Home
ಟೆಕ್ ನೌಕರಿ

ರೈಲು ಪ್ರಯಾಣದ ವೇಳೆ ಫೋನ್ ಕೈಜಾರಿ ಬಿದ್ದರೆ ಮರು ಪಡೆಯಲು ಹೀಗೆ ಮಾಡಿ!

ಸಾಮಾನ್ಯವಾಗಿ ಬಹುಪಾಲು ಮಂದಿ ಸಂಚಾರಕ್ಕೆ ರೈಲನ್ನೇ ಅವಲಂಬಿಸಿದ್ದಾರೆ. ಹಾಗೆಯೇ ರೈಲು ಸಂಚಾರದ ವೇಳೆ ಮೊಬೈಲ್‌ ಕಳ್ಳತನವಾಗುವುದು ಅಥವಾ ಕೈನಿಂದ ಜಾರಿ ಮೊಬೈಲ್‌ ಕೆಳಗೆ ಬೀಳುವ ಅದೆಷ್ಟೋ ಘಟನೆಗಳನ್ನು ಗಮನಿಸಿರಬಹುದು. ಆ ವೇಳೆ ಮೊಬೈಲ್‌ ಅನ್ನು ಮರು ಪಡೆದುಕೊಳ್ಳಲು ಏನು ಮಾಡಬೇಕು ಎಂದು ತಿಳಿದಿದೆಯಾ? .

ಹೌದು, ಈ ವಿಷಯ ಖಂಡಿತಾ ಬಹುಪಾಲು ಮಂದಿಯ ಮನಸ್ಸಲ್ಲಿ ಇರುತ್ತದೆ. ಯಾಕೆಂದರೆ ರೈಲಿನಲ್ಲಿ ಯಾರೇ ಆದರೂ ಕಿಟಿಕಿ ಪಕ್ಕದಲ್ಲಿ ಕೂರಲು ಬಯಸುತ್ತಾರೆ. ಕಿಟಕಿ ಸೀಟ್‌ ಸಿಗದಿದ್ರೆ ಬಾಗಿಲ ಬಳಿ ಬಂದು ನಿಂತು ರೈಲು ಸಂಚಾರದ ಸುಂದರ ಅನುಭವವನ್ನು ಮೊಬೈಲ್‌ನಲ್ಲಿ ಹಾಡು ಕೇಳುತ್ತಲೋ ಅಥವಾ ವಿಡಿಯೋ ನೋಡುತ್ತಲೇ ಕಳೆಯುತ್ತಾರೆ. ಈ ವೇಳೆ ನಿಮ್ಮ ಫೋನ್‌ ಕೆಳಗೆ ಬಿದ್ದು ಹೋದರೆ ಏನು ಮಾಡಬೇಕು? ಅಥವಾ ಏನು ಮಾಡಬಾರದು? ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ರೈಲು ಪ್ರಯಾಣದ ವೇಳೆ ಫೋನ್ ಕೈಜಾರಿ ಬಿದ್ದರೆ ಮರು ಪಡೆಯಲು ಹೀಗೆ ಮಾಡಿ!

ರೈಲಿನಿಂದ ಫೋನ್‌ ಕೆಳಗೆ ಬಿದ್ದರೆ ಏನೆಲ್ಲಾ ಆಗಬಹುದು?

ಸಾಮಾನ್ಯವಾಗಿ ಯಾರೇ ಆದರೂ ಪೋನ್‌ ಅನ್ನು ಕಳೆದುಕೊಂಡರೆ ತುಂಬಾ ಕಷ್ಟ ಪಡುತ್ತಾರೆ. ಈ ಕಾರಣಕ್ಕೆ ಕೆಲವರು ತಕ್ಷಣವೇ ರೈಲಿನಿಂದ ಜಿಗಿದರೆ ಇನ್ನೂ ಕೆಲವರು ಚೈನ್‌ ಎಳೆದು ರೈಲು ನಿಲ್ಲಿಸಲು ಯತ್ನಿಸುತ್ತಾರೆ. ಆದರೆ, ಚೈನ್‌ ಎಳೆದು ರೈಲು ನಿಲ್ಲಿಸುವುದರಿಂದ ಹಲವಾರು ಪ್ರಯಾಣಿಕರು ಸಾಕಷ್ಟು ತೊಂದರೆಗೆ ಒಳಗಾಗುತ್ತಾರೆ ಎಂಬುದು ನಿಮಗೆ ತಿಳಿದಿರಲಿ. ಹಾಗೆಯೇ ರೈಲು ಇಲಾಖೆಗೂ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ.

