Home
ಟೆಕ್ ನೌಕರಿ

ಟಿವಿ, ಎಸಿ, ಮ್ಯೂಸಿಕ್ ಸಿಸ್ಟಂನ ರಿಮೋಟ್ ಹಾಳಾಗಿವೆಯಾ? ಚಿಂತೆ ಬೇಡ ಸುಲಭವಾಗಿ ನೀವೇ ರಿಪೇರಿ ಮಾಡಿಕೊಳ್ಳಿ

ತಂತ್ರಜ್ಞಾನ ಅಭಿವೃದ್ಧಿ ಆಗುತ್ತಿದ್ದಂತೆ ಹೊಸ ಹೊಸ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಈ ಹಿಂದೆ ಕೆಲವು ಡಿವೈಸ್‌ಗಳಿಗೆ ಮಾತ್ರ ಇದ್ದ ರಿಮೋಟ್‌ (remote) ಡಿವೈಸ್‌ ಈಗ ಬಹುಪಾಲು ಎಲ್ಲಾ ಸ್ಮಾರ್ಟ್‌ ಹೋಂ ಡಿವೈಸ್‌ಗಳಲ್ಲೂ ಬರುತ್ತಿದ್ದು, ಈ ಮೂಲಕ ಬಳಕೆದಾರರು ಉತ್ತಮ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಈ ರಿಮೋಟ್‌ಗಳು ತಾನೆ ಎಷ್ಟು ದಿನ ಬಾಳಿಕೆ ಬರುತ್ತವೆ ಹೇಳಿ.

ಹೌದು, ಮನೆಯಲ್ಲಿರುವ ಟಿವಿ, ಎಸಿ ಮತ್ತು ಮ್ಯೂಸಿಕ್ ಸಿಸ್ಟಂ(AC, TV, music system) ಸೇರಿದಂತೆ ಅನೇಕ ಡಿವೈಸ್‌ಗಳಿಗೆ ರಿಮೋಟ್‌ ಆಯ್ಕೆ ನೀಡಲಾಗಿದ್ದು, ಇದನ್ನು ಹಲವಾರು ಬಾರಿ ಬಳಕೆ ಮಾಡಲಾಗುತ್ತದೆ. ಅದರಲ್ಲೂ ಕೆಲವೊಂದು ಮನೆಗಳಲ್ಲಿ ಟಿವಿ ವೀಕ್ಷಣೆ ಮಾಡುವಾಗ ರಿಮೋಟ್‌ಗಾಗಿ ಗಲಾಟೆಗಳೇ ನಡೆಯುತ್ತವೆ. ಅಷ್ಟು ಮಾತ್ರವಲ್ಲದೆ ನಿರಂತರವಾಗಿ ರಿಮೋಟ್ ಬಳಕೆ ಮಾಡುವುದರಿಂದ ಬೇಗನೇ ಹಾಳಾಗುವ ಸಾಧ್ಯತೆ ಸಹ ಹೆಚ್ಚಾಗಿರುತ್ತದೆ. ಈ ನಡುವೆ ನೀವು ತಕ್ಷಣವೇ ಹೊಸ ರಿಮೋಟ್‌ ಖರೀದಿ ಮಾಡುವ ಅವಶ್ಯಕತೆ ಇಲ್ಲ. ಬದಲಾಗಿ ರಿಮೋಟ್‌ ಹಾಳಾಗಿದ್ದರೆ ಸುಲಭವಾಗಿ ನೀವೇ ರಿಪೇರಿ ಮಾಡಿಕೊಳ್ಳಿ.

ಟಿವಿ, ಎಸಿ, ಮ್ಯೂಸಿಕ್ ಸಿಸ್ಟಂನ ರಿಮೋಟ್ ಹಾಳಾಗಿವೆಯಾ? ಚಿಂತೆ ಬೇಡ...

