆಯನ್ನು ಪ್ರಾರಂಭಿಸಿ. ನಂತರ ಹಳೆಯ ಫೋನ್‌ನಲ್ಲಿ ಮಾಡಲಾದ ಎಲ್ಲಾ ಚಾಟ್‌ಗಳು ನಿಮ್ಮ ಹೊಸ ಫೋನ್‌ನಲ್ಲಿ ಕಾಣಿಸಿಕೊಳ್ಳುತ್ತವೆ.
ಹೊಸ ಫೋನ್‌ನಲ್ಲಿ ವಾಟ್ಸಾಪ್ ಬಳಕೆ ಮಾಡಲು ಆರಂಭವಾದಂತೆ ಹಳೆಯ ಫೋನ್‌ನಲ್ಲಿ ಇರುವ ವಾಟ್ಸಾಪ್ ಖಾತೆ ಆಟೋಮ್ಯಾಟಿಕ್ ಆಗಿ ನಿಷ್ಕ್ರಿಯಗೊಳ್ಳುತ್ತದೆ. ಈ ಮೂಲಕ ನಿಮ್ಮ ಡೇಟಾವನ್ನು ವಾಟ್ಸಾಪ್ ಸುರಕ್ಷಿತಗೊಳಿಸುತ್ತದೆ.

ಇವರೆಡೂ ಮಾರ್ಗದ ಮೂಲಕ ವಾಟ್ಸಾಪ್ ಡೇಟಾ ಮರುಪಡೆಯಲು ಸಾಧ್ಯವಾಗಲಿಲ್ಲ ಎಂದರೆ ಈ ಹಂತ ಅನುಸರಿಸಿ.
ಹಂತ 1
ಸ್ಮಾರ್ಟ್‌ಫೋನ್‌ನ ಅಥವಾ ಇನ್ನಿತರೆ ಯಾವುದೇ ಅಗತ್ಯತೆಗಳಿಗೆ ಜಿ-ಮೇಲ್ ಅನ್ನು ಬಳಕೆ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಇಮೇಲ್ ಓಪನ್ ಮಾಡಿ ಹಾಗೂ ವಾಟ್ಸಾಪ್ ಬ್ಯಾಕಪ್ ಫೈಲ್ ಹೊಂದಿರುವ ಇಮೇಲ್ ಅನ್ನು ಪತ್ತೆ ಮಾಡಿ.
ಹಂತ 2
ಇದಾದ ನಂತರ ಅಲ್ಲಿ ಬ್ಯಾಕಪ್ ಫೈಲ್ ಕಾಣಿಸಿಕೊಳ್ಳುತ್ತದೆ ಅದನ್ನು ನಿಮ್ಮ ಫೋನ್‌ಗೆ ಡೌನ್‌ಲೋಡ್ ಮಾಡಿ. ಬಳಿಕ ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ಓಪನ್ ಮಾಡಿ ಹಾಗೆಯೇ ಸೆಟ್ಟಿಂಗ್ ವಿಭಾಗಕ್ಕೆ ತಲುಪಿ ಅದರಲ್ಲಿ ಚಾಟ್ ವಿಭಾಗದ ಮೇಲೆ ಟ್ಯಾಪ್ ಮಾಡಿ. ಇದನ್ನು ಟ್ಯಾಪ್ ಮಾಡಿದರೆ ಚಾಟ್ ಬ್ಯಾಕಪ್ ಕಾಣಿಸಿಕೊಳ್ಳುತ್ತದೆ ಗಮನಿಸಿ.
ಹಂತ 3
ಈ ವೇಳೆ ರಿಸ್ಟೋರ್ ಪ್ರಕ್ರಿಯೆಯನ್ನು ಮಾಡುವ ಮೊದಲು ನಿಮ್ಮ ಇಮೇಲ್‌ನಿಂದ ನೀವು ಡೌನ್‌ಲೋಡ್ ಮಾಡಿದ ಬ್ಯಾಕಪ್ ಫೈಲ್ ಅನ್ನು ಆಯ್ಕೆ ಮಾಡಿ ಮತ್ತು ರಿಸ್ಟೋರ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಇದು ಪೂರ್ಣಗೊಳ್ಳಲು ಕೆಲವು ಸಮಯ ತೆಗೆದುಕೊಳ್ಳುತ್ತದೆ ಸ್ವಲ್ಪ ಹೊತ್ತು ಕಾಯಿರಿ.


Click it and Unblock the Notifications