ಇನ್ನು ರೈಲಿನಿಂದ ಜಿಗಿದು ಕಳ್ಳನನ್ನು ಹಿಡಿಯಲು ಅಥವಾ ಫೋನ್‌ ಬಿದ್ದ ಜಾಗವನ್ನು ಹುಡುಕಲು ಹೋದರೆ ಇದು ಭಾರತೀಯ ರೈಲ್ವೇ ಕಾಯಿದೆ 1989 ರ ಸೆಕ್ಷನ್ 141 ರ ಪ್ರಕಾರ ಅಪರಾಧವಾಗಿದೆ. ಈ ವೇಳೆ ನೀವು ಒಂದು ವರ್ಷದ ವರೆಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಥವಾ ದಂಡ ಪಾವತಿ ಮಾಡಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಎರಡೂ ಅನ್ವಯ ಆಗುತ್ತವೆ ಎಂಬುದು ನಿಮ್ಮ ಗಮನಕ್ಕೆ ಇರಲಿ.

ರೈಲು ಪ್ರಯಾಣದ ವೇಳೆ ಫೋನ್ ಕೈಜಾರಿ ಬಿದ್ದರೆ ಮರು ಪಡೆಯಲು ಹೀಗೆ ಮಾಡಿ!

ಫೋನ್‌ ಕೆಳಗೆ ಬಿದ್ದರೆ ಏನು ಮಾಡಬಾರದು?

ತಕ್ಷಣಕ್ಕೆ ನಿಮ್ಮ ಫೋನ್‌ ನಿಮ್ಮ ಕೈ ಜಾರಿಹೋದರೆ ಯಾವುದೇ ಕಾರಣಕ್ಕೂ ಉದ್ವೇಗ, ಆವೇಶಕ್ಕೆ ಒಳಗಾಗಬಾರದು. ಜೊತೆಗೆ ಚೈನ್‌ ಎಳೆಯುವ ಕೆಲಸಕ್ಕೂ ಮುಂದಾಗಬಾರದು. ಯಾಕೆಂದರೆ ಮೊದಲೇ ತಿಳಿಸಿದಂತೆ ಸಾವಿರಾರು ಪ್ರಯಾಣಿಕರು ಅಗತ್ಯ ಕೆಲಸ ಅಥವಾ ಇನ್ಯಾವುದೋ ಮುಖ್ಯ ವಿಷಯಕ್ಕೆ ಸಂಚಾರ ಮಾಡುತ್ತಿರುತ್ತಾರೆ. ಹೀಗಾಗಿ ಅವರಿಗೆ ಯಾವುದೇ ಕಾರಣಕ್ಕೂ ತೊಂದರೆ ಉಂಟು ಮಾಡಬಾರದು.

ಫೋನ್‌ ಕೆಳಗೆ ಬಿದ್ದರೆ ಏನು ಮಾಡಬೇಕು?

