Home
ಟೆಕ್ ನೌಕರಿ

ಆಪ್‌ ಡೌನ್‌ಲೋಡ್‌ ಮಾಡುವಾಗ ಈ ಸಮಸ್ಯೆ ಎದುರಾದರೆ ಏನು ಮಾಡೋದು?

ಸ್ಮಾರ್ಟ್‌ಫೋನಿಗೆ ಅಪ್ಲಿಕೇಶನ್‌ಗಳು ಪೂರಕವಾಗಿ ಕೆಲಸ ನಿರ್ವಹಿಸುತ್ತಿವೆ. ಆಂಡ್ರಾಯ್ಡ್‌ ಬಳಕೆದಾರರು ' ಗೂಗಲ್‌ ಪ್ಲೇ ಸ್ಟೋರ್‌' ಮೂಲಕ ಅಗತ್ಯ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡುತ್ತಾರೆ. ಇತ್ತೀಚಿಗಂತೂ ಕೆಲವು ಜನಪ್ರಿಯ ಆಪ್‌ಗಳು ಫೋನಿನಲ್ಲಿ ಪ್ರಿ ಇನ್‌ಸ್ಟಾಲ್‌ ಆಗಿರುತ್ತವೆ. ಅದಾಗ್ಯೂ, ಬಳಕೆದಾರರು ತಮಗೆ ಬೇಕಾದ ಆಪ್ಸ್‌ಗಳನ್ನು ಇನ್‌ಸ್ಟಾಲ್‌ ಮಾಡುತ್ತಾರೆ. ಆದರೆ ಕೆಲವೊಮ್ಮೆ ಆಪ್‌ ಇನ್‌ಸ್ಟಾಲ್‌ ಆಗುವುದೇ ಇಲ್ಲ.

ಹೌದು, ಬಳಕೆದಾರರು ಗೂಗಲ್‌ ಪೇ ಸ್ಟೋರ್‌ನಿಂದ ತಮಗೆ ಅಗತ್ಯವಿರುವ ಆಪ್ ಡೌನ್‌ಲೋಡ್‌ ಮಾಡುವಾಗ ಕೆಲವೊಮ್ಮೆ ಎರರ್‌ ಸಮಸ್ಯೆ ಎದುರಿಸುತ್ತಾರೆ. ಆಗ ಅಪ್ಲಿಕೇಶನ್ ಡೌನ್‌ಲೋಡ್‌ ಆಗುವುದಿಲ್ಲ. ಆಪ್‌ ಡೌನ್‌ಲೋಡ್‌ ಆಗದಿರುವುದಕ್ಕೆ ಹಲವು ಬೇರೆ ಬೇರೆ ಕಾರಣಗಳು ಇರುತ್ತವೆ. ಯಾವ ಕಾರಣದಿಂದಾಗಿ ಆಪ್‌ ಡೌನ್‌ಲೋಡ್‌ ಆಗುತ್ತಿಲ್ಲ ಎಂಬುದನ್ನು ಎರರ್‌ಬಾಕ್ಸ್‌ನಲ್ಲಿ ನಮೂದಿಸಲಾಗಿರುತ್ತದೆ.

ಆಪ್‌ ಡೌನ್‌ಲೋಡ್‌ ಮಾಡುವಾಗ ಈ ಸಮಸ್ಯೆ ಎದುರಾದರೆ ಏನು ಮಾಡೋದು?

ಹೀಗೆ ನೀವು ಆಪ್‌ ಇನ್‌ಸ್ಟಾಲ್‌ ಮಾಡುವಾಗ ಒಂದು ವೇಳೆ (Error 910) ಎರರ್‌ 910 ಕಾಣಿಸಿಕೊಂಡರೇ ಆ ಸಮಸ್ಯೆಯನ್ನು ಬಳಕೆದಾರರು ಸರಳವಾಗಿ ಸರಿಪಡಿಸಲು ಅವಕಾಶಗಳು ಇವೆ. ಹಾಗಾದರೇ ಆಪ್‌ ಇನ್‌ಸ್ಟಾಲ್‌ ಮಾಡುವಾಗ ಎರರ್‌ ಬಂದ್ರೆ, ಸರಿ ಮಾಡಲು ಈ ಮುಂದಿನ ಕ್ರಮ ಅನುಸರಿಸಬಹುದು. ಮುಂದೆ ಓದಿರಿ.

