ನಿಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಯಾರು ನೋಡಿದ್ದಾರೆ ತಿಳಿಯಬೇಕೆ?..ಹೀಗೆ ಮಾಡಿ!
ಸದ್ಯ ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿ ಮುನ್ನಡೆದಿದ್ದು, ಈ ಸೋಷಿಯಲ್ ಆಪ್‌ನಲ್ಲಿ ಬಳಕೆದಾರರು ಫೋಟೋ ಮತ್ತು ಕಿರು ವೀಡಿಯೊಗಳ (ರೀಲ್ಸ್) ಶೇರ್ ಮಾಡಬಹುದಾಗಿದೆ. ಮುಖ್ಯವಾಗಿ ಯುವ ಸಮುಹಕ್ಕೆ ಇನ್‌ಸ್ಟಾಗ್ರಾಮ್ ಹಾಟ್ ಫೇವರೇಟ್ ಸೋಷಿಯಲ್ ಮೀಡಿಯಾ ತಾಣವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ನಮ್ಮ ಪ್ರೋಫೈಲ್ ಯಾರು ನೋಡಿದ್ದಾರೆ ತಿಳಿಯಬಹುದಾ?
ಇನ್‌ಸ್ಟಾಗ್ರಾಮ್‌ನಲ್ಲಿ ನಮ್ಮ ಪ್ರೋಫೈಲ್ ಯಾರು ನೋಡಿದ್ದಾರೆ ಎಂದು ಖಂಡಿತವಾಗಿಯು ತಿಳಿಯಬಹುದಾಗಿದೆ. ಬಹುತೇಕ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚಿನ ವೀಕ್ಷಣೆ ಹಾಗೂ ಫಾಲೋವರ್ಸ್ ಪಡೆಯಲು ಅತ್ಯುತ್ತಮ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಅವುಗಳನ್ನು ಅನೇಕರು ನೋಡುತ್ತಾರೆ, ಆದ್ರೆ ಕೆಲವರು ಪ್ರೋಫೈಲ್ ಕೂಡಾ ವೀಕ್ಷಣೆ ಮಾಡುವ ಸಂದರ್ಭಗಳಿರುತ್ತವೆ.

ಹೀಗೆ ನಿಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗೆ ಭೇಟಿ ನೀಡಿರುವವರನ್ನು ಪತ್ತೆ ಮಾಡಲು ಬಯಸಿದರೆ, ಅದಕ್ಕೆ ಮಾರ್ಗ ಉಂಟು. ಅವರು ನಿಮ್ಮನ್ನು ಫಾಲೋ ಮಾಡಿದರೂ ಅಥವಾ ಫಾಲೋ ಮಾಡದಿದ್ದರೂ ಕೂಡಾ ನಿಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಭೇಟಿ ನೀಡಿದವರ ಬಗ್ಗೆ ತಿಳಿಯಬಹುದು. ಹಾಗಾದರೇ ಪ್ರೊಫೈಲ್ ಭೇಟಿ ನೀಡಿದವರ ಬಗ್ಗೆ ತಿಳಿಯಲು ಈ ಮಾರ್ಗಗಳನ್ನು ಅನುಸರಿಸಿ.
ನಿಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಯಾರು ವೀಕ್ಷಿಸಿದ್ದಾರೆ ತಿಳಿಯಲು ಹೀಗೆ ಮಾಡಿ :
* ಇನ್‌ಸ್ಟಾಗ್ರಾಮ್ ಸ್ಟೋರಿ ಹಾಕಿದರೆ ನಿಮ್ಮ ಪ್ರೊಫೈಲ್ ಐಕಾನ್ ಅನ್ನು ಹೋಮ್ ಅಥವಾ ಪ್ರೊಫೈಲ್ ಐಕಾನ್‌ನಿಂದ ಕ್ಲಿಕ್ ಮಾಡಿ
* ನಿಮ್ಮ ಪ್ರೊಫೈಲ್ ಫೋಟೋದ ಮೇಲೆ ಕ್ಲಿಕ್ ಮಾಡುವ ಮೂಲಕ ಸ್ಟೋರಿ ಓಪೆನ್ ಮಾಡಿ
* ನೀವು ಹಾಕಿರುವ ಸ್ಟೋರಿಯನ್ನು ಯಾರು ವೀಕ್ಷಿಸಿದ್ದಾರೆ ತಿಳಿಯಲು ಸ್ಟೋರಿಯ ಮೇಲೆ ಸ್ವೈಪ್ ಮಾಡಿ.
ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಯಾರು ವೀಕ್ಷಿಸಿದ್ದಾರೆ ತಿಳಿಯಲು ಹೀಗೆ ಮಾಡಿ :
ಬಿಸಿನೆಸ್ ಪ್ರೊಫೈಲ್ Insights ಬಳಿಸಿ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಯಾರು ವೀಕ್ಷಿಸಿದ್ದಾರೆ ಎಂಬುದನ್ನು ತಿಳಿಯಬಹುದು. ಇನ್‌ಸ್ಟಾಗ್ರಾಮ್ ಬಿಸಿನೆಸ್ ಪ್ರೊಫೈಲ್ ಮಾಲೀಕರಿಗೆ ಅವರ ಇಂಟ್ರ್ಯಾಕ್ಷನ್ ಮತ್ತು ರೀಚ್ ಪತ್ತೆ ಮಾಡಲು ಅನುಮತಿಸುತ್ತದೆ. ಅಲ್ಲದೇ ಬಳಕೆದಾರರು ತಮ್ಮ ಪ್ರೊಫೈಲ್ ವಿಸಿಟರ್ಸ್, ಅವರ ಫೋಟೋಗಳಲ್ಲಿನ ವೀಕ್ಷಣೆಗಳು, ಹಾಗೂ ಸಂಪೂರ್ಣ ಪ್ರೊಫೈಲ್‌ನ ಅನುಸರಣೆಗಳನ್ನು ತೆಗೆದುಕೊಳ್ಳಲು ಕೂಡಾ ಅನುವು ಮಾಡಿಕೊಡುತ್ತದೆ.
ಒಟ್ಟಾರೆಯಾಗಿ ಇನ್‌ಸ್ಟಾಗ್ರಾಮ್ ನಲ್ಲಿನ ಬಿಸಿನೆಸ್ ಪ್ರೊಫೈಲ್ ಅನೇಕರಿಗೆ ನಿಜವಾಗಿಯೂ ಉತ್ತಮ ವೇದಿಕೆ ಆಗಿದೆ. ಹಾಗೆಯೇ ಇದನ್ನು ಪ್ರೊಫೈಲ್ ವಿಸಿಟರ್ಸ್ ಮೇಲ್ವಿಚಾರಣೆ ಮಾಡಲು ಸಹ ಬಳಸಬಹುದು. ಬಿಸಿನೆಸ್ ಪ್ರೊಫೈಲ್ Insights ಬಳಿಸಿ ಒಟ್ಟು ಸಂದರ್ಶಕರ ಸಂಖ್ಯೆಯನ್ನು ಮಾತ್ರ ತಿಳಿಯಬಹುದು. ಆದರೆ ವೈಯಕ್ತಿಕ ಭೇಟಿ ನೀಡಿದವರ ಹೆಸರನ್ನು ತಿಳಿಯಲು ಬರಲ್ಲ ಎಂಬುದನ್ನು ನೀವು ಗಮನಿಸಬೇಕು.
ಬಿಸಿನೆಸ್ ಪ್ರೊಫೈಲ್ Insights ಚೆಕ್ ಮಾಡಲು ಈ ಕ್ರಮ ಅನುಸರಿಸಿ :
* ಬಿಸಿನೆಸ್ ಖಾತೆಯಾಗಿ ಪರಿಶೀಲನೆಯ ಬಳಿಕ
* ನಿಮ್ಮ ಪ್ರೊಫೈಲ್ ಆಯ್ಕೆಗೆ ಭೇಟಿ
* ನಿಮ್ಮ ಬಯೋ ಕೆಳಭಾಗದಲ್ಲಿ ಕಾಣುವ Insights ಆಯ್ಕೆಯನ್ನು ಕ್ಲಿಕ್ ಮಾಡಿ
ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರೈವೆಟ್ ಆಗಿ ಸೆಟ್ ಮಾಡಲು ಈ ಕ್ರಮ ಫಾಲೋ ಮಾಡಿ :
ನಿಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಪ್ರೈವೆಟ್ ಆಗಿ ಸೆಟ್ ಮಾಡುವ ಮೂಲಕ ಅಪರಿಚಿತರು ನಿಮ್ಮ ಫೋಸ್ಟ್‌ಗಳನ್ನು ನೋಡದಂತೆ ಮಾಡಬಹುದು. ಅದಕ್ಕಾಗಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು.
* ಮೊಲದು ನಿಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗೆ ಹೋಗಿ
* ನಂತರ ಸೆಟ್ಟಿಂಗ್‌ಗಳ ಮೆನುವಿನಲ್ಲಿ ಕ್ಲಿಕ್ ಮಾಡಿ
* ಅಕೌಂಟ್ ಪ್ರೈವಸಿಗೆ ಆಯ್ಕೆಗೆ ಸ್ಕ್ರಾಲ್ ಮಾಡಿ
* ಪ್ರೈವೆಸಿ ಅಕೌಂಟ್‌ಗೆ ಟಾಗಲ್ ಮಾಡಿರಿ.


Click it and Unblock the Notifications








