ಟ್ರುಕಾಲರ್‌ನಿಂದ ನಿಮ್ಮ ಸಂಖ್ಯೆಯನ್ನು ಅಳಿಸುವುದು ಹೇಗೆ?
ಜನಪ್ರಿಯ ಅಪ್ಲಿಕೇಶನ್ ಆಗಿರುವ ಟ್ರುಕಾಲರ್ ಅಜ್ಞಾತ ವ್ಯಕ್ತಿಗಳು ನಿಮಗೆ ಕರೆಮಾಡುತ್ತಿದ್ದಲ್ಲಿ ಅವರ ವಿವರಗಳನ್ನು ನಿಮಗೆ ತಿಳಿಸುತ್ತದೆ. ಬಳಕೆದಾರರ ವಿಳಾಸ ಪುಸ್ತಕಗಳಿಂದ ಇದು ಮಾಹಿತಿಗಳನ್ನು ಕಲೆಹಾಕುತ್ತದೆ. ನೀವು ಸೇವೆಯನ್ನು ಈ ಹಿಂದೆ ಬಳಸಿಲ್ಲ ಎಂದಾದಲ್ಲಿ, ನಿಮ್ಮ ಹೆಸರು ಮತ್ತು ಸಂಖ್ಯೆ ಟ್ರು ಕಾಲರ್ ಡೇಟಾಬೇಸ್‌ನಲ್ಲಿರುತ್ತದೆ. ನಿಮ್ಮ ಸಂಪರ್ಕ ವಿವರಗಳನ್ನು ಉಳಿಸಿರುವ ವ್ಯಕ್ತಿಗಳಿಂದಾಗಿ ಅವುಗಳನ್ನು ಪ್ರವೇಶಿಸಲು ಅಪ್ಲಿಕೇಶನ್‌ಗೆ ಅನುಮತಿ ದೊರಕುತ್ತದೆ.
ಓದಿರಿ: ಎಚ್ಚರ: ಸ್ಮಾರ್ಟ್‌ಫೋನ್‌ಗೆ ಕಂಟಕವಾಗಿರುವ ಟಾಪ್ ಅಪ್ಲಿಕೇಶನ್‌ಗಳು
ಇನ್ನು ಈ ಅಪ್ಲಿಕೇಶನ್‌ನಿಂದ ಹೇಗೆ ಪ್ರಯೋಜನ ಇದೆಯೋ ಅಷ್ಟೇ ದುಷ್ಪರಿಣಾಮ ಕೂಡ ಇದೆ. ನಿಮ್ಮ ಲ್ಯಾಂಡ್ ಲೈನ್ ಸಂಖ್ಯೆ ಯಾರಾದರೂ ಅಜ್ಞಾತ ವ್ಯಕ್ತಿಗಳಿಗೆ ಗೊತ್ತಿದೆ ಎಂದಾದಲ್ಲಿ ಯಾವುದೇ ಸಾರ್ವಜನಿಕ ಲಭ್ಯವಿರುವ ಫೋನ್ ಬುಕ್ ಮೂಲಕ ನೋಂದಾಯಿತ ವಿಳಾಸವನ್ನು ಕಂಡುಕೊಳ್ಳಬಹುದು. ಇದಕ್ಕಾಗಿ ಟ್ರು ಕಾಲರ್‌ನಿಂದ ನಿಮ್ಮ ಸಂಖ್ಯೆಯನ್ನು ಅಳಿಸಬೇಕು ಎಂಬ ನಿರ್ಧಾರ ನಿಮ್ಮದು ಎಂದಾದಲ್ಲಿ ಇದನ್ನು ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹಾಗಿದ್ದರೆ ಬೇರೆ ಬೇರೆ ಓಎಸ್‌ಗಳಲ್ಲಿ ಇದನ್ನು ಮಾಡುವುದು ಹೇಗೆ ಎಂಬುದನ್ನು ನೋಡೋಣ

ಟ್ರುಕಾಲರ್‌ನಿಂದ ಸಂಖ್ಯೆ ಅಳಿಸುವುದು ಹೇಗೆ?
ಅಪ್ಲಿಕೇಶನ್ ತೆರೆಯಿರಿ,ಮೇಲೆ ಎಡಭಾಗದಲ್ಲಿರುವ ಪೀಪಲ್ ಐಕಾನ್ ಅನ್ನು ಸ್ಪರ್ಶಿಸಿ ಸೆಟ್ಟಿಂಗ್ಸ್ > ಅಬೌಟ್ > ಖಾತೆ ಡಿಆಕ್ಟಿವೇಟ್ ಮಾಡಿ

ಟ್ರುಕಾಲರ್‌ನಿಂದ ಸಂಖ್ಯೆ ಅಳಿಸುವುದು ಹೇಗೆ?
ಅಪ್ಲಿಕೇಶನ್ ತೆರೆಯಿರಿ > ಬಲ ಮೇಲ್ಭಾಗದಲ್ಲಿರುವ ಗೇರ್ ಐಕಾನ್ ಸ್ಪರ್ಶಿಸಿ > ಅಬೌಟ್ ಟ್ರುಕಾಲರ್> ಸ್ಕ್ರಾಲ್ ಡೌನ್> ಖಾತೆ ಡಿಆಕ್ಟಿವೇಟ್ ಮಾಡಿ