ಇಂಟರ್ನೆಟ್‌ ಇದೆಯಾ ಅಥವಾ ಇಲ್ವಾ? ಚೆಕ್‌ ಮಾಡಿರಿ :
ಬಳಕೆದಾರರೇ, ಮೊಬೈಲ್‌ನಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡುತ್ತಿರುವಾಗ ಆಪ್‌ ಡೌನ್‌ಲೋಡ್‌ ಆಗದೇ ಒಂದು ವೇಳೆ ಎರರ್‌ ಕಾಣಿಸಿಕೊಂಡರೇ ಮೊದಲು ಇಂಟರ್ನೆಟ್‌ ಇದೆಯಾ ಅಥವಾ ಇಲ್ವಾ ಚೆಕ್‌ ಮಾಡಿ. ಕೆಲವೊಮ್ಮೆ ಮರೆತು ಇಂಟರ್ನೆಟ್ ಆಫ್‌ ಮಾಡಿರುತ್ತಿರಿ ಇಲ್ಲವೇ ಇಂಟರ್ನೆಟ್ ಪ್ಲ್ಯಾನ್‌ ಮುಗಿದು ಹೋಗಿರುತ್ತದೆ. ವೈ-ಫೈ ಸಂಪರ್ಕ ಲಭ್ಯ ಇದ್ದರೂ ಓಕೆ. ಆ ನಂತರ ಆಪ್ ಇನ್‌ಸ್ಟಾಲ್ ಮಾಡಿರಿ.

ಮೊಬೈಲ್‌ ರೀ ಸ್ಟಾರ್ಟ್‌ (Restart) ಮಾಡೋದು ಉತ್ತಮ :
ಮೊಬೈಲ್‌ನಲ್ಲಿ ಅಪ್ಲಿಕೇಶನ್ ಇನ್‌ಸ್ಟಾಲ್‌ ಆಗುತ್ತಿಲ್ಲ ಎಂದು ಕೂಡಲೇ ಮೊಬೈಲ್‌ ಸೆಟ್ಟಿಂಗ್ ಆಯ್ಕೆಗಳನ್ನು ತಡಕಾಡುವ ಬದಲು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಒಮ್ಮೆ ರೀ ಸ್ಟಾರ್ಟ್‌ ಮಾಡೋದು ಉತ್ತಮ. ಇದು ಬೇಸಿಕ್ ಪ್ರಯತ್ನವಾಗಿದ್ದು, ರೀಸ್ಟಾರ್ಟ್‌ ಮೂಲಕ ಕೆಲವೊಮ್ಮೆ ಫೋನ್‌ ಸರಿ ಮಾಡಬಹುದು. ರೀ ಸ್ಟಾರ್ಟ್‌ ನಂತರ ಆಪ್ ಇನ್‌ಸ್ಟಾಲ್ ಮಾಡಲು ಮುಂದಾಗಿ.

