ಆನ್‌ಲೈನ್‌ನಲ್ಲಿ 'ಸೈಬರ್ ಕ್ರೈಂ' ವಿಭಾಗಕ್ಕೆ ದೂರು ಸಲ್ಲಿಸುವುದು ಹೇಗೆ?

|

ಸದ್ಯ ಫುಡ್‌ ಆರ್ಡರ್, ಆನ್‌ಲೈನ್ ಶಾಪಿಂಗ್, ಬಿಲ್ ಪೇಮೆಂಟ್‌ ಸೇರಿದಂತೆ ಬ್ಯಾಂಕ್‌ ವ್ಯವಹಾರಗಳು ಆನ್‌ಲೈನ್ ಮೂಲಕವೇ ನಡೆಯುತ್ತವೆ. ಆನ್‌ಲೈನ್ ವ್ಯವಹಾರ ಕೆಲಸಗಳನ್ನು ಸರಳವಾಗಿಸಿದೆ ನಿಜ ಆದರೆ ಅದನ್ನೆ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಗ್ರಾಹಕರನ್ನು ಮೋಸದ ಬಲೆಗೆ ಬೀಳಿಸಿ ಯಾಮಾರಿಸುವ ಘಟನೆಗಳು ಹೆಚ್ಚುತ್ತಿವೆ. ಎಷ್ಟೂ ಸಂದರ್ಭಗಳಲ್ಲಿ ವಂಚನೆಗೊಳಗಾದ ಗ್ರಾಹಕರು ದೂರು ನೀಡುವುದು ಕಡಿಮೆ.

ಆನ್‌ಲೈನ್‌ ವ್ಯವಹಾರ

ಹೌದು, ಆನ್‌ಲೈನ್‌ ವ್ಯವಹಾರ ಮಾಡುವಾಗ ಎಚ್ಚರದಿಂದಿರಬೇಕು. ಸೈಬರ್ ವಂಚಕರು ಪೇಮೆಂಟ್ ಆಪ್‌, ಫುಡ್‌ ಆರ್ಡರ್, ಸಕಲಿ ಬ್ಯಾಂಕ್ ಕರೆಗಳು, ಮೋಸದ ಕರೆಗಳು, ಇ-ಮೇಲ್‌ಗಳು, ಎಸ್‌ಎಮ್ಎಸ್‌ಗಳ ಜಾಲ ಬೀಸಿರುತ್ತಾರೆ. ಆನ್‌ಲೈನ್ ಯಾವುದೇ ರೀತಿಯ ಆನ್‌ಲೈನ್ ವಂಚನೆಯ ಪ್ರಕರಣಗಳು ನಡೆದರೇ ಗ್ರಾಹಕರು/ಬಳಕೆದಾರರು ಸೈಬರ್ ಪೋಲಿಸ್‌ ವಿಭಾಗಕ್ಕೆ ದೂರು ಸಲ್ಲಿಸಬಹುದಾಗಿದೆ. ಗ್ರಾಹಕರು ಆನ್‌ಲೈನ್‌ನಲ್ಲಿಯೇ ಸೈಬರ್ ಪೋಲಿಸ್ ವಿಭಾಗಕ್ಕೆ ದೂರು ಸಲ್ಲಿಸಬಹುದಾದ ಸೌಲಭ್ಯವು ಇದೆ. ಹಾಗಾದರೇ ಆನ್‌ಲೈನ್‌ನಲ್ಲಿ ಹೇಗೆ ಸೈಬರ್ ಪೋಲಿಸ್‌ ವಿಭಾಗಕ್ಕೆ ದೂರು ಸಲ್ಲಿಸುವುದು ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಸೈಬರ್ ವಿಭಾಗ

* ಆನ್‌ಲೈನ್‌ನಲ್ಲಿ ಸೈಬರ್ ವಿಭಾಗದ ಅಧಿಕೃತ ವೆಬ್‌ತಾಣ ತೆರೆಯಿರಿ. https://cybercrime.gov.in.
* ವೆಬ್‌ಸೈಟ್ ತೆರೆದ ಮೇಲೆ 'File a complaint' ಆಯ್ಕೆಯನ್ನು ಒತ್ತಿರಿ.
* ನಂತರ ಕಾಣಿಸುವ ಟರ್ಮ್ ಮತ್ತು ಕಂಡಿಷನ್ accept ಮಾಡಿ.