ಸಾಮಾನ್ಯವಾಗಿ ರಿಮೋಟ್ ಇಲ್ಲದೆ ಟಿವಿ, ಎಸಿ ಮತ್ತು ಮ್ಯೂಸಿಕ್ ಸಿಸ್ಟಂ ಅನ್ನು ರನ್ ಮಾಡಿದಾಗ, ಇವುಗಳನ್ನು ಕಂಟ್ರೋಲ್‌ ಮಾಡಲು ಅವುಗಳ ಬಳಿ ಇರುವ ಮ್ಯಾನ್ಯುವಲ್ ಬಟನ್ ಅನ್ನು ಪದೇ ಪದೇ ಒತ್ತಬೇಕಾಗುತ್ತದೆ. ಈ ರೀತಿಯ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದರೆ, ಚಿಂತಿಸಬೇಡಿ. ಯಾಕೆಂದರೆ ಹಾನಿಗೊಳಗಾದ ರಿಮೋಟ್ ಅನ್ನು ಸರಿಪಡಿಸಲು ಸುಲಭವಾದ ಮಾರ್ಗವನ್ನು ತಿಳಿಸಿಕೊಡಲಿದ್ದೇವೆ.

ಕಾರ್ಬನ್‌‌ ರಿಮೂವ್‌ ಮಾಡಿ: ಸಾಮಾನ್ಯವಾಗಿ ರಿಮೋಟ್‌ ಹಾಳಾದಾಗ ಮೊದಲನೆಯದಾಗಿ ಬ್ಯಾಟರಿ ಇರಿಸುವ ಪ್ರದೇಶದಲ್ಲಿ ಲೋಹದ ಸ್ಪ್ರಿಂಗ್ ಮತ್ತು ಪ್ಲೇಟ್‌ಗಳನ್ನು ಪರಿಶೀಲಿಸಿ. ಈ ಲೋಹದ ಫಲಕಗಳಲ್ಲಿ ಅನೇಕ ಬಾರಿ ಕಾರ್ಬನ್‌‌ ಸಂಗ್ರಹವಾಗುತ್ತದೆ ಮತ್ತು ಬುಗ್ಗೆಗಳು ಅಥವಾ ಧೂಳು ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಪರಿಣಾಮ ನೀವು ಅದನ್ನು ಆಗಾಗ್ಗೆ ಸ್ವಚ್ಛಗೊಳಿಸಿಕೊಳ್ಳಬೇಕು. ಈ ರೀತಿ ಮಾಡದೆ ಇದ್ದರೆ ಬ್ಯಾಟರಿಯ ಶಕ್ತಿಯು ರಿಮೋಟ್‌ಗೆ ಸರಿಯಾಗಿ ತಲುಪದೆ ತಲುಪುವುದಿಲ್ಲ, ರಿಮೋಟ್‌ ಕೆಲಸ ಮಾಡದಂತೆ ಆಗುತ್ತದೆ.

ಐಆರ್ ಬ್ಲಾಸ್ಟರ್ ಶುಚಿಗೊಳಿಸಿ: ಮತ್ತೊಂದು ಕೆಲಸ ಏನೆಂದರೆ ಶುಚಿತ್ವದ ಕೊರತೆಯಿಂದಾಗಿ ರಿಮೋಟ್ ಕಂಟ್ರೋಲ್ ಐಆರ್ ಬ್ಲಾಸ್ಟರ್‌ನ ಮುಂಭಾಗದ ಭಾಗದಲ್ಲಿ ಸಾಕಷ್ಟು ಧೂಳು ಸಂಗ್ರಹವಾಗುವುದು ಹಲವು ಬಾರಿ ಎದುರಾಗುವ ಸಮಸ್ಯೆ ಈ ಧೂಳಿನ ಕಾರಣ ನೀವು ರಿಮೋಟ್ ಕಂಟ್ರೋಲ್ ಅನ್ನು ಬಳಸಿದಾಗ ಸಿಗ್ನಲ್ ನಿಮ್ಮ ಡಿವೈಸ್‌ಗಳನ್ನು ತಲುಪುವುದಿಲ್ಲ. ಈ ಸಂದರ್ಭದಲ್ಲಿ ನೀವು ಸ್ವಚ್ಛವಾದ ಬಟ್ಟೆಯನ್ನು ಬಳಸಿಕೊಂಡು ಐಆರ್ ಬ್ಲಾಸ್ಟರ್‌ನ ಸಂಗ್ರಹವಾದ ಕೊಳೆಯನ್ನು ಸ್ವಚ್ಛಗೊಳಿಸಬೇಕು. ಇದು ಬೆಳಕಿನಂತೆ ಕಾಣುತ್ತದೆ ಮತ್ತು ಪ್ರತಿ ರಿಮೋಟ್ ಕಂಟ್ರೋಲ್‌ನ ಮುಂಭಾಗದಲ್ಲಿದೆ.