ಟ್ರುಕಾಲರ್‌ನಿಂದ ಸಂಖ್ಯೆ ಅಳಿಸುವುದು ಹೇಗೆ?
ಅಪ್ಲಿಕೇಶನ್ ತೆರೆಯಿರಿ ಕೆಳಬಲಭಾಗದಲ್ಲಿರುವ ಮೂರು ಡಾಟ್‌ಗಳನ್ನು ಸ್ಪರ್ಶಿಸಿ > ಸೆಟ್ಟಿಂಗ್ಸ್ > ಹೆಲ್ಪ್> ಖಾತೆ ಡಿಆಕ್ಟಿವೇಟ್ ಮಾಡಿ

ಟ್ರುಕಾಲರ್‌ನಿಂದ ಸಂಖ್ಯೆ ಅಳಿಸುವುದು ಹೇಗೆ?
ನಿಮ್ಮ ಟ್ರುಕಾಲರ್ ಖಾತೆಯನ್ನು ನೀವು ಡೀಆಕ್ಟಿವೇಟ್ ಮಾಡಿದ ನಂತರ, ಸೇವೆಯಿಂದ ನಿಮ್ಮ ಸಂಖ್ಯೆಯನ್ನು ತೆಗೆದುಹಾಕಬಹುದು.

ಟ್ರುಕಾಲರ್‌ನಿಂದ ಸಂಖ್ಯೆ ಅಳಿಸುವುದು ಹೇಗೆ?
ಟ್ರುಕಾಲರ್ ಅನ್‌ಲಿಸ್ಟ್ ಪುಟಕ್ಕೆ ಹೋಗಿ

ಟ್ರುಕಾಲರ್‌ನಿಂದ ಸಂಖ್ಯೆ ಅಳಿಸುವುದು ಹೇಗೆ?
ನಿಮ್ಮ ಸಂಖ್ಯೆ ನಮೂದಿಸಿ ದೇಶದ ಕೋಡ್ ನಿಖರವಾಗಿರಲಿ.

ಟ್ರುಕಾಲರ್‌ನಿಂದ ಸಂಖ್ಯೆ ಅಳಿಸುವುದು ಹೇಗೆ?
ಅನ್‌ಇನ್‌ಸ್ಟಾಲ್ ಮಾಡುವುದಕ್ಕೆ ಒಂದು ಕಾರಣ ಟಿಕ್ ಮಾಡಿ, ಅಥವಾ ತೆಗೆದುಹಾಕುವುದಕ್ಕೆ ಕಾರಣ ಏನು ಎಂಬುದನ್ನು ನಮೂದಿಸಿ

ಟ್ರುಕಾಲರ್‌ನಿಂದ ಸಂಖ್ಯೆ ಅಳಿಸುವುದು ಹೇಗೆ?
ವೆರಿಫಿಕೇಶನ್ ಕ್ಯಾಪ್ಚಾದಲ್ಲಿ ಕೀ ಇರುತ್ತದೆ.

ಟ್ರುಕಾಲರ್‌ನಿಂದ ಸಂಖ್ಯೆ ಅಳಿಸುವುದು ಹೇಗೆ?
ಅನ್‌ಲಿಸ್ಟ್ ಕ್ಲಿಕ್ ಮಾಡಿ

ಟ್ರುಕಾಲರ್‌ನಿಂದ ಸಂಖ್ಯೆ ಅಳಿಸುವುದು ಹೇಗೆ?
ಅನ್‌ಲಿಸ್ಟ್ ಕೋರಿಕೆಯನ್ನು ಪಡೆದುಕೊಂಡ 24 ಗಂಟೆಗಳವರೆಗೆ ಈ ಸಂಖ್ಯೆಗಳನ್ನು ಟ್ರುಕಾಲರ್ ತೆಗೆದುಹಾಕುತ್ತದೆ. ಅಂದರೆ ನಿಮ್ಮ ಸಂಖ್ಯೆ ಸೇವೆಯಲ್ಲಿ ಸದಾಕಾಲ ಇರುತ್ತದೆ ಎಂಬುದಾಗಿ ಅಲ್ಲ.

ಟ್ರುಕಾಲರ್‌ನಿಂದ ಸಂಖ್ಯೆ ಅಳಿಸುವುದು ಹೇಗೆ?
ನಿಮ್ಮ ಸಂಪರ್ಕ ವಿವರಗಳು ಅವರಿಗೆ ಕಾಣಿಸುತ್ತಿದೆಯೇ ಎಂಬುದಾಗಿ ಟ್ರು ಕಾಲರ್ ಬಳಕೆದಾರರೊಂದಿಗೆ ನೀವು ಪರಿಶೀಲಿಸಿಕೊಳ್ಳಬಹುದಾಗಿದೆ.



Click it and Unblock the Notifications








