ಕ್ರೋಮ್ ಬ್ರೌಸರ್‌ನಿಂದ ಮೆಸೇಜ್ ಕಳುಹಿಸುವುದು ಹೇಗೆ ?
ಒಂದು ವೇಳೆ ಆಫೀಸ್‌ಗೆ ಬರುವ ತರಾತುರಿಯಲ್ಲಿ ಮನೆಯಲ್ಲೇ ಮೊಬೈಲ್ ಬಿಟ್ಟುಬಂದರೆ ಏನು ಮಾಡುತ್ತೀರಿ? ಮನೆಯಿಂದ ಯಾರಾದ್ರೂ ಬರುವ ವ್ಯಕ್ತಿಗಳಿಗೆ ಅಥವಾ ಸ್ನೇಹಿತರೊಂದಿಗೆ ಮೊಬೈಲ್ ತರಲು ಹೇಳುತ್ತಿರಿ. ಒಟ್ಟಿನಲ್ಲಿ ಮೊಬೈಲ್ ನಿಮ್ಮ ಕೈಗೆ ಸಿಗುವವರಗೆ ಚಡಪಡಿಸಿಕೊಳ್ಳತ್ತಿರುತ್ತಿರಿ. ಆದ್ರೆ ಇನ್ನು ಮುಂದೆ ಈ ರೀತಿಯಾದ್ರೆ ನೀವು ತೊಂದರೆ ಅನುಭವಿಸಬೇಕಾಗಿಲ್ಲ. ನಿಮ್ಮ ಡೆಸ್ಕ್‌ಟಾಪ್ /ಲ್ಯಾಪ್‌ಟಾಪ್‌ನಿಂದಲೇ ಮೆಸೇಜ್ ಕಳುಹಿಸಬಹುದು.
ಕ್ರೋಮ್ ಬ್ರೌಸರ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ ಮುಖಾಂತರ ನೀವು ಲ್ಯಾಪ್‌ಟಾಪ್/ಪಿ.ಸಿಯಿಂದಲೇ ನೀವು ನೇರವಾಗಿ ಮೊಬೈಲ್‌ನಲ್ಲಿರುವ ನಂಬರ್‌ಗಳನ್ನು ಸಿಂಕ್ ಮಾಡುವ ಮೂಲಕ ಮೆಸೇಜ್ ಕಳುಹಿಸಬಹುದು. (ವೆಬ್‌ಸೈಟ್ ಮುಖಾಂತರ ಮೆಸೇಜ್ ಮಾಡುವ ವಿಧಾನವಲ್ಲ ಇದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು) ಯಾವ ರೀತಿ ಮೆಸೇಜ್ ಕಳುಹಿಸಬಹುದು ಎಂಬುದನ್ನು ಮುಂದಿನ ಪುಟಗಳಲ್ಲಿ ಸರಳವಾಗಿ ತಿಳಿಸಿಕೊಡಲಾಗಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಕ್ರೋಮ್ ಬ್ರೌಸರ್‌ನಿಂದ ಮೆಸೇಜ್ ಕಳುಹಿಸುವುದು ಹೇಗೆ ?
ಈ ರೀತಿ ನೀವು ಮೆಸೇಜ್ ಮಾಡಬೇಕಾದ್ರೆ ಮೊದಲು ನೀವು ಗೂಗಲ್ ಪ್ಲೇಸ್ಟೋರ್‌ನಿಂದ MightyText Android App ಡೌನ್ ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ.

ಕ್ರೋಮ್ ಬ್ರೌಸರ್‌ನಿಂದ ಮೆಸೇಜ್ ಕಳುಹಿಸುವುದು ಹೇಗೆ ?
ಇನ್‌ಸ್ಟಾಲ್ ಮಾಡಿಕೊಂಡ ಬಳಿಕ ಅಪ್ಲಿಕೇಶನ್ ಓಪನ್ ಮಾಡಿ ಗೂಗಲ್ ಅಕೌಂಟ್‌ನ್ನು ಕನೆಕ್ಟ್ ಮಾಡುವ ಮೂಲಕ ಸೆಟಪ್ ಕಂಪ್ಲೀಟ್‌ಮಾಡಿಕೊಳ್ಳಿ

