ವಾಟ್ಸಪ್ ಸ್ಟೇಟಸ್ ಸೇವ್ ಮಾಡುವುದು ಸುಲಭ!..ಹೇಗೆ ಅಂತೀರಾ?
ಫೇಸ್‌ಬುಕ್ ಒಡೆತನದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ 'ವಾಟ್ಸಪ್' ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ವಾಟ್ಸಪ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳು ಬಳಕೆದಾರರನ್ನು ಸೆಳೆದಿದ್ದು, ಅದರಲ್ಲಿಯೂ ವಾಟ್ಸಪ್ ಸ್ಟೇಟಸ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವವರ ಇಡುವ ವಾಟ್ಸಪ್ ಸ್ಟೇಟಸ್ ನೋಡಬಹುದು ಮತ್ತು ಆ ಸ್ಟೇಟಸ್‌ಗಳನ್ನು ಸೇವ್ ಸಹ ಮಾಡಿಕೊಳ್ಳಬಹುದು.

ಹೌದು, ವಾಟ್ಸಪ್ ಆಪ್‌ನಲ್ಲಿ ಸ್ಟೇಟಸ್ ಫೀಚರ್ಸ ಇದ್ದು, ಬಳಕೆದಾರರು ಫೋಟೊ ಮತ್ತು ವಿಡಿಯೊಗಳನ್ನು ಸ್ಟೇಟಸ್ ಆಗಿ ಇಡಬಹುದಾಗಿದೆ. ವಾಟ್ಸಪ್ ಸ್ಟೇಟಸ್‌ಗಳು 24 ಗಂಟೆಗಳ ವ್ಯಾಲಿಡಿಟಿಯನ್ನು ಪಡೆದಿದ್ದು, ಅದಾದ ನಂತರ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತವೆ. ಹಾಗೆಯೇ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವವರು ಇಡುವ ಸ್ಟೇಟಸ್‌ಗಳನ್ನು ಸೇವ್ ಮಾಡಿಕೊಳ್ಳಲು ಅವಕಾಶ ಇದೆ.

ಇತರರ ವಾಟ್ಸಪ್ ಸ್ಟೇಟಸ್‌ಗಳನ್ನು ಸೇವ್ ಮಾಡಿಕೊಳ್ಳಲು ವಾಟ್ಸಪ್ ಅಪ್ಲಿಕೇಶನ್‌ನಲ್ಲಿ ಯಾವುದೇ ಆಯ್ಕೆ ನೀಡಿಲ್ಲ. ಆದರು ಸಹ ನಿಮ್ಮ ವಾಟ್ಸಪ್ ಕಾಂಟ್ಯಾಕ್ಟ್‌ನಲ್ಲಿರುವವರ ಸ್ಟೇಟಸ್‌ಗಳನ್ನು ಬೇಕಿದ್ದರೇ ಸೇವ್ ಮಾಡಿಕೊಳ್ಳಬಹುದು. ಅದು ಹೇಗೆ ಅಂತೀರಾ?.ಹಾಗಾದರೇ ವಾಟ್ಸಪ್ ಸ್ಟೇಟಸ್‌ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಸೇವ್ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಫೈಲ್ ಮ್ಯಾನೇಜರ್
ಪ್ರತಿ ಸ್ಮಾರ್ಟ್‌ಫೋನ್‌ಗಳಲ್ಲಿ ಫೈಲ್ ಮ್ಯಾನೇಜರ್ ಪೋಲ್ಡರ್ ಇದ್ದೇ ಇರುತ್ತದೆ. ಫೈಲ್ ಮ್ಯಾನೇಜರ್ ಪೋಲ್ಡರ್‌ನಲ್ಲಿ ಫೋಟೊ, ಪಿಡಿಎಫ್, ಡಾಕ್ಯುಮೆಂಟ್ಸ್, ವಿಡಿಯೊ ಸೇರಿದಂತೆ ಎಲ್ಲ ಮಾದರಿಯ ಫೈಲ್‌ಗಳು ಮತ್ತು ಆಪ್ಸ್‌ಗಳ ಮೀಡಿಯಾ ಫೈಲ್‌ಗಳು ಸಹ ಒಳಗೊಂಡಿರುತ್ತವೆ. ಒಂದು ವೇಳೆ ಫೈಲ್ ಮ್ಯಾನೇಜರ್ ಆಪ್ ಇಲ್ಲದಿದ್ದರೇ ಗೂಗಲ್ ಪ್ಲೇ ಸ್ಟೋರ್‌ನಿಂದ ಅತ್ಯುತ್ತಮ ಫೈಲ್ ಮ್ಯಾನೇಜರ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸ್ಟೇಟಸ್ ಸೇವ್ ಮಾಡಲು ಈ ಹಂತಗಳನ್ನು ಅನುಸರಿಸಿ
* ಸ್ಮಾರ್ಟ್‌ಫೋನ್‌ನಲ್ಲಿ ಫೈಲ್ ಮಾನೇಜರ್ ಅಪ್ಲಿಕೇಶನ್ ತೆರೆಯಿರಿ
* ನಂತರ ಫೋನ್ ಮೆಮೊರಿ ಆಯ್ಕೆಯನ್ನು ಕ್ಲಿಕ್ಕ ಮಾಡಿರಿ
* ಫೋನ್ ಮೆಮೊರಿಯಲ್ಲಿ ವಾಟ್ಸಪ್ ಆಪ್ ಐಕಾನ್ ತೆರೆಯಿರಿ
* ವಾಟ್ಸಪ್‌ನಲ್ಲಿ ಮೀಡಿಯಾ ಫೈಲ್ ಕ್ಲಿಕ್ಕ ಮಾಡಿ
* ನಂತರ ಸ್ಟೇಟಸ್ ಆಯ್ಕೆ ಸೆಲೆಕ್ಟ್ ಮಾಡಿ, ಸ್ಟೇಟಸ್‌ಗಳು ಕಾಣಿಸುತ್ತವೆ.
* ಸೇವ್ ಮಾಡಬೇಕಾದ ಸ್ಟೇಟಸ್ ಪ್ರೆಸ್ ಮಾಡಿ ನಂತರ ಕಾಪಿ ಮಾಡಿ ಗ್ಯಾಲರಿಗೆ ಪೇಸ್ಟ್ ಮಾಡಿರಿ.