Report Other Cybercrime

* ಆನಂತರ Report Other Cybercrime ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.
* ನಂತರದಲ್ಲಿ ಸಿಟಿಜನ್ ಲಾಗ್ ಇನ್ ಆಯ್ಕೆ ಒತ್ತಿರಿ. ಮತ್ತು ಅಲ್ಲಿ ಕಾಣಿಸುವ ಕೀ ಮಾಹಿತಿಗಳನ್ನು ಭರ್ತಿ ಮಾಡಿರಿ.
* ನಂತರ OTP ನಮೂದಿಸಿ. ಹಾಗೂ ಗಣಿತದ ಕ್ಯಾಪ್ಚಾ ಉತ್ತರ ನಮೂದಿಸಿ ಸಬ್‌ಮೀಟ್ ಮಾಡಿರಿ.

ಘಟನೆ ಮಾಹಿತಿ ಫುಟ

ನಂತರ ಒಂದು ಫಾರ್ಮ್ ಮಾದರಿ ಕಾಣಿಸುತ್ತದೆ. ಈ ಫಾರ್ಮ್ ನಾಲ್ಕು ಭಾಗಗಳನ್ನು ಒಳಗೊಂಡಿರುತ್ತದೆ. ಘಟನೆಯ ಮಾಹಿತಿ, ಶಂಕಿತ ವಿವರಗಳು, ದೂರುಗಳ ವಿವರಗಳನ್ನು ಒಂದು ಬಾರಿ ಪರಿಶೀಲಿಸಿ ಸಬ್‌ಮೀಟ್ ಮಾಡಿರಿ.

ಘಟನೆ ಮಾಹಿತಿ ಫುಟ: ಈ ಪುಟದಲ್ಲಿ ಘಟನೆಯ ಮಾಹಿತಿ, ಘಟನೆಯ ಕೇಟಗೆರಿ, ಘಟನೆ ನಡೆದ ಸಮಯ, ದಿನಾಂಕ, ದೂರು ನೀಡಲು ತಡ ಮಾಡಿರುವುದಕ್ಕೆ ಕಾರಣ ಮತ್ತು ಘಟನೆ ಎಲ್ಲಿ ನಡೆಯಿತು ಎನ್ನುವ ಕುರಿತಾಗಿ ಮಾಹಿತಿ ಭರ್ತಿ ಮಾಡಿರಿ.

ಕಂಪ್ಲೇಟ್ ಮಾಹಿತಿ

ಸಾಮಾಜಿಕ ತಾಣಗಳ ಮಾಹಿತಿ: ಕೆಲವೊಮ್ಮೆ ಅರ್ಜಿದಾರರ ಸಾಮಾಜಿಕ ತಾಣಗಳ ಖಾತೆಯ ಮಾಹಿತಿಯನ್ನು ನೀಡಬೇಕಾಗಿರುತ್ತದೆ. ವಂಚನೆಯಾದ ವೆಬ್‌ಸೈಟ್, URL ನಂತಹ ಮಾಹಿತಿಗಳು ಅಗತ್ಯವಾಗಿರುತ್ತದೆ.

ಕಂಪ್ಲೇಟ್ ಮಾಹಿತಿ: ಕಂಪ್ಲೇಟ್ ಮಾಹಿತಿಯಲ್ಲಿ ಶಂಕಿತ ವ್ಯಕ್ತಿಯ ಕುರಿತು ಮಾಹಿತಿ ಇದ್ದರೇ ನಮೂದಿಸುವುದು. (ಹೆಸರು, ವಿಳಾಸ, ಇ-ಮೇಲ್ ಐಡಿ,)

Confirm and Submit

ಆನಂತರ ಅರ್ಜಿದಾರರು ಅವರ ಇ-ಮೇಲ್ ಐಡಿ, ಫೋಟೊಗ್ರಫಿ, ಇನ್ನಿತರೆ ಅಗತ್ಯ ಮಾಹಿತಿ ಭರ್ತಿ ಮಾಡುವುದು. ಕೊನೆಯಲ್ಲಿ Confirm and Submit ಆಯ್ಕೆಯನ್ನು ಒತ್ತಿರಿ. ಹಾಗೆಯೇ ಸಲ್ಲಿಸಲಾದ ಅರ್ಜಿಯನ್ನು PDF ನಲ್ಲಿ ಪಡೆದುಕೊಳ್ಳಲು ಅವಕಾಶವಿದೆ.

Best Mobiles in India

English summary
Government of India has launched an online cybercrime complaint portal that allows citizens to register the complaint online and follow up the progress as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X