Instagram Reels ಆಡಿಯೋ ಸೇವ್ ಮಾಡಲು ಮತ್ತು ಶೇರ್ ಮಾಡಲು ಹೀಗೆ ಮಾಡಿ!
ಜನಪ್ರಿಯ ಸೋಶಿಯಲ್ ಮೀಡಿಯಾಗಳಲ್ಲಿ ಒಂದಾಗಿರುವ ಇನ್‌ಸ್ಟಾಗ್ರಾಮ್ ಯುವ ಸಮೂಹದ ಪಾಲಿಗೆ ಹಾಟ್‌ಫೇವರೇಟ್ ಆಗಿದೆ. ಇನ್‌ಸ್ಟಾಗ್ರಾಮ್ ಪರಿಚಯಿಸಿರುವ ರೀಲ್ಸ್ ಕಿರು ವಿಡಿಯೋ ಹೆಚ್ಚು ಜನಪ್ರಿಯತೆ ಪಡೆದಿದ್ದು, ಅನೇಕರಿಗೆ ಟಿಕ್‌ಟಾಕ್ ಅನ್ನೊ ಆಪ್ ಇತ್ತು ಎನ್ನುವುದನ್ನೇ ಮರೆಸಿದೆ. ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಫೋಸ್ಟ್ ಮಾಡಬಹುದು. ಜೊತೆಗೆ ರೀಲ್ಸ್‌ನಲ್ಲಿನ ಆಡಿಯೋ ಸೇವ್ ಮಾಡಬಹುದು ಜೊತೆಗೆ ಶೇರ್ ಸಹ ಮಾಡಬಹುದಾಗಿದೆ.

ಹೌದು, ಮೆಟಾ (ಫೇಸ್‌ಬುಕ್) ಒಡೆತನದ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿನ ಆಡಿಯೋ ಅನ್ನು ಬಳಕೆದಾರರು ಸೇವ್ ಮಾಡಿಕೊಳ್ಳಬಹುದು. ಆಡಿಯೋ ಪೇಜ್ ಅನ್ನು ಸೇವ್ ಮಾಡಿಕೊಳ್ಳಬಹುದು ಜೊತೆಗೆ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಬಹುದು. ಇನ್ನು ಈ ಸೌಲಭ್ಯವು iOS ಮತ್ತು ಆಂಡ್ರಾಯ್ಡ್ ಎರಡು ಓಎಸ್ ಬಳಕೆದಾರರಿಗೆ ಲಭ್ಯ ವಿದೆ. ಹಾಗಾದರೇ ಇನ್‌ಸ್ಟಾಗ್ರಾಮ್ ರೀಲ್ಸ್ ಆಡಿಯೋ ಸೇವ್ ಮಾಡುವುದು ಹಾಗೂ ಶೇರ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಇನ್‌ಸ್ಟಾಗ್ರಾಮ್ ರೀಲ್ಸ್
ಇನ್‌ಸ್ಟಾಗ್ರಾಮ್ ನಲ್ಲಿ ಕಿರು ಮನರಂಜನೆಯ ವೀಡಿಯೊಗಳನ್ನು ಕ್ರಿಯೆಟ್ ಮಾಡಲು ಮತ್ತು ಸರ್ಚ್ ಮಾಡಲು ಹೊಸ ಮಾರ್ಗ. ಬಳಕೆದಾರರು ಕಿರು ವಿಡಿಯೋ ಅನ್ನು ಪರಿಣಾಮಗಳು ಮತ್ತು ಹೊಸ ಸೃಜನಶೀಲ ರಚಿಸಲು ಹಲವು ಆಯ್ಕೆಗಳನ್ನು ರೀಲ್ಸ್ ಒಳಗೊಂಡಿದೆ. ಹಾಗೆಯೇ ಗೆಳೇಯರಿಗೆ ಶೇರ್ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ಅನುಮತಿಸುತ್ತದೆ.

ಇನ್‌ಸ್ಟಾಗ್ರಾಮ್ ರೀಲ್ಸ್ ಆಡಿಯೋ ಸೇವ್ ಮತ್ತು ಶೇರ್ ಮಾಡಲು ಹೀಗೆ ಮಾಡಿ:
* ಸ್ಕ್ರೀನ್‌ನ ಕೆಳಗಿನ ಎಡ ಭಾಗದ ಮೂಲೆಯಲ್ಲಿ ಆಡಿಯೊ ಹೆಸರನ್ನು ಆಯ್ಕೆಮಾಡಿ, ನಿಮ್ಮನ್ನು ಆಡಿಯೊ ಪುಟಕ್ಕೆ ನಿರ್ದೇಶಿಸಲಾಗುತ್ತದೆ
* ಮೇಲಿನ ಬಲ ಭಾಗದ ಮೂಲೆಯಲ್ಲಿ, ನೀವು ಶೇರ್ ಮತ್ತು ಸೇವ್ ಐಕಾನ್‌ಗಳನ್ನು ನೋಡುತ್ತೀರಿ
* ಕೆಳಭಾಗದಲ್ಲಿ, ನೀವು 'ಆಡಿಯೋ ಬಳಸಿ' ಆಯ್ಕೆಗಳನ್ನು ನೋಡುತ್ತೀರಿ
* ಆಡಿಯೊವನ್ನು ಶೇರ್ ಮಾಡಲು ಅಥವಾ ಸೇವ್ ಮಾಡಲು, ರೀಲ್‌ಗಳ ಕೆಳಗಿನ ಬಲ ಮೂಲೆಯಲ್ಲಿ ಇರಿಸಲಾಗಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ
* ನೀವು 'ಸೇವ್' ಮತ್ತು 'ಶೇರ್' ಆಯ್ಕೆಗಳನ್ನು ಕಾಣುವೀರಿ.
ನೀವು ಸೇವ್ ಮಾಡಿದ ಆಡಿಯೊವನ್ನು ನೋಡಲು ಬಯಸಿದರೆ, ರೀಲ್ಸ್ ವಿಭಾಗದಲ್ಲಿ ಇರುವ ಇನ್‌ಸ್ಟಾಗ್ರಾಮ್ ಮ್ಯೂಸಿಕ್ ಲೈಬ್ರರಿಗೆ ಹೋಗುವುದು.

ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಹಣ ಗಳಿಸುವುದು ಹೇಗೆ?
ಇನ್‌ಸ್ಟಾಗ್ರಾಮ್ ನಿಮ್ಮ ರೀಲ್‌ಗೆ ಈಗಿನಂತೆ ಪೇ ಮಾಡುವುದಿಲ್ಲ. ಪೇಡ್ ಪ್ರಮೊಶನ್ ಆದಾಗ ಮಾತ್ರ ನೀವು ಗಳಿಸಬಹುದು. ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಹಣ ಗಳಿಸುವುದು ಹೇಗೆ ಎಂದು ತಿಳಿಯಲು ಈ ಹಂತಗಳನ್ನು ಅನುಸರಿಸಿ.
ಹಂತ 1: ನಿಮ್ಮ ರೀಲ್‌ಗಳಿಗಾಗಿ ಯಾವುದೇ ಪ್ರಮೊಶನ್ ಹಾಡುಗಳನ್ನ ಆಯ್ಕೆ ಮಾಡಿ.
ಹಂತ 2: ಯಾವುದೇ ಬ್ರಾಂಡ್‌ನ ಪ್ರೊಡಕ್ಟಗಳ ರೀಲ್‌ಗಳನ್ನು ರಚಿಸಿ ಅದು ಸೌಂದರ್ಯದ ಪ್ರೊಡಕ್ಟ ಅಥವಾ ಯಾವುದಾದರೂ ಆಗಿರಬಹುದು.

ಹಂತ 3: ನೀವು ಆಹಾರ ಪ್ರಿಯರಾಗಿದ್ದರೆ, ನಿಮ್ಮ ನೆಚ್ಚಿನ ರೆಸ್ಟೋರೆಂಟ್ ಅನ್ನು ಆಯ್ಕೆ ಮಾಡಬಹುದು ಮತ್ತು ರೆಸ್ಟೋರೆಂಟ್‌ನಿಂದ ನೀವು ಹಣವನ್ನು ಪಡೆಯುವ ವೀಡಿಯೊವನ್ನು ಮಾಡಬಹುದು.
ಹಂತ 4: ಜೊತೆಗೆ, ಯಾವುದೇ ಪ್ರೊಡಕ್ಟಗಳನ್ನ ರಿವೀವ್ ಮಾಡುವುದರಿಂದ ಹಣ ಗಳಿಸಲು ಸಹ ಸಹಾಯ ಮಾಡಬಹುದು.

ಇನ್‌ಸ್ಟಾಗ್ರಾಮ್ ರೀಲ್ಸ್ ಪೋಸ್ಟ್ ಮಾಡಲು ಈ ಕ್ರಮ ಫಾಲೋ ಮಾಡಿ:
ಹಂತ 1: ನಿಮ್ಮ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಕ್ಯಾಮರಾ ತೆರೆಯಲು ಬಲಕ್ಕೆ ಸ್ವೈಪ್ ಮಾಡಿ ಮತ್ತು ಈಗ ನೀವು ಸ್ಟೋರಿ, ರೀಲ್ಸ್ ಮತ್ತು ಲೈವ್ ಆಯ್ಕೆಯನ್ನು ನೋಡಬಹುದು. ಈಗ, ರೀಲ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 2: ನೀವು 60 ಸೆಕೆಂಡುಗಳವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು ಅಥವಾ ನಿಮ್ಮ ಗ್ಯಾಲರಿಯಿಂದ ಯಾವುದೇ ವೀಡಿಯೊವನ್ನು ಅಪ್‌ಲೋಡ್ ಮಾಡಬಹುದು.

ಹಂತ 3: ಆಡಿಯೋ, ಸ್ಪಿಡ್, ಇಫೆಕ್ಟ ಮತ್ತು ಮುಂತಾದ ಆಯ್ಕೆಗಳಿವೆ. ನೀವು ಯಾವುದೇ ಮ್ಯುಸಿಕ್ ಆಯ್ಕೆ ಮಾಡಬಹುದು ಮತ್ತು ನಂತರ ವೀಡಿಯೊವನ್ನು ರಚಿಸಬಹುದು. ಇಲ್ಲದಿದ್ದರೆ ನೀವು ನಂತರ ಮ್ಯುಸಿಕ್ ಸೇರಿಸಬಹುದು.
ಹಂತ 4: ಈಗ ನಿಮ್ಮ ವೀಡಿಯೋ ಚೆಕ್ ಮಾಡಿ ಪ್ರಿವಿವ ಆಪಶನ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ರೀಲ್‌ಗಳನ್ನು ಅಪ್‌ಲೋಡ್ ಮಾಡಲು ಮುಂದಿನದನ್ನು ಕ್ಲಿಕ್ ಮಾಡಿ. ನೀವು ಈಗ ಕ್ಯಾಪಶನಗಳನ್ನ ಸೇರಿಸಬಹುದು ಮತ್ತು ಜನರನ್ನು ಟ್ಯಾಗ್ ಮಾಡಬಹುದು. ನೀವು ರೀಲ್‌ಗಳನ್ನು ಪೋಸ್ಟ್ ಮಾಡಲು ಬಯಸದಿದ್ದರೆ, ಅದನ್ನು ಸಹ ಸೇವ್ ಮಾಡಬಹುದು.


Click it and Unblock the Notifications