ಕ್ರೋಮ್ ಬ್ರೌಸರ್‌ನಿಂದ ಮೆಸೇಜ್ ಕಳುಹಿಸುವುದು ಹೇಗೆ ?
ಇನ್‌ಸ್ಟಾಲೇಷನ್ ಕಂಪ್ಲೀಟ್ ಆದ ಬಳಿಕ ನೋಟಿಫಿಕೇಷನ್ ಬರುತ್ತದೆ. ಅಲ್ಲದೇ ನಿಮ್ಮ ಕ್ರೋಮ್ ಬ್ರೌಸರ್‌ನಲ್ಲಿ MightyText icon ಕಾಣಿಸಿಕೊಳ್ಳುತ್ತದೆ.

ಕ್ರೋಮ್ ಬ್ರೌಸರ್‌ನಿಂದ ಮೆಸೇಜ್ ಕಳುಹಿಸುವುದು ಹೇಗೆ ?
MightyText icon ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಅಕೌಂಟ್ ಸ್ಟೇಟಸ್ ಬಗ್ಗೆ ಮಾಹಿತಿ ನೀಡುತ್ತದೆ. ಒಂದು ವೇಳೆ ನೀವು ಗೂಗಲ್ ಅಕೌಂಟ್‌ನಲ್ಲಿ ಲಾಗಿನ್ ಆಗದಿದ್ರೆ ಲಾಗಿನ್ ಆಗಬೇಕಾಗುತ್ತದೆ.

ಕ್ರೋಮ್ ಬ್ರೌಸರ್‌ನಿಂದ ಮೆಸೇಜ್ ಕಳುಹಿಸುವುದು ಹೇಗೆ ?
ಲಾಗಿನ್ ಆದ ಬಳಿಕ ಹೊಸ ಪೇಜ್ ಹೋಗಲು ಅನುಮತಿ ಕೇಳುತ್ತದೆ. ಇಲ್ಲಿ 'Allow' ಬಟನ್ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್‌ಗೆ ಹೋಗಿ

ಕ್ರೋಮ್ ಬ್ರೌಸರ್‌ನಿಂದ ಮೆಸೇಜ್ ಕಳುಹಿಸುವುದು ಹೇಗೆ ?
ಈ ಮೊದಲು ತಿಳಿಸಿದ ಎಲ್ಲಾ ಸ್ಟೆಪ್‌ಗಳನ್ನು ಸರಿಯಾಗಿ ಪಾಲಿಸಿದ ಬಳಿಕ ಕಂಪ್ಯೂಟರ್‌ನ ಬಲಗಡೆಯ ಸ್ಕ್ರೀನ್‌ನಲ್ಲಿ ಒಂದು ಪಾಪ್ ಅಪ್ ಬಾಕ್ಸ್ ಕಾಣುತ್ತಿರುತ್ತದೆ.ಇದರಲ್ಲಿ ಈಗ ಆಂಡ್ರಾಯ್ಡ್ ಅಪ್ಲಿಕೇಶನ್ ಇನ್‌ಸ್ಟಾಲ್ ಆದ ಬಳಿಕ ನಿಮ್ಮ ಮೊಬೈಲ್‌ಗೆ ಬಂದಂತಹ ಮೆಸೇಜ್‌ಗಳನ್ನು ನೋಡಬಹುದು.

ಕ್ರೋಮ್ ಬ್ರೌಸರ್‌ನಿಂದ ಮೆಸೇಜ್ ಕಳುಹಿಸುವುದು ಹೇಗೆ ?
ಇಷ್ಟೆಲ್ಲ ಪ್ರಕ್ರೀಯೆ ಮುಗಿದ ಬಳಿಕ ನೀವು ನಿಮ್ಮ ಕ್ರೋಮ್ ಬ್ರೌಸರ್‌ನ ಸಹಾಯದಿಂದ ಮೆಸೇಜ್ ಕಳುಹಿಸಬಹುದು

Click it and Unblock the Notifications