ಫೋನ್‌ ಕೆಳಗೆ ಬಿದ್ದರೆ ರೈಲು ಪ್ರಯಾಣಿಕರು ಏನು ಮಾಡಬೇಕು ಎಂಬ ಮಾಹಿತಿ ಬಹುಪಾಲು ಮಂದಿಗೆ ಗೊತಿಲ್ಲ. ಈ ವೇಳೆ ಫೋನ್‌ ಬಿದ್ದ ಸ್ಥಳವನ್ನು ನಿಖರವಾಗಿ ಗುರುತು ಮಾಡಿಕೊಳ್ಳಬೇಕು. ಇದಕ್ಕಾಗಿ ಹಲವಾರು ಸುಲಭ ಮಾರ್ಗಗಳಿವೆ. ಅಂದರೆ, ರೈಲ್ವೇ ಕಂಬದ ಮೇಲೆ ಬರೆಯಲಾದ ನಂಬರ್, ಸೈಡ್‌ ಟ್ರ್ಯಾಕ್‌ ನಂಬರ್‌ ಅನ್ನು ನೋಟ್‌ ಮಾಡಿಕೊಳ್ಳಿ.

ನಂತರ ನಿಮ್ಮ ಸಹ ಪ್ರಯಾಣಿಕರ ಬಳಿ ಹೋಗಿ ಅವರ ಫೋನ್‌ ಪಡೆದು ರೈಲ್ವೆ ರಕ್ಷಣಾ ಪಡೆಯ ಸಂಖ್ಯೆಯಾದ 182 ಗೆ ಕರೆ ಮಾಡಿ ಮಾಹಿತಿ ನೀಡಿ. ಈ ವೇಳೆ ಯಾವ ಕಂಬದ ಅಥವಾ ಟ್ರ್ಯಾಕ್ ಸಂಖ್ಯೆಯ ಸ್ಥಳದಲ್ಲಿ ಮೊಬೈಲ್‌ ಬಿದ್ದಿದೆ ಎಂಬುದನ್ನು ಅವರಿಗೆ ತಿಳಿಸಬೇಕು. ಈ ವೇಳೆ ನೀವು ನಿಮ್ಮ ಫೋನ್‌ನ ಮಾದರಿ, ಬ್ರ್ಯಾಂಡ್, ಸ್ಥಳ, ಸಂಖ್ಯೆ, ಫೋನ್ ಬಿದ್ದ ಸಮಯ ಮತ್ತು ಹತ್ತಿರದ ರೈಲ್ವೆ ನಿಲ್ದಾಣದಂತಹ ಇತರ ವಿವರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದರೆ ಫೋನ್‌ ಸುಲಭವಾಗಿ ಪತ್ತೆಯಾಗುತ್ತದೆ

ರೈಲು ಪ್ರಯಾಣದ ವೇಳೆ ಫೋನ್ ಕೈಜಾರಿ ಬಿದ್ದರೆ ಮರು ಪಡೆಯಲು ಹೀಗೆ ಮಾಡಿ!

ಈ ನಂಬರ್‌ ಮೂಲಕವೂ ಸಹಾಯ ಪಡೆಯಬಹುದು

ಹಾಗೆಯೇ ಸರ್ಕಾರಿ ರೈಲ್ಬೇ ಪೊಲೀಸ್‌ ಸಹಾಯವಾಣಿ 1512 ಗೆ ಕರೆ ಮಾಡುವ ಮೂಲಕ ಇನ್ನಷ್ಟು ಸಹಾಯವನ್ನು ಪಡೆದುಕೊಳ್ಳಬಹುದು. ಅಂದರೆ ನಿಮ್ಮ ಫೋನ್‌ ಅನ್ನು ಕಳ್ಳರು ಕಿತ್ತುಕೊಂಡು ಹೋದರೆ ಈ ಸಂಖ್ಯೆ ಉಪಯೋಗಕ್ಕೆ ಬರುತ್ತದೆ. ಜೊತೆಗೆ ಮತ್ತೊಂದು ಸಂಖ್ಯೆಯಾದ ರೈಲ್ವೇ ಪ್ಯಾಸೆಂಜರ್ ಹೆಲ್ಪ್ ಲೈನ್ ಸಂಖ್ಯೆ 138 ಗೂ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿ ಹೆಚ್ಚಿನ ಸಹಾಯವನ್ನು ನೀವು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Here's how to retrieve your phone if it slips and falls while traveling by train.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+