ಫೋನ್‌ ಮೆಮೊರಿ ಇದೆಯಾ ಅಥವಾ ಫುಲ್‌ ಆಗಿದೆಯಾ ನೋಡಿ ಬಿಡಿ :
ಇತ್ತೀಚಿಗಿನ ಬಹುತೇಕ ನೂತನ ಮೊಬೈಲ್‌ಗಳು ಅಧಿಕ ಸ್ಟೋರೇಜ್ ಆಯ್ಕೆ ಪಡೆದಿರುತ್ತವೆ. ಅದಾಗ್ಯೂ, ಕೆಲವೊಮ್ಮೆ ಅವು ಯಾವುದೋ ಕಾರಣಗಳಿಂದಾಗಿ ಭರ್ತಿ ಆಗಿರುವ ಸಾಧ್ಯತೆಗಳಿರುತ್ತವೆ. ಇಂತಹ ವೇಳೆ ಆಪ್‌ ಇನ್‌ಸ್ಟಾಲ್‌ ಮಾಡುವಾಗ ಎರರ್‌ ಕಾಣಿಸಬಹುದು. ಏಕೆಂದರೆ ಅಪ್ಲಿಕೇಶನ್‌ಗಳಿಗೆ ಅಧಿಕ ಸ್ಥಳಾವಕಾಶವನ್ನು ಬೇಡುತ್ತವೆ. ಹೀಗಾಗಿ ನಿಮ್ಮ ಫೋನಿನ ಸ್ಟೋರೇಜ್ ಒಮ್ಮೆ ಚೆಕ್‌ ಮಾಡಿರಿ. ಸ್ಥಳ ಇಲ್ಲದಿದ್ದರೆ, ಅಗತ್ಯ ಸ್ಥಳ ಖಾಲಿ ಮಾಡಿ ನಂತರ ಆಪ್‌ ಇನ್‌ಸ್ಟಾಲ್‌ ಮಾಡಿ.

Cache ಕ್ಲಿಯರ್ ಮಾಡಿರಿ :
ಬಳಕೆದಾರರೇ, ನಿಮ್ಮ ಫೋನಿನಲ್ಲಿ ಗೂಗಲ್ ಪ್ಲೇ ಸೇವೆಗಳ ಮತ್ತು ಅಪ್ಲಿಕೇಶನ್ ಸೆಟ್ಟಿಂಗ್‌ನಲ್ಲಿ cache ಕ್ಲಿಯರ್ ಮಾಡಿರಿ. ಹೀಗೆ ಮಾಡುವುದರಿಂದ ನಿಮ್ಮ ಮೊಬೈಲ್‌ನ ಫೋನ್‌ ಮೆಮೊರಿ ಕ್ಲಿಯರ್‌ ಆಗುತ್ತದೆ. ಆದರೆ ಯಾವುದೇ ಡೇಟಾ ಡಿಲೀಟ್‌ ಆಗುವುದಿಲ್ಲ. Cache ಕ್ಲಿಯರ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

* ಮೊಬೈಲ್‌ನಲ್ಲಿ ಸೆಟ್ಟೆಂಗ್ ತೆರೆದು ಅಪ್ಲಿಕೇಶನ್ ಮ್ಯಾನೇಜರ್‌ ಆಯ್ಕೆ ಕ್ಲಿಕ್‌ ಮಾಡಿ
* ನಂತರ ಗೂಗಲ್ ಪ್ಲೇ ಸ್ಟೋರ್ ಆಯ್ಕೆ ಸೆಲೆಕ್ಟ್‌ ಮಾಡಿ
* ಸ್ಟೋರೇಜ್ ಆಯ್ಕೆ ಸೆಲೆಕ್ಟ್‌ ಮಾಡಿರಿ, ನಂತರ cache ಕ್ಲಿಯರ್ ಮಾಡಿ
* ಇದೇ ರೀತಿ ಗೂಗಲ್ ಪ್ಲೇ ಸೇವೆಗಳಲ್ಲಿ ಸೆಟ್ಟಿಂಗ್‌ನಲ್ಲಿಯೂ ಮಾಡಿ
* cache ಕ್ಲಿಯರ್ ಮಾಡಿದ ಮೇಲೆ ಮೊಬೈಲ್‌ ರೀಸ್ಟಾರ್ಟ್‌ ಮಾಡಿ, ಆಪ್ ಡೌನ್‌ಲೋಡ್ ಮಾಡಿರಿ.

Best Mobiles in India

English summary
How to Resolve app installation errors. step by step guide here in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+