24 ಗಂಟೆಗಳು ಮಾತ್ರ
ವಾಟ್ಸಪ್ ಸ್ಟೇಟಸ್‌ಗಳು ಕೇವಲ 24 ಗಂಟೆಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಆನಂತರ ಆಟೋಮ್ಯಾಟಿಕ್ ಆಗಿ ಸ್ಟೇಟಸ್‌ಗಳು ಡಿಲೀಟ್ ಆಗಿಬಿಡುತ್ತವೆ. ಹೀಗಾಗಿ ಸ್ಟೇಟಸ್‌ಗಳನ್ನು ಸೇವ್ ಮಾಡಿಕೊಳ್ಳುವುದಿದ್ದರೇ ಸ್ಟೇಟಸ್ ಅಪ್‌ಲೋಡ್ ಮಾಡಿದ 24 ಗಂಟೆಗಳ ಒಳಗಾಗಿ ಫೈಲ್ ಮಾನೇಜರ್ ಮೂಲಕ ಸೇವ್ ಮಾಡಿಕೊಳ್ಳಬೇಕು. ಸೇವ್ ನಂತರ ಸ್ಟೇಟಸ್‌ಗಳು ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತವೆ.

ಕೊನೆಯ ಮಾತು
ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ವಾಟ್ಸಪ್ ಆಪ್ ಬಳಕೆದಾರರು ಫೋಟೊ ಮತ್ತು ವಿಡಿಯೊ ಮಾದರಿಗಳಲ್ಲಿ ಸ್ಟೇಟಸ್‌ಗಳನ್ನು ಇಟ್ಟಿರುತ್ತಾರೆ. ಒಂದು ವೇಳೆ ನೀವು ಅವರ ಸ್ಟೇಟಸ್‌ಗಳನ್ನು ಸೇವ್ ಮಾಡಿಕೊಳ್ಳುತ್ತಿದ್ದರೇ, ಸೇವ್ ಮಾಡುವ ಮೊದಲು ಒಂದು ಬಾರಿ ಅವರ ಅನುಮತಿ ಪಡೆಯುವುದು ಆನಂತರ ಸೇವ್ ಮಾಡುವುದು ಒಳ್ಳೆಯದು. ಆದರೆ ಅನುಮತಿ ಪಡೆಯದೇ ಸೇವ್ ಮಾಡಬೇಡಿ.


Click it and Unblock the Notifications