ಇದರೊಂದಿಗೆ ಬಿರುಕುಗೊಂಡ ಕೇಸಿಂಗ್ ಅಥವಾ ಸಡಿಲವಾದ ಭಾಗಗಳಂತಹ ಯಾವುದೇ ಗೋಚರ ಹಾನಿಗಾಗಿ ರಿಮೋಟ್ ಅನ್ನು ಪರಿಶೀಲನೆ ನಡೆಸಿ. ನೀವು ಯಾವುದೇ ಸಡಿಲವಾದ ಘಟಕಗಳನ್ನು ಗಮನಿಸಿದರೆ ಅವುಗಳನ್ನು ಎಚ್ಚರಿಕೆಯಿಂದ ಮರುಜೋಡಿಸಲು ಪ್ರಯತ್ನಿಸಿ.ಇದರೊಂದಿಗೆ ಮೇಲ್ಮೈ ಮತ್ತು ಬಟನ್‌ಗಳನ್ನು ಸ್ವಚ್ಛಗೊಳಿಸಲು ಆಲ್ಕೋಹಾಲ್‌ನೊಂದಿಗೆ ತೇವಗೊಳಿಸಲಾದ ಮೃದುವಾದ ಲಿಂಟ್-ಫ್ರೀ ಬಟ್ಟೆಯನ್ನು ಬಳಕೆ ಮಾಡಿ.

ಮತ್ತೊಂದು ಡಿವೈಸ್‌ನೊಂದಿಗೆ ರಿಮೋಟ್ ಅನ್ನು ಪರೀಕ್ಷಿಸಿ: ಕೆಲವೊಮ್ಮೆ, ಸಮಸ್ಯೆಗಳು ರಿಮೋಟ್‌ನಲ್ಲಿ ಇಲ್ಲದಿರಬಹುದು. ಬದಲಾಗಿ ಅದು ಸಂಬಂಧಿತ ಡಿವೈಸ್‌ನಲ್ಲಿ ಇರಬಹುದು. ಪರಿಣಾಮ ರಿಮೋಟ್ ಅನ್ನು ಅದೇ ರೀತಿಯ ಬೇರೆ ಡಿವೈಸ್‌ ಮೇಲೆ ಪ್ರಯೋಗಿಸಿ. ಈ ರೀತಿ ಮಾಡುವುದರಿಂದ ರಿಮೋಟ್‌ ಹಾಳಾಗಿದೆಯಾ ಅಥವಾ ಅದಕ್ಕೆ ಸಂಬಂಧಿಸಿದ ಡಿವೈಸ್‌ ಹಾಳಾಗಿದೆಯಾ ಎಂದು ಪತ್ತೆ ಮಾಡಬಹುದು.

ಟಿವಿ, ಎಸಿ, ಮ್ಯೂಸಿಕ್ ಸಿಸ್ಟಂನ ರಿಮೋಟ್ ಹಾಳಾಗಿವೆಯಾ? ಚಿಂತೆ ಬೇಡ...

ಯುನಿವರ್ಸಲ್ ರಿಮೋಟ್ ಬಳಕೆ ಮಾಡಿ: ನಿಮ್ಮ ಮೂಲ ರಿಮೋಟ್‌ ಅನ್ನು ದುರಸ್ತಿ ಮಾಡಲು ಸಾಧ್ಯವೇ ಇಲ್ಲ ಎಂದಾದರೆ ಬಹು ಡಿವೈಸ್‌ಗಳೊಂದಿಗೆ ಕೆಲಸ ಮಾಡಬಹುದಾದ ಯುನಿವರ್ಸಲ್ ರಿಮೋಟ್ ಅನ್ನು ಬಳಕೆ ಮಾಡಬಹುದು. ಯುನಿವರ್ಸಲ್ ರಿಮೋಟ್‌ಗಳು ಇಂದು ವ್ಯಾಪಕವಾಗಿ ಲಭ್ಯವಿವೆ ಮತ್ತು ವಿವಿಧ ಡಿವೈಸ್‌ಗಳನ್ನು ಕಂಟ್ರೋಲ್‌ ಮಾಡಲು ಪ್ರೋಗ್ರಾಮ್ ಮಾಡಬಹುದು.

Best Mobiles in India

English summary
Many devices in the house including TV, AC and music system are provided with remote option, meanwhile if the remote of your devices is not working , repair it yourself